ಪುಟಗಳು

ಶುಕ್ರವಾರ, ಜುಲೈ 31, 2009

ಭದ್ರಾವತಿಯೆಂದರೆ.....


ನನ್ನೂರು...
ಭದ್ರಾವತಿಯೆಂದರೆ ಬೆಂಕಿಪುರ. ಭದ್ರಾವತಿಯೆಂದರೆ ಬೆವರ ಬೇಸಿಗೆ, ಅಬ್ಬರದ ಮಳೆ, ಮಲೆನಾಡ ಜಗುಲಿ. ಭದ್ರಾವತಿಯೆಂದರೆ 'ಉಕ್ಕಿನ ನಗರಕ್ಕೆ ಸುಸ್ವಾಗತ' ಬೋರ್ಡು, ಬೈಪಾಸ್ ಪರೇಡು. ಭದ್ರಾವತಿಯೆಂದರೆ ಕಬ್ಬಿಣ, ಕಾಗದ ಕಾರ್ಖಾನೆ, ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಭದ್ರಾವತಿಯೆಂದರೆ ಸುಣ್ಣದ ಹಳ್ಳಿ ಸ್ಪಟಿಕ ಭದ್ರೆ, ತ್ಯಾಜ್ಯದ ಕರಿನೀರು. ಭದ್ರಾವತಿಯೆಂದರೆ ನೆಮ್ಮದಿಯ ರೈತರ ನೀರಾವರಿ ಗದ್ದೆ, ಪಕ್ಷೇತರ ರಾಜಕೀಯ. ಭದ್ರಾವತಿಯೆಂದರೆ ಬಸ್ಟ್ಯಾಂಡು, ಮಳೆಗಾಲಕ್ಕೆ ಮುಳುಗುವ ಹೊಸ ಸೇತುವೆ, ಶತಮಾನದ ಹಳೆ ಸೇತುವೆ. ಭದ್ರಾವತಿಯೆಂದರೆ ಕೂಗುವ ಕಾರ್ಖಾನೆ ಸೈರನ್ನು, ತೆರೆದುಕೊಳ್ಳುವ ಗೇಟು, ಟ್ರಾಫಿಕ್ ತುಂಬಿದ ಡಬ್ಬಲ್ ರೋಡು ಹತ್ತೇ ನಿಮಿಷಕ್ಕೆ ಖಾಲಿ ಖಾಲಿ. ಭದ್ರಾವತಿಯೆಂದರೆ ಕಾರ್ಮಿಕ ಸಂಘ, ಚುನಾವಣೆ, ರಾಜಕೀಯ ಪ್ರವೇಶದ ಗರಡಿ ಮನೆ. ಭದ್ರಾವತಿಯೆಂದರೆ ರಣಜಿ ಸ್ಟೇಡಿಯಂ, ಎಗ್ಸಿಬಿಷನ್, ಪಟಾಕಿ ಸದ್ದಿಗೆ ಬೆಚ್ಚಿ ಬಿದ್ದ ಅಯ್ಯಪ್ಪ. ಭದ್ರಾವತಿಯೆಂದರೆ ಸಿಲ್ವರ್ ಜುಬಿಲಿ ಕಾಲೇಜಿನ ಪೋಲಿ ಹುಡುಗರು, ಸಾಯಿಬಾಬಾ ಮಂದಿರದ ಅಖಂಡ ಭಜನೆ. ಭದ್ರಾವತಿಯೆಂದರೆ ಹೊಯ್ಸಳರ ನರಸಿಂಹಸ್ವಾಮಿ ದೇವಸ್ಥಾನ, ಅದರೆದುರಿನ ಮುದುಕಿಯಂಥ ತೇರು, ಬಿಂಜಲಿನಲ್ಲಿ ಮೂಲೆ ಸೇರಿದ ಜೇಡ. ಭದ್ರಾವತಿಯೆಂದರೆ ಬುಲ್ಡೆಕಾಯಿ ಆಯುವ, ಸೈಕಲ್ ರೇಸಿನ ಶಾಲೆ ಮಕ್ಕಳು. ಭದ್ರಾವತಿಯೆಂದರೆ ಮಿಲಿಟರಿ ಕ್ಯಾಂಪಿನ ಗುಡಿ ಶ್ರೀನಿವಾಸನೆದುರು ಸಂಜೆ ಸೂರ್ಯನ ಕೆಂಪುಕೆನ್ನೆಯ ಮಂದಹಾಸ. ಭದ್ರಾವತಿಯೆಂದರೆ ವಿಜಯದಶಮಿ, ಕನಕಮಂಟಪದ ಅಲಂಕಾರ ದೇವರ ಎದುರಲ್ಲಿ ಬನ್ನಿಕಡಿತ. ಭದ್ರಾವತಿಯೆಂದರೆ ಬಿ.ಎಚ್. ರೋಡು, ಒಂದೇ ರೂಟಿನ ವೆಂಕಟೇಶ್ವರ ಸಿಟಿ ಬಸ್ಸು, ಲಾರಿಗಳ ರಾತ್ರಿ ರಥೋತ್ಸವ. ಭದ್ರಾವತಿಯೆಂದರೆ ಬೆಣಚು ಕಲ್ಲು, ಅದಿರು ಮಣ್ಣು, ಕಾಗೆ ಕಣ್ಣು. ಭದ್ರಾವತಿಯೆಂದರೆ ಶಿಸ್ತಿನ ಕಾಲೋನಿ, ಹಳೇನಗರದ ಸಂದಿ, ಆನೆಪಾರ್ಕು, ಜನ್ನಾಪುರದ ಜಂಗುಳಿ. ಭದ್ರಾವತಿಯೆಂದರೆ ವೆಂಕಟೇಶ್ವರ ಟಾಕೀಸಿನ ಕನ್ನಡ ಪಿಚ್ಚರು, ಮುಂಜುನಾಥ ಟಾಕೀಸಿನ ಇಂಗ್ಲೀಷ್ ಪಿಚ್ಚರು. ಭದ್ರಾವತಿಯೆಂದರೆ ಭಾನುವಾರದ ಸಂತೆ, ಸಂಜೆಗಳ ಕಂತೆ, ತಿಳಿಯದ ಚಿಂತೆ . ಭದ್ರಾವತಿಯೆಂದರೆ ಪದ್ಮನಿಲಯದ ಮಸಾಲೆದೋಸೆ, ಸರ್ಕಲ್ಲಿನ ಪಾನಿಪೂರಿ ಗಾಡಿ, ಸ್ಪೆಷಲ್ ಚುರ್ ಮುರಿ. ಭದ್ರಾವತಿಯೆಂದರೆ ಮರೆತುಹೋಗಿರುವ ಬಡಕ್ಕೆಲ ಕೃಷ್ಣಭಟ್ಟರು. ಭದ್ರಾವತಿಯೆಂದರೆ ಗೆಸ್ಟ್ ಹೌಸಿನ ನಾಗಲಿಂಗ ಹೂವಿನ ಮರ, ತಣ್ಣನೆ ಈಜು, ಹಸಿರು ಹುಲ್ಲು. ಭದ್ರಾವತಿಯೆಂದರೆ ನಾಲ್ಕು ಬಾಗಿಲುಗಳ, ಮೂರುಪಾಳಿಗಳ, ನೂರು ಪಾತಳಿಗಳ ಪೇಲವ ಕವಿತೆ. ಭದ್ರಾವತಿಯೆಂದರೆ .....

ಜಯಂತ ಕಾಯ್ಕಿಣಿಯವರ 'ಶಬ್ದತೀರ'' ಪುಸ್ತಕದ 'ಅಂಕೋಲೆಯೆಂದರೆ..' ಎಂಬ ಬರಹದಿಂದ ಪ್ರೇರಿತ.

25 ಕಾಮೆಂಟ್‌ಗಳು:

ಪೂರ್ಣಿಮಾ ಭಟ್ಟ, ಸಣ್ಣಕೇರಿ ಹೇಳಿದರು...

ವಿಕಾಸ್, ‘ಭದ್ರಾಪತಿ’ ಎಂದರೆ... ;-)

ಬಾಲು ಹೇಳಿದರು...

ಭದ್ರಾವತಿ ಎಂದರೆ... ಹೀಗೆ ಇನ್ನು ಏನೇನೋ ... ರಾಜಕೀಯ, ಭದ್ರೆಯಲ್ಲಿ ಸಿಗೋ ಕೊಳೆತ ಹೆಣ ಗಳು. ನರಸಿಂಹ ಸ್ವಾಮಿ ದೇವಸ್ಥಾನ, ನಮ್ಮ ಕಾಲೇಜು, ಮಂಡಕ್ಕಿ ಬಟ್ಟಿ, ಹಿಂದೂ ಮಹಾ ಸಭಾ ದ ಗಣಪತಿ....:) :)
ಎಲ್ಲ ಫ್ಲಾಶ್ ಬ್ಯಾಕ್ ನೆನಪ್ ಬರ್ತಾ ಇದೆ!! ಇನ್ನೊದು ವಿಚಾರ ಅಂದ್ರೆ ನಾನು ಕೂಡ ಭದ್ರಾವತಿ ಬಗ್ಗೆ ನೆ ಬ್ಲಾಗ್ ನಲ್ಲಿ ಬರೀತಾ ಇದ್ದೆ!!

ನಿನ್ ಬ್ಲಾಗ್ ಓದಿ ಭದ್ರಾವತಿ ಗೆ ಹೋಗಿ ಬಂದ್ಗೆ ಅತು ನೋಡಪಾ...

ಕೇಶವ ಪ್ರಸಾದ್.ಬಿ.ಕಿದೂರು ಹೇಳಿದರು...

ನಿಮ್ಮ ಎಲ್ಲ ಲೇಖನಗಳು ಚೆನ್ನಾಗಿರುತ್ತವೆ. ಓದಿಸಿಕೊಂಡು ಹೋಗುತ್ತವೆ.
ಕೇಶವ ಪ್ರಸಾದ್.
http://nudichaitra.blogspot.com

ರಾಜೀವ ಹೇಳಿದರು...

ವಾಹ್!! ಭದ್ರಾವತಿ ಎಂದರೆ ಇಷ್ಟೆಲ್ಲಾ ಇದ್ಯಾ? ನಾನು ಆ ಕಡೆಗೆ ಇನ್ನು ಕಾಲಿಟ್ಟಿಲ್ಲ. ಯಾವಾಗ ಕರ್ಕೋಣ್ಡೋಗ್ತೀರಾ?

<< ಅದರೆದುರಿನ ಮುದುಕಿಯಂಥ ತೇರು >>
ಅಯ್ಯಯ್ಯೋ.

<< ಬಿಂಜಲಿನಲ್ಲಿ ಮೂಲೆ ಸೇರಿದ ಜೇಡ >>
ಬಿಂಜಲಿ ಅಂದ್ರೆ?

<< ಭದ್ರಾವತಿಯೆಂದರೆ ವಿಜಯದಶಮಿ >>
ಏನು ಸ್ಪೆಷಲ್ ವಿಜಯದಶಮಿ ದಿನ?

ಚಿತ್ರಾ ಹೇಳಿದರು...

ವಿಕಾಸ,
ಭದ್ರಾವತಿಯೆಂದರೆ ಅದೇ ರಿಪೇರಿ ಕಾಣದ ಮೇನ್ ರೋಡು , ಕಿವಿಗೆ ಅಪ್ಪಳಿಸುವ ತಮಿಳು ಭಾಷೆಯ ಹಾಡು , ಹೊಳೆಯಾಚೆ ಮಸೀದಿಯೆದುರಿನ ಕೋಳಿ ಗೂಡು ! .... ಹೀಗೆ ನನ್ನದೂ ಸ್ವಲ್ಪ!
ಹೀಗಿದ್ದರೂ ಚಿಕ್ಕಂದಿನಿಂದ ಬಾಂಧವ್ಯ ಬೆಳೆದು ವರ್ಷವೂ ತಪ್ಪದೆ ಭೇಟಿ ಕೊಡುವ ನನ್ನನ್ನು ಭದ್ರಾವತಿ ಅದೇ ಪ್ರೀತಿಯಿಂದ ಸ್ವಾಗತಿಸುತ್ತದೆ!
ಚಂದ ಇದ್ದು ಬರಹ !

PARAANJAPE K.N. ಹೇಳಿದರು...

ಭದ್ರಾವತಿಯ ವರ್ಣನೆ ನಿಮ್ಮ ಬರಹದಲ್ಲಿ ಸಚಿತ್ರ ಮೂಡಿದೆ. ಚೆನ್ನಾಗಿದೆ.

roopa ಹೇಳಿದರು...

ವಿಕಾಸ್ ಅವರೆ ,
ನಿಮ್ಮ ಭದ್ರಾವತಿ ಪುರಾಣ ಒಳ್ಳೆಯದಿದೆ .. :-) :-) ವಿಷಯ ತಿಳಿದ೦ತೆ ಆಯಿತು .

mruganayanee ಹೇಳಿದರು...

ಭದ್ರಾವತಿ ಎಂದರೆ ವಿಕಾಸನ ಊರು..

ವಿ.ರಾ.ಹೆ. ಹೇಳಿದರು...

@ಪೂ, ಅದು ಪುಟ್ಟ ಹುಡುಗನೊಬ್ಬನ ಮುದ್ದು ಮಾತು :)

@ಬಾಲು, ಥ್ಯಾಂಕ್ಸ್, ಒಂದ್ಸಲ ಹೋಗಿಬರೋಣ ಬಾ.

@ಕೇಶವ್, ಥ್ಯಾಂಕ್ಸ್

@ರಾಜೀವ್, ಹೌದು ಇನ್ನೂ ಏನೇನೆಲ್ಲಾ ಇದೆ. ಮುಂದಿನವಾರ ಹೋಗ್ತಿದ್ದೀನಿ ಬನ್ನಿ. 'ಬಿಂಜಲು' ಅಂದ್ರೆ ಅಡ್ಡಾದಿಡ್ಡಿ ಜೇಡರ ಬಲೆ. ವಿಜಯದಶಮಿಯೇ ಸ್ಪೆಷಲ್, ಅದರ ಆಚರಣೆಯೇ ಸ್ಪೆಷಲ್ . ;-)

@ಚಿತ್ರಾ, ಥ್ಯಾಂಕ್ಸ್, ನೀವೂ BDVT??!!

@ಪರಾಂಜಪೆ, ರೂಪಾ, thanx

@ಮೃಗನಯನಿ, ಹೌದು.

Guru's world ಹೇಳಿದರು...

ಅಬ್ಬ ,,, ಭದ್ರಾವತಿ ಎಂದರೆ ಅಂತ.....ಪೂರ್ತಿ ಬದ್ರಾವತಿ ಬಗ್ಗೆ ತಿಳಿಸಿ ಹೇಳಿ ಬಿಟ್ರಲ್ರಿ.... ತುಂಬ ಚೆನ್ನಾಗಿ ಇದೆ.....

Ismail Mk Shivamogga ಹೇಳಿದರು...

ವಿಕಾಸ್
ಓದಿಸಿಕೊಂಡು ಹೋಗುತ್ತವೆ.
ಭದ್ರಾವತಿ ಎಂದರೆ ಇಷ್ಟೆಲ್ಲಾ ಇದ್ಯಾ ,,,,,,,, ?

ಅನಾಮಧೇಯ ಹೇಳಿದರು...

hinge vikaas anadre anta ondu bari... :-)

ani625 ಹೇಳಿದರು...

ಬಹಳ ಸುಂದರವಾಗಿ ಬಣ್ಸಿದ್ದೀರ, ನನ್ನ ಬಾಲ್ಯವೆಲ್ಲ ಕಣ್ಣ ಮುಂದೆ ಹಾದು ಹೋಯ್ತು! ಇದರಲ್ಲಿ ಹೇಳಿರೋ ಒಂದೊಂದು ಚಿತ್ರಣವನ್ನು ನಾನು ನೆನೆಯಬಲ್ಲೆ.

Sree ಹೇಳಿದರು...

ಓ ಭದ್ರಾವತಿಯವ್ರಾ ಸಾರ್! ನಂಗೂ ಒಂದೆರಡ್ ವರ್ಷದ ಮಟ್ಟಿಗೆ ನಂಟು ಇತ್ತು....ಪದ್ಮನಿಲಯ, ನರಸಿಂಹಸ್ವಾಮಿಗುಡಿ,ಕಾಲೊನಿ, ಜನ್ನಾಪುರ...ಫ್ಲಾಶ್‌ಬ್ಯಾಕ್ ಹೋಗ್ಬಂದೆ, ಥ್ಯಾಂಕ್ಸು:) ಕ್ಯೂಟಾಗಿದೆ ಬರಹ

ಧರಿತ್ರಿ ಹೇಳಿದರು...

ಬೇಗ ಮದುವೆ ಆಗು, ನಿನ್ನೂರಿಗೆ ಬರೋ ಭಾಗ್ಯ ಸಿಗಲಿ. ಭದ್ರಾವತಿ ತುಂಬಾ ನೋಡ್ತೀವಿ ಮಾರಾಯ. ಆದ್ರೆ ನಮಗೆಲ್ಲ ಬಸ್ ಚಾರ್ಜ್ ನೀನೇ ಮಾಡಿಸ್ಬೇಕು. ಸರಿನಾ. ತುಂಬಾ ಚೆನ್ನಾಗಿ ಬರೆದಿದ್ದೀ.
-ಧರಿತ್ರಿ

ವಿ.ರಾ.ಹೆ. ಹೇಳಿದರು...

Thanks Vijay, Guru, Ani, Ismail.

Shree, oh hinga vishya ! :)

Dharitri, sari, khanditha. thanx :)

Shree ಹೇಳಿದರು...

baraha chennagide .......nanu Bhadravatiya hattirada shankarghattadalli odidavaladdarinda Bhadravatige onderadu sari bheti kottidene.

ಅನಾಮಧೇಯ ಹೇಳಿದರು...

hi, nice it is like again in front of me. my earlier days my home town.

ram. ಹೇಳಿದರು...

hi, nice it is like again in front of me. my earlier days of my home town.

Raghu ಹೇಳಿದರು...

ತುಂಭಾ ಚೆನ್ನಾಗಿಧೆ ನನ್ನ 5 paise add ಮಾಡ್ತಾ ಇದ್ದೀನಿ
ಭದ್ರಾವತಿ ಎಂದರೆ ಗೊಂಧಿ ಚಾನೆಲ್ swimming ..
ಇಸ್ಪಿಟ್ ಅಡ್ಡ..
VISL siron ಮತ್ತು MPM ವಾಸನೆ
ಚಿಲ್ಲರೆ ರೌಡಿಗಳು ಮತ್ತು ಅವರ Fightings
Voluntary retirement ತೆಗೊಂಡು ರೆಸ್ಟ್ ತೆಗೊಲ್ಲ್ಥಿರೋ ಕಾರ್ಮಿಕರು
8 ನೆ ತಾರೀಕು ಸಂಭಳ ಮತ್ತು ಸಂಭಳಧ ಸಂತೆ
ರಸ್ತೆಬದಿ ಕತ್ತೆಗಳು ...
ಅಪ್ಪಾಜಿ ಗೌಡ - ಸಂಗಮೇಶ್

Manju ಹೇಳಿದರು...

after leaving of 15 year again i recalled everything........ what r the thing u wrote is really correct and i enjoyed it........ now am in bangalore and remebering always my childhood ............. ofcourse still am having my friend there my hutta colony ummmm really great...... manju
manjukyadav@gmail.com

ವಿ.ರಾ.ಹೆ. ಹೇಳಿದರು...

@Shree, @Ram, Thanks

@Raghu, ೮ನೇ ತಾರೀಖಿನ ಸಂತೆ ಸೇರಿಸಬೇಕು ಅನ್ಕೊಂಡಿದ್ದೆ, ಬರೆಯುವಾಗ ಮರೆತುಹೋಗಿ ಬಿಟ್ಟೋಯ್ತು.
thank you..

@Manju, Thanks.

AntharangadaMaathugalu ಹೇಳಿದರು...

ವಿಕಾಸ್...
ನಾನೀಗ ತಾನೇ ಹಂಸಾನಂದಿಯವರ ’ಹಾಸನ’ದ ವಿವರ ಓದಿ.. ನಮ್ಮೂರ ಹೆಸರನ್ನಲ್ಲಿ ನೋಡಿ.. ಇಲ್ಲಿ ಹುಡುಕಿ ಬಂದೆ. ಭದ್ರಾವತಿ ಅಂದ್ರೆ... ಇನ್ನೂ ಏನೇನೋ ತುಂಬಾ ಇದ್ಯಲ್ಲಾರೀ... :-) ನಮ್ಮೂರ ವಿಷ್ಯ ಓದಿ ತುಂಬಾ ಖುಷಿ ಆಯ್ತು...

ಶ್ಯಾಮಲ

ವಿ.ರಾ.ಹೆ. ಹೇಳಿದರು...

@ಶ್ಯಾಮಲಾ,

ಥ್ಯಾಂಕ್ಸ್. ಹೌದು, ಇನ್ನೂ ಏನೆಲ್ಲಾ ಇದೆ. ಇದೊಂದು ಸಣ್ಣ ಝಲಕ್ ಅಷ್ಟೆ :)

ನೀವೂ ಭದ್ರಾವತಿಯವ್ರಾ? ಗುಡ್ ಗುಡ್ :)

ಅನಂತರಾಜ್ ಹೇಳಿದರು...

ಭದ್ರಾವತಿಯ ಬಗ್ಗೆ..ಪುಟ್ಟ ಹುಡುಗನೊಬ್ಬನ ಮುದ್ದು ಮಾತು :)ಕೇಳಿ ಸ೦ತಸವಾಯಿತು..ಹೆಮ್ಮೆಯಾಯಿತು..ಪರಚಯಿಸುವ ಶೈಲಿ ಸಕತ್! ಭದ್ರಾವತಿ ಎ೦ದರೆ ಎಸ್ ನಾರಾಯಣ್, ದೊಡ್ಡಣ್ಣ...!