ಪುಟಗಳು

ಗುರುವಾರ, ಮೇ 31, 2012

ಬರೆಯುತ್ತಿರಬೇಕು..


ಇವತ್ತಿಗೆ ಸರಿಯಾಗಿ ಹತ್ತು ತಿಂಗಳು ನಾಲ್ಕು ದಿನ! ಹಿಂದಿನ ವರ್ಷ ಜುಲೈ ಇಪ್ಪತ್ತೇಳರ ಅನಂತರ ಬ್ಲಾಗ್ ನಲ್ಲಿ ಯಾವುದೇ ಬರಹ ಹಾಕಿರಲಿಲ್ಲಅರೆಸ್ಟ್ ಎಂಬ ಕತೆಯೊಂದನ್ನು ಹಾಕಿದ ಮೇಲೆ ಬ್ಲಾಗ್ ಕೂಡ ಅರೆಸ್ಟ್ ಆಗಿಹೋಗಿತ್ತು!. ಬ್ಲಾಗ್ ನಲ್ಲಿ ಬರೆಯಲು ನಿಲ್ಲಿಸಿದ್ದಕ್ಕೆ ಕಾರಣ ಹುಡುಕೋಣ ಎಂದು ಹೊರಟರೆ ಇಂತದ್ದೇ ಅಂತ ಹೇಳುವ ಕಾರಣಗಳ್ಯಾವುದೂ ಸಿಗುತ್ತಿಲ್ಲ. ಅಷ್ಟೊಂದು busy ಆಗಿಹೋದೇನಾ ಅಂತ ಅಂದುಕೊಂಡರೆ ಖಂಡಿತ ಇಲ್ಲ ಅಂತ ನನಗೆ ಗೊತ್ತಿದೆ. ಮತ್ತೇನು ಅಸಡ್ಡೆಯಾ? ಆಲಸ್ಯವಾ? ಫೇಸ್ ಬುಕ್? ಮತ್ಯಾವುದೋ ಕಾರಣ? ಗೊತ್ತಾಗುತ್ತಿಲ್ಲ. ಕಂಡಿದ್ದನ್ನು, ಅನುಭವಕ್ಕೆ ಬಂದಿದ್ದನ್ನು ತಕ್ಷಣಕ್ಕೇ ಹಂಚಿಕೊಳ್ಳುವ, ಸುದ್ದಿ ಮಾಡುವ, ಅಷ್ಟೇ ಬೇಗ ಅದನ್ನು ಮರೆತೂ ಹೋಗುವ ಕಾಲ ಇದು. ಹಾಗಾಗಿ ಕಾರಣ ಹುಡುಕುವುದಕ್ಕಿಂತ ಪರಿಹಾರ ಹುಡುಕುವುದೇ ಸರಿ. ಇದು ನನ್ನ ಬ್ಲಾಗ್ ಕತೆ ಮಾತ್ರವಲ್ಲ. ಬಹಳಷ್ಟು ಬ್ಲಾಗ್ ಗಳೂ ಕೂಡ ಇದೇ ಸ್ಥಿತಿಯಲ್ಲಿವೆ. ಕೆಲವರು ಬರೆಯುವುದನ್ನೇ ನಿಲ್ಲಿಸಿದ್ದರೆ, ಕೆಲವರು ಅಪರೂಪಕ್ಕಾದರೂ ಬರೆದು ಹಾಕುತ್ತಿದ್ದಾರೆ. ಇರಲಿ, ಇದಿಷ್ಟೂ ಅವಧಿಯ ಸಾಕಷ್ಟು ವಿಷಯಗಳನ್ನು ದಾಖಲಿಸುವುದಿದೆ. ಎಲ್ಲೋ ತಿರುಗಾಟದ ಅನುಭವ, ಓದಿ ಮೆಚ್ಚಿದ ಪುಸ್ತಕ, ಖುಷಿಯ ಕ್ಷಣಗಳು, ಹಂಚಿಕೊಳ್ಳಬಹುದಾದ ಮಾಹಿತಿ, ಈ ವಿಚಿತ್ರ ಜಗತ್ತು, ಈ ಬದುಕು, ಜೀವನಪ್ರೀತಿ, ನಿರಂತರ ಕುತೂಹಲ, ಯಾರದ್ದೋ ಮೇಲಿನ ಸಿಟ್ಟು, ಈ ವ್ಯವಸ್ಥೆಯೇ ಸರಿಯಿಲ್ಲ ಎಂಬ ಅಸಹನೆ, ಅವಳ ನೆನಪಿನ ನಿಟ್ಟುಸಿರು, ಯಾರಿಗೂ ಅರ್ಥಾಗದ ದುಗುಡ, ಏನೋ ಬೇಕೆಂಬ ಹಂಬಲ, ಮನಸ್ಸಿಗೆ ಬಂದ ಲಹರಿ, ಕುಶಾಲು, ಮಾತು-ಕತೆ, ಬರವಣಿಗೆ ಮುಂತಾದ ಎಲ್ಲದಕ್ಕೂ ಅವಕಾಶವಿರುವಾಗ ಕಾರಣ ಹುಡುಕಬಾರದು. ಹೀಗೇ ಅಂತೇನೂ ಇಲ್ಲ, ಹೇಗಾದರೂ ಸರಿ....ಬರೆಯುತ್ತಿರಬೇಕು.. ಅಷ್ಟೆ

ಬ್ಲಾಗ್ ಶುರುಮಾಡಿ ಮೇ ೧೨ಕ್ಕೆ ಐದು ವರ್ಷಗಳಾದರೂ ಅದು ನೆನಪಾಗಿದ್ದು ಮಾತ್ರ ಇವತ್ತು!

ಸಿಗೋಣ..

11 ಕಾಮೆಂಟ್‌ಗಳು:

ಶೀಲಾ ಹೇಳಿದರು...

So finally ಬರೀಲಿಕ್ಕೆ ಮನಸು ಮಾಡಿದೆ ವಿಕಾಸ್.......ಇಲ್ಲಿ ಬರೆಯುವುದು ಮುಖ್ಯ..ಮತ್ತೆ ಸಾಹಿತ್ಯ ಸೇವೆ, ಕನ್ನಡ ಸೇವೆ..ಅದೂ ಇದೂ ಅಂತ ನೆವನ..ನಮ್ಮ ಮನಸ್ಸನ್ನು ವಿಕಸನಗೊಳಿಸುವುದು...ಹಗುರಗೊಳಿಸುವುದು ಮುಖ್ಯವೆಂದೆಣಿಕೆ....೫ ವರ್ಷದ ಕೆಳಗೆ ನನ್ನ ಬ್ಲಾಗಿನಲ್ಲಿ ಬರೆದ ಪ್ರೋತ್ಸಾಹದ ಮಾತು ನನ್ನ ಕುಂಚವನ್ನು ಮತ್ತೆ ನನ್ನ ಕೈಲ್ಲಿರಿಸಿತು..ನನ್ನನ್ನು ಅಕ್ಕಾ ಎಂದು ಕರೆದು ಮುದಗೊಳಿಸಿದ ದಿನ ಇನ್ನೂ ನನ್ನ ನೆನಪಲ್ಲಿ ಹಸುರಾಗಿದೆ...ಬಹುಶಃ ಅಂತರಂಗ ಸತೀಶರೂ ಕೂಡ ನಿನ್ನಂತೆಯೇ ಬ್ಲಾಗಿನಲ್ಲಿ ಬರೆಯುವುದು ಕಡಿಮೆಯಾಗಿದೆ...

May God bless you!
Shielakka

Pradeep ಹೇಳಿದರು...

Was waiting for your articles and atlast you have resumed !! Waiting fr upcoming articles--KUSHIYAAYTHU

Mahesh Hegade ಹೇಳಿದರು...

ಹ್ವಾ,

ನನಗೂ ಹಾಂಗೆ ಅನ್ನಸ್ಚು.
ನಾನು ಅದಕ್ಕೆ ಮತ್ತೆ ಅಟ್ ಲೀಸ್ಟ್ ತಿಂಗಳಿಗೆ ೧-೨ ಬ್ಲಾಗ್ ಪೋಸ್ಟ್ ಬರಿಯವು ಮಾಡಿದ್ದಿ.
ನಂದಕ್ಕೆ ಕಾರಣ ಅಂದ್ರೆ ೨೦೦೯ ನಲ್ಲಿ kindle ಸಿಕ್ಕ ಮ್ಯಾಲೆ ಓದದು ಸಿಕ್ಕಾಪಟ್ಟೆ ಜಾಸ್ತಿ ಆತು. ಅದು ಒಳ್ಳೇದೆ. ಆದ್ರೆ ಬರಿಯದು ಕಮ್ಮಿ ಆತು.
ಆರಾಮ ಕುರ್ಚೆ ಮ್ಯಾಲೆ ವರಗ್ಯಂಡು ಓದದು ಈಜಿ ಹೌದ ಅಲ್ಲದ...ಬರೆಯವು ಅಂದ್ರೆ ಸ್ವಲ್ಪ ನಾದ್ರೂ organization ಬೇಕು. ಬರೆದ ಮ್ಯಾಲೆ ಅಟ್ ಲೀಸ್ಟ್ ೧-೨ ಸರಿ ಓದಿ ಕರೆಕ್ಟ್ ಮಾಡಿ ಪೋಸ್ಟ್ ಮಾಡವು ನೋಡು.
ಆದ್ರೆ ಬರದ್ರೆ ನಮ್ಮ ವಿಚಾರ ನಮಗೆ clear ಅಪ್ಪದು ಖರೆ.
ಅದಕ್ಕೆ ಇರವು - when you start inking, you start thinking - ಹೇಳದು.

Subrahmanya ಹೇಳಿದರು...

ಇದನ್ನೂ ಒಂದು ಪೋಸ್ಟ್ ಅಂತಲೇ ತಗೋಂಡ್ರೆ ಇನ್ನೂ ಹತ್ತು ತಿಂಗಳು ಕಾಯಬೇಕಾ ಇನ್ನೊಂದಕ್ಕೆ ?:). ಚೆನ್ನಾಗಿ ಬರೆಯೋತು ಬರೀತಾ ಇರಬೇಕು, ಬರೀರಿ.

prashasti ಹೇಳಿದರು...

ಹೂಂ.. ನಾನೂ ನೀವ್ಯಾಕೆ ಬರೆಯುತ್ತಿಲ್ಲ ಅಂತಲೇ ಅಂದುಕೊಳ್ಳುತ್ತಿದ್ದೆ. ನೀವೇ ಅಂದಂತೆ ಬರೆಯದಿರಲು ನೂರಾರು ಕಾರಣ ಕೊಡಬಹುದು. ಆದರೆ ಬರೆಯಲು ಒಂದು ಕಾರಣ ಸಾಕಲ್ಲವೇ?
ಬ್ಲಾಗಿಗೆ ಐದು ವರ್ಷ ತುಂಬಿದ್ದಕ್ಕೆ ಅಭಿನಂದನೆಗಳು :-)

ಸಂಧ್ಯಾ ಶ್ರೀಧರ್ ಭಟ್ ಹೇಳಿದರು...

ಬ್ಲಾಗ್ ಬರೆಯುವವರೆಲ್ಲರು ಮತ್ತೆ ಬ್ಲಾಗನತ್ತ ಹೆಜ್ಜೆ ಹಾಕುತ್ತಿರುವುದು ಖುಷಿ ಕೊಡುತ್ತಿದೆ. ಫೇಸ್ಬುಕ್ ಗಿಂತಲೂ ಬುಕ್ಸ್ ನೆಚ್ಚಿಕೊಂಡವಳಿಗೆ, ಬುಕ್ಸ್ಗಳಷ್ಟೇ ಬ್ಲಾಗ್ಸ್ ನ ಹಚ್ಚಿಕೊಂಡವಳಿಗೆ ನಿಜಕ್ಕೂ ಖುಷಿ ಎನಿಸುತ್ತಿದೆ. ಮತ್ತೆ ಒಳ್ಳೊಳ್ಳೆಯ ಲೇಖನಗಳು ಬರಲಿ.

pragalbha ಹೇಳಿದರು...

ನಿಮ್ಮ ಬ್ಲಾಗ್ ಚೆನ್ನಾಗಿದೆ. ಸಮಯದ ಅಭಾವದಿಂದ "ಬರೆಯುತ್ತಿರಬೇಕು" ಮಾತ್ರ ಓದಿದ್ದೇನೆ. ಮತ್ತೆ ಬಂದು ನಿಮ್ಮ ಇತರ ಬರವಣಿಗೆಗಳನ್ನು ಓದುತ್ತೇನೆ. ಅಗೊಂದು ಈಗೊಂದಾದರೂ ಸರಿ, ಬರಹಗಳನ್ನು ಹಾಕುತ್ತಿರಿ.

sunaath ಹೇಳಿದರು...

ನಿಮ್ಮನ್ನು miss ಮಾಡಿಕೋತಾ ಇದ್ವಿ. ನಿಮ್ಮ ಪುನರಾಗಮನದಿಂದ ಖುಶಿಯಾಗಿದೆ. ಐದು ವರ್ಷ ಪೂರೈಸಿದ್ದೀರಿ. ಆರನೆಯ ವರ್ಷಕ್ಕೆ best of luck!

ಅನಾಮಧೇಯ ಹೇಳಿದರು...

ಅಬ್ಬಾ ಕೊನೆಗೂ ಅಪ್ದೇಟ್ ಆಯಿತಲ್ಲ. ಅ೦ದ ಹಾಗೆ ಅಭಿನ೦ದನೆಗಳು ಐದು ವರ್ಷಕ್ಕೆ :)

AntharangadaMaathugalu ಹೇಳಿದರು...

ಶುಭಾಶಯಗಳು.. ಐದು ವರ್ಷದ ಪಾಪುಗೆ.. ಮತ್ತು ಮತ್ತೆ ಬರೆಯುವ ನಿರ್ಧಾರ ತಗೊಂಡಿದ್ದಕ್ಕೆ..!!

ಶ್ಯಾಮಲ

ವಿ.ರಾ.ಹೆ. ಹೇಳಿದರು...

ಶೀಲಕ್ಕ, ಪ್ರದೀಪ, ಮಹೇಶಣ್ಣ, ಸುಬ್ರಹ್ಮಣ್ಯ, ಪ್ರಶಸ್ತಿ, ಸಂಧ್ಯಾ, ಪ್ರಗಲ್ಭ, ಸುನಾಥಕಾಕಾ, ಪ್ರಮೋದ, ಶ್ಯಾಮಲಕ್ಕ ನಿಮ್ಮೆಲ್ಲರಿಗೂ ಧನ್ಯವಾದಗಳು.

ಇಷ್ಟು ದಿನಗಳ ನಂತರ ನಾಲ್ಕು ಸಾಲು ಬರೆದರೂ ನೀವು ಅಷ್ಟೇ ಪ್ರೀತಿಯಿಂದ ಮತ್ತೆ ಸ್ವಾಗತಿಸಿದ್ದೀರಿ. ಇನ್ಮುಂದೆ ಬರೆಯುತ್ತಿರುತ್ತೇನೆ. ಬರುತ್ತಿರಿ.

when we start inking, we start thinking :)