ಪುಟಗಳು

ಗುರುವಾರ, ಮೇ 21, 2009

ಆರ್ಕುಟ್ ಮದುವೆ !

ಆರ್ಕುಟ್ ನಲ್ಲಿ ಇವನು ಅವಳ ಪ್ರೊಫೈಲ್ ನೋಡುವುದು , ಅವಳು ಇವನ ಪ್ರೊಫೈಲ್ ನೋಡುವುದು... recent visitors ಪಟ್ಟಿಯಲ್ಲಿ ದಿನವೂ ಹೆಸರು ಕಾಣುತ್ತಿತ್ತು. ಹೀಗೆ ಮೂರು ತಿಂಗಳು ನಡೆಯಿತು. ಅಷ್ಟರಲ್ಲಿ ಹೊಸ ವರ್ಷ ಬಂದಿತ್ತು. ಕೊನೆಗೆ ಹುಡುಗ ಒಂದು ಸ್ಕ್ರಾಪ್ ಹಾಕಿಯೇ ಬಿಟ್ಟ, "ಹೊಸ ವರ್ಷದ ಶುಭಾಶಯಗಳು". ತಕ್ಷಣವೇ ಉತ್ತರ ಬಂದಿತ್ತು ಹುಡುಗಿಯಿಂದ - "ಅಂತು ಇಷ್ಟು ದಿನಗಳಾದ ಮೇಲೆ ಸ್ಕ್ರಾಪ್ ಹಾಕಿದ್ರಲ್ಲ ". ಮುಂದುವರೆಯಿತು ಮಾತು ಕತೆ. ಮಾತಿಂದ ಪರಿಚಯ...., ಭೇಟಿ...., ಇಷ್ಟ...., ಸ್ನೇಹ, ಸ್ನೇಹದಿಂದ ಪ್ರೀತಿ.....

ಎಷ್ಟು ದಿನ ಅಂತ ಬರೀ ಪ್ರೀತಿ ಮಾಡಿಕೊಂಡಿರಲು ಸಾಧ್ಯ ? ವರ್ಷಕ್ಕಿಂತಲೂ ಹಳೆಯ ಪ್ರೀತಿ ಪೂರ್ತಿ ಮಾಗಿತ್ತು . ಯಾವುದೇ ಆತುರಕ್ಕೆ ಬೀಳದೆ ಇಬ್ಬರೂ ಒಬ್ಬರಿಗೊಬ್ಬರು ಎಲ್ಲಾ ರೀತಿಯಲ್ಲೂ ಸಂಪೂರ್ಣ ಒಪ್ಪಿಗೆಯಾದ ನಂತರವೇ ಬದುಕಿನಲ್ಲೂ ಜೊತೆಯಾಗುವ ನಿರ್ಧಾರ ಮಾಡಿದರು. As usual ಸ್ವಲ್ಪ ಜಗ್ಗಾಟದ ನಂತರ ಹಿರಿಯರ ಒಪ್ಪಿಗೆಯೂ ದೊರೆಯಿತು. ದೊರೆಯಲೇಬೇಕಿತ್ತು !

ಮೊನ್ನೆ ಮೊನ್ನೆ ಗೆಳೆಯನ ಮದುವೆ ಆಯಿತು. ಯಾಕೋ ಟೆನ್ಶನ್ ಆಗ್ತಿದೆ ಕಣ್ರೋ ಅಂತ ಮದುವೆ ಹಿಂದಿನ ದಿನದವರೆಗೂ ಅಲವತ್ತುಕೊಳುತ್ತಿದ್ದ. ಹನಿಮೂನಿಗೆ ಎಲ್ಲಿಗೆ ಹೋಗೋದು ಅಂತ ಗೊತ್ತಾಗದೆ, ನೀವೆ ಎಲ್ಲಾದ್ರೂ ಬುಕ್ ಮಾಡಿಸಿಕೊಡ್ರೋ ಅಂತ ನಮ್ಮನ್ನು ಕಷ್ಟಕ್ಕೆ ಸಿಲುಕಿಸಿದ್ದ. ಮದುವೆ ದಿನ ಇಷ್ಟಗಲ ನಗು ತೋರಿಸುತ್ತಾ ನಿಂತ ಅವರಿಬ್ಬರ ಸಂಭ್ರಮ ನೋಡುವಂತಿತ್ತು. ಮದುವೆ ಮುಗಿಸಿ ನಾವು ಬೆಂಗಳೂರಿಗೆ ತಿರುಗಿ ಬಂದು ನಾಲ್ಕು ದಿನದ ನಂತರ ಫೋನ್ ಮಾಡಿದರೆ "ಲೋ, ರೋಮಿಂಗ್ ನಲ್ಲಿದಿನಿ , ಸಖತ್ ಛಾರ್ಜ್ ಆಗತ್ತೆ, ಇಡ್ರೋ ಫೋನು" ಅಂತ ದಬಾಯಿಸಿದ್ದ. "ಆಯ್ತು ಬಿಡಪ್ಪಾ, ನಿನ್ ಛಾರ್ಜ್ ಖಾಲಿ ಮಾಡಲ್ಲ, ಬೇಕಾಗತ್ತೆ ನಿಂಗೆ" ಅಂತ ನಾವು ನಗಾಡಿದ್ದೆವು. ಮಧುಚಂದ್ರದಿಂದ ಮರಳಿ ಬಂದು ಈಗ ಟೆನ್ಶನ್ ಫ್ರೀ ಆಗಿದ್ದಾನೆ. :)

ನಮ್ಮೆಲ್ಲಾ ಗೆಳೆಯರ ಪರವಾಗಿ, ನಮ್ಮ ಕಟ್ಟೆ ಬಳಗದ ಪರವಾಗಿ ಅವರಿಬ್ಬರ ಮುಂದಿನ ಜೀವನಕ್ಕೆ ಶುಭಹಾರೈಕೆಗಳು. Happy married lifeu. :-)ಮುಂದೆ ಈ ರೀತಿ ಸುದ್ದಿಗಳು ಇನ್ನೂ ಜಾಸ್ತಿ ಜಾಸ್ತಿ ಬರುವ ಚಾನ್ಸ್ ಇದೆ. ಅಪ್ಪ ಅಮ್ಮಂದಿರ ಕೆಲಸ ಕಮ್ಮಿ ಮಾಡುತ್ತಿರೋ ಸೋಶಿಯಲ್ ನೆಟ್ವರ್ಕ್ ಸೈಟ್ ಗಳಿಗೆ thanx ಹೇಳಬೇಕೋ ಅಥವಾ ಹುಡುಗ್ರು ದಾರಿ ತಪ್ಪುತ್ತಾ ಇದ್ದಾರೆ ಅಂತ ಆತಂಕ ಪಡಬೇಕೋ ಎಂಬ ತೀರ್ಮಾನ ಅವರಿಗವರಿಗೆ ಬಿಟ್ಟದ್ದು.

27 ಕಾಮೆಂಟ್‌ಗಳು:

ಶಿವಪ್ರಕಾಶ್ ಹೇಳಿದರು...

ಆರ್ಕುಟ್ ಜೋಡಿಗೆ ಶುಭಾಶಯಗಳು :)

ಬಾಲು ಹೇಳಿದರು...

a dampathi galige nan kade inda shubhashaya... :)

PARAANJAPE K.N. ಹೇಳಿದರು...

ನವದ೦ಪತಿಗೆ ಶುಭ ಹಾರೈಕೆ

anu ಹೇಳಿದರು...

ಓಹ್ ಗೊತ್ತಾಯಿತು ಯಾರು ಅಂತ :)..ಆದರೆ ಇಷ್ಟೆಲ್ಲಾ ಕಥೆ ಗೊತ್ತಿರಲಿಲ್ಲ.:( ಗೊತ್ತು ಮಾಡಿದ್ದಕ್ಕೆ thanks.ಎಂದಿನಂತೆ ಚೆಂದದ ಶೈಲಿ .ಆ ನವ ದಂಪತಿಗಳಿಗೆ ಅಭಿನಂದನೆಗಳು :)

ಧರಿತ್ರಿ ಹೇಳಿದರು...

ಹಹಹಹಹ..! ನಿಮ್ದೂ ಅರ್ಕುಟ್ ಮದುವೆ ಆಗೋ ಚಾನ್ಸ್ಉ ಇಲ್ಲ ತಾನೇ? ನಂದೂ ಶುಭಾಶಯ ಹೇಳ್ರೀ. ಚೆನ್ನಾಗೈತೆ ನಿಮ್ ಬರಹ.

-ಧರಿತ್ರಿ

Padmavathi ಹೇಳಿದರು...

ಮೊಬೈಲ್ ಮದುವೆ ಹೀಗೆ ಬೇರೆ ಬೇರೆ ರೀತಿಯ ಮದುವೆ ಕೇಳಿದ್ದೆ ಆದರೆ ಆರ್ಕುಟ್ ಮದುವೆ ಕೇಳಲಿಲ್ಲಾ

Parisarapremi ಹೇಳಿದರು...

ಬೊಂಬಾಟ್. ನಿಮ್ಮೊಂದಿಗೆ ನನದೂ ಒಂದು ಶುಭಾಶಯ. ನಾನೂ ಸಧ್ಯದಲ್ಲೇ ಇಂಥ ಒಂದು ಜೋಡಿಗೆ ವಿಷ್ ಮಾಡುವುದರಲ್ಲಿದ್ದೇನೆ...

jithendra hindumane ಹೇಳಿದರು...

howdu... orkut kelvrige sangaathi kottide... halvarige jeevada geleya, gelatiyarnnu kottide.... long live orkut...!!!

ವಿಕಾಸ್ ಹೆಗಡೆ ಹೇಳಿದರು...

wish mAdidavarigella thanx. nimma wishes avarige talupisalAgide.

@Padmavathi
hosa hosa technology bartha idda haage hosa hosadu kElibarutte, kanDubarutte. Parents kelsa kammi aythu biDi :) thanx

@jithendra
nija nija.long live orkut :)

ಅನಾಮಧೇಯ ಹೇಳಿದರು...

ತಂತ್ರಜ್ಞರು ಇನ್ನು ಏನೇನೂ ಮಾಡ್ತಿರೋ ಆ ದೇವರೇ ಬಲ್ಲ! ಮದುವೆ ಮಹತ್ವದ ಕುರಿತು ಹಿಂದೊಮ್ಮೆ ಕರ್ಮವೀರದಲ್ಲಿ ಬರೆದಿದ್ದೆ. ಆ ಲೇಖನ ಎಷ್ಟು ಹುಡುಕಾಡಿದರೂ ಸಿಗಲಿಲ್ಲ...ಮದುವೆಗೋಸ್ಕರವೇ ಆರ್ಕುಟ್ ಅಕೌಂಟ್ ಒಪನ್ ಮಾಡಿಕೊಳ್ಳದೇ ಹೋದ್ರೆ ಸಾಕು ನಮ್ಮ ಜನ! ಅದೇನೆ ಇರ್ಲಿ ನವದಂಪತಿಗಳಿಗೆ ಶುಭಾಶಯ. ಮಜವಾದ ಲೇಖನ ಬರೆದ ತಮ್ಗೆ...?!!!
ಕೋಡ್ಸರ

Naveen...ಹಳ್ಳಿ ಹುಡುಗ ಹೇಳಿದರು...

ವಿಕಾಸ್ ರವರಿಗೆ ನಮಸ್ಕಾರಗಳು... ನವಯುಗದ ನವದಂಪತಿಗಳಿಗೆ ಶುಭಾಶಯಗಳು....

ರಂಜನಾ ಹೆಗ್ಡೆ ಹೇಳಿದರು...

ಹಾಯ್,
ಶುಭಾಶಯಗಳು. ನಂಗೆ ಮದ್ವೆಗೆ ಹೋಗಕೆ ಆಗಿಲ್ಲ.
ನನ್ನ ಹಾರೈಕೆ ತಿಳಿಸಿಬಿಡು.

ಅನಾಮಧೇಯ ಹೇಳಿದರು...

I chanced upon your blog and found it very informative. The event blogs are striking enough to have a feel of the event, so, I would like to have a little chit-chat on your blogging interests. And even we are coming up with an event on startups on June 6th. So, can I have your contact details? Looking forward to hear from you.

pavan@siliconindia.com

ಶಿವಶಂಕರ ವಿಷ್ಣು ಯಳವತ್ತಿ ಹೇಳಿದರು...

ಎಸ್ಸೆಮ್ಮೆಸ್ ಮದುವೆ...

ಆರ್ಕುಟ್ ಮದುವೆ..

ಈ-ಮೇಲ್ ಮದುವೆ..

ಆನ್ ಲೈನ್ ಮದುವೆ..

ಬ್ಲಾಗಿಂಗ್ ಮದುವೆ?????????????/


ಅಬ್ಬಾ.............


ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

www.shivagadag.blogspot.com

ತೇಜಸ್ವಿನಿ ಹೆಗಡೆ- ಹೇಳಿದರು...

ತುಂಬಾ ಕುತೂಹಲಕರವಾಗಿದೆ. ನನ್ನ ಕಡೆಯಿಂದಲೂ ಶುಭಾಶಯಗಳು. :)

kanthiranga ಹೇಳಿದರು...

Hi,, orkut jodige shubhashaya... lekhakarinda innu olle lekhanagalu moodibarali

ವಿಕಾಸ್ ಹೆಗಡೆ ಹೇಳಿದರು...

Once again, thanx kodsara, Naveen, Ranju, Tejakka, shivashankara, kanthiranga. Ur wishes will be conveyed to the couple.

Shivshankar, ಬ್ಲಾಗ್ ಮದ್ವೆನೂ ಆಗತ್ತೆ ಮುಂದೆ.

kanthiranga, ಅಂದ್ರೆ ಇಷ್ಟು ದಿನದ್ದು ಒಳ್ಳೇದಿರ್ಲಿಲ್ಲ ಅಂತ ಅರ್ಥನಾ? :) ಹ್ಮ್..

Pramod ಹೇಳಿದರು...

ಶುಭಾಶಯಗಳು..ಆರ್ಕುಟ್ ಮದುವೆ ಹೊಸ ಟ್ರೆಂಡ್..:)

Dr U B Pavanaja ಹೇಳಿದರು...

> Shivshankar, ಬ್ಲಾಗ್ ಮದ್ವೆನೂ ಆಗತ್ತೆ ಮುಂದೆ.

ಇದು ಈಗಾಗಲೇ ಅಗಿದೆ. ನನ್ನ ಸ್ನೇಹಿತ, ಮೈಕ್ರೋಸಾಫ್ಟ್‌ನ ಮಾಜಿ ಉದ್ಯೋಗಿ, ಬ್ಲಾಗಿನಲ್ಲಿ ಗೆಳೆತನ ಮಾಡಿ ನಂತರ ಮದುವೆ ಆಗಿದ್ದು.

-ಪವನಜ

ಶಿವಶಂಕರ ವಿಷ್ಣು ಯಳವತ್ತಿ ಹೇಳಿದರು...

pavanaja sir..

nodidra.. naavu kalpane maadodakkintha namma generation thumba munde ide antha.....

avarige enu bekaagide antha ivagina kavigalu ee reethiyindanadru thilkondu barili...

young generation ge ade halli.. ade schoolu.. mestru.. appana strict.. jaathi.. dwesha..kraanthi,,

bekaagilla..inthavvu bittu bere barili.. ivelladara naduve... olledu irali antha nanna anisike..

inti nimma pritiya

www.shivagadag.blogspot.com

ಅನಾಮಧೇಯ ಹೇಳಿದರು...

neenu orkut huDgina madve aaagbeda kano...
Facebook huDgina madve aagu :-)

ಜೋಮನ್ ಹೇಳಿದರು...

ಇಂತಹ ಯಾವುದಾದರೂ ಅವಕಾಶ ಸಿಗುತ್ತದೆಯಾ ಅಂತ ನಾನೂ ಎರಡು ವರ್ಷದಿಂದ ಸ್ಕ್ರಾಪ್ ಮಾಡ್ತಾ ಇದೀನಿ ಸರ್. ಆದ್ರೆ ಏನೂ ಆಗ್ತಾ ಇಲ್ಲ.

ವಿಕಾಸ್ ಹೆಗಡೆ ಹೇಳಿದರು...

Thankx Pramod, Pavanaja sir, Shivashankar.

Vijay, nandu Facebook accountE illa :)

Joman, keep trying until u get married! ;)

ಸುಶ್ರುತ ದೊಡ್ಡೇರಿ ಹೇಳಿದರು...

ಜೋಮನ್,
ಸೇಮ್ ಪಿಂಚ್! ;(

NiTiN Muttige ಹೇಳಿದರು...

ಹೆತ್ತವರು ಮಗನಿಗೆ ಮದುವೆ ಮಾಡಲು ಹೆಣ್ಣು ಸಿಗದೇ ಪರದಾಡುತ್ತಿರುವಾಗ ಹುಡುಗ ಹುಡುಗಿ ಹುಡುಕೊಂಡು ಬಂದ್ರೆ ಬೇಡ ಹೇಳ್ತಾರಾ!!! ಪರಿಚಯಕ್ಕೆ ಹೊಸ ಕೊಂಡಿ,ಎಲ್ಲರಿಗೂ ಒಳ್ಳೆದಾಗಲಿ!!

KRISHNA ಹೇಳಿದರು...

neevu bareda chennagide. jeevana (vaastava) kalpanegintaloo vichitra annodakke innentha udhaharane beku heli

ಅನಾಮಧೇಯ ಹೇಳಿದರು...

Happy married life .....