ಪುಟಗಳು

ಬುಧವಾರ, ಜನವರಿ 27, 2010

ಸಾವು

ಸಾವಿನ ಬಗ್ಗೆ ನೀವು ಯಾವಾಗಾದರೂ ಯೋಚಿಸಿದ್ದೀರಾ? ಕೆಲವರು ಯೋಚಿಸಿರಬಹುದು, ಕೆಲವರು ಈಗ್ಯಾಕೆ ಅವೆಲ್ಲಾ ಅನ್ನಬಹುದು. ಆದರೆ ಈ ಮಧ್ಯವಯಸ್ಸು ಅನ್ನುವುದು ಸಾವಿನ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಈ ವಯಸ್ಸಿನಲ್ಲೇ ಹೆಚ್ಚಿನ ಸಾವಿನ ಸುದ್ದಿಗಳನ್ನು ಕೇಳಬೇಕಾಗುತ್ತದೆ. ಕೆಲವರಿಗೆ ಅಪ್ಪ ಅಮ್ಮಂದಿರ ಸಾವನ್ನು ನೋಡಬೇಕಾಗುತ್ತದೆ. ನಾವು ಚಿಕ್ಕವರಿದ್ದಾಗಿನಿಂದ ನೋಡಿದ, ನಮ್ಮನ್ನು ಆಡಿಸಿದ, ಬೆಳೆಸಿದ ವ್ಯಕ್ತಿಗಳು ತೀರಿಕೊಳ್ಳುತ್ತಾರೆ. ನಾವು ಬಾಲ್ಯದಲ್ಲಿದ್ದಾಗ ನಮ್ಮ ತಂದೆತಾಯಿಯರು, ಸಂಬಂಧಿಕರು, ಆಪ್ತರನೇಕರು ಅವರ ಮಧ್ಯವಯಸ್ಸು ಮತ್ತು ಅದನ್ನು ದಾಟಿದ ಹಂತದಲ್ಲಿರುತ್ತಾರೆ. ನಾವು ಈ ವಯಸ್ಸಿಗೆ ಬರುವ ಹೊತ್ತಿಗೆ ಅವರಿಗೆ ವಯಸ್ಸಾಗಿರುತ್ತದೆ. ಗಟ್ಟಿಗಿತ್ತಿ ಅಮ್ಮ ತೀರಾ ಸುಸ್ತಾದವಳಂತೆ ಕಾಣುತ್ತಾಳೆ, ಸೂಪರ್ ಮ್ಯಾನ್ ಆಗಿದ್ದ ಅಪ್ಪನ ಹಣೆಯ ಮೇಲೆ ನೆರಿಗೆಗಳು ಮೂಡಿರುತ್ತವೆ. ಆಗ ಹೆದೆಯೇರಿಸಿದ ಬಿಲ್ಲಿನಂತಿದ್ದ ಮಾವನನ್ನು ಈಗ ಮುರುಟಿ ಹಾಸಿಗೆಯಲ್ಲಿ ಮಲಗಿರುವ ಪರಿಸ್ಥಿತಿಯಲ್ಲಿ ನೋಡಬೇಕಾಗುತ್ತದೆ. ಆಗ ಹೆಗಲಿನ ಮೇಲೆ ಕೂರಿಸಿಕೊಂಡು ತೋಟ ಸುತ್ತಿಸುತ್ತಿದ್ದ ಚಿಕ್ಕಪ್ಪನಿಗೆ ಇವತ್ತು ಅದ್ಯಾವುದೋ ಖಾಯಿಲೆ. ಅಮ್ಮಂನಂತಿದ್ದ ದೊಡ್ಡತ್ತೆ ಕ್ಯಾನ್ಸರ್ ಹೊತ್ತು ಒಣಗಿಹೋಗಿ ಮಲಗಿದ್ದ ದೃಶ್ಯ ಪದೇ ಪದೇ ನೆನಪಾಗುತ್ತದೆ. ಇವತ್ತು ಬೆಳಗ್ಗೆ ವಾಕಿಂಗಿಗೆ ಹೋಗಿದ್ದಾಗಲೇ ಸಂಬಂಧಿಕರೊಬ್ಬರು ಹಾರ್ಟ್ ಅಟ್ಯಾಕ್ ಆಗಿ ತೀರಿಹೋದರಂತೆ ಎಂಬ ಕೆಟ್ಟ ಸುದ್ದಿ ಬಂದು ತಲುಪುತ್ತದೆ. ಅವರ ಮಡಿಲಲ್ಲಿ ಬೆಳೆದ ನಾವು ಇವತ್ತು ಇನ್ಯಾವುದೋ ದೂರದ ಊರಿನ ಮಡಿಲಿನಲ್ಲಿರುತ್ತೇವೆ.

ನಾವು ಹುಟ್ಟಿ ಬೆಳೆಯುತ್ತಾ ಇರುವಾಗ ಬೇರೆ ಬೇರೆ ಹಂತಗಳಲ್ಲಿ ನಾವು ಪ್ರೀತಿಸಿದ, ಗೌರವಿಸಿದ, ಒಡನಾಡಿದ, ನಮ್ಮ ಆದರ್ಶವಾಗಿ ಕಂಡ ಹಿರಿಯರನೇಕರು ನಮ್ಮನ್ನು ಬಿಟ್ಟುಹೋಗಿ ಅನಾಥಭಾವ ಕಾಡುತ್ತದೆ. ಯೌವ್ವನವನ್ನು ದಾಟಿ ಮಧ್ಯವಯಸ್ಸಿಗೆ ಬರುತ್ತಾ ಸಾವಿನ ಸುದ್ದಿಗಳು ಹೆಚ್ಚಾಗುತ್ತಾ ಹೋಗುತ್ತವೆ. ಕೆಲವೊಂದು ಸಾವುಗಳು ಮನಸನ್ನು ಕಲಕುತ್ತವೆ. ವಿಚಲಿತರನ್ನಾಗಿಸುತ್ತವೆ. ಇವೆಲ್ಲವೂ ಅನಿವಾರ್ಯವಾಗಿ, ಸಹಜವಾಗಿ ಆಗುವುದಾದರೂ ಕೂಡ ಅನಂತರ ಅವರಿಲ್ಲದೇ ಮನೆ, ಮನ ಭಣ ಭಣ ಎನ್ನುತ್ತದೆ. ನಾವು ಯಾಕೆ ಹುಟ್ಟಿದ್ದು ಅನ್ನುವುದು ಯಾರಿಗೂ ಗೊತ್ತಿಲ್ಲ. ಹುಟ್ಟು ಸಾವುಗಳ ಬಗ್ಗೆ ಪೂರ್ತಿ ತಿಳಿದುಕೊಳ್ಳಲು ಹೋದರೆ ಅದೇ ಜೀವನದಲ್ಲಿ ಕೆಲವೊಮ್ಮೆ ನೆಮ್ಮದಿ ಕೆಡಿಸಿಬಿಡುತ್ತದೆ. ಆದ್ದರಿಂದ ನಮ್ಮ ಉಳಿದ ಜೀವನವನ್ನು ಹೇಗೆ ಅತ್ಯುತ್ತಮವೆನಿಸುವಂತೆ ನಡೆಸಬೇಕು ಎಂಬುದಕ್ಕೆ ಸಾವು ಅನ್ನುವುದನ್ನು ಒಂದು ಎಚ್ಚರಿಕೆಯನ್ನಾಗಿ ತೆಗೆದುಕೊಂಡು ಮುನ್ನಡೆಯುತ್ತಾ ಹೋಗಬೇಕಷ್ಟೆ.

Subject from Mahesh Hegade's Blog

29 ಕಾಮೆಂಟ್‌ಗಳು:

Lakshmi S ಹೇಳಿದರು...

Neevu ee reeti sudden aagi serious posts haakidre namge heart attack aagatte nodi...

ಚುಕ್ಕಿಚಿತ್ತಾರ ಹೇಳಿದರು...

ನಿಜ ನಿಮ್ಮ ಮಾತು...
ಕೆಲವು ದಿನಗಳ ಮೊದಲು ನಮ್ಮ ಮಾವನವರಿಗೆ ತು೦ಬಾ ಹುಶಾರಿರಲಿಲ್ಲ...
ಫೋನ್ ಬ೦ತೆ೦ದರೆ ಏನೋ ... ಅ೦ತ ಭಯವಾಗುತ್ತಿತ್ತು...
ಈಗ ಅರಾಮಿದ್ದರೂ ಭಯವಿದೆ...
ಎಲ್ಲಾ ಸನ್ನಿವೇಶಕ್ಕೂ ನಮ್ಮ ಮನಸ್ಸನ್ನು ಪ್ರಿಪೇರ್ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ...ಈ ವಯಸ್ಸಿನಲ್ಲಿ.

ಬಾಲು ಹೇಳಿದರು...

hoon

ತೇಜಸ್ವಿನಿ ಹೆಗಡೆ- ಹೇಳಿದರು...

ಕೆಲವೊಮ್ಮೆ ಇಂತಹ ನೋವಿನ ಸುದ್ದಿಗಳನ್ನು ಒಂದರ ಮೇಲೊಂದು ಕೇಳಿದಾಗ ನನಗೂ ಅನ್ನಿಸಿದ್ದಿದೆ. ಹುಟ್ಟು ಸಾವು ಎರಡರ ನಡುವೆ ಮೂರುವಿಧದ ಬಾಳು ಎಂದಿದ್ದು ಸುಮ್ಮನಲ್ಲ.

@ ಲಕ್ಷ್ಮಿ- ನಕ್ಕೂ ನಕ್ಕೂ ಸುಸ್ತಾಯ್ತು :D ಬಟ್ ಒಂಥರ ಸತ್ಯ ಅನ್ಸೊತ್ತೆ ಹೇಳಿದ್ದು. :):-P

ಸಂದೀಪ್ ಕಾಮತ್ ಹೇಳಿದರು...

ವಿಕಾಸ್ ,

ಯಾರೋ ನಿಮ್ ಬ್ಲಾಗರ್ ಐಡಿ ನ ಹ್ಯಾಕ್ ಮಾಡಿ ಆರ್ಟಿಕಲ್ ಹಾಕಿ ಬಿಟ್ಟಿದ್ದಾರೆ:(

ರಾಜೀವ ಹೇಳಿದರು...

ಹು. ನಿಜ.
ಈ ವಿಷಯದಿಂದಲೇ ೨೦೦೯ ನನಗೆ ಮರೆಯುವಂತಹ ವರುಷ.
೨೦೦೯ ರಲ್ಲಿ ಮನೆಯಲ್ಲಿ ಎಣಿಸಲಾಗದಷ್ಟು ಸೂತಕದ ದಿನಗಳು.

೨೦೧೨ ರಲ್ಲಿ ಪ್ರಳಯ ಅಂತೆ. ನೀವು ಈಗಲೇ ಇಂತಹ ಲೇಖನಗಳನ್ನು ಬರೆದು ಹೆದರಿಸಬೇಡಿ.

ಸುಮ ಹೇಳಿದರು...

ಸಾವು ತಟ್ಟನೆ ಬಂದರೆ ಪರವಾಗಿಲ್ಲ , ಇನ್ನೇನು ಸಾಯಬಹುದು ಎಂದುಕೊಂಡು ಕಾಯುವ ಕಷ್ಟ ಯಾರಿಗೂ ಬೇಡವೆನ್ನಿಸುತ್ತದೆ.

sunaath ಹೇಳಿದರು...

ಸಂದೀಪ ಕಾಮತರ ಅನುಮಾನವೇ ನನಗೂ ಬರ್ತಾ ಇದೆ.

mruganayanee ಹೇಳಿದರು...

ಸಂದೀಪ್ ಕಾಮತ್ ಹೇಳಿದ್ದು ನಿಜ.. ಮೊದ್ಲು ಪಾಸ್ ವರ್ಡ್ ಚೇಂಜ್ ಮಾಡು.

mruganayanee ಹೇಳಿದರು...

ಅಂದಹಾಗೆ ಮಧ್ಯವಯಸ್ಸು ಅಂದ್ರೆ ೩೫ ದರಿಂದ ೪೪ ಅಥವ ೪೫ದರಿಂದ ೫೫ ಅಂತ ಹೇಳ್ತಾರೆ. ನಿಮಗಿನ್ನು ಮೂವತ್ತೂ ಆಗಿಲ್ಲ ಅಂತ ಪಾಪ ನಿನ್ನ ಅಕೌಂಟ್ ಹ್ಯಾಕ್ ಮಾಡಿದೋರಿಗೆ ಗೊತ್ತಿಲ್ಲ ಅನ್ಸತ್ತೆ.

ಬಸವರಾಜ ಹೇಳಿದರು...

ಕಳೆದ ೪-೫ ವರ್ಷಗಳಲ್ಲಿ ನನ್ನ ಪರಿಚಯಸ್ತರ ಸಾವುಗಳನ್ನೂ ನೋಡಿದ್ದೇನೆ.
ಸಾವು ನಿಜವಾಗಲು ಒಂದು ಎಚ್ಚರಿಕೆ ಗಂಟೆ ಅಂತಾ ನನ್ನ ಭಾವನೆ.
ಜೀವ ಇರೋವರೆಗೂ ಜೀವ್ನಾನ ಆದಷ್ಟ ಪ್ರೀತಿಯಿಂದ ಬಾಳೋಣ ಅಂತಾ
ನನ್ನ ನಿರ್ಣಯ!

ಗೌತಮ್ ಹೆಗಡೆ ಹೇಳಿದರು...

en boss yaako ello miss hodita ide:)

ಗೌತಮ್ ಹೆಗಡೆ ಹೇಳಿದರು...

en boss yaako ello miss hodita ide:)

Uma Bhat ಹೇಳಿದರು...

ಹುಟ್ಟಿನ ಜೊತೆಗೇ ಸಾವೂ ಹುಟ್ಟಿರುತ್ತದೆ. ಆದರೆ ನಾವು ಆ ಅರಿವನ್ನ ದೂರ ಇಟ್ಟಿರುತ್ತೇವೆ ಭಯದಿಂದಾ.
ಅದಕ್ಕೆ ಸಾವು ಅನ್ನುವುದನ್ನು ಎಚ್ಚರಿಕೆಯಾಗಿ ತೆಗೆದುಕೊಂಡು..............
ಒಳ್ಳೆಯ ಲೇಖನಾ.

Parisarapremi ಹೇಳಿದರು...

ಬಹುಶಃ ನಿಮ್ಮ "ಸದ್ಯದ ಓದು" ಈ ಲೇಖನಕ್ಕೆ ಕಾರಣವಾಗಿದೆಯೇನೊ.

ಸುಧೇಶ್ ಶೆಟ್ಟಿ ಹೇಳಿದರು...

ವಿಕಾಸ್...

ತು೦ಬಾ ಚೆನ್ನಾಗಿ ಬರೆದಿದ್ದೀರಿ.... ಸಾವು ಖ೦ಡಿತಾ ಎ೦ದು ಗೊತ್ತಿದ್ದರೂ ಅದರ ಬಗ್ಗೆ ಎಷ್ಟು ಭಯ... ಪಕ್ಕದಲ್ಲೇ ಕೂತು ಯಮ ಗಾಳ ಹಾಕುತ್ತಿರುತ್ತಾನೆ... ಯಾವಾಗ ಅವನ ಗಾಳದ ಕೊಕ್ಕೆಗೆ ಸಿಕ್ಕಿಬೀಳುವೆವೋ ಎ೦ಬ ಭಯ ನಮಗೆ...

ನಿಮ್ಮ ಎ೦ದಿನ ಶೈಲಿಗಿ೦ತ ಡಿಫರೆ೦ಟ್ ಆಗಿದೆ ಈ ಬರಹ :)

Chaithrika ಹೇಳಿದರು...

ನಿಮ್ಮ "ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ! :)" ಲೇಖನವನ್ನು ಮೆಚ್ಚಿ ಒಬ್ಬರು ತಮ್ಮ blog ಅಲ್ಲಿ ಹಾಕಿದ್ದಾರೆ. :-) Comments ಕೂಡಾ ಚೆನ್ನಾಗಿದೆ. ಇಲ್ಲಿ ನೋಡಿ.

http://nmurthy79.blogspot.com/2010/02/blog-post.html

ಆ ಬರಹ ನಿಜಕ್ಕೂ "best" ಇತ್ತು.

ಚಿತ್ರಾ ಹೇಳಿದರು...

ವಿಕಾಸ್,
ಎಂತದೋ ಇದು ಇದ್ದಕ್ಕಿದ್ದಂತೆ ಇಷ್ಟು ಸೀರಿಯಸ್? ನಮ್ಮನ್ನೂ ' ಸೀರಿಯಸ್ ' ಮಾಡೋ ಆಲೋಚನೆನಾ ಹ್ಯಾಂಗೆ? ಇದ್ದಕ್ಕಿದಾಂಗೆ ವಯಸ್ಸಾಗೋತಾ ಹೆಂಗೆ?
ಯಾವಾಗಲೂ " light hearted " ಬರಹಗಳನ್ನ ಬರೆಯೋದರ ಪರಿಣಾಮ ನೋಡಿದ್ಯ? ಈಗ ನಾವೆಲ್ಲಾ ನಿನ್ನ ಸೀರಿಯಸ್ ಆಗಿ ತಗಳದೇ ಇಲ್ಲೆ ಹೇಳಾತು ! ಹಿ ಹಿ ಹಿ..
ಹಾಂಗಾಗಿ , ನೀನು ಈ ' ಸಾವು ' ನೋವು ಬಿಟ್ಟು ಬೇರೆ ಏನಾದರೂ ನೋಡು ! ( ಪ್ರಳಯಕ್ಕೂ ಮುಂಚೆ ಮದುವೆ ಆಗೋ ಯೋಚನೆ ಇತ್ತಲ್ಲ ನಿಂದು ? ಆ ಮಿನಿ ಪ್ರಳಯದ ಬಗ್ಗೆ ವಿಚಾರ ಮಾಡಿದರೂ ಅಡ್ಡಿಲ್ಲೆ ... )

ವಿ.ರಾ.ಹೆ. ಹೇಳಿದರು...

ಚಿತ್ರಕ್ಕಾ,

ಮೊದಲು ನಿಮಗೇ ಉತ್ತರ ಕೊಡುತ್ತೇನೆ.
ನಾನು ’ಯಾವಾಗಲೂ’ lighthearted ಬರಹಗಳನ್ನು ಬರೆಯುವುದಿಲ್ಲ ಅಂದುಕೊಂಡಿದ್ದೇನೆ.
ನನ್ನ ಇತ್ತೀಚೆಗಿನ ಕೆಲವು ಬ್ಲಾಗ್ ಗಳನ್ನೇ ತೆಗೆದುಕೊಳ್ಳಿ.
*ಇದು ದೇಶಭಕ್ತಿಯ ಚಾದರದೊಳಗಿನ ಹಾದರವಲ್ಲ
*ಮಾಯಾಪುಟ್ಟಿ ಮತ್ತು ಬ್ಯಾರ್ರಿಮರಿ
*ನೂರುಸಾವಿರ ಸಾವಿನ ನೆನಪು !
*ಯಾದ್ ವಶೇಂ
ಇವೆಲ್ಲಾ lighthearted ಎಂದು ನಿಮಗೆ ಅನ್ನಿಸಿದ್ದರೆ ನನಗೆ ಆಶ್ಚರ್ಯವಾಗುತ್ತಿದೆ.
*ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ! :) - ಇದು light ಆಗಿದ್ದರೂ ಖಂಡಿತ light hearted ಅಲ್ಲ.

Actually ಮೇಲಿನ lighthearted commentಗಳನ್ನು ಬರೆದವರು ನನ್ನ friends. ನನ್ನನ್ನು ಬಲ್ಲವರು. ಅವರು ಅವರಿಗೆ ಗೊತ್ತಿರುವ ನನ್ನ ಸ್ವಭಾವಕ್ಕೆ ಸ್ವಲ್ಪ ಹೊರತಾಗಿರುವ ಈ ಪೋಸ್ಟ್ ನಿಂದ ಆಶ್ಚರ್ಯಗೊಂಡು ಬರೆದಿದ್ದಾರೆಯೇ ವಿನಃ lighthearted ಬರಹಗಳು ಕಾರಣವಲ್ಲ ಎಂದು ನನಗನಿಸುತ್ತದೆ.

ಇನ್ನು ಪ್ರಳಯದ ಮುಂಚೆ ಆಗ್ತೋ ಅಥವಾ ಪ್ರಳಯನ್ನೇ ತಡಿಯಕ್ಕಾಗ್ತೋ ಗೊತ್ತಿಲ್ಲೆ :) ನೋಡಣ. ಸ್ವಲ್ಪ ಸೀರಿಯಸ್ ಆಗೇ ಯೋಚ್ನೆ ಮಾಡವು . :-) thanx

ವಿ.ರಾ.ಹೆ. ಹೇಳಿದರು...

ಲಕ್ಷ್ಮಿ, ಒಂದೊಂದು ಸಾರಿ ಹಾಗಾಗುತ್ತೆ, ಅಡ್ಜಸ್ಟ್ ಮಾಡ್ಕೋಳ್ಳಿ.

ಚುಕ್ಕಿ, ಹ್ಮ್.. ಹೌದು, ಎಲ್ಲಾದಕ್ಕೂ ತಯಾರಾಗಿರಬೇಕಾಗುತ್ತದೆ.

ಬಾಲು, ಹುಂ.

ತೇಜಸ್ವಿನಿ, ಮೂರುವಿಧದ ಬಾಳಾ? ಅವ್ಯಾವು?

ಸಂದೀಪ್, ಇಲ್ಲಪ್ಪ, ನಾನೇ ಇದು ! :)

ದಿವ್ಯಾ, ಹೌದು ನಿಜ. ತಲೆಕೆಡಿಸಿಕೊಳ್ಳಬಾರದೆಂದುಕೊಂಡ್ರೂ ಒಮ್ಮೊಮ್ಮೆ ತಲೆಕೆಡುತ್ತದೆ.

ರಾಜೀವ್, same with me. :(

ಸುಮ, ಹೌದು.

ಸುನಾಥಕಾಕಾ, :-)

ಮೃಗನಯನೀ,ಅವರಿಗೆ ಮಧ್ಯವಯಸ್ಸಾಗಿದೆ ಅಂತ ಅಕೌಂಟ್ ಹ್ಯಾಕ್ ಮಾಡಿದವರು ಎಲ್ಲೂ ಬರೆದುಕೊಂಡಂಗೆ ಕಾಣ್ತಾ ಇಲ್ಲಪ್ಪ! ಅದು ಮಧ್ಯವಯಸ್ಸಿನಲ್ಲಿ ಯಾವ ಪರಿಸ್ಥಿತಿ ಇರುತ್ತದೆ ಎಂಬುದರ ಬಗ್ಗೆ ಅಷ್ಟೆ. ಯಾಕಂದ್ರೆ ಈಗ ಮೂವತ್ತಾಗಿರದಿದ್ದರೂ ಇನ್ನೂ ಕೆಲವು ವರ್ಷಗಳಲ್ಲಿ ಆಗೇ ಆಗುತ್ತದೆ ಅಂತ ಅಕೌಂಟ್ ಹ್ಯಾಕ್ ಮಾಡಿದವರಿಗೂ ಗೊತ್ತು :)


ಬಸವರಾಜ್, ಹೌದು ಅದೇ ಉತ್ಸಾಹ ಇಟ್ಟುಕೊಂಡಿರಬೇಕು.

ಗೌತಮ್, ಹ್ಮ್.. ಒಮ್ಮೊಮ್ಮೆ ಮಿಸ್ ಆಗತ್ತೆ :)

ಪರಿಸರಪ್ರೇಮಿ, ಹ್ಹ ಹ್ಹ. i liked ur sense of humour. ಈಗ ಸದ್ಯದ ಓದು ಬದಲಾಗಿದೆ. ;)

ಉಮಾ ಭಟ್, thank u, ಹುಟ್ಟಿನ ಜೊತೆಗೇ ಸಾವೂ ಹುಟ್ಟಿರುತ್ತದೆ ಎಂಬ ಮಾತು ನಿಜ. ಎರಡೂ ಸಹಜವಾದರೂ ಹುಟ್ಟು ಖುಷಿ ಕೊಡುತ್ತದೆ ಸಾವು ಬೇಸರ ಕೊಡುತ್ತದೆ ಎಂಬುದೂ ಅಷ್ಟೇ ನಿಜ.

ಸುಧೇಶ್, thanx

ಚೈತ್ರಿಕಾ, ಹೌದು, ನೋಡಿದ್ದೇನೆ ಅದನ್ನು ಅವರ ಬ್ಲಾಗ್ ನಲ್ಲಿ. thanx ಮೆಚ್ಚಿದ್ದಕ್ಕೆ. :-)

ತೇಜಸ್ವಿನಿ ಹೆಗಡೆ- ಹೇಳಿದರು...

ಮೂರುವಿಧದ ಬಾಳೇ ಗೊತ್ತಿಲ್ದೇ ಬಾಳಿನ ಅಂತ್ಯವಾದ ಸಾವಿನ ಬಗ್ಗೆ ಬರೆದ ವಿ.ರಾ.ಹೆ. ಅವರೇ ಇಲ್ಲಿದೆ ಆ ಬಾಳುಗಳು ನೋಡಿ - ಬಾಲ್ಯ, ಯೌವನ ಮತ್ತು ವೃದ್ಧಾಪ್ಯ. ಈ ಮೂರು ಘಟ್ಟವನ್ನು ದಾಟಿದಾಗ ಸಾವು ಬರುವುದು ಸಾಮಾನ್ಯ. ಆದರೆ ಸಾವಿಗೆ ಯಾವ ವಿಧದ ಪರಿಮಿತಿಯೂ ಇಲ್ಲ. ಹಾಗಾಗಿ ಈ ಮೂರು ವಿಧದ ಬಾಳುಗಳ ನಡುವೆ ಯಾವಾಗ ಬೇಕಾದರೂ ಬರಬಹುದು. ಮಧ್ಯವಯಸ್ಸನ್ನೂ ಕಾಯಬೇಕಾಗಿರುವುದಿಲ್ಲ!!!

ವಿ.ರಾ.ಹೆ. ಹೇಳಿದರು...

@tEjasvini,

ಹೊಸದೇನಾದ್ರೂ ಹೇಳ್ತೀರೇನೋ ಅನ್ಕೊಂಡೆ. ಇಷ್ಟೇ ತಾನೆ. ಓ.ಕೆ . ಬಿಡಿ

ಶ್ರೀನಿಧಿ.ಡಿ.ಎಸ್ ಹೇಳಿದರು...

haudana, ok:)

ಜಲನಯನ ಹೇಳಿದರು...

ವಿರಾಗಿ...ಅನ್ನಲೇ...ಹಹಹಹ...ನಿಮ್ಮ ಬ್ಲಾಗ್ ಪ್ರತಿಕ್ರಿಯೆ ನೋಡಿದರೆ ನಿಮ್ಮದು lively ಬ್ಲಾಗಾಯಣ ಅನ್ನೋದು ಗೊತ್ತಗುತ್ತೆ..ಅಂತಹುದರಲ್ಲಿ ..? ಹೌದು ಸಾವು ಒಮ್ದು ವಾಸ್ತವತೆ...ವಾಸ್ತವತೆ ಕಾಯದೇ ಗೊತ್ತಾಗದೇ ಬಮ್ದರೆ...ಅದನ್ನು ಪಡೆದವನಿಗೆ ಹಿತ...ಉಳಿದವರಿಗೆ ಆಘಾತ.....ಎಲ್ಲಾ ಗೊತ್ತಾದರೆ...ಸಾವಿಗೆ ಕಾಯುವನಿಗೆ ಪ್ರತಿಘಳಿಗೆ ಹಿಂಸೆ...ಉಳಿದವರಿಗೆ ....ಸೋ..ಸೋ...ಅಷ್ಟೇ..?? ಮದುವೆ ಆಗುತ್ತೆ..ಮಕ್ಕಳಗ್ತವೆ ಅನ್ನೋಹಾಗೇನೇ ಸಾವೂ...let us me sportive...hahaha

ಅನಿಕೇತನ ಸುನಿಲ್ ಹೇಳಿದರು...

ಚೆನ್ನಾಗಿದೆ ವಿಕಾಸ್,
ಬರೆಯೋಕೆ ಸಾವಿಗಿಂತ ವಿಸ್ತಾರವಾದ ವಸ್ತು ಬೇರೆ ಏನಿದೆ?
ನೀನು ಕೂಡ ಯಾಕೋ ಧಿಡೀರ್ ಅಂತ ಬರಹ ನಿಲ್ಲಿಸಿದ ಹಾಗೆ ಕಾಣುತ್ತೆ.....:-)

ಅನಾಮಧೇಯ ಹೇಳಿದರು...

yaako hoge haakolo seen ela create maadta idiya?!
kodsara

ವಿ.ರಾ.ಹೆ. ಹೇಳಿದರು...

ಶ್ರೀನಿಧಿ, :-)

ಜಲನಯನ, ಹ್ಹ ಹ್ಹ. ಒಳ್ಳೇ ಹೆಸರು ಕೊಟ್ಟಿದ್ದೀರಿ. hmm.. let us be sportive. :-) Thanks

ಸುನಿಲ್, ಬರೆಯೋಕೆ ವೈರಾಗ್ಯ ಬಂದಿದೆ ಅಂತ ಸುಮ್ಸುಮ್ನೇ ಸುಳ್ಳು ಹೇಳಲ್ಲ. ಬರೀತಿನಿ. thanx

kODsara, ಆವಾಗಾವಾಗ ಹಾಂಗೆ ಸ್ವಲ್ಪ. ಅಡ್ಜಸ್ಟ್ ಮಾಡ್ಕೋಳಿ :-)

ಅನಾಮಧೇಯ ಹೇಳಿದರು...

nimage TV yalli baruva punarjanma kaaryakrama nodi, hindina janmada yaavudoo nenapu marukalisirabeku.... haagaagi aa janmaantarada nenapininda different bardiddira.. alwa... :-)

ಅನಾಮಧೇಯ ಹೇಳಿದರು...

Badukintha saave lesu...