ಪುಟಗಳು

ಗುರುವಾರ, ಮಾರ್ಚ್ 18, 2010

ಏನೋ ಗೊತ್ತಿಲ್ಲ

ವಾಕ್ಯಗಳನ್ನು ಗುಡ್ಡೆ ಹಾಕಿಕೊಂಡು ಕುಳಿತಿದ್ದೇನೆ,
ಎಲ್ಲವೂ ಆ ನೆನಪುಗಳ ಹಾಗೆ ತಿರುಗುಮುರುಗು.
ಒಂದಕ್ಕೊಂದನ್ನು ಜೋಡಿಸಲು ಪ್ರಯತ್ನಪಡುತ್ತಿದ್ದೇನೆ,
ಅವಳನ್ನು ಕತೆಯಾಗಿಸಿ ನಿಟ್ಟುಸಿರಿಡಲಾಗುತ್ತಿಲ್ಲ.
ಕತೆಗೊಂದು ಹುಟ್ಟುಕೊನೆಗಳ ಅಗತ್ಯವೇ ಇಲ್ಲವೀಗ,
ಎಲ್ಲೋ ಕತೆ ಹುಟ್ಟಿಬಿಡಬಹುದು,
ಕೊನೆಯೇ ಇಲ್ಲದೆ ಮತ್ತೆ ಶುರುವಾಗಿಬಿಡಬಹುದು,
ಶುರುವಾದದ್ದು ಕೊನೆಯಾಗದೇ ಇರಬಹುದು,
ಆದರೆ ಕತೆ ಕೊನೆಯಾಗಿದೆ ಈಗ.
ಎಲ್ಲಾ ಕತೆಗಳು ಒಂದೇ, ಮಗ್ಗುಲುಗಳು ಬೇರೆ,
ಕತೆ ಹೇಳುವುದಕ್ಕೂ, ಬರೆಯುವುದಕ್ಕೂ,
ಕಾಣುವುದಕ್ಕೂ, ಅದು ನೆಡೆಯುವುದಕ್ಕೂ ವ್ಯತ್ಯಾಸವಿದೆ,
ಕತೆಯೊಳಗಿನ ಪಾತ್ರವಾಗಿಬಿಟ್ಟೆ ನಾನು.
ಪ್ರೀತಿಯ ಮೊದಲ ಹಂತಕ್ಕೆ ನೂರು ಕಾರಣ,
ಎರಡನೆ ಹಂತವೆಂದರೆ ನಿಷ್ಕಲ್ಮಶ ಕಾಳಜಿಯೊಂದೇ.
ಪ್ರೀತಿ ತೋರಿಸಲು ಬರುವುದಿಲ್ಲವೋ
ಪ್ರೀತಿ ಅರ್ಥ ಆಗುವುದಿಲ್ಲವೋ ಗೊತ್ತಾಗಲಿಲ್ಲ,
ಎದುರಿಗೇ ಕೂತರೂ ಏನೂ ಮಾತಾಡಲಾಗಲಿಲ್ಲ,
ಕತೆಯ ಪಾತ್ರಗಳ ಮನಸ್ಸು ತಿಳಿಯುವುದಿಲ್ಲ.
ಇದ್ದಾಗ ಸಿಗದೇ ಇಲ್ಲದಿದ್ದಾಗ ನಿನ್ನ ಮಿಸ್ ಮಾಡಿಕೊಂಡೆ,
ಅನ್ನುವುದು ಎಂಥಾ ಮೋಸ, ಹುಡುಗಿ ಸಿಕ್ಕಂತೆಯೂ ಸಿಗಲಿಲ್ಲ,
ನದಿಯೂ ಇಲ್ಲ ಸಾಗರವೂ ಇಲ್ಲ, ಮಳೆಯೂ ನಿಂತಿಲ್ಲ,
ಆದರೂ ಬರಡು ಭೂಮಿ, ಏನೋ ಗೊತ್ತಿಲ್ಲ.

19 ಕಾಮೆಂಟ್‌ಗಳು:

ಶಂಭುಲಿಂಗ ಹೇಳಿದರು...

ನಿಧಾನವಾಗಿ ಕೂತು ಯೋಚಿಸಿ..:). ಹ್ಮ್..confusion ಗಳ ಹುಟ್ಟುವಿಕೆ ನಿಮ್ಮ ಕವನದಲ್ಲಿ ಚೆನ್ನಾಗಿ ಬಂದಿದೆ.

ಅನಾಮಧೇಯ ಹೇಳಿದರು...

eno idu exclusive?!!!
kodsara

ಶ್ರೀನಿಧಿ.ಡಿ.ಎಸ್ ಹೇಳಿದರು...

uff!

enidu kavana ella bareethideera!

PARAANJAPE K.N. ಹೇಳಿದರು...

ಏನಾಯ್ತು ವಿಕಾಸ್? ಕವನ ಚೆನ್ನಾಗಿದೆ.

Divya Mallya - ದಿವ್ಯಾ ಮಲ್ಯ ಹೇಳಿದರು...

ನಿಮಗಾದ ಮೋಸಕ್ಕೆ ನಮ್ಮ ವಿಷಾದವಿದೆ!

ಗೌತಮ್ ಹೆಗಡೆ ಹೇಳಿದರು...

haha ಏನು ಈಗಿತ್ಲಾಗಿ ಅವಾಗವಾಗ ಎಲ್ಲೋ ಏನೋ ಮಿಸ್ ಹೊಡಿತ ಇದ್ದು :)

Lakshmi S ಹೇಳಿದರು...

yaaro kavana artha ane aagalla, innu baryodellinda bantu anta ella heLidrappa. avra hesru vikas hegde ante.

roopa ಹೇಳಿದರು...

ವಿಕಾಸ್ ಅವರೆ ,
ನನಗೆ ಪ್ರತಿಕ್ರಿಯೆ ಹಾಕಲು "ಏನೋ ಗೊತ್ತಾಗುತ್ತಿಲ್ಲ ". :-):-) :-)
ನೀವು ಏನು ಗಹನವಾದ ಆಲೋಚನೆಯಲ್ಲಿ ಇದ್ದೀರಿ .. ನಿಮ್ಮ ಮನಸು ತಿಳಿಯಾಗಲಿ ಎ೦ದು ಹಾರೈಸುತ್ತೇನೆ.

Sree ಹೇಳಿದರು...

achoo!:)

ಅನಾಮಧೇಯ ಹೇಳಿದರು...

adenu "miss"pada matra italic madirodu?

Parisarapremi ಹೇಳಿದರು...

gaaD bless you!

ಬಾಲು ಹೇಳಿದರು...

ಪ್ರೀತಿ ಮಾಡೋರಿಗೆ ಏನಾದ್ರೂ ಸಿಕ್ಕೇ ಸಿಗುತ್ತೆ. ಕನಿಷ್ಠ ಚಿಪ್ಪಾದ್ರು ಕೂಡ ಅಂತೆ. ನಿಂದೆಂತ ಕಥೆ?

ವಿ.ರಾ.ಹೆ. ಹೇಳಿದರು...

@ಶಂಭುಲಿಂಗ, ಥ್ಯಾಂಕ್ಯು

@ಕೋಡ್ಸರ, ಹೀಗೆ ಸುಮ್ಮನೇ...

@ಶ್ರೀನಿಧಿ, ಸ್ಸಾರಿ ಬಾಸ್, ಇದು ಕವನವಲ್ಲ !

@ಪರಾಂಜಪೆ, ಥ್ಯಾಂಕ್ಯು ಸರ್, ಏನಾಗಿಲ್ಲ ಬಿಡಿ :)

@ಲಕ್ಷ್ಮಿ, ಓಹ್, ಹೌದಂತೆ :)

@ದಿವ್ಯಾ ಮಲ್ಯ, ವೆಲ್ಕಮ್ಮು, ನಿಮ್ಮ ವಿಷಾದಕ್ಕೆ ನಮ್ಮ ಥ್ಯಾಂಕ್ಸು!

@ಗೌತಮ, ಆವಾಗಾವಾಗ ಸ್ವಲ್ಪ ಹಾಂಗೇ ಅದು!

@ರೂಪಾ, ಹಾರೈಕೆಗೆ ಥ್ಯಾಂಕ್ಸ್

@ಶ್ರೀ, :)

@ಬಾಲು, ನಂದು ಕಥೆಯಲ್ಲ ಜೀವನ.... :)

@ಪರಿ’ಸರ್ ’, ಥ್ಯಾಂಕ್ಯು, ಗಾಡ್ ಬ್ಲೆಸ್ ಯು ಟೂ!

@ಅನಾನಿಮಸ್ಸು, ಮಿಸ್ಸು ಮಿಸ್ ಆಗ್ದೇ ಇರ್ಲಿ ಅಂತ. ಅದ್ಯಾಕೆ ನೀವು ಹೆಸರಿಲ್ದೇ ಬರ್ದಿರೋದು?

ಮನಸ್ವಿನಿ ಹೇಳಿದರು...

Enidu, enenella changes world alli! :) ;)
Vikas kavana bardiddeera!! :)

Chennagide :)

ಸುಧೇಶ್ ಶೆಟ್ಟಿ ಹೇಳಿದರು...

kavanaano gadhyaano....

yaako thumba hidisithu vikaas....

raj ಹೇಳಿದರು...

kavana chennagide....bhavanegaligondu jaaga.....simply superb!!!

v rajesh ಹೇಳಿದರು...

hi chennagide kavana....simply superb

ರಂಜನಾ ಹೆಗ್ಡೆ ಹೇಳಿದರು...

entha athu?
be cool. enthakke ishtella novu anubhavista idde. kushi aagi iru. be happy always.

ವಿ.ರಾ.ಹೆ. ಹೇಳಿದರು...

@ಮನಸ್ವಿನಿ, ಹ್ಹ ಹ್ಹ. ಬದಲಾವಣೆಯೇ ಜಗದ ನಿಯಮ ಅಂತೆ! :)

@ಸುಧೇಶ್, ಥ್ಯಾಂಕ್ಸ್

@ರಾಜ್, ರಾಜೇಶ್, ಥ್ಯಾಂಕ್ಸ್,

@ರಂಜನಾ, :-)