ಪುಟಗಳು

ಸೋಮವಾರ, ಮೇ 17, 2010

ಸಿನೆಮಾ ನೋಡ್ಬೇಕು

ಈ ಬೆಂಗಳೂರಿನಲ್ಲಿ ನೋಡಬೇಕೆನಿಸಿದ ಸಿನೆಮಾಗಳು ಅದ್ಯಾವ ಟಾಕೀಸಲ್ಲಿ ಇರುತ್ತದೋ ಗೊತ್ತಾಗುವುದಿಲ್ಲ, ಪತ್ರಿಕೆಯಲ್ಲಿ ಹಾಕಿದ ಟಾಕೀಸಿಗೆ ಹೋದರೆ ಬೇರೆ ಯಾವುದೋ ಸಿನೆಮಾ ಇರುತ್ತದೆ. ವಾರದ ದಿನಗಳಲ್ಲಿ ಹೋಗಲು ಆಗುವುದಿಲ್ಲ. ವಾರಾಂತ್ಯಗಳಲ್ಲಿ ಹಂಗೂ ಸರಿಯಾಗಿ ಗೊತ್ತುಮಾಡಿಕೊಂಡು ಹೋದರೆ ಟಿಕೇಟು ಸಿಗುವ ಖಾತ್ರಿ ಇರುವುದಿಲ್ಲ. ಟಿಕೇಟು ಸಿಗುವ ಟಾಕೀಸುಗಳು ಹತ್ತಿರವಿರುವುದಿಲ್ಲ. ಸ್ವಲ್ಪ ಚೆನ್ನಾಗಿ ಓಡುತ್ತಿದೆ ಅಂತಾದರೆ ಟಾಕೀಸಿನವರೇ ಬ್ಲ್ಯಾಕ್ ಟಿಕೆಟ್ ಮಾರುತ್ತಿರುತ್ತಾರೆ. ಬುಕ್ ಮಾಡಿಸಿಕೊಂಡು ಹೋಗೋಣವೆಂದರೆ ಅವತ್ತು ನಾನೇ ಎಲ್ಲಾದರೂ ಬುಕ್ ಆಗಿ ಹೋಗಿರುತ್ತೇನೆ. ಸುಮಾರು ದಿನಗಳ ನಂತರ ಹೋದರಾಯಿತೆಂದು ಬಿಟ್ಟರೆ ಟಾಕೀಸುಗಳಿಂದ ತೆಗೆದೇ ಬಿಟ್ಟಿರುತ್ತಾರೆ. ಕೊನೆಗೆ ಎಲ್ಲಾ ಸರಿಯಾದರೂ ನಮಗೇ ಟೈಮ್ ಇರುವುದಿಲ್ಲ ಅಥವಾ ಜೊತೆಗ್ಯಾರೂ ಸಿಗುವುದಿಲ್ಲ! ಆದ್ದರಿಂದ ಬೆಂಗಳೂರಿಗೆ ಬಂದಮೇಲೆ ಎಷ್ಟೋ ಒಳ್ಳೊಳ್ಳೆ ಸಿನೆಮಾಗಳು ಹೀಗೇ ನೋಡಲಾಗದೇ ತಪ್ಪಿಹೋದದ್ದಿದೆ. ಇರಲಿ. ಒಟ್ನಲ್ಲಿ ನಮಗೇನು ಮಾಡಕ್ಕಾಗುವುದಿಲ್ಲವೋ ಅದಕ್ಕೆ ನೆಪ ಹೇಳಬೇಕು ಹೀಗೆ ಅಷ್ಟೆ.

ಸದ್ಯಕ್ಕೆ ನೋಡಬೇಕಾದ ಸಿನೆಮಾಗಳು

ಪೃಥ್ವಿ : ಅದೇನು ವಿಪರ್ಯಾಸವೋ, ವಿಧಿಲಿಖಿತವೋ, ವಿಪರೀತವೋ ಗೊತ್ತಿಲ್ಲ, ನಾನು ಟಾಕೀಸಿನಲ್ಲಿ ನೋಡಿದ ಪುನೀತ್ ಚಿತ್ರವೆಂದರೆ ’ಆಕಾಶ್’ ಒಂದೇ. ಅದೂ ಕೂಡ ಯಾವತ್ತೋ ಹೊತ್ತು ಕಳೆಯಲು ನವರಂಗ ಟಾಕೀಸಿನಲ್ಲಿ ೧೦೦ ದಿನ ಆದಮೇಲೆ ಹೋಗಿದ್ದು. ಮತ್ಯಾವುದೋ ಕಾರಣಕ್ಕೋಸ್ಕರ ’ಅರಸು’ ಚಿತ್ರಕ್ಕೆ ಹೋಗಬೇಕೆಂದಿದ್ದರೂ ಮೇಲೆ ಹೇಳಿದ ಕಾರಣಗಳಲ್ಲಿ ಯಾವುದೋ ಒಂದರಿಂದ ಅದು ತಪ್ಪಿ ಹೋಯಿತು. ಈಗ ಪೃಥ್ವಿ ನೋಡಬೇಕು. ಈ ಸಿನೆಮಾ ಬಗ್ಗೆ ಕೆಲವ್ರು ಓ.ಕೆ ಅಂದ್ರು, ಕೆಲವ್ರು ಸೂಪರ್ ಅಂದ್ರು, ಕೆಲವರು ಇನ್ನೇನೋ ಅಂದರು. ಅದೆಲ್ಲಾ ಗೊತ್ತಿಲ್ಲ. ಪ್ರಚಲಿತ ಘಟನೆಗಳ, ಸಮಕಾಲೀನ ಕತೆಯ ಸಿನೆಮಾಗಳು ಹೀಗೆ ಕಮರ್ಶಿಯಲ್ಲಾಗಿ ಬರಬೇಕು. ನೋಡ್ಬೇಕಾದ ಸಿನೆಮಾಗಳ ಪಟ್ಟಿಗೆ ಇದು ಸೇರಿದೆ.

ಇಜ್ಜೋಡು: ನೋಡಿದವರ್ಯಾರೂ ಚೆನ್ನಾಗಿದೆ ಅನ್ನಲಿಲ್ಲ. ಆದ್ರೂ ನನಗೆ ನೋಡಬೇಕು ಅನ್ನಿಸಿಬಿಟ್ಟಿದೆ. ಸತ್ಯು ಸಿನೆಮಾ ಎನ್ನುವುದು ಒಂದು ಕಾರಣವೆಂದೂ, ಮೀರಾ ಜಾಸ್ಮಿನ್ ಮತ್ತೊಂದು ಪ್ರಬಲ ಕಾರಣವೆಂದೂ ಡೌಟು ! ;) ಆದರೆ ಯಾವ ಟಾಕೀಸಿನಲ್ಲೂ ಇರುವುದು ಖಾತ್ರಿ ಇಲ್ಲ. ಇದ್ದರೂ ನಾ ಹೋಗುವುದ್ಯಾವಾಗ ಅಂತ ನನಗೇ ಖಾತ್ರಿ ಇಲ್ಲ.

ಬೊಂಬಾಟ್ ಕಾರ್: ಈ ಗ್ರಾಫಿಕ್ಸ್ ಸಿನೆಮಾ ಡಿಫರೆಂಟಾಗಿ ಇರಬಹುದು, ಹೊಸ ಪ್ರಯೋಗ ಅನ್ನಿಸಿದೆ. ಇದ್ನೂ ನೋಡ್ಬೇಕು ಅನ್ಕೊಂಡಿದ್ದೀನಿ. ಮಕ್ಕಳ ಚಿತ್ರ ಅಂತ ಮೂಗು ಮುರಿದರೆ ನನಗೇನಾಗಬೇಕಿಲ್ಲ. ಟಾಮ್ ಅಂಡ್ ಜೆರ್ರಿ, ರೋಡ್ ರನ್ನರ್ ಶೋದಂತಹ ಕಾರ್ಟೂನುಗಳನ್ನು, ಅನಿಮೇಶನ್ ಮೂವಿಗಳನ್ನು ಆನಂದಿಸುವ ನನಗೆ ಮಕ್ಕಳ ಚಿತ್ರ ನೋ ಪ್ರಾಬ್ಲೆಮ್. ಸದ್ಯದಲ್ಲೇ ’ಬೊಂಬೆಯಾಟವಯ್ಯಾ’ ಅನ್ನುವ ಕನ್ನಡದ ಮೊದಲ ಅನಿಮೇಶನ್ ಮೂವಿ ಬರ್ತಾ ಇದೆ ಅನ್ನೋದು ಬಿಸಿಬಿಸಿ ಖುಷಿ ಸುದ್ದಿ.

ನಾನು, ನನ್ನ ಕನಸು: ಬಿಡುಗಡೆಯಾಗುತ್ತಿದ್ದಂತೇ ಒಳ್ಳೊಳ್ಳೇ ಅಭಿಪ್ರಾಯಗಳು ತುಂಬಿ ಹರಿದು ಬರ್ತಾ ಇವೆ. ಕಥೆ, ಕೊಸರು, ಅಭಿನಯ, ಸಂಭಾಷಣೆ ಇತ್ಯಾದಿ ಇತ್ಯಾದಿ ಎಲ್ಲಾ ಸೂಪರಂತೆ. ಮನೆಮಂದಿಯೆಲ್ಲಾ ನೋಡಬಹುದಾದ ಚಿತ್ರವಂತೆ. ಸದ್ಯಕ್ಕೆ ಮನೆ, ಮಂದಿ ಅಂತ ಯಾರೂ ಇಲ್ಲದಿರುವುದರಿಂದ ನಾವೇ ಕೆಲವು ಮಂದಿ ಹೋಗಿಬರಬೇಕು. ತೀರಾ ಅಳಿಸಲೆಂದೇ ಮಾಡಿದ ಸೆಂಟಿಮೆಂಟಿನ ಚಿತ್ರಗಳು ನನಗೆ ಸರಿಹೋಗುವುದಿಲ್ಲ. ಅದು ನೈಜತೆಯಿಂದ ಕೂಡಿದ್ದರೆ, ಒಂದು ಲೆವೆಲ್ ನಲ್ಲಿದ್ದರೆ ಓ.ಕೆ. ’ನಾನು ನನ್ನ ಕನಸು’ ಎಲ್ಲಾ ಹದವಾಗಿರುವ ಕ್ವಾಲಿಟಿ ಸಿನೆಮಾ ಅಂತೆ.

ಮುಂದೆ ಬರುವ ಎರಡು ವೀಕೆಂಡು ಮದುವೆ, ಮುಂಜಿ ಅಂತ ಬುಕ್ಕಾಗಿ ಹೋಗಿದೆ. ಅದನ್ನು ಮುಗಿಸಿಕೊಂಡು ಊರು ಸುತ್ತಿಕೊಂಡು ವಾಪಸ್ಸು ಬರುವವರೆಗೂ ೪ರಲ್ಲಿ ಎರಡಾದರೂ ಇನ್ನೂ ಸಿನೆಮಾ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುತ್ತವೆ ಎಂಬ ಭರವಸೆ ಇದೆ. ತಪ್ಪಿಹೋದರೆ ಡಿ.ವಿ.ಡಿ. ಗತಿ.

ನೋಡ್ಲೇಬೇಕು.

22 ಕಾಮೆಂಟ್‌ಗಳು:

Subrahmanya ಹೇಳಿದರು...

ಟಾಕೀಸಲ್ಲಿ ನೋಡಕ್ಕಾಗ್ದಿದ್ರೆ ಡಿ.ವಿ.ಡಿ ತಂದು ನೊಡಿ..but, Kill piracy !. At least ಇಲ್ಲಿ ಬರೆದಿರೊದ್ರಲ್ಲಿ ಒಂದಾದ್ರು ನೋಡಿ ....!

ವನಿತಾ / Vanitha ಹೇಳಿದರು...

ಸಕತ್ !!
ಬೇರೆ ಸಿನೆಮಾದ ಬಗ್ಗೆ ಗೊತ್ತಿಲ್ಲ..'ನಾನು ನನ್ನ ಕನಸು' ಸಿನೆಮಾದ ತಮಿಳ್ version 'ಅಭಿಯುಂ ನಾನುಂ' ಸಿನೆಮ್ಮವನ್ನು ೩ ಸಲ ಮನೆಯವರೆಲ್ಲಾ ಸೇರಿ ನೋಡಿದ್ದೇವೆ.Its available in youtube.

ಸುಶ್ರುತ ದೊಡ್ಡೇರಿ ಹೇಳಿದರು...

ನಾನು ನನ್ನ ಕನಸು ನಂದಿನಿಲಿ ಇದ್ದು. ನಂಗೆ ಹೋಗಕ್ಕು ಅಂತ; ಆದ್ರೆ ಯಾರೂ ಜೊತಿಗಿಲ್ಲೆ. ನೀ ಯಾವತ್ ಹೋಗ್ತೆ ಹೇಳು, ನಾನೂ ಬರ್ತಿ.
[PS: ನಿಂಗೂ ಜೊತಿಗಿಲ್ಲೆ ಅಂತಾದ್ರೆ]

shridhar ಹೇಳಿದರು...

ವಿಕಾಸ ,
ಒಳ್ಳೆ ಪ್ಲಾನ್ ಇಟ್ಟಿದೀರಾ ..ಹೋಗಿ ಬನ್ನಿ ..
ಮೂವಿ ನೋಡಿ ಮಜಾ ಮಾಡಿ. ಪ್ರತಿ ಮೊವಿನೂ ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತೆ
ಸೊ ಸ್ವತಃ ನೋಡಿ ನಿರ್ಧರಿಸುವುದು ಒಳಿತು.
ನನಗೆ ಪ್ರಥ್ವಿ ಇಷ್ಟವಾಗಿಲ್ಲ ಅಂತ ಬೆರೆಯವ್ರಿಗೆ ಲೈಕ್ ಆಗಬಾರ್ದು ಅಂತೆನಿಲ್ಲ ,,
ನಾನು ನನ್ನ ಕನಸು .. ಇಗಾಗಲೆ ತೆಲುಗು ಮತ್ತು ತಮಿಳಿನಲ್ಲಿ ಉತ್ತಮ ಪ್ರದರ್ಶನ
ಕಂಡ ಚಿತ್ರ.
ಬಹಳ ಹೇಳಿ ನಿಮ್ಮ ಮೂಡ್ ಹಾಳು ಮಾಡೊಲ್ಲ .. ಸಿನಿಮಾ ನೋಡಿ ಮಜಾ ಮಾಡಿ.
ಒಳ್ಳೆಯ ಚಿತ್ರಗಳಿಗೆ ಬೆಲೆ ಕೊಡಿ. :)

sunaath ಹೇಳಿದರು...

ವಿಕಾಸ,
ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.

ಶೆಟ್ಟರು (Shettaru) ಹೇಳಿದರು...

ಬಂಧುಗಳೊಬ್ಬರ ಮದುವೆಗಾಗಿ ಕರ್ನಾಟಕಕ್ಕೆ ಬರುವುದಿದೆ ಈ ವಾರ, ಹೇಗಾದರೂ ಮಾಡಿ ನಾನೂ ನನ್ನ ಕನಸು ನೋಡ್ಲೇಬೇಕು ಅಂದುಕೊಂಡಿದ್ದೆನೆ.

-ಶೆಟ್ಟರು

ವಿ.ರಾ.ಹೆ. ಹೇಳಿದರು...

@subramanya, ಹೊಸ ಕನ್ನಡ ಸಿನೆಮಾ ಡಿ.ವಿ.ಡಿ ಸಿಗಲ್ಲ. pirated ಕೂಡ ಬಹಳಾ ಕಷ್ಟ. Atleast ಮೂರು ಆದ್ರೂ ನೋಡ್ತೀನಿ, without piracy ;)

@ವನಿತಾ, I dnt understand tamilu, telugu. So, ನಾನು ಕನ್ನಡದಲ್ಲಿ ನೋಡ್ತೀನಿ, ಅದು ಕೊಡುವ ಖುಷಿನೇ ಬೇರೆ! :) thanks

@Sush, Ok boss. Done

@Shridhar, Yes boss. Thanks.

@ಶೆಟ್ಟರ್, ಸ್ವಾಗತ . ಬನ್ನಿ , ಆರಾಮು ನೋಡ್ಕೊಂಡು ಹೋಗಿ. ;)

@ಕಾಕಾ, ನಿಮ್ಮ ಹಾರೈಕೆಗೆ Thanks. ಎಲ್ಲಾ ನೋಡಲಿಕ್ಕಾದರೆ ಅದೇ ಸಂತೋಷ ;)

roopa ಹೇಳಿದರು...

ವಿಕಾಸ್ ,
ತಮಿಳು ,ತೆಲುಗು ನನಗೂ ಅರ್ಥವಾಗುವುದಿಲ್ಲ. ಆದರೆ ಕನ್ನಡದ "ನಾನು ನನ್ನ ಕನಸು " ನನಗೆ ಈಗ ನೋಡಲು ಸಾದ್ಯವಿಲ್ಲದ ಕಾರಣ ಹಾಗು ಆ ಸಿನೆಮ ತ೦ದೆ-ಮಗಳ ಅನುಬ೦ದದ ಬಗ್ಗೆ ಇದ್ದ ಕಾರಣ ನನಗೆ ಬೇರೆ ಗತಿ ಇಲ್ಲದಿದ್ದಕ್ಕೆ ತಮಿಳು ನೋಡಿ ಸಲ್ಪ ಸಮಾದಾನದಿ೦ದ ಇದ್ದೆ. ಕನ್ನಡದಲ್ಲಿ ನೋಡುತ್ತೇನೇ " ಅದು ಕೊಡುವ ಖುಷಿನೇ ಬೇರೆ! " ಎ೦ದು ಹೇಳಿ ನನ್ನ ಹೊಟ್ಟೆ ಯುರಿಯನ್ನು ಜಾಸ್ತಿ ಮಾಡುತ್ತಾ ಇದ್ದೀರಿ? :-):-)
ಎಲ್ಲ ಸಿನೆಮಾವನ್ನು ನೋಡಿ ಎ೦ದು ಹಾರೈಸುತ್ತೇನೆ.

k.s.raghavendranavada ಹೇಳಿದರು...

ವಿಕಾಸರೇ, ನಮಸ್ಕಾರಗಳು.
ನಿಮ್ಮ ವಿಕಾಸವಾದವನ್ನು ಸ೦ಪೂರ್ಣವಾಗಿ ಆಲಿಸಿದೆ. ಅಧ್ಬುತವಾಗಿದೆ ನಿಮ್ಮ ಕೆಲವೊ೦ದು ಲೇಖನಗಳು! ಏನೋ ಒ೦ದು ರೀತಿಯ ಹೊಸತನ ನಿಮ್ಮ ಲೇಖನಗಳಲ್ಲಿವೆ. ಮು೦ದುವರೆಸಿ. ನಿಮಗೆ ಒಳ್ಳೆಯದಾಗಲಿ.
ನಿಮ್ಮವ ನಾವಡ.

ಸುಧೇಶ್ ಶೆಟ್ಟಿ ಹೇಳಿದರು...

vikas....

naanu bengaloorige bandaaga "naanu nanna kanasu" mattu "nooru janmaku" (e vaaradalli bidugade aguttante) nodabeku antha maadideeni :)

ವಿ.ರಾ.ಹೆ. ಹೇಳಿದರು...

@ರೂಪಾ,ನಿಮ್ಮ ಹಾರೈಕೆಗೆ ಥ್ಯಾಂಕ್ಸ್ . ನೀವು ಭಾರತಕ್ಕೆ ಬರುವವರೆಗೂ ಆ ಸಿನೆಮಾ ಟಾಕೀಸ್ ಗಳಲ್ಲಿ ಇರಲಿ ಮತ್ತು ನೀವು ನೋಡುವಂತಾಗಲಿ ಎಂದು ಆಶಿಸುತ್ತೇನೆ :)

@ರಾಘವೇಂದ್ರ ನಾವಡ, ನಮಸ್ತೆ, ನನ್ನ ಬ್ಲಾಗ್ ಗೆ ಓದಿದ್ದಕ್ಕೆ, ಮೆಚ್ಚುಗೆಗೆ, ಹಾರೈಕೆಗೆ ಧನ್ಯವಾದಗಳು. ಬರುತ್ತಿರಿ.

@ಸುಧೇಶ್, ಖಂಡಿತ ಬಂದು ನೋಡಿ . ನೀವು ಬರೋವರೆಗೂ ಇರ್ಬೋದು ;)

ಜಾಕಾಸ್ ಹುಡ್ಗ... ಹೇಳಿದರು...

ಯಾವ ಚಿತ್ರ ಮಿಸ್ ಆದ್ರು..ಪೃಥ್ವಿನ ಮಾತ್ರ ಮಿಸ್ ಮಾಡ್ಬೇಡ ಗುರು..ಸಖತ್ ಸಿನಿಮಾ ಅದು..

ಲೋದ್ಯಾಶಿ ಹೇಳಿದರು...

ಎರಡೂವರೆ ಗಂಟೆಯ ಒಂದು ಚಲನಚಿತ್ರವನ್ನು ವೀಕ್ಷಿಸಲು ಎರಡು ದಿನಗಳಷ್ಟು ಸಮಯ ಮುಂದಾಲೋಚನೆಯೇ?
ಯಾರೇನೇ ಎಂದರು ಹೊಸ ಚಿತ್ರಗಳನ್ನು ತಪ್ಪದೇ ವಿಕ್ಷಿಸುತ್ತಿದ್ದೆ.

Chinmay ಹೇಳಿದರು...

nanu nanna kanasu nodabeku!
Istondu nodabahudada kannada chitragalu ide andaga khushi ayitu!

Kannadadalli comment bareyodu hege?

anand ಹೇಳಿದರು...

ಈ ವಿಕೆ೦ಡ್ ನನ್ನ ಜೊತೆ ಬರ್ತಿರ ಇಲ್ಲಿರೊ ೨ ಸಿನೆಮಾ ತೊರಸ್ತಿನಿ.

ಟೈಮ್ ಮಾಡ್ಕೊಳ್ರಿ

ವಿ.ರಾ.ಹೆ. ಹೇಳಿದರು...

@ಜಾಕಾಸ್, ಇಲ್ಲ ಮಿಸ್ ಮಾಡಲ್ಲ. ನೋಡ್ತೀನಿ ಈ ವಾರ .

@ಲೋದ್ಯಾಶಿ, ಹೌದು ಸಾರ್ ಪ್ಲಾನ್ ಹಾಕ್ಕೋಬೇಕಾಗತ್ತೆ.

@ಚಿನ್ಮಯ, ಯಾವ ಲೋಕದಲ್ಲಿದ್ದೀರಿ? ನೋಡಬಹುದಾದ, ನೋಡಲೇಬೇಕಾದ ಕನ್ನಡ ಚಿತ್ರಗಳು ಧಂಡಿಯಾಗಿವೆ. ಖಂಡಿತ ನೋಡಿ. ನೀವು ಬ್ಲಾಗ್ ನಲ್ಲಿ ಕನ್ನಡ ಹೇಗೆ ಬರೆದಿದ್ದೀರೋ ಹಾಗೆಯೇ ಕಮೆಂಟ್ ನಲ್ಲೂ ಬರೆಯಬಹುದು. ಬರಹ ಡೈರೆಕ್ಟ್, ಗೂಗಲ್ ಟ್ರಾನ್ಸಿಟೆರೇಶನ್, ಯಂತ್ರಂ ಮುಂತಾದ ಸೌಲಭ್ಯ ಬಳಸಿಕೊಂಡು ನೇರವಾಗಿ ಯುನಿಕೋಡ್ ಫಾಂಟ್ ಗಳಲ್ಲಿ. ಇನ್ನೂ ವಿವರಗಳು ಬೇಕಾದ್ರೆ ಮುಖಪುಟದಲ್ಲಿರುವ ನನ್ನ ವಿಳಾಸಕ್ಕೊಂದು ಸಂದೇಶ ಕಳಿಸಿ. ತಿಳಿಸುವೆ.

@ಆನಂದ, ಆಯ್ತು ಬ್ರದರ್. ಸ್ಕೆಚ್ ಹಾಕೋಣ. ರೈಟ್.

ಜಲನಯನ ಹೇಳಿದರು...

ವಿಕಾಸ್...ಬಹಳ ವರ್ಷಗಳ ನಂತರ (ಸುಮಾರು ಮೂರು ವರ್ಷ) ಹೋದ ವರ್ಷ...(ಅಂದರೆ ಈಗ ಆಲ್ಮೋಸ್ಟ್ ಒಂದು ವರ್ಷ...ಹಹಹ್ ಚಿತ್ರ ಮಂದಿರದಲ್ಲಿ ಸಿನಿಮಾ ನೋಡಿ) ಚಿತ್ರಮಮ್ದಿರದಲ್ಲಿ ಸಿನಿಮಾಗೆ ಹೋದೆ..ನೋಡ್ಲೇ ಬೇಕು ಅಂತ ..ಅಯ್ಯೋ...ಬೆಚ್ಚಿ ಬಿದ್ದೆ ಕಣ್ರೀ...ಆ ಪಾಟಿ ಪರದೆ...ಟೀವೀ ನೋಡಿ ನೋಡೀ...ಸಿನಿಮಾ ಪರದೆಯನ್ನೇ ಮರ್ತಿದ್ದರ ಪರಿಣಾಮ...ಹಹಹಹ...
ಹೌದು ಅದರ ಮಜವೇ ಬೇರೆ,,,,

vijayraj ಹೇಳಿದರು...

ಕೊನೆಗೆ ಯಾವ್ದೆಲ್ಲ ಸಿನಿಮಾ ನೋಡಿದ್ರಿ ಗುರುಗಳೇ?

ರಾಘವೇಂದ್ರ ಹೆಗಡೆ ಹೇಳಿದರು...

:)

ಧರಿತ್ರಿ ಹೇಳಿದರು...

ಮದ್ವೆ ಮುಂಜಿ ಅಂತ ಬುಕ್ ಮಾಡ್ಕೊಂಡು ಈಗ ಸಿನಿಮಾ ನೋಡ್ಬೇಕು ಅಂತೀಯಲ್ಲೇನೋ? ನೋಡು ನೋಡು...ನಂಗೆ ನಾನು ನನ್ನ ಕನಸು ನೋಡ್ಬೇಕು ಅಂತ ಕಾಯ್ತಾ ಇದ್ದೀನಿ
&ಚಿತ್ರಾ ಸಂತೋಷ್

ವಿ.ರಾ.ಹೆ. ಹೇಳಿದರು...

@ಜಲನಯನ, ಹ್ಹ ಹ್ಹ. ಚೆನ್ನಾಗಿದೆ ನಿಮ್ಮ ಅನುಭವ. ಆಗಾಗ ಟಾಕೀಸ್ನಲ್ಲಿ ಸಿನೆಮಾ ನೋಡಿ ಅಭ್ಯಾಸ ಮಾಡ್ಕೋಳಿ.

@viji, ನಿನ್ನೆಯವರೆಗೆ ಎರಡು ಮುಗಿಸಿದೆ. ನನ್ನಕನಸು & ಪೃಥ್ವಿ :)

@ರಾಘವೇಂದ್ರ, ;)

ರವಿಕಾಂತ ಗೋರೆ ಹೇಳಿದರು...

ನಾನೂ ಅಷ್ಟೇ ತಾಕಿಸಿಗೆ ಹೋಗಿ ಚಿತ್ರ ನೋಡೋದು ತುಂಬಾ ಅಪೂರ್ವ.. ಈಗೀಗ ಚಿತ್ರದ ಸಿ ಡ್ , ಡಿ ವಿ ಡಿ ಗಳು ಕಮ್ಮಿಗೆ ಸಿಗೊಂದ್ರಿಂದ (ಒರಿಜಿನಲ್) ಕೆಲವೊಂದು ಚಿತ್ರ ಮನೆನಲ್ಲೇ ನೋಡ್ತೀನಿ..