ಗುರುವಾರ 5 ಮೆ 2011

Kannada typing in computer

ಕಂಪ್ಯೂಟರ್ ನಲ್ಲಿ ಕನ್ನಡ ಟೈಪ್ ಮಾಡುವುದು...

ನಾನು ಕಂಪ್ಯೂಟರ್ ತಗೊಂಡಿದ್ದು ಸುಮಾರು ಹತ್ತು ವರ್ಷಗಳ ಹಿಂದೆ ಇರಬಹುದು. ಆಗ ಕಂಪ್ಯೂಟರ್ ನಲ್ಲಿ ಕನ್ನಡ ಟೈಪ್ ಮಾಡುವುದು ಎನ್ನುವ ವಿಷಯ ನನಗೆ ಹೊಸದಾಗಿತ್ತು. ನನ್ನ ಗಣಕದಲ್ಲಿ ’ಬರಹ’ ಮತ್ತು ’ನುಡಿ’ ತಂತ್ರಾಂಶಗಳನ್ನೂ ಅಳವಡಿಸಿಕೊಂಡಿದ್ದ ನೆನಪು. ಆದರೆ ನಾನು ಕನ್ನಡದಲ್ಲಿ ಅಪರೂಪಕ್ಕೆ ಬರೆದರೂ ಕಾಗದದ ಮೇಲೆ ಬರೆಯುತ್ತಿದ್ದುದರಿಂದ ಕಂಪ್ಯೂಟರ್ ನಲ್ಲಿ ಬರೆಯುವ ಪ್ರಮೇಯವಿರಲಿಲ್ಲ. ಆದ್ದರಿಂದ ಕನ್ನಡ ಟೈಪಿಸುವ ತಂತ್ರಾಂಶಗಳು ಯಾವಾಗಲಾದರೊಮ್ಮೆ ಸುಮ್ಮನೇ ಕುತೂಹಲಕ್ಕಷ್ಟೇ ಆಗಿತ್ತು. 'ಬರಹ 'ತಂತ್ರಾಂಶದ ANSI fontಗಳನ್ನು ಬಳಸಿ ಮೈಕ್ರೋಸಾಫ್ಟ್ ವರ್ಡ್ ನಲ್ಲಿ ಕೆಲವು ಕಡತಗಳನ್ನು ಟೈಪಿಸಿದ್ದು ನೆನಪಿದೆ. ಆಗ ಅಂತರಜಾಲವೂ ಕೂಡ ಇಷ್ಟು ವ್ಯಾಪಕವೂ ಆಗಿರಲಿಲ್ಲ ಮತ್ತು ನಮಗೂ ಅಷ್ಟು ನಿಲುಕಿರಲಿಲ್ಲ. ಆಮೇಲಿನ ದಿನಗಳಲ್ಲಿ ಎಲ್ಲ ಕಡೆಗಳಲ್ಲೂ ಹೊಂದುವಂತಹ ಅಂತಾರಾಷ್ಟ್ರೀಯ ಸ್ಟ್ಯಾಂಡರ್ಡಿನ ಯುನಿಕೋಡ್ * ಫಾಂಟುಗಳು ತಯಾರಾದವು. ಬರಹ, ನುಡಿ ತಂತ್ರಾಂಶಗಳು ಯುನಿಕೋಡ್ ಅಕ್ಷರಗಳನ್ನು ಟೈಪಿಸುವ ಸವಲತ್ತುಗಳನ್ನು ಒದಗಿಸಿಕೊಟ್ಟವು. ಆರ್ಕುಟ್ ಮತ್ತು ಬ್ಲಾಗ್ ಗಳಲ್ಲಿ ಕನ್ನಡ ಯುನಿಕೋಡ್ ನ ಬರಹಗಳು ಕಾಣಿಸತೊಡಗಿದವು. ಅಂತರಜಾಲದ ಬಳಕೆ ಹೆಚ್ಚಿದ ಮೇಲೆ ಕಂಪ್ಯೂಟರ್ ನಲ್ಲಿ ಕನ್ನಡ ಬರೆಯುವುದು ಹೆಚ್ಚುತ್ತಾ ಹೋಯಿತು. ಹಳೆಯ ಆಪರೇಟಿಂಗ್ ಸಿಸ್ಟಮ್ (O.S) ಮತ್ತು ಕೆಲವು ಬ್ರೌಸರ್ ಗಳಲ್ಲಿ ಕನ್ನಡ ಕಾಣಿಸಲು ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬೇಕಾಗಿತ್ತು.

ಈಗ ಅದೆಲ್ಲಾ ಹಳೆಯ ಕತೆಯಾಗಿದೆ. ಎಲ್ಲಾ ಒಂದು ಹಂತಕ್ಕೆ ಬಗೆಹರಿದಿದೆ. ಎಲ್ಲಾ O.S.ಗಳೂ, ಬ್ರೌಸರ್ ಗಳೂ ಭಾರತೀಯ ಲಿಪಿಗಳ ಫಾಂಟುಗಳನ್ನು ಬೆಂಬಲಿಸುತ್ತವೆ. ನಾವು ಅನಿವಾರ್ಯವಾಗಿ ಬಳಸುವ ಇಂಗ್ಲೀಷ್ ಅಕ್ಷರಗಳಿರುವ ಕೀಲಿಮಣೆಯ ಮೂಲಕವೇ ಕನ್ನಡವನ್ನು ಟೈಪಿಸಲು ಆಗುವ ಹಲವಾರು ಟೂಲ್ ಗಳು ಇವೆ. ಇಂಗ್ಲೀಷ್ ಟೈಪ್ ಮಾಡಿದಷ್ಟೇ ಸುಲಭವಾಗಿ ಇವತ್ತು ಕನ್ನಡವನ್ನು ಟೈಪ್ ಮಾಡಬಹುದು. ಸದ್ಯಕ್ಕೆ ಕನ್ನಡ ಟೈಪಿಂಗನ್ನು ಇದಕ್ಕಿಂತಲೂ ಅನುಕೂಲ ಮಾಡಲಿಕ್ಕಾಗುವುದಿಲ್ಲ ಅನ್ನಿಸುತ್ತದೆ.

*************************

ಕನ್ನಡ ಟೈಪಿಂಗಿಗೆ ಮುಖ್ಯವಾಗಿ ನಾಲ್ಕು ಬಗೆಯ ಕೀಲಿಮಣೆ ವಿನ್ಯಾಸಗಳಿವೆ (keyboard layouts). ಇವುಗಳಲ್ಲಿ ಯಾವುದಾದರೊಂದನ್ನು ಬಳಸಬಹುದು.  ಕೀಲಿಮಣೆ ವಿನ್ಯಾಸವೆಂದರೆ ಯಾವ ಕನ್ನಡ ಅಕ್ಷರ ಮೂಡಿಸಲು ಯಾವ ಕೀ ಒತ್ತಬೇಕು ಎಂಬುದರ ವಿನ್ಯಾಸ. ಅಷ್ಟೆ. 

೧. ಫೊನೆಟಿಕ್ * ಕೀಲಿಮಣೆ:  ಕನ್ನಡವನ್ನು ಇಂಗ್ಲೀಷಿನಂತೆ ಟೈಪ್ ಮಾಡುವುದು. ಅಂದರೆ ’ಕನ್ನಡ’ ಎಂದು ಬರೆಯಬೇಕಾದರೆ kannaDa ಎಂದು ಟೈಪಿಸಬೇಕು. ಇದು 'ಟ್ರಾನ್ಸ್ ಲಿಟೆರೇಶನ್ * ಕೀಲಿಮಣೆ' ಎಂದೂ ಗುರುತಿಸಲ್ಪಡುತ್ತದೆ. 'ಬರಹ ಕೀಲಿಮಣೆ' ಎಂದರೂ ಇದೇ ಎನ್ನಬಹುದು. ವಿನ್ಯಾಸ ಹೀಗಿದೆ: www.baraha.com/help/Keyboards/kan_phonetic.htm

೨. ಕೆ.ಪಿ.ರಾವ್ ಅಥವಾ ಕನ್ನಡ ಗಣಕ ಪರಿಷತ್ತು (ಕಗಪ) ಕೀಲಿಮಣೆ: ಇದೂ ಕೂಡ ಬಹುತೇಕ ಇಂಗ್ಲೀಷಿನ ಕೀಲಿಮಣೆಗೆ ಅನುಗುಣವಾಗಿದೆ. ಒಂದೊಂದು ಕೀಲಿಗೂ ಒಂದೊಂದು ಕನ್ನಡ ಅಕ್ಷರಗಳನ್ನು ನಿಗದಿ ಮಾಡಲಾಗಿದೆ. k ಗೆ ಕ, j ಗೆ ಜ, ಉ ಗೆ u .. ಹೀಗೆ.  ಕನ್ನಡ ಪದಗಳನ್ನು ಇಂಗ್ಲೀಷಿನಂತೆ ಟೈಪ್ ಮಾಡುವುದು ಬೇಕಾಗಿಲ್ಲ. 'ಗಣಕ' ಎಂದು ಬರೆಯಲು gNk  ಒತ್ತಿದರಾಯ್ತು.  ಇದು ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸ.  www.baraha.com/help/Keyboards/kan_brhkbd.htm

೩. ಟೈಪ್ ರೈಟಿಂಗ್ ಕೀಲಿಮಣೆ: ಹಿಂದೆ ಬಳಸುತ್ತಿದ್ದ ಕನ್ನಡ ಬೆರಳಚ್ಚು ಯಂತ್ರದ (ಟೈಪ್ ರೈಟಿಂಗ್ ಮೆಶೀನ್) ಕೀಲಿಮಣೆ. ಕನ್ನಡ ಟೈಪ್ ರೈಟಿಂಗ್ ಕಲಿತವರಿಗೆ ಇದು ಅನುಕೂಲ.

೪. ಇನ್ ಸ್ಕ್ರಿಪ್ಟ್ (inscript) ಕೀಲಿಮಣೆ: www.baraha.com/help/Keyboards/kan_inscript.htm - ಇದು ಇಂಗ್ಲೀಷ್ ಕೀಲಿಮಣೆಗೆ ಸಂಬಂಧವಿಲ್ಲದಂತ ಬೇರೆ ವಿನ್ಯಾಸ.  C-DAC ಸಂಸ್ಥೆ ಅಭಿವೃದ್ಧಿ ಪಡಿಸಿ ಭಾರತ ಸರ್ಕಾರದಿಂದ ಅಧಿಕೃತಗೊಳಿಸಿದ ಕೀಲಿಮಣೆ. www.java.sun.com/products/jfc/tsc/articles/InputMethod/indiclayout.html

ಇವು ನಾಲ್ಕರಲ್ಲಿ ಹೆಚ್ಚಾಗಿ ಬಳಸಲ್ಪಡುತ್ತಿರುವುದು ಮೊದಲಿನ ಎರಡು ವಿನ್ಯಾಸಗಳಾದರೂ ಕೂಡ, ಹೆಚ್ಚು ಟೈಪ್ ಮಾಡುವ ಕೆಲಸವಿರುವವರು ಕೊನೆ ಎರಡು ಕೀಲಿಮಣೆ ಕಲಿತು ಬಳಸಿದರೆ ವೇಗವಾಗಿ ಟೈಪ್ ಮಾಡಬಹುದು ಅಂತ ಬಲ್ಲವರು ಹೇಳುತ್ತಾರೆ. ಅದು ವೈಯಕ್ತಿಕ ಆಯ್ಕೆಗೆ ಬಿಟ್ಟದ್ದು.

***

ಕೀಲಿಮಣೆ ವಿನ್ಯಾಸದ ಬಗ್ಗೆ ಆಯಿತು. ಈಗ ಕನ್ನಡ ಟೈಪಿಸಲು ಬಳಸಬಹುದಾದ ತಂತ್ರಾಂಶಗಳನ್ನು ನೋಡೋಣ. ಇದಿಷ್ಟು ದಿನಗಳಲ್ಲಿ ನಾನು ಗಮನಿಸಿದ, ಬಳಸಿದ, ಬಳಸುತ್ತಿರುವ ಕೆಲವು ಕನ್ನಡ ಟೈಪಿಂಗ್ ಟೂಲ್ ಗಳನ್ನು ಪಟ್ಟಿ ಮಾಡಿದ್ದೇನೆ. ಎಲ್ಲಾ ತಂತ್ರಾಂಶಗಳೂ/ಟೂಲ್ ಗಳೂ ಮೇಲೆ ಹೇಳಿರುವ ಒಂದು ಅಥವಾ ಹೆಚ್ಚು ಬಗೆಯ ಕೀಲಿಮಣೆ ವಿನ್ಯಾಸವನ್ನು ಬಳಸಿ ಟೈಪಿಸಲು ಆಯ್ಕೆಗಳನ್ನು ಕೊಡುತ್ತವೆ.

I. ಆಫ್ ಲೈನ್ ತಂತ್ರಾಂಶಗಳು: ಇವುಗಳನ್ನು ಬಳಸಲು ಅಂತರಜಾಲ ಸಂಪರ್ಕ ಬೇಕಿರುವುದಿಲ್ಲ. ನಮ್ಮ ಕಂಪ್ಯೂಟರ್ ನಲ್ಲಿ  ತಂತ್ರಾಂಶ ಅಳವಡಿಸಿಕೊಂಡರೆ ಆಯಿತು. (install).

೧. ಬರಹ:- http://www.baraha.com/ ಇದರಲ್ಲಿ 'ಬರಹ ಕೀಲಿಮಣೆ' ಎಂದೇ ಹೆಸರಾಗಿರುವ ಫೊನೆಟಿಕ್ ಕೀಲಿಮಣೆ ಮೂಲಕ ಟೈಪಿಸಬಹುದು. 'ಕಗಪ & ಇನ್ ಸ್ಕ್ರಿಪ್ಟ್ ಕೀಲಿಮಣೆ'ಯ ಆಯ್ಕೆಯೂ ಇದೆ. ಯುನಿಕೋಡ್ ಮತ್ತು non-ಯುನಿಕೋಡ್ ಫಾಂಟ್ಸ್ ಇವೆ.

೨. ನುಡಿ:- http://www.kagapa.org/ ಕಗಪ ಕೀಲಿಮಣೆ ಮೂಲಕ ಟೈಪಿಸಬಹುದು. ಯುನಿಕೋಡ್ ಮತ್ತು non-ಯುನಿಕೋಡ್ ಫಾಂಟ್ಸ್ ಇವೆ.

೩. ಪದ:- http://www.pada.co.in/ ಫೊನೆಟಿಕ್/ಟ್ರಾನ್ಸ್ ಲಿಟೆರೇಶನ್, ಕಗಪ ಕೀಲಿಮಣೆ ಸೌಲಭ್ಯವಿದೆ. ಯುನಿಕೋಡ್  ಟೈಪಿಸಬಹುದು.

ಈಮೇಲಿನ ಮೂರು ತಂತ್ರಾಂಶಗಳಲ್ಲಿ ಟೈಪಿಸಿದ ಅಕ್ಷರಗಳನ್ನು ಎಡಿಟ್ (ಬಣ್ಣ, ಗಾತ್ರ, ಹಿನ್ನೆಲೆ etc.,) ಮಾಡುವುದು, ಫೈಲ್ ಗಳನ್ನು ಬೇರೆ ಬೇರೆ ಮಾದರಿಗಳಲ್ಲಿ ಉಳಿಸುವುದು (save as), ಫಾಂಟ್ ಪರಿವರ್ತನೆ (font convert) ಮುಂತಾದ ಸವಲತ್ತುಗಳಿವೆ. ಬರಹ, ನುಡಿಗಳಲ್ಲಿ ಬೇರೆ ಬೇರೆ ರೀತಿಯ non unicode ಅಕ್ಷರ ಶೈಲಿಗಳ (font types) ಸೌಲಭ್ಯಗಳಿವೆ.

೪. ವಿಂಡೋಸ್ ಇಂಡಿಕ್ ಇನ್ ಪುಟ್ :- www.bhashaindia.com/Downloads/pages/home.aspx - ಯಾವ ಹೊರ ತಂತ್ರಾಂಶದ ಅಗತ್ಯವೂ ಇಲ್ಲದಂತೆ ಕನ್ನಡ ಟೈಪ್ ಮಾಡಲು ವಿಂಡೋಸ್ ನಲ್ಲೇ ಸೌಲಭ್ಯ ಇರುತ್ತದೆ.  ಕಂಟ್ರೋಲ್ ಪ್ಯಾನಲ್ ಗೆ ಹೋಗಿ ಕನ್ನಡ ಕೀಲಿಮಣೆ ಸೇರಿಸಿಕೊಳ್ಳಬೇಕಾಗುತ್ತದೆ ಅಷ್ಟೆ. (ಕೀಲಿಮಣೆ ಸೇರಿಸುವುದು ಹೇಗೆ ಎಂದು ತಿಳಿಯಲು ಮೇಲಿನ ಕೊಂಡಿಗೆ ಹೋಗಿ help document ನೋಡಿ ಅಥವಾ ಇಲ್ಲಿ ಚಿಟುಕಿ).  ಮಾಮೂಲಾಗಿ ವಿಂಡೋಸ್ O.S.ನಲ್ಲಿ ಇನ್ ಸ್ಕ್ರಿಪ್ಟ್ ಕೀಲಿಮಣೆ ಇರುತ್ತದೆ. ಈ ತಂತ್ರಾಂಶ ಅಳವಡಿಸಿಕೊಂಡರೆ ನಾಲ್ಕೂ ಬಗೆಯ ಕೀಲಿಮಣೆ ಸೌಲಭ್ಯ ದೊರೆಯುತ್ತದೆ.

೫. ಗೂಗಲ್  ಟ್ರಾನ್ಸ್ ಲಿಟೆರೇಶನ್ IME :- www.google.com/ime/transliteration ಟ್ರಾನ್ಸ್ ಲಿಟೆರೇಶನ್ ಕೀಲಿಮಣೆ ಮೂಲಕ ಟೈಪಿಸಬಹುದು.

ಮೇಲಿನ  ಐದು ತಂತ್ರಾಂಶಗಳಲ್ಲಿ IME (input method editor) on ಮಾಡಿಟ್ಟುಕೊಂಡು word, excel, ppt ಮುಂತಾದ ಬೇರೆ ಬೇರೆ ಅಪ್ಲಿಕೇಶನ್ ಗಳಲ್ಲಿ, ವೆಬ್ ಸೈಟ್, ಚಾಟ್ ಎಲ್ಲಾ ಕಡೆ ನೇರವಾಗಿ ಕನ್ನಡ ಟೈಪಿಸಬಹುದು. ಕನ್ನಡ ಮತ್ತು ಇಂಗ್ಲೀಷಿನ ಮಧ್ಯೆ toggle ಮಾಡುತ್ತಾ ಬಳಸಿಕೊಳ್ಳಬಹುದು. (ಬರಹ ಡೈರೆಕ್ಟ್, ನೇರ ನುಡಿ, ಪದ IME )

೬. ಪ್ರಮುಖ್ ಟೈಪ್ ಪ್ಯಾಡ್ :- www.service.vishalon.net/pramukhtypepad.htm - Download for Offline Use : ಆಫೀಸಿನಲ್ಲೋ, ಮತ್ತೆಲ್ಲೋ ನಿಮ್ಮ ಕಂಪ್ಯೂಟರ್ ಗೆ ಯಾವ ಸಾಫ್ಟ್ ವೇರ್ ಅಳವಡಿಸಿಕೊಳ್ಳಲೂ ಅಡ್ಮಿನ್ ರೈಟ್ಸ್ ಇಲ್ಲ ಎಂದಾಗ ಮತ್ತು ಅಂತರಜಾಲ ಸಂಪರ್ಕ ಕೂಡ ಇಲ್ಲ ಎಂದಾಗ ಇದನ್ನು ಇಟ್ಟುಕೊಂಡು ಕನ್ನಡ ಟೈಪ್ ಮಾಡಬಹುದು.


II. ಆನ್ ಲೈನ್ ಟೂಲ್ ಗಳು: ಅಂತರಜಾಲ ಸಂಪರ್ಕವಿರುವಾಗ ಮಾತ್ರ ತೆಗೆದು ಬಳಸಲು ಸಾಧ್ಯ.

ಈ ಕೆಳಗಿನವು ಟ್ರಾನ್ಸ್ ಲಿಟೆರೇಶನ್ ಟೂಲ್ ಗಳು. ಕನ್ನಡವನ್ನು ಇಂಗ್ಲೀಷಿನಲ್ಲಿ ಟೈಪ್ ಮಾಡಿ ಸ್ಪೇಸ್ ಬಾರ್ ಒತ್ತಿದ ಅನಂತರ ಕನ್ನಡ ಅಕ್ಷರಗಳಾಗಿ/ಪದಗಳಾಗಿ ರೂಪಾಂತರ ಹೊಂದುತ್ತವೆ. ಪದಗಳು ತಪ್ಪಾಗಿಯೂ ಬರಬಹುದು. ಇದು ಟೈಪ್ ಮಾಡುವವರ ಟೈಪಿಂಗ್ ತಿಳುವಳಿಕೆಯ ಮೇಲೆ ಮತ್ತು ತಂತ್ರಾಂಶದ ಬುದ್ಧಿವಂತಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಅದು ಹಲವು ಸಲಹೆಗಳನ್ನೂ ಕೊಡುತ್ತದೆ, ತಪ್ಪಾಗಿ ಬಂದರೆ ನಾವು ಸರಿಪಡಿಸಬೇಕಾಗುತ್ತದೆ.

೧. ಗೂಗಲ್ ಟ್ರಾನ್ಸ್ ಲಿಟೆರೇಶನ್ www.google.com/transliterate/kannada

ಗೂಗಲ್ ನವರು transliteration bookmarklets ಎಂಬ ಟೂಲ್ ಕೂಡ ಕೊಟ್ಟಿದ್ದಾರೆ. ಅದನ್ನು ನಮ್ಮ ಬ್ರೌಸರಿನ ಫೇವರೆಟ್ ಬಾರ್ ನಲ್ಲಿ ಹಾಕಿಕೊಂಡಿದ್ದರೆ ಬೇಕಾದಾಗ ಆನ್ ಮಾಡಿಕೊಂಡು ಯಾವುದೇ ಜಾಲತಾಣದಲ್ಲಾದರೂ ಕೂಡ ಕನ್ನಡ ಟೈಪಿಸಬಹುದು. ವಿವರಗಳು ಇಲ್ಲಿವೆ : www.t13n.googlecode.com/svn/trunk/blet/docs/help.html#Save

೨. ತಮಿಳ್ ಕ್ಯೂಬ್ www.tamilcube.com/translate/kannada.aspx

೩. ಕ್ವಿಲ್ ಪ್ಯಾಡ್ http://www.quillpad.in/editor.html

೪. ಮೈಕ್ರೋಸಾಫ್ಟ್ www.specials.msn.co.in/ilit/Kannada.aspx


ಈ ಕೆಳಗಿನವುಗಳಲ್ಲಿ ಟೈಪ್ ಮಾಡಿದಾಗ ನೇರವಾಗಿ ಕನ್ನಡ ಅಕ್ಷರಗಳೇ ಮೂಡುತ್ತವೆ. ಇಂಗ್ಲೀಷ್ ಅಕ್ಷರಗಳ ಮಧ್ಯಸ್ಥಿಕೆ ಬೇಕಾಗುವುದಿಲ್ಲ. ಅಂತರಜಾಲದ ಮೂಲಕ ಕನ್ನಡ ಟೈಪಿಸುವವರು ಇವುಗಳನ್ನು ಬಳಸುವುದು ಒಳ್ಳೆಯದು. ಹೆಚ್ಚಿನ ಎಲ್ಲವೂ ಫೊನೆಟಿಕ್ ಕೀಲಿಮಣೆ ವಿನ್ಯಾಸವನ್ನು ಹೊಂದಿವೆ.

೧ . ಕನ್ನಡ ಸ್ಲೇಟ್ http://www.kannadaslate.com/

೨ . ಯಂತ್ರಂ http://type.yanthram.com/kn/

೩ . ವೆಬ್ ದುನಿಯಾ www.utilities.webdunia.com/kannada/transliteration.html

೪ . ಮಾನ್ಯುಸಾಫ್ಟ್ www.service.monusoft.com/KannadaTypePad.htm

೫ . ಪ್ರಮುಖ್ www.service.vishalon.net/pramukhtypepad.htm

೬ . ಲಿಪಿಕಾರ್ www.lipikaar.com/editor/kannada

೭ . ಮೈ ಲ್ಯಾಂಗ್ವೇಜ್ www.mylanguages.org/kannada_phonetic_keyboard.php

ಮೇಲಿನ ಟೂಲ್ ಗಳಲ್ಲಿ ಕೆಲವು ಕೇವಲ ಅಕ್ಷರ ಟೈಪಿಸಲು ಮಾತ್ರ ಅವಕಾಶ ಕೊಟ್ಟರೆ, ಇನ್ನು ಕೆಲವು ಎಡಿಟಿಂಗ್ (ಅಕ್ಷರಗಳ ಬಣ್ಣ, ಗಾತ್ರ ಮುಂತಾದ ಬದಲಾವಣೆಗಳು) ಮಾಡಲು ಸಾಧ್ಯ ಮಾಡಿಕೊಡುತ್ತವೆ.

****

ಲಿನಕ್ಸ್ ನಲ್ಲಿ ಕನ್ನಡ ಟೈಪಿಸಲು O.S.ನಲ್ಲೇ ಟೂಲ್ ಗಳು ಇವೆ. ಹೇಗೆಂದು ತಿಳಿಯಲು ಇದನ್ನು ಓದಿ :
ನಮಗೆ ಬೇಕಾದ ಹಾಗೆ ಕೀಲಿಮಣೆ ವಿನ್ಯಾಸ ಮಾಡಿಕೊಳ್ಳಲು ಅವಕಾಶವೂ ಇದೆ. ಆದರೆ ಬೇರೆ ಬೇರೆ ರೀತಿಯ text editingಗೆ ಹೊರ ತಂತ್ರಾಂಶಗಳು ಬೇಕಾಗಬಹುದು.

Macintosh O.S.ನಲ್ಲಿ ಕನ್ನಡ ಸೇರಿಸುವ ಬಗ್ಗೆ ಇಲ್ಲಿ ಓದಿ:
www.imacusers.com/adding-kannada-support-to-mac-os-x


ಕಂಪ್ಯೂಟರ್ ನಲ್ಲಿ ಕನ್ನಡ ಅಂದ್ರೆ ಬರೀ ಕನ್ನಡ ಟೈಪಿಸೋದು ಮಾತ್ರ ಅಲ್ಲ, ಇನ್ನೂ ಮಾಡಬೇಕಾಗಿರುವ ಬಹಳಷ್ಟು ಕೆಲಸಗಳಿವೆ, ನಾವು ಹಿಂದುಳಿದಿದ್ದೇವೆ ಅಂತ  ಗಣಕತಜ್ಞ 'ಪವನಜ' ಅವರು ಯಾವಾಗಲೂ ಹೇಳ್ತಾ ಇರ್ತಾರೆ. ಈ ಬಗ್ಗೆ ಬರೆದಿದ್ದಾರೆ. ಅದು ಇಲ್ಲಿದೆ: ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ -ಅಂದು, ಇಂದು, ಮುಂದು


****

So....ಕನ್ನಡ ಟೈಪಿಂಗ್ ಕಷ್ಟ, ಕನ್ನಡ ಟೈಪ್ ಮಾಡೋಕೆ ಯಾವುದೂ ಸರಿಯಾದ ಟೂಲೇ ಇಲ್ಲ .. ಅದೂ ಇದೂ ಅಂತ ಯಾರೂ ನೆಪ ಹೇಳುವ ಹಾಗಿಲ್ಲ. ನಿಮಗ್ಯಾವುದಿಷ್ಟನೋ ಆ ಟೂಲ್ ಸೆಲೆಕ್ಟ್ ಮಾಡ್ಕೊಳ್ಳಿ. ಶುರು ಹಚ್ಕೊಳ್ಳಿ.. :)

=================================================

  •  *ಟ್ರಾನ್ಸ್ಲಿಟೆರೇಶನ್ (transliteration) = ಲಿಪ್ಯಂತರ = ಒಂದು ಭಾಷೆಯ ಲಿಪಿಯನ್ನು ಮತ್ತೊಂದು ಭಾಷೆಯ ಲಿಪಿಯಾಗಿಸುವುದು.  
  •  *ಫೊನೆಟಿಕ್(phonetic) = ಧ್ವನ್ಯಾತ್ಮಕ = ನಾವು ಹೇಗೆ ಮಾತಾಡುತ್ತೀವೋ ಹಾಗೆ ಬರೆಯುವುದು.
  •  *ಯುನಿಕೋಡ್ ಎಂದರೆ ಏನು ಎಂದು ತಿಳಿಯಲು ಇಲ್ಲಿ ಚಿಟುಕಿ.

26 ಪ್ರತಿಕ್ರಿಯೆ:

ಸಂದೀಪ್ ಕಾಮತ್ ಹೇಳಿದರು...

ಬಹಳಷ್ಟು ಜನರಿಗೆ ಈ tutorial ಸಹಾಯವಾಗುತ್ತೆ.

ಶೀರ್ಶಿಕೆ ಇಂಗ್ಲೀಷ್ ನಲ್ಲಿದ್ದದ್ದು ಒಳ್ಳದಾಯ್ತ. ಗೂಗಲ್ ನಲ್ಲಿ ಎಲ್ಲರಿಗೂ ಸಿಗುತ್ತೆ ಸರ್ಶ್ ಮಾಡಿದ್ರೆ.

Harisha - ಹರೀಶ ಹೇಳಿದರು...

ಲಿನಕ್ಸಾಯಣಕ್ಕೆ ಲಿಂಕ್ ಕೊಟ್ಟಿದ್ರೆ ಇನ್ನೂ ಚೆನ್ನಾಗಿತ್ತು :|

ತೇಜಸ್ವಿನಿ ಹೆಗಡೆ ಹೇಳಿದರು...

ಚೆನ್ನಾಗಿದೆ.. ಮಾಹಿತಿಪೂರ್ಣ ಲೇಖನ.

vijaykannantha ಹೇಳಿದರು...

ತುಂಬಾ ಒಳ್ಳೆಯ ಮಾಹಿತಿ.... ಬಹುತೇಕ ಜನಕ್ಕೆ ಉಪಯೋಗ ಆಗುತ್ತೆ.. ವಿಕಾಸ`ವಾದ'ಕ್ಕೆ ಧನ್ಯ'ವಾದ'

Chaithrika ಹೇಳಿದರು...

ಇನ್ನೊಂದು ಮಾಹಿತಿ:
Macintosh ನಲ್ಲಿ Kannada.bundle ಅನ್ನು Keyboard Layout folder ಒಳಗೆ ಇಟ್ಟರೆ ಕನ್ನಡ typing ಸಾಧ್ಯವಾಗುತ್ತದೆ. ಈ bundle ಒಳಗೆ ಅಕ್ಷರಗಳಿಗೆ ಕೀಲಿಗಳನ್ನು ಹೊಂದಿಸಿದ XML ಇದೆ.

ರಾಘವೇಂದ್ರ ಜೋಶಿ ಹೇಳಿದರು...

ಒಂದು ಅತ್ಯುತ್ತಮ ಪಾಠ.
ಒಳ್ಳೆಯ ಪ್ರಯತ್ನ.ಇದು ಅಗತ್ಯವಾಗಿ ಬೇಕಾಗಿತ್ತು.
ಧನ್ಯವಾದಗಳು.
-RJ

Kanthi ಹೇಳಿದರು...

helpful informations.. Thanks..

ಮಧು ದೊಡ್ಡೇರಿ ಹೇಳಿದರು...

Very informative article.. Thanks Vikas...

vinayaka kodsara ಹೇಳಿದರು...

ಒಳ್ಳೆ ಮಾಹಿತಿಯುತ ಬರಹ ಕಣೊ. ಖಂಡಿತ ಈ ಬರಹದ ಅಗತ್ಯವಿತ್ತು. ಹೀಗೆ ಉತ್ತಮ ಬರಹಗಳನ್ನು ಬರಿಯುತ್ತಾ ಇರು..ಎಲ್ಲೆ ಇರು, ಹೇಗೆ ಇರು, ಎಂದೆಂದಿಗೂ ನೀ ಕನ್ನಡದವನಾಗಿರು!

Dr U B Pavanaja ಹೇಳಿದರು...

ಪಟ್ಟಿ ಚೆನ್ನಾಗಿದೆ. ಕೆಲವು ನನಗೂ ಗೊತ್ತಿರಲಿಲ್ಲ :)

-ಪವನಜ

veereshsavadi ಹೇಳಿದರು...

simply superb, Chamu. informative and brief. keep writing such articles.
thanks.

sunaath ಹೇಳಿದರು...

ವಿಕಾಸ,
ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು.

Manjunatha Kollegala ಹೇಳಿದರು...

ಉತ್ತಮ ಮಾಹಿತಿ

Thontadarya ಹೇಳಿದರು...

ಮಾಹಿತಿಪೂರ್ಣವಾಗಿದೆ. ಕನ್ನಡ ಬರಹಗಾರರು ತಪ್ಪದೆ ಓದಬೇಕಾದ ಲೇಖನ.

Parisarapremi ಹೇಳಿದರು...

What a fine work Vikasa.. good good...

AntharangadaMaathugalu ಹೇಳಿದರು...

ದೊಡ್ಡ ಪಟ್ಟಿಯನ್ನೇ ಕೊಟ್ಟು ಬಿಟ್ಟಿದ್ದೀರಿ. ತುಂಬಾ ಉಪಯುಕ್ತ ಹಾಗೂ ಬೇಕಾಗಿದ್ದ ಮಾಹಿತಿ ಹಾಗೂ ಕೊಂಡಿಗಳು. ಧನ್ಯವಾದಗಳು ವಿಕಾಸ್...

ಶ್ಯಾಮಲ

ಸತ್ಯಪ್ರಕಾಶ್ ಹೇಳಿದರು...

ಕನ್ನಡ ಟೈಪಿಂಗ್ ಬಗ್ಗೆ ಇಲ್ಲಿ ಬರೆದಿರುವುದನ್ನು ಓದಿ ತುಂಬಾನೇ ಸಂತೋಷ ಆಯುತು. ತುಂಬಾನೇ ಚೆನ್ನಾಗಿದೆ ಮತ್ತು ಬಹಳ ಉಪಯುಕ್ತವಾಗಿದೆ.

CSMysore ಹೇಳಿದರು...

ತುಂಬಾ ಒಳ್ಳೆಯ ಮಾಹಿತಿ ಸಂಕಲನ. ಧನ್ಯವಾದಗಳು.

ದತ್ತಾತ್ರಿ ಹೆಚ್. ಎಂ. ಹೇಳಿದರು...

ತುಂಬಾ ಒಳ್ಳೆಯ ಸಂಕಲನ. ಧನ್ಯವಾದಗಳು.

CSMysore ಹೇಳಿದರು...

ತುಂಬಾ ಒಳ್ಳೆಯ ಸಂಕಲನ. ಧನ್ಯವಾದಗಳು.

achu ಹೇಳಿದರು...

its really nice

Subrahmanya ಹೇಳಿದರು...

ಜೈ ಕನ್ನಡಮಾತೆ.

Prashanth Urala. G ಹೇಳಿದರು...

ಕನ್ನಡದಲ್ಲಿ ಬರೆಯಲು ಮತ್ತೊಂದು ಸುಲಭ ವಿಧಾನ Yanthramನಲ್ಲಿದೆ:

http://nannakanasu-chiguru.blogspot.com/2008/07/blog-post_11.html

ವಂದನೆಗಳೊಂದಿಗೆ,
ಪ್ರಶಾಂತ ಜಿ ಉರಾಳ

ವಿ.ರಾ.ಹೆ. ಹೇಳಿದರು...

ಪ್ರತಿಕ್ರಯಿಸಿದ ಎಲ್ಲ ಓದುಗರಿಗೂ, ಗೆಳೆಯರಿಗೂ, ಹಿರಿಯರಿಗೂ ಧನ್ಯವಾದಗಳು.

@ಹರೀಶ, ಲಿನಕ್ಸಾಯಣದ ಕೊಂಡಿ ಸೇರಿಸಿದ್ದೇನೆ. ಥ್ಯಾಂಕ್ಸ್

@ಚೈತ್ರಿಕ, Macintosh ಬಗ್ಗೆ ಒಂದು ಕೊಂಡಿ ಸೇರಿಸಿದ್ದೇನೆ, ಅದರಲ್ಲಿ ನೀವು ಹೇಳಿರುವ ಮಾಹಿತಿ ಇದೆ. ಥ್ಯಾಂಕ್ಸ್

@ಪ್ರಶಾಂತ ಉರಾಳ, ಹೌದು, ಅದು ನನ್ನ ಮನಸಿನಲ್ಲಿತ್ತು. ಬರೆಯುವಾಗ ಬಿಟ್ಟು ಹೋಗಿತ್ತು. ಈಗ ಸೇರಿಸಿದ್ದೇನೆ. ಥ್ಯಾಂಕ್ಸ್.

ದುರಹಂಕಾರಿ ಹೇಳಿದರು...

ಸೂಪರ್ರೋ ರಂಗ, ಧನ್ಯವಾದ ಮತ್ತು ಅಭಿನಂದನೆಗಳು :)

ಪ್ರಶಾಂತ ಸೊರಟೂರ ಹೇಳಿದರು...

ವಿಕಾಸ್,
ತುಂಬಾ ಚೆನ್ನಾಗಿ ಮಾಹಿತಿಯನ್ನು ಒಗ್ಗೂಡಿಸಿ ಒಂದೆಡೆ ಹಾಕಿದ್ದೀರಿ :-)
ಹಲವರು ಗಣಕದಲ್ಲಿ ಕನ್ನಡವನ್ನೂ ಹೇಗೆ ಮೂಡಿಸುವುದು ಎಂದು ಕೇಳುವಾಗ, ನಿಮ್ಮ ಈ ಕೊಂಡಿಯು ನೆರವಿಗೆ ಬರುತ್ತೆ

Share it