ಪುಟಗಳು

ಗುರುವಾರ, ಫೆಬ್ರವರಿ 19, 2009

ಸಿಗರೇಟ್ ಹೊಗೆ ಎಷ್ಟು ಚಂದ ಗೊತ್ತಾ ಅಪ್ಪಾ..

ಹದಿಹರೆಯದ ಮಗಳ ಕೋಣೆಯನ್ನು ನೋಡಿದ ತಂದೆಗೆ ಆಶ್ಚರ್ಯವಾಯಿತು. ಎಲ್ಲಾ ವಸ್ತುಗಳೂ ನೀಟಾಗಿ ಜೋಡಿಸಲ್ಪಟ್ಟಿದ್ದವು , ಹಾಸಿಗೆಯನ್ನು ನೀಟಾಗಿ ಇಡಲಾಗಿತ್ತು, ಬಟ್ಟೆ, ಪುಸ್ತಕಗಳು, ಡ್ರೆಸ್ಸಿಂಗ್ ಟೇಬಲ್ , ಒಟ್ಟಿನಲ್ಲಿ ಇಡೀ ಕೋಣೆ ಒಪ್ಪವಾಗಿತ್ತು. ಒಳಗೆ ಬಂದು ನೋಡಿದಾಗ ದಿಂಬಿನ ಮೇಲೆ ಒಂದು ಲಕೋಟೆ ಕಾಣಿಸಿತು. ಅದರ ಮೇಲೆ ’ಅಪ್ಪನಿಗೆ’ ಎಂದು ಬರೆಯಲಾಗಿತ್ತು. ಏನೋ ಒಂಥರಾ ತಳಮಳದಿಂದಲೇ ಅದನ್ನು ತೆಗೆದು ಓದಲು ಶುರುಮಾಡಿದರು.

ಪ್ರೀತಿಯ ಅಪ್ಪ,

ಈ ಪತ್ರವನ್ನು ಬಹಳ ಬೇಜಾರಿನಿಂದ ಬರೀತಾ ಇದ್ದೀನಿ. ನನ್ನ ಗೆಳೆಯ ಸ್ಯಾಂಡಿ ಜೊತೆ ಬದುಕಬೇಕು ಅಂತ ತೀರ್ಮಾನ ಮಾಡಿಕೊಂಡು ನಾನು ಮನೆ ಬಿಟ್ಟು ಹೋಗ್ತಾ ಇದ್ದೀನಿ. ನಿಮಗೆ, ಅಮ್ಮಂಗೆ ಹೇಳಿದರೆ ಬಹಳ ನೊಂದುಕೊಂಡು ರಂಪ ಮಾಡುತ್ತೀರಾ ಎನ್ನುವ ಕಾರಣದಿಂದ ಹೀಗೆ ಹೇಳದೇ ಹೊರಟು ಹೋಗ್ತಾ ಇದ್ದೀನಿ.

ನಂಗೆ ಸ್ಯಾಂಡಿ ಅಂದ್ರೆ ತುಂಬ ಇಷ್ಟ ಅಪ್ಪ, ಅವನಿಗೂ ನಾನು ಅಂದ್ರೆ ತುಂಬಾನೆ ಇಷ್ಟ. ನೀವು ಅವನನ್ನು ನೋಡಿದ್ರೆ ನಿಮಗೂ ಇಷ್ಟ ಆಗ್ತಾನೆ. ಅವನ ಉದ್ದ ಕೂದಲು, ಹರಿದ ಜೀನ್ಸು, ಅವನು ಮೈತುಂಬಾ ಹಾಕಿಸಿಕೊಂಡಿರೋ ಹಚ್ಚೆಗಳು, ಅವನ piercings... ಎಲ್ಲಾ ನನಗೆ ಬಹಳ ಬಹಳ ಇಷ್ಟ. ಅವನಿಗೆ ಸ್ವಲ್ಪ ಜಾಸ್ತಿ ವಯಸ್ಸಾಗಿದೆ (೪೦ ಜಾಸ್ತಿ ಏನಲ್ಲ ಅಲ್ವಾ ಅಪ್ಪ?), ಸರಿಯಾಗಿ ಒಂದು ಕೆಲಸ ಅನ್ನೋದು ಇಲ್ಲ , ಕೈಯಲ್ಲಿ ದುಡ್ಡು ಇಲ್ಲ ಅನ್ನೋದು ನಿಜ ಆದ್ರೂ ಕೂಡ ನಮ್ಮ ಸಂಬಂಧಕ್ಕೆ ಇಂತದ್ದೆಲ್ಲಾ ಅಡ್ಡಿಯಾಗೋಲ್ಲ ಅಪ್ಪಾ. ಜೀವನದಲ್ಲಿ ಬರೀ ಹಣ ಮುಖ್ಯ ಅಲ್ಲ ಅಂತ ನೀವೇ ಎಷ್ಟೋ ಸಲ ಹೇಳಿದ್ದೀರ, ಒಪ್ಪಿಕೊಳ್ತೀರಾ ಅಲ್ವಾ ಅಪ್ಪಾ? ಅವನ ಹತ್ತಿರ ಒಳ್ಳೇ ಸೀಡಿ ಕಲೆಕ್ಷನ್ ಇದೆ. ಅವನು ಬೈಕನ್ನ ಎಷ್ಟು ಫಾಸ್ಟಾಗಿ ಓಡಿಸ್ತಾನೆ ಅಂದ್ರೆ ಹಿಂದೆ ಕೂತ್ಕೊಂಡ್ರೆ ಗಾಳಿಯಲ್ಲಿ ಹಾರಿ ಹೋಗೋ ಅನುಭವ ಆಗ್ತಿರತ್ತೆ. ಅವನ ಕೈಯಲ್ಲಿ ಯಾವಾಗಲೂ ಉರೀತೀರೋ ಸಿಗರೇಟಿನ ಹೊಗೆ ಸುರುಳಿ ಸುರುಳಿಯಾಗಿ ಬರೋದನ್ನ ನೋಡೋಕೆ ಬಹಳ ಖುಷಿಯಾಗತ್ತೆ ನಂಗೆ. ಆ ರೀತಿ ರಿಂಗ್ಸ್ ಬಿಡೋದನ್ನ ನನಗೂ ಕಲಿಸುತ್ತಾ ಇದ್ದಾನೆ. ರಾತ್ರಿ ಎಲ್ಲಾ ಅವನ ಜೊತೆ, ಅವನ ಗೆಳೆಯರ ಜೊತೆ ಡ್ರಿಂಕ್ಸ್ ಪಾರ್ಟಿ ಮಾಡಿ ಕುಣಿಯೋದ್ರಲ್ಲಿ ಸಿಗುವ ಸಂತೋಷ ಜೀವನದಲ್ಲಿ ಬೇರೆ ಎಲ್ಲೂ ಸಿಗೋಲ್ಲ ಅನ್ನಿಸಿದೆ ನಂಗೆ. ಅವನಿಗೆ ಬಹಳ ಜನ ಗರ್ಲ್ ಫ್ರೆಂಡ್ಸ್ ಇದ್ದಾರಂತ ನಂಗೆ ಹೇಳಿದಾನೆ, ಆದ್ರೆ ಅವನು ನನ್ನನ್ನ ಮಾತ್ರ ಪ್ರೀತಿ ಮಾಡೋದು ಅಂತ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾನೆ, ನನ್ನ ಜೊತೆನೇ ಇರ್ತಾನೆ ಅಂತ ಮಾತು ಕೊಟ್ಟಿದ್ದಾನೆ.

ಆದರೆ ಬರೀ ಇಷ್ಟು ಮಾತ್ರಕ್ಕೆ ನಾನು ಅವನ ಜೊತೆ ಹೋಗ್ತಾ ಇಲ್ಲ. ನಾನು ಈಗ ಅವನಿಂದ ಪ್ರೆಗ್ನೆಂಟ್ ಆಗಿದ್ದೀನಿ . ಸ್ಯಾಂಡಿಗೆ ನಾನು ತಾಯಿ ಆಗೋದು ಬಹಳ ಇಷ್ಟ ಅಂತೆ, ಆಗ ಒಂದು ಕುಟುಂಬದ ತರಹ ಒಟ್ಟಿಗೆ,ಸಂತೋಷವಾಗಿರ್ಬೋದು ಅಂತ ಹೇಳಿದ್ದಾನೆ ಅವನು ನಂಗೆ. ಅವನಿಗೆ ನನ್ನಿಂದ ಇನ್ನೂ ಮಕ್ಕಳು ಬೇಕಂತೆ, ನಂಗೂ ಕೂಡ ಮಕ್ಕಳು ಅಂದ್ರೆ ಎಷ್ಟು ಇಷ್ಟ ಅಂತ ಗೊತ್ತಲ್ಲಪ್ಪ ನಿಮಗೆ. ಮೊದಲು ಅವನು ಅದೇನೋ ಬಿಸಿನೆಸ್ ಮಾಡ್ತಾ ಇದ್ದನಂತೆ , ಅದಕ್ಕೆ ಪೋಲೀಸರು ತೊಂದರೆ ಕೊಟ್ರು ಅಂತ ಈಗ ಇನ್ನೂ ಬೇರೆ ಏನೋ ಬಿಸಿನೆಸ್ ಶುರು ಮಾಡಬೇಕು ಅಂತ ಇದ್ದಾನೆ. ಆದಷ್ಟು ಬೇಗ ಅವನು ಸೆಟಲ್ ಆಗಿಬಿಡ್ತಾನೆ ಅಪ್ಪಾ. ಆಮೇಲೆ ನಾನೂ ಅವನೂ ಸುಖವಾಗಿ ಇರ್ತೀವಿ. ಅಮ್ಮನಿಗೂ ಇದೆಲ್ಲಾ ಹೇಳಿಬಿಡಿ.


ನಿಮ್ಮ ಪ್ರೀತಿಯ ಮಗಳು,
ಪುಟ್ಟಿಆ ಪುಟದ ಕೊನೆಯಲ್ಲಿ ಪು.ತಿ.ನೋ. ಎಂದು ಬರೆಯಲಾಗಿತ್ತು. ಕಣ್ಣಲ್ಲಿ ನೀರು ತುಂಬಿಕೊಂಡು ನಡುಗುವ ಕೈಗಳಿಂದಲೇ ಪುಟ ತಿರುಗಿಸಿ ನೋಡಿದರು.

ಅಪ್ಪ, ನೀವು ಓದಿದ್ದು ಯಾವುದೂ ನಿಜವಲ್ಲ, ನಾನು ಇಲ್ಲೇ ಪಕ್ಕ ಬೀದಿಯ ಫ್ರೆಂಡ್ ಮನೆಲ್ಲಿ ಇದ್ದೇನೆ. ಈ ಜಗತ್ತಿನಲ್ಲಿ ನನ್ನ ಮಾರ್ಕ್ಸ್ ಕಾರ್ಡ್ ಗಿಂತ ಕೆಟ್ಟದಾಗಿರೋದು, ದು:ಖ ಕೊಡುವಂತದ್ದು ಕೂಡ ಇದೆ ಅನ್ನೋದನ್ನ ನಿಮಗೆ ತಿಳಿಸಬೇಕಾದ್ದು ನನ್ನ ಉದ್ದೇಶವಾಗಿತ್ತು. ಅಲ್ಲೇ ಟೇಬರ್ ಡ್ರಾಯರ್ ನಲ್ಲಿ ನನ್ನ ಮಾರ್ಕ್ಸ್ ಕಾರ್ಡ್ ಇದೆ. ಅದಕ್ಕೆ ಸೈನ್ ಮಾಡಿಟ್ಟಿರಿ. ನಿಮ್ಮ ಕೋಪ ಇಳಿದಾದ ಮೇಲೆ ನಾನು ಮನೆಗೆ ಬಂದ್ರೆ ಏನೂ ತೊಂದರೆ ಇಲ್ಲ ಅನ್ನುವಾಗ ಫೋನ್ ಮಾಡಿ. I love u appaaa....


(ಇಂಗ್ಲೀಷ್ ನಿಂದ ಭಾವಾನುವಾದಿತ, ಲೇಖಕ ಅಜ್ಞಾತ)

30 ಕಾಮೆಂಟ್‌ಗಳು:

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ವಿಕಾಸ್..

ಫೆಬ್ರುವರಿಯಲ್ಲೇ ಎಪ್ರಿಲ್ ತಂದು ಬಿಟ್ಟಿರಲ್ಲ..!

ಮಸ್ತ್ ಇದೆ...
ಒಳ್ಳೆಯ ಟ್ವಿಸ್ಟ್...

ಬಹಳ ಇಷ್ಟವಾಯಿತು..

ವಂದನೆಗಳು...

Sree ಹೇಳಿದರು...

why?!?!

ಯಜ್ಞೇಶ್ (yajnesh) ಹೇಳಿದರು...

ಹ್ಹಹ್ಹಹ್ಹ... ಸೂಪರ್

ಚಿತ್ರಾ ಕರ್ಕೇರಾ ಹೇಳಿದರು...

ಬರೇ ಕಿಲಾಡಿ..ನಾವಲ್ಲ ಫೂಲ್ ಆಗಿದ್ದು ನೀವೇ..!!! ಫೆಬ್ರುವರಿಯಲ್ಲಿ ಯಾರಾದ್ರೂ 'ಏಪ್ರಿಲ್ ಫೂಲ್ ' ಮಾಡ್ತಾರ? ಅಷ್ಟು ಪರಿಜ್ಞಾನ ಬೇಡ್ವಾ?ಹಿಹಿಹಿ(:)
ಆದರೆ, ಪತ್ರ ತುಂಬಾ ಚೆನ್ನಾಗಿದೆ..ಒಂದೇ ಕ್ಷಣಕ್ಕೆ ನಾವು ಅದರೊಳಗೆ ಹುದುಗಿಹೋಗಿ ಓದ್ತಾ ಸಾಗ್ತೀವಿ...ಗುಡ್ಡುಉಊಊಊ
-ಚಿತ್ರಾ

ಸಂತೋಷ್ ಚಿದಂಬರ್ ಹೇಳಿದರು...

sakathagide vikas.. tumba ishta aayitu...

ಅನಾಮಧೇಯ ಹೇಳಿದರು...

very old mail forward, try something new.

ವಿಕಾಸ್ ಹೆಗಡೆ ಹೇಳಿದರು...

Thats what, Something new has been tried with not so old stuff, i,e., its conversion in to Kannada. ;-)Thanx.

ತೇಜಸ್ವಿನಿ ಹೆಗಡೆ- ಹೇಳಿದರು...

ವಿಕ್ಸ್,

ನನಗಂತೂ ಇದು ಹೊಚ್ಚ ಹೊಸತು! ನಿಜವಾಗಿಯೂ ತುಂಬಾ ಇಷ್ಟವಾಯಿತು. ಒಬ್ಬರಿಗೆ ಹಳತಾಗಿದ್ದುದು ಇನ್ನೊಬ್ಬರಿಗೆ ಹೊಸತೆನಿಸಬಹುದು. ಅದೂ ಅಲ್ಲದೇ Old is Gold. ಈ ಬರಹದೊಳಗಿನ ಸಂದೇಶ, ನೀತಿಯು ಯಾವ Goldಗೂ ಕಡಿಮೆಯದ್ದಲ್ಲ ಅಲ್ಲವೇ?

ಶಂಕರ ಪ್ರಸಾದ ಹೇಳಿದರು...

ನನ್ಮಗಂದು ಪ್ರತೀ ಸಲ ಓದಿದಾಗಲೂ ಒಳ್ಳೆ ನಗು ಬರುತ್ತೆ.
ಅನುವಾದ ಸರಿ ಇದೆ. ಒರಿಜಿನಲ್ ಈ ಮೇಲಲ್ಲಿ ಇನ್ನೂ ಒಂದು ಪಾಯಿಂಟ್ ಇತ್ತು ಅನ್ಸುತ್ತೆ.
ಬೇಕೂ ಅಂತಾನೇ ಬಿಟ್ಟಿದ್ಯಾ?

ಕಟ್ಟೆ ಶಂಕ್ರ

Ganesh Bhat ಹೇಳಿದರು...

Old,but gold, thumbaane intelligent work-out aagide!!!

sunaath ಹೇಳಿದರು...

ವಿಕಾಸ,
ಮೊದಲ ಭಾಗ ಓದುವಾಗ ಹೃದಯ ತಣ್ಣಗಾಗಿ ಹೋಗಿತ್ತು.
ಎರಡನೆಯ ಭಾಗ ಓದುತ್ತಿದ್ದಂತೆ ಕೋಪ ಹಾಗೂ ನಗು ಒಟ್ಟಿಗೆ ಬಂದವು.
A very good story.

ಚಿತ್ರಾ ಹೇಳಿದರು...

ವಿಕಾಸ,
ನಂಗೂ ಬಂದಿತ್ತು ಇ-ಮೇಲ್ ನಲ್ಲಿ .ನಮಗಿಷ್ಟವಾಗಿದ್ದನ್ನು ಹಂಚಿಕೊಳ್ಳುವುದು ತಪ್ಪೇನಲ್ಲ ಬಿಡು.ಅಲ್ಪ ಸ್ವಲ್ಪ ಬದಲಾವಣೆ ಮಾಡಿ ಕನ್ನಡಕ್ಕೆ ಅನುವಾದಿಸಿದ್ದು ಚೆನ್ನಾಗಿಯೆ ಬಂದಿದೆ.

NiTiN Muttige ಹೇಳಿದರು...

haleyadaadarU mattomme odi aanandisabahudu...

ಅನಾಮಧೇಯ ಹೇಳಿದರು...

naanu koda fwd odidde... aadre... neenu kanaadadalli barediddu tumbaa chennagitu.... hangaagi eradne sala odidro modalane sala odiddakkinta jaasti khushi aaytu kano

ಅನಾಮಧೇಯ ಹೇಳಿದರು...

ನಮಸ್ತೆ.. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

ಶುಭವಾಗಲಿ,
- ಶಮ, ನಂದಿಬೆಟ್ಟ

ವಿಶ್ವ ಹೆಗಡೆ ಸುಂಕಸಾಳ ಹೇಳಿದರು...

ತುಂಬಾ ಚೆನ್ನಾಗಿದೆ. ಸಿಗರೇಟ್ ಹೊಗೆಗಿಂತಲೂ.....ಖಂಡಿತ

ಸತ್ಯ ಚರಣ ಎಸ್.ಎಂ.(Sathya Charana S.M.) ಹೇಳಿದರು...

ವಿಕಾಸ್, ನಮಸ್ತೆ..
ಅಕಸ್ಮಾತ್ತಾಗಿ ಯಾರದೋ ಬ್ಲಾಗ್ ನಲ್ಲಿದ್ದ ಇನ್ಯಾವುದೋ ಲಿಂಕ್ ಮೂಲಕ ಅಂತೂ ಕೊನಗೆ ನಿಮ್ಮ ಬ್ಲಾಗ್ ಗೆ ಬಂದವನೂ ಹಾಗೆ ಅಲ್ಲೇ ಸುತ್ತು ಹೊಡಿಯೋ ಹಾಗೆ ಮಾಡಿಬಿಟ್ರಿ ನನ್ನ..
ನಿಜವಾಗಲೂ ತುಂಬಾ ಸಂತೋಷ ಆಯಿತು ನಿಮ್ಮ ಎಲ್ಲಾ ಬರಹಗಳನ್ನ ನೋಡಿದಾಗ..
ಒಂದೇ ಸಾರಿ ಒಂದಾದ ಮೇಲೆ ಒಂದರಂತೆ, ಹೆಚ್ಚು ಕಡಿಮೆ ನಿಮ್ಮ 6-7 ಬರಹ ಓದಿಮುಗಿಸಿದ್ದೇನೆ..
ನಿಮ್ಮ ಬರಹದ ಜೊತೆ ನನಗೆ ಮುದ ನೀಡಿದ್ದು.. ನಿಮ್ಮ ಬರಹದ ಅನಿಸಿಕೆಗಳಿಗೆ ನೀವು ಕೊಟ್ಟ ಉತ್ತರ ಹಾಗು ಅದರ ಶೈಲಿ.
ನಿಮ್ಮಿಂದ ಇನ್ನೂ ಮುಂದೆ ಕೂಡ ಇಂತ ಲೇಖನ ಇನ್ನೂ ಹೆಚ್ಚು ಬಾರೋ ಹಾಗಾಗಲಿ ಅಂತ ನನ್ನ ಹಾರೈಕೆ..
ಹಾಗೆ, ಇನ್ನೊದು ಅರಿಕೆ ನಿಮ್ಮಲ್ಲಿ..
ನಾನು ಕೂಡ ಹೊಸದಾಗಿ, ಬ್ಲಾಗ್ ಬರೆಯೋಕ್ಕೆ ಶುರು ಮಾಡಿದಿನಿ..
ದಯವಿಟ್ಟು ಒಂದು ಬಾರಿ ಸಮಯ ಸಿಗದೇ ಇದ್ರೂನೂ ಸಮಯ ಮಾಡ್ಕೊಂಡು..ಭೇಟಿ ಕೊಡಿ ಅಂತ ಪ್ರಾರ್ಥಿಸ್ತಿನಿ...
ನಿಮ್ಮ ಒಂದು ಒಳ್ಳೆ ಅನಿಸಿಕೆ, ನನಗೆ, ನನ್ನ ಮುಂದಿನ ಬರಹಗಳಿಗೆ ಬೆಂಬಲ ಆಗಬಹುದು. ನನ್ನಲ್ಲಿ ತಪ್ಪಿದ್ದಲ್ಲಿ ಸರಿ ಪಡಿಸಿಕೊಳ್ಳಲು ದಾರಿ ಆಗಬಹುದು..
ಇತರೆ ಎಲ್ಲರಿಗೂ.. ಕೂಡ.. ಸ್ವಾಗತ..
ಬ್ಲಾಗ್ ನ ತಲೆಬರಹ "ಸತ್ಯ - ನಮ್ಮೊಂದಿಗಿರುವ ನಿಜ!"
http://sathyathetruthwithus-kannada.blogspot.com/

ಧನ್ಯವಾದಗಳೊಂದಿಗೆ..
ನಿಮ್ಮೊಲವಿನ..
ಸತ್ಯ.

ಪ್ರದೀಪ್ ಹೇಳಿದರು...

ಹ್ಹೆ.. ಹ್ಹೆ.. ಚೆನ್ನಾಗಿದೆ ಉಪಾಯ! :-D :-)
ಇದರ ಮೂಲ ಆಂಗ್ಲ ಲೇಖನ ಯಾವುದೆಂದು ತಿಳಿಸುವಿರಾ...

ವಿಕಾಸ್ ಹೆಗಡೆ ಹೇಳಿದರು...

ಕಮೆಂಟಿಸಿದವರಿಗೆಲ್ಲರಿಗೂ ಧನ್ಯವಾದಗಳು .

ಮೂಲ ಇಂಗ್ಲೀಷ್ ಬರಹವನ್ನು ನಮ್ಮ ಸಮಾಜ, ಭಾಷೆಯ ಸೊಗಡಿಗೆ ಹೊಂದಿಸಿಕೊಳ್ಳುವ ಉದ್ದೇಶದಿಂದ ಸ್ವಲ್ಪ ಬದಲಾವಣೆ ಮಾಡಿದ್ದು ಹೌದು.

ಪ್ರದೀಪ್, ಯಾವುದು ಅಂತ ಕೇಳಿದರೆ ಏನನ್ನಲಿ? ನಿಮ್ ಇಮೇಲ್ ಐಡಿ ಕೊಟ್ಟರೆ ಕಳಿಸುತ್ತೇನೆ ಅದನ್ನು.

ranjith ಹೇಳಿದರು...

ಮೊದ್ಲು ಬರ್ತಿದ್ದ "ವಿಜಯ ಟೈಮ್ಸ್" ನಲ್ಲೊಮ್ಮೆ ಆ ಇಂಗ್ಲೀಷ್ ಲೇಖನ ಓದಿ ಕಟ್ ಮಾಡಿಟ್ಟುಕೊಂಡಿದ್ದೆ. ಬಹಳ ಇಷ್ಟವಾಗಿತ್ತು.

-ರಂಜಿತ್

ಬಾಲು ಹೇಳಿದರು...

ವಿಕಾಸ್ ಇ ಲೇಖನ ನನಗೆ ಮೊದಲೆ ಸಿಕ್ಕಿದ್ದರೆ ಎಷ್ತು ಚೆನ್ನಗಿ ಇರುತ್ತಾ ಇತ್ತು!!! ಛೆ ಒ೦ದು ೧೦ ವರ್ಷ ಮೊದಲೆ ಇ ರೀತಿಯ ಐಡಿಯ ಸಿಕ್ಕಿದ್ದರೆ, ನಮ್ ಅಪ್ಪ ನ೦ಗೆ ಕಡಿಮೆ ಉಗಿತ ಇದ್ರು ಅನ್ಸುತ್ತೆ!!!!

ಚೆನ್ನಾಗಿದೆ ವಿಕಾಸ್ :)

Manju ಹೇಳಿದರು...

wow... good idea. ಆದರೆ ಹುಡುಗಿ ಸ್ವಲ್ಪ risk ತಗೊಂಡಳು ಅನ್ಸುತ್ತೆ. ಪು.ತಿ.ನೋಡುವ ಮೊದಲೇ ಅವರಪ್ಪ heart fail ಆಗಿ ಗೊಟಕ್ ಅಂದಿದ್ರೆ??

Annapoorna Daithota ಹೇಳಿದರು...

ಬಹಳ ಚೆನ್ನಾಗಿದೆ :-)

ವಿಕಾಸ್ ಹೆಗಡೆ ಹೇಳಿದರು...

thanx friends.

ಮಂಜು, ಬಿಡ್ರಿ ಅವ್ರಪ್ಪನ್ ಬಗ್ಗೆ ಅವ್ಳೇ ತಲೆಕೆಡ್ಸ್ಕಂಡಿಲ್ಲ ಅಂದ್ಮೇಲೆ ನಮಗ್ಯಾಕೆ ಚಿಂತೆ :)

ಶಿವಶಂಕರ ವಿಷ್ಣು ಯಳವತ್ತಿ (ದಿನಕ್ಕೊಂದು ವಿಷಯ) ಮರೆಯದೆ ಭೇಟಿ ನೀಡಿ.. ಹೇಳಿದರು...

ಅಪ್ಪನಿಗೆ ತುಂಬಾ Tension ಕೊಟ್ಟುಬಿಟ್ರಲ್ಲಾ..

ಇತಿ ನಿಮ್ಮ ಪ್ರೀತಿಯ,

http://shivagadag.blogspot.com

ಅನಿಕೇತನ ಹೇಳಿದರು...

Superb vikaasa..:) superb :)

Pramod ಹೇಳಿದರು...

ಚೆನ್ನಾಗಿದೆ..

@ಪ್ರದೀಪ್
ಆ೦ಗ್ಲ ಆವೃತ್ತಿ ಇಲ್ಲಿದೆ..ನೋಡಿ..
http://chittychat.wordpress.com/2007/12/11/a-daughters-letter-to-her-dad/

Shayari ಹೇಳಿದರು...

ತುಂಬ ಖುಷಿ ಕೊಡ್ತು ಈ ಲೇಖನ .Good one Vikas!

ಶಿವಶಂಕರ ವಿಷ್ಣು ಯಳವತ್ತಿ ಹೇಳಿದರು...

ನನ್ನಿಂದ ಮತ್ತೆರಡು ಬಾರಿ ಓದಿಸಿಕೊಂಡ ಪತ್ರವಿದು..

ತುಂಬಾ ಚನ್ನಾಗಿದೆ

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

http://shivagadag.blogspot.com

shreyas ಹೇಳಿದರು...

tumba channagide... nanage kannadadalli type madakke baralla dayawittu kshamisi...