ಪುಟಗಳು

ಬುಧವಾರ, ಜುಲೈ 6, 2011

ದಿಢೀರ್ ದೋಸೆ

ದೋಸೆ ತಿನ್ನುವ ತಲುಬು ಬಂದಿದೆ. ಅಕ್ಕಿ ನೆನೆಸಿಲ್ಲ, ಹಿಟ್ಟು ರುಬ್ಬಿಲ್ಲ. ವಿಧವಿಧದ ದೋಸೆ ಮಾಡಲು ಪದಾರ್ಥಗಳೂ ಇಲ್ಲ.

ಪರಿಹಾರ? ಹಿಟ್ಟಿನ ದೋಸೆ ಅಲಿಯಾಸ್ ದಿಢೀರ್ ದೋಸೆ ! ಅತ್ಯಂತ ಸರಳವಾಗಿ ಮತ್ತು ಕಡಿಮೆ ಸಮಯದಲ್ಲಿ ಮಾಡಬಹುದಾದ ದೋಸೆ.

ಬೇಕಾಗುವ ಪದಾರ್ಥಗಳು..

 • ಅಕ್ಕಿಹಿಟ್ಟು, ಗೋಧಿಹಿಟ್ಟು, ಸಣ್ಣರವೆ(ಸೂಜಿರವೆ), ಉಪ್ಪು.......ಇವು ನಾಲ್ಕೂ must.
 • ಜೀರಿಗೆ, ಖಾರದ ಪುಡಿ ಎಷ್ಟು ಬೇಕೋ ಅಷ್ಟ್.

ಮಾಡುವುದು ಹೀಗೆ...
 1. ಒಂದು ಅಳತೆ ಅಕ್ಕಿಹಿಟ್ಟಿಗೆ ಅರ್ಧ ಅಳತೆ ಗೋಧಿ ಹಿಟ್ಟು, ಅರ್ಧ ಅಳತೆ ರವೆ ಬೆರೆಸಿರಿ. ಸ್ವಲ್ಪ ಜೀರಿಗೆ ಹಾಕಿ.
 2. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ತುಂಬಾ ತೆಳುವಾಗದಂತೆ ಎಚ್ಚರವಹಿಸಿ.
 3. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಖಾರದ ಪುಡಿ ಹಾಕಿ ಚೆನ್ನಾಗಿ ಬೆರೆಸಿ. ಅಲ್ಲಿಗೆ ದೋಸೆ ಹಿಟ್ಟು ತಯಾರಾಯ್ತು!
 4. ಒಲೆ ಹಚ್ಚಿ ಅದರ ಮೇಲೆ ಕಾವಲಿ ಇಟ್ಟು ಬಿಸಿ ಮಾಡಿ.
 5. ಚೆನ್ನಾಗಿ ಕಾದ ಮೇಲೆ ದೋಸೆ ಎರೆಯಲು ಶುರುಮಾಡಿ. ಮೀಡಿಯಮ್ ದಪ್ಪ ಇರಲಿ.
 6. ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ. ಎರಡೂ ಕಡೆ ಚೆನ್ನಾಗಿ ಬೇಯಿಸಿ.

ಬಿಸಿಬಿಸಿ ದೋಸೆ ತಯಾರು.
ಹಿಟ್ಟಿನ ದೋಸೆ
(Item shown in the picture may not represent the actual product. ಇನ್ನೂ ಚೆನ್ನಾಗಿ ಆಗಬಹುದು;-))

***

 • ಬೇಕಿದ್ದರೆ ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ದೋಸೆ ಹಿಟ್ಟಿಗೆ ಹಾಕಬಹುದು.
 • ಇದೀಗ ಬಂದ ಮಾಹಿತಿ ಪ್ರಕಾರ ಗೋಧಿಹಿಟ್ಟಿನ ಬದಲಿಗೆ ರಾಗಿಹಿಟ್ಟನ್ನೂ ಬಳಸಬಹುದು!
 • ಮತ್ತೊಂದು ದಿಡೀರ್ ರವೆ ದೋಸೆ ರೆಸಿಪಿ ಇಲ್ಲಿದೆ:  ಧಿಡೀರ್ ರವಾಮಸಾಲ್‌ದೋಸೆ
 • ಸಮಯ ಇದ್ದಾಗ ದೋಸೆಗೆ ಹೀಗೆ ಆಲೂಗಡ್ಡೆ ಪಲ್ಯ ಮಾಡಿಕೊಳ್ಳಬಹುದು.

***

"ಇಷ್ಟಬಂದಹಾಗೆ ಇರಬೇಕು ಅಂದರೆ ಇಷ್ಟಪಟ್ಟಿದ್ದನ್ನೆಲ್ಲಾ ಕಲೀಬೇಕು". ಹೀಗಂತ ಹೇಳಿದ್ದು ಶಿವರಾಮ ಕಾರಂತರು...’ಹುಚ್ಚು ಮನಸಿನ ಹತ್ತು ಮುಖಗಳು’ ಪುಸ್ತಕದಲ್ಲಿ.

ಅಂದಹಾಗೆ, ನಾನಿನ್ನೂ ಅಡುಗೆಶಾಲೆಯಲ್ಲಿ ಕಲಿಯುತ್ತಿರುವ ವಿಧೇಯ ವಿದ್ಯಾರ್ಥಿ. :)

17 ಕಾಮೆಂಟ್‌ಗಳು:

ಚುಕ್ಕಿಚಿತ್ತಾರ ಹೇಳಿದರು...

ಗುಡ್ ..
ಈಗಿ೦ದಲೇ ಅಡುಗೆ ಕಲಿತುಕೊಳ್ಳುವುದು ಯಾವುದಕ್ಕೂ ಒಳ್ಳೆಯದು.. ಮು೦ದೆ ಉಪಯೋಗಕ್ಕೆ ಬ೦ದೇ ಬರುತ್ತೆ..!

ಬಾಲು ಹೇಳಿದರು...

ಎಲ್ಲಾ ಓಕೆ. ಆದ್ರೆ ರವೆ ಯಾವುದು ಅಂತ ಹೇಳಲೇ ಇಲ್ಲವಲ್ಲ?

ಉಪ್ಪಿಟ್ಟು ರವೆ? ಲೋಕಲ್ ರವೆ / ಬೆಂಗಳೂರ್ ರವೆ, ದಪ್ಪ ರವೆ, ಫೇಣಿ ರವೆ ಇತ್ಯಾದಿ ಇತ್ಯಾದಿ ಇತ್ಯಾದಿ. ಯಾವ ರವೆ ಉಪಯೋಗಿಸಬೇಕು ಅಂತ ಹೇಳಿ ಸ್ವಲ್ಪ ಪುಣ್ಯ ಕಟ್ಟಿಕೋ. :)

ತೇಜಸ್ವಿನಿ ಹೆಗಡೆ ಹೇಳಿದರು...

ದಿಢೀರ್ ರವಾ ಮಸಾಲ್ ದೋಸೆನೂ ಮಾಡಲಕ್ಕು.. ref: ಒಗ್ಗರಣೆ :) ಹ್ಮ್ಂ.... ಅಡ್ಡಿಲ್ಲೆ ನಳ ಅಲ್ಲದೇ ಹೋದ್ರೂ ಅವನ ಸಹಾಯಕನಾದ್ರೂ ಆಗ ತಯಾರಿಲಿ ಇದ್ದೆ :):-p

ಹಾಂಗೇ ಈ ದೋಸೆಗೆ ಚೂರು ಅರಿಶಿನ ಹಾಕಿದ್ರೆ ಗಂಟಲಿಗೆ, ಬಾಯಿಗೆ, ಹೊಟ್ಟೆಗೆ ಎಲ್ಲದಕ್ಕೂ ತುಂಬಾ ಉತ್ತಮ.

ವಿ.ರಾ.ಹೆ. ಹೇಳಿದರು...

@ಬಾಲು.. ಈಗ ತಿದ್ದಿದ್ದೇನೆ... ಥ್ಯಾಂಕ್ಸ್.

Kanthi ಹೇಳಿದರು...

:-) Ide talubu nangakko bandittu, monne kaavali tandu halasina hannina dose maadkand tindya..

ಅನಾಮಧೇಯ ಹೇಳಿದರು...

ekalvyana taraha abhyaasa maadta iddiya annu hangaare...ninna guru dronaacharyaryaaru?

ಪೂರ್ಣಿಮಾ ಭಟ್ಟ, ಸಣ್ಣಕೇರಿ ಹೇಳಿದರು...

:-) :-) :-)
I like it.. I like it..!

ಸುಮ ಹೇಳಿದರು...

ಅಡ್ಡಿಲ್ಯೊ ತಮ ಇನ್ನು ಮದುವೆ ಆಗಲಕ್ಕು. ಅಡುಗೆ ಕಲಿತಾಯ್ತಲ್ಲ :)

ಅನಂತ್ ರಾಜ್ ಹೇಳಿದರು...

photo dalli idda haage agutta...vikas?...:)..

Sree ಹೇಳಿದರು...

ಭಲೇ ಭಲೇ! ಕಾರಂತರಿಗೆ ಸಿಕ್ಕಾಪಟ್ಟೆ ಪುಣ್ಯ ಬಂದಿರತ್ತೆ;)) ಕಂಗ್ರಾಟ್ಸ್ ಹೇಳೋದಾ?(ಅವ್ರಿಗಲ್ಲ;))

Harisha - ಹರೀಶ ಹೇಳಿದರು...

ಥೋ ಥೋ ಥೋ.. ಭಾರತದಲ್ಲಿ ಕಲ್ಯಲಾಗ್ದೇ ಇದ್ದಿದ್ದು ಕೆನಡಾದಲ್ಲಿ ಕಲ್ಯ ಪರಿಸ್ಥಿತಿ ಬಂತ ನಿಂಗೆ? ;-)

Subrahmanya ಹೇಳಿದರು...

ಕನ್ನಡನಾಡಿನಿಂದ ಕೆನೆಡಾಕ್ಕೆ ಹೋಗಿದ್ದಕ್ಕೂ ಸಾರ್ಥಕ ಆಯ್ತು, ಅಂದಹಾಗೆ ದೋಸೆ ಮಾಡೋ ವಿಧಾನ ಕೂಡ ಇಷ್ಟವಾಯ್ತು. :)

shridhar ಹೇಳಿದರು...

ಅಂತೂ ಕೆನಡಕ್ಕೆ ಹೋಗಿ ದೋಸೆ ಯೆರೆಯಲ್ಲೆ/ಮಾಡಲ್ಲೆ ಕಲ್ತೆ ಅಂತಾತು ...ನೈಸ್ ಟ್ರೈ ... ಪ್ರಯತ್ನ ಮುಂದುವರೆಲಿ

ಕಲರವ ಹೇಳಿದರು...

naanu prayatna maadiddene tumbaa chennaagiratte.olle prayatna munduvaresi.

MRUTHYUNJAYA HEGDE ಹೇಳಿದರು...

ನಿನ್ ದೋಸೆ ಕಥೆ ಕೇಳಿ ಏನ್ ಗೆಳೆಯ ಒಬ್ಬ ದೋಸೆ ಮಾಡಿದ ಕಥೆ ನೆನಪಾತು. ತನ್ನಾಕೆ ತೌರಿಗೆ ಹೋದಾಗ ಒಂದ್ ದಿನ ದೋಸೆಗೆ ಹಿಟ್ಟು ರುಬ್ಬಿಟ್ಟ. ಮರುದಿನ ದೋಸೆ ಹಾಕುವಾಗ ಹಿಟ್ಟು ನೀರ್ ನೀರು. ತಕ್ಷಣ ಅಕ್ಕಿ ಹಿಟ್ಟು ಸೇರಿಸಿದ್ರೆ ದಪ್ಪ ಆಗ್ತು ಅಂತ ಯೋಚಿಸಿದವ, ನಾಗಂದಿಗೆ ಮೇಲಿದ್ದ ಹಿಟ್ಟಿನ ಡಬ್ಬದಲ್ಲಿದ್ದ ಸ್ವಲ್ಪ ಹಿಟ್ಟು ಹಾಕಿದ. ದೋಸೆ ಎರೆದು
ಪ್ಲೇಟ್ ಮೇಲೆ ಲಗೋರಿ ಕಲ್ಲಿನ ತರಹ ದೋಸೆ ಜೋಡಿಸಿ ಕೊಂಡು
ಒಂದು ದೋಸೆ ಬಾಯಲ್ಲಿಟ್ಟರೆ ಹಳ್ಳಿಗೆ ಕರ ಕರ ಅನ್ನಿಸಿತು. ದೋಸೆ ತುಂಬ ಕಲ್ಲೋ ಕಲ್ಲೋ.... ದೋಸೆಯಲ್ಲಿ ಯಾಕೆ ಕಲ್ಲು ಅಂತ ಬಹಳ ಹೊತ್ತು ಯೋಚಿಸಿದವನಿಗೆ ತಿಳಿದದ್ದು: ತಾನು ಹಿಟ್ಟು ಅಂತ ಹಾಕಿದ್ದು " ರಂಗೋಲಿ ಪುಡಿ" ಅಂತ. ಇನ್ನೇನು ಆತನ ದೋಸೆ ಕತೆ ಕೇಳಿ ನಾನು ನಕ್ಕೆ ಆತನು ಕೆನ್ನೆ ಮುಟ್ಟಿಕೊಳ್ಳುತ್ತಾ ಪ್ಯಾಲಿ ನಗೆ ನಕ್ಕ.

nenapina sanchy inda ಹೇಳಿದರು...

ಹೆಹೆಹೆ!! ಬೆಂಗಳೂರಿನಲ್ಲಿ ಈಗ 30 ರೂ ಗೆ ದೋಸೆ ಹಿಟ್ಟು ಸಿಗತ್ತೆ. ಆರಾಮಾಗಿ 10-12 ದೋಸೆ ಮಾಡಬಹುದು!!!
:-)
ಮಾಲತಿ ಎಸ್.

ವಿ.ರಾ.ಹೆ. ಹೇಳಿದರು...

@ಚುಕ್ಕಿ, ಹೌದು.. ನಂಗೇ ಈಗ್ಲೇ ಉಪಯೋಗಕ್ಕೆ ಬರ್ತಾ ಇದೆ :)

@ಬಾಲು, @ತೇಜಕ್ಕ, ಥ್ಯಾಂಕ್ಸ್

@ಕಾಂತಿ, ಹ್ಮ್.. ಇರ್ಲಿ ಇರ್ಲಿ. ನಮಗೂ ಕಾಲ ಬರುತ್ತೆ.

@ಕುಂದಾಪ್ರ, ಸುಮಾರು ಜನ ಇದ್ದಾರೆ ದ್ರೋಣಾಚಾರ್ಯರು:)

@ಪೂರ್ಣಿಮಾ, ಓಹ್,ನೀ ಓದಾಕ್ಕಗಿತ್ತಿಲ್ಲೆ ಇದನ್ನ. ಛೆ :)

@ಸುಮ, ಹ್ಹ ಹ್ಹ.. ಜೈ..

@ಅನಂತರಾಜ್, ಇನ್ನೂ ಚೆನ್ನಾಗಿ ಆಗಬಹುದು ಅನ್ಸುತ್ತೆ. :)

@ಶ್ರೀ, ಇರಿ ಇರಿ ಈಗ್ಲೇ ಬೇಡ :P

@ಹರೀಶ, ಹೌದಪ ಏನ್ ಮಾಡೋದು.. ಪರಿಸ್ಥಿತಿ .

@ಸುಬ್ರಹ್ಮಣ್ಯ, ಥ್ಯಾಂಕ್ಸ್...

@ಶ್ರೀಧರ, ಥ್ಯಾಂಕ್ಯು.

@ಕಲರವ, ಥ್ಯಾಂಕ್ಸ್..

@ಮೃತ್ಯುಂಜಯ, ಮಜಾ ಇದೆ ಕತೆ.. ನಾನಿನ್ನೂ ಅಂತ ಬಾನ್ಗಡಿ ಏನೂ ಮಾಡ್ಕಂಡಿಲ್ಲ.:) . ಥ್ಯಾಂಕ್ಸ್..

@ನೆನಪಿನ ಸಂಚಿ ಮಾಲತಿಯವರೇ, ಹ್ಹ ಹ್ಹ..ಹೌದಂತೆ.. ಅಂಗಡಿಗೆ ಹೋಗಿ ತರೋದಕ್ಕಿಂತ ಕಡಿಮೆ ಸಮಯದಲ್ಲಿ ನಾವೇ ದೋಸೆ ಹಿಟ್ಟು ಮಾಡ್ಕೋಬೋದು ಈ ವಿಧಾನದಲ್ಲಿ. :) ಥ್ಯಾಂಕ್ಯು