ಪುಟಗಳು

ಶುಕ್ರವಾರ, ಜನವರಿ 30, 2009

ಎಲ್ಡೆಕ್ರೆ ಹೊಲ, ಮಧ್ಯ ಬಾವಿ ಸಾಕು

ಒಂದು ವೈಯಕ್ತಿಕ ಟಿಪ್ಪಣಿ :


ಪುಟ್ಟಿ ಕೇಳಿದಳು. ಇದೆಲ್ಲಾ ಬರ್ಕಂಡು ಏನಾದ್ರೂ ಉಪ್ಯೋಗ ಆಗುತ್ತೆ ಅನ್ಕಂಡಿದಿಯಾ? ಅದ್ರಿಂದ ಏನೂ ಸಾಧನೆಯಾಗಲ್ಲ, ಯಾರೂ ಉದ್ಧಾರಾಗಲ್ಲ. ಸುಮ್ನೆ ಬ್ರ್ಯಾಂಡ್ ಆಗ್ತೀಯಾ ಅಷ್ಟೆ. ಅಷ್ಟು ಹೊತ್ತಿಗೆ ನಂಗೂ ಹಾಗೇ ಅನಿಸಿತ್ತು. ಸುಮ್ನೆ ಯಾಕೆ ಇವೆಲ್ಲಾ. ಈ ಧರ್ಮ, ಜಾತಿ, ಸಂಸ್ಕೃತಿ, ಸಮಾಜ, ರಾಜಕೀಯ, ಫೆಮಿನಿಸಂ, ಕಮ್ಯುನಿಸಂ , ಕ್ರಿಟಿಸಿಸಂ ಮುಂತಾದವುಗಳು ಬಗೆಹರಿಯದಂತವು. ಅವುಗಳ ಚರ್ಚೆ ವ್ಯರ್ಥ. ಚರ್ಚೆಗಳಿಂದ ಅಭಿಪ್ರಾಯ ಬದಲಿಸಿಕೊಳ್ಳೋ ಮನಃಸ್ಥಿತಿ ಅಥವಾ ಹೌದು ಅಂತ ಮನಃಪೂರ್ವಕವಾಗಿ ಒಪ್ಪಿಕೊಳ್ಳೋದು ಎಲ್ಲಾ ಶಂಕರಾಚಾರ್ಯರ ಕಾಲಕ್ಕೇ ಮುಗಿದು ಹೋಯಿತೇನೋ. ಸುಮ್ಮನೇ ಇದೆಲ್ಲಾ ವಾದ, ವಿವಾದ, ಟೀಕೆ, ವಿಮರ್ಶೆ, ಸಮಯ ಹಾಳು, ಮನಸ್ತಾಪ, ಮನಸು ಕೆಡಿಸಿಕೊಳ್ಳುವುದು, ವೈಯಕ್ತಿಕ ಸಂಬಂಧಗಳಲ್ಲಿ ಬೇಸರ, ಅನುಮಾನದ ನೆರಳು, ಸಿಟ್ಟು, ಸೆಡವು ..ಹ್ಮ್... ಯಾವುದೂ ಬೇಡ. ಸದ್ಯಕ್ಕೆ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ, ವೃತ್ತಿಜೀವನದಲ್ಲಿ, ಕೌಟುಂಬಿಕ ಜೀವನದಲ್ಲಿ ಬೆಳೆಯಬೇಕಾದ್ದು ಅಗತ್ಯವಿದೆ, ಸಾಮಾಜಿಕ ಜವಾಬ್ದಾರಿಯಿದೆ, ಓದಬೇಕಾದ ಪುಸ್ತಕಗಳು , ನೋಡಬೇಕಾದ ಸಿನೆಮಾಗಳು ಸಾವಿರವಿದೆ, ಸುತ್ತಬೇಕಾದ ಸ್ಥಳಗಳು ನೂರಿವೆ, ಒಣಗಿನಿಂತಿರುವ ಹವ್ಯಾಸಗಳಿಗೆ ನೀರೆರೆಯಬೇಕಿದೆ, ಕಲಿಯಬೇಕಾದ್ದು ಮುಗಿಯದಷ್ಟಿದೆ. ನಮ್ ಪಾಡಿಗೆ ನಾವ್ ’ತಣ್ಣಗೆ ’ ಬರೆದುಕೊಂಡಿದ್ದರೆ ಆಯಿತು. ವಿಷಯ, ಮಾಹಿತಿ, ವಿಚಾರ ವಿನಿಮಯವಷ್ಟೆ ಸಾಕು. ಜನಗಣಮನ ಹಾಡೋಣ, ಎಲ್ಲರೂ ಒಂದಾಗೋಣ, ಊರ್ ಮೇಲೆ ಊರ್ ಬಿದ್ರೂ ..... ತಾನನಾನನಾ...

ಒಟ್ಟಾರೆ ಹೇಳಬೇಕಂದ್ರೆ , "ಮೊದ್ಲೇ ರಿಸೆಷನ್ ಟೈಮು, ನಮಗ್ಯಾಕ್ ಸ್ವಾಮಿ ಊರ್ ಉಸಾಬರಿ ಎಲ್ಲಾ? ನಮಿಗ್ ಬೇಕಾಗಿರದು ನಮ್ ಎಲ್ಡೆಕ್ರೆ ಹೊಲ, ಮಧ್ಯದಲ್ಲೊಂದು ಬಾವಿ. ಸರ್ಕಾರದವ್ರು ಕರೆಂಟ್ ಕೊಟ್ರೆ ಪಂಪ್ ಹಾಕಿಸ್ತೀನಿ, ಇಲ್ಲಾಂದ್ರೆ ಕೈಯಲ್ಲೇ ಹೊಡೀತೀನಿ. ರಾತ್ರಿ ಮುದ್ದೆ ಉಂಡು ನೆಮ್ಮದಿಯಾಗಿ ಮನಿಕ್ಕಂಡು ಬೆಳಗ್ಗೆದ್ದು ಗೇಯಕ್ಕೋಯ್ತಿನಿ . ನಮ್ ಹೊಲದಲ್ಲಿ ಸರಿಯಾಗಿ ಬೆಳೆ ಬಂದ್ಮೇಲೆ ಬೇರೆ ಮಾತು. ಅಷ್ಟೆ." :)


**********

34 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ- ಹೇಳಿದರು...

Good Boy :) ಈ ಪುಟ್ಟಿ ಯಾರು? :) ಅದಿತಿಗೆ ಇನ್ನೂ ಮಾತು ಬಂಜಿಲ್ಲೆ ಸರಿಯಾಗಿ :-P

ಕಟ್ಟೆ ಶಂಕ್ರ ಹೇಳಿದರು...

ಜನವರಿ ಕಂತು ಮುಗೀತು ಅಂದೋನು, ಮುಂದಿನ ತಿಂಗಳ ಕಂತಣ್ಣ ಅಡ್ವಾನ್ಸಾಗೇ ಕೊಟ್ಟಿದ್ಯಾ ?
ಅದ್ಸರಿ, ತೇಜಕ್ಕ ಕೇಳಿದ ಹಾಗೆ ಪುಟ್ಟಿ ಯಾರು? ಸುಮಾರ್ ಸಲ ಹೇಳಿದ್ಯಾ.
ಅದೇನೋ ಕರೆಂಟು, ಪಂಪು, ಕೈ, ಬೆಳೆ..ಛೆ ಛೆ ಛೆ..
ಸರಿಯಾಗಿ ಹೇಳಪ್ಪ. ಅದ್ಸರಿ, ಇದ್ದಕಿದ್ದ ಹಾಗೆ ಈ ಥರ ಏನೇನೋ ಮಾತು ಆಡ್ತಾ ಇದೀಯಲ್ಲ..
ಇತ್ತೆಚಿಗೆ ಏನಾದರೂ ಜೆ.ಡಿ.ಎಸ್ ಭಾಷಣ ಕೆಳುದ್ಯಾ ?

ಕಟ್ಟೆ ಶಂಕ್ರ

ಚಿತ್ರಾ ಹೇಳಿದರು...

ನೀವ್ ಹೇಳೋದೂ ನಿಜ ಕಣಣ್ಣೋ !
ಸುಮ್ನೆ ಯಾಕ್ ಬೇಕ್ ಊರ ಉಸಾಬರಿ ? ಅಂಗಂತ ಸುಮ್ನೆ ಕೂತ್ಗತೀನಿ ಅಂದ್ರೆ ನಮ್ಮಷ್ಟಕ್ಕೆ ನಮ್ಮನ್ನ ಬಿಟ್ ಬಿಡ್ತಾರಾ .. ಅದೂ ಇಲ್ಲ ತಾವಾಗ್ ಬಂದು ಕಾಲ್ ಎಳೀತಾರೆ . ಇರ್ಲಿ ಬಿಡಣ್ಣೋ . ಸುಮ್ನೆ ನಿಮ್ಮ ಎಲ್ಡೆಕ್ರೆ ಹೊಲ, ಮಧ್ಯ ಬಾವಿ ಮತ್ತೆ ’ನಿಂ ಪುಟ್ಟಿ " ಜೊತೇಲಿ ನೆಮ್ಮದಿಯಾಗಿರು

ಸಂದೀಪ್ ಕಾಮತ್ ಹೇಳಿದರು...

ವಿಕಾಸ್,
ರಿಸೆಶನ್ ಗೂ ಹೊಲ ಉಳೋದಕ್ಕೂ ಏನು ಸಂಬಂಧ ಅಂತಾ ತಿಳೀತಾ ಇಲ್ಲ.ನೀವು ಅನವ್ಶ್ಯಕವಾಗಿ ರೈತರನ್ನು ಎಳೆ ತರ್ತಾ ಇದ್ದೀರ.
ನಿಮಗೆ ಎರಡೆಕ್ರೆ ಹೊಲ ಇದೆ ಅಂತ ಹೇಳಿದ್ರಿ ಆದ್ರೆ ಎಲ್ಲಿದೆ ,ಅದರಲ್ಲಿ ನಿಮ್ಮ ಪಾಲೆಷ್ಟು ,ಹೊಲದ ಫಲವತ್ತತೆ ಏನು ,ಅದರಲ್ಲಿ ಏನ್ ಬೆಳೀಬಹುದು ಯಾವ ಮಾಹಿತಿಯನ್ನು ನೀವು ನೀಡಿಲ್ಲ.ಇದು ಓದುಗರನ್ನು ಯಾಮರಿಸುವ ಹಾಗಿದೆ .
.
.
.
.
.
ಇದರ ಅರ್ಥ ಇಷ್ಟೆ ನೀವು ಏನೇ ಮಾಡಿದ್ರೂ ’ಟೀಕಾಕಾರ’ರಿಂದ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ.
ಹೊಲಕ್ಕೇ ಬಂದು ವಾದ ಮಾಡ್ತಾರೆ ಅಷ್ಟೆ!

ಅನಾಮಧೇಯ ಹೇಳಿದರು...

"ಬಡವನಿಗೆ ಬೆನ್ನೆಲ್ಲ ಹೊಟ್ಟೆ" ಅನ್ನುತ್ತಾರೆ. ನಮ್ಮ ಕಥೆ ಒಂತರಹ ಹಾಗೆ ಆಗಿದೆ! ಇಲ್ಲದ ಉಸಾಪರಿ. ಅಮ್ಮ ಹೆಳಿದ ಹಾಗೆ ಕಂಡವರ ಮನೆ ಪಂಚಾಯಿತಿಕೆಯನ್ನು ನಾವ್ಯಾಕೆ ಮಾಡ್ಬೆಕು ಅಂತಾ ನನಗೂ ಸಾಕಷ್ಟು ಸಲ ಅನ್ನಿಸತ್ತೆ. ಆದ್ರೆ ಪ್ರತಿಯೊಬ್ಬನಿಗೂ ದೇಶದಲ್ಲಿ ಜವಾಬ್ದಾರಿ ಇದೆ. ಭಯೋತ್ಪಾದಕನೊಬ್ಬ ತನ್ನ ಇಡೀ ಜೀವನವನ್ನು ತನ್ನ ದೇಶದ ದ್ಯೇಯಕ್ಕಾಗಿ ಕೊಡುತ್ತಾನೆ. ನಾವು ನಮ್ಮ ಜಂಜಾಟಗಳ ನಡುವಿನ ಸ್ವಲ್ಪ ಸಮಯವನ್ನಾದರೂ ಸಮಾಜಕ್ಕೆ ಕೊಡಬಾರದಾ ಅನ್ನಿಸತ್ತೆ ಎಷ್ಟೋ ಸಲ. ನಾನು ಈಗ ನಿಮ್ಮ ಹಾಗೆ ಆಲೋಚನೆ ಮಾಡ್ತಾ ಇದ್ದೇನೆ. ಯಾರ ಸುದ್ದಿಗೂ ಹೋಗದೆ ನನ್ನ ಪಾಡಿಗೆ ನಾನ್ಯಾಕೆ ಬದುಕುಬಾರದು ಅಂದುಕೊಳ್ಳುತ್ತಿದ್ದೇನೆ. ಸುಮಾರು ನಾಲ್ಕಾರು ತಿಂಗಳು ಹಾಗೆ ಬದುಕಿದ್ದೆ. ಮತ್ತೆ ಈಗ ಆ ಬದುಕಿಗೆ ಚಾಲನೆ ಕೊಡುತ್ತೇನೆ. ನಾನು ನಿಮ್ಮ ಜತೆ ಇರುವೆ!
ವಿನಾಯಕ ಕೋಡ್ಸರ

neelanjala ಹೇಳಿದರು...

ಅಯ್ಯೋ ರಾಮ, ಇನ್ನೂ ಮುಂದೆ ಅಲ್ಲೆಲ್ಲೂ ಚರ್ಚೆ ಮಾಡಲ್ವಾ! ಶೇ!!
ನಿಮ್ಮ ವಾದಾಟಗಳನ್ನು ನೋಡುತ್ತ ಕೂರ್ ಕೂರ್ ತಿನ್ನುತ್ತಾ ಗಮ್ಮತ್ತಾಗಿ tea ಹೀರುತಿದ್ದ ನನ್ನ ಸಂತೋಷಕ್ಕೆ ಯಾರೋ ಕಣ್ಣು ಹಾಕಿದ್ದಾರೆ ನೋಡಿ. ;)

ಹಂಸಾನಂದಿ Hamsanandi ಹೇಳಿದರು...

ಮುದ್ದೆ ಮಾಡ್ಕೊಂಡು ತಿಂತೀವಿ ಅಂತ ಹೇಳಿ ನೀವು ಸಜ್ಜೆ ರೊಟ್ಟಿ, ಜೋಳದ ರೊಟ್ಟಿ ಅಕ್ಕಿರೊಟ್ಟಿ ತಿನ್ನೋರನ್ನೆಲ್ಲ ಅವಮಾನ ಮಾಡ್ತಿದೀರಾ , ಹುಷಾರ್!!

sunaath ಹೇಳಿದರು...

ಎಲ್ಡೆಕ್ರೆ ಹೊಲ, ಮಧ್ಯ ಬಾವಿ....ಎಲ್ರೀ ಇಷ್ಟೆಲ್ಲಾ ಸಿಗುತ್ತೆ?

Supreeth.K.S ಹೇಳಿದರು...

ಛೇ, ಇಷ್ಟೆಲ್ಲಾ ಬೇಜಾರು ಮಾಡಿಕೊಳ್ಳಬೇಡಿ.
ಚರ್ಚೆಗಳಲ್ಲಿ ಅರ್ಧ ಬೆಂದ ಆಲೂಗಡ್ಡೆಗಳೇ ಹೆಚ್ಚು. ಚರ್ಚೆ ನಡೆಸುವುದಕ್ಕೆ ವಿಚಾರ ವಿನಿಮಯಕ್ಕೆ ವಿಚಾರದ ಬಗ್ಗೆ ಸಂಪೂರ್ಣ ತಿಳುವಳಿಕೆ ಇರಬೇಕು. ಸ್ಪಷ್ಟವಾದ ನಿಲುವು ಇರಬೇಕು. ಆಗಲೇ ವಾದದಲ್ಲಿ ಸೋತರೂ ಜೀವನದಲ್ಲಿ ಗೆಲ್ಲಲು ಸಾಧ್ಯವಾಗುತ್ತದೆ. ಆದರೆ ಇವೆರಡೂ ಇಲ್ಲದೆ ಸುಮ್ಮನೆ ಸಾಯಂಕಾಲದ ಟೀನೊಂದಿಗೆ ನೆಂಜಿಕೊಳ್ಳುವ ಸ್ನಾಕ್ಸಿನ ಹಾಗೆ ವಾದವನ್ನು ಪರಿಗಣಿಸಿದರೆ ಸೋಲಲು ಸಾಧ್ಯವಾಗುವುದಿಲ್ಲ, ಹಾಗೆಯೇ ಜೀವನದಲ್ಲಿ ಗೆಲ್ಲಲು! ಅಂದರೆ ನಮ್ಮ ನಡುವೆ ಶಂಕರಾಚಾರ್ಯರ ಕಾಲದ ಮಂದಿ ಕಡಿಮೆ ಇದ್ದಾರೆ.
ಆದಷ್ಟು ಬೇಗ ಅಂಥ ಹಲವರು ನಿಮಗೆ ಸಿಕ್ಕಲಿ!

ಸುಪ್ರೀತ್.

ವಿಕಾಸ್ ಹೆಗಡೆ ಹೇಳಿದರು...

@ತೇಜಕ್ಸ್, thanQ
@ಶಂಕ್ರ್, ಇಲ್ಲಾ ತೆಗಿರಿ.. ಆಮೇಲ್ ಹೇಳ್ತೀನಿ ನಿಮ್ಗೆ.
@ಚಿತ್ರಾ, :-) thanQ
@ಸಂದೀಪ್, ಅದಕ್ಕೇ ಹೊಲಕ್ಕೆ ಒಳ್ಳೇ ಬೇಲಿ ಹಾಕೋಣ ಅಂತೀಯಾ? :)
@ಕೋಡ್ಸರ, ಹ್ಮ್.. ಗುಡ್
@ನೀಲಾಂಜಲ, ಏನ್ರೀ ನಮ್ ಟೆನ್ಶನ್ ನಮಿಗಾದ್ರೆ ನೀವು ಮಜಾ ತಗತಾ ಇದ್ರಾ! ನಿಮ್ ಭಯೋತ್ಪಾದನೆ ವಿರುದ್ಧ ಹೋರಾಟನ್ನ ನಾವು ಹೀಗೆ ಕುರ್ ಕುರ್ ತಿನ್ನುತ್ತಾ ನೋಡಿರಲಿಲ್ಲ. ನಿಜ್ವಾಗ್ಲೂ !
@ಹಂಸಾನಂದಿ, ಸಾರ್.. ಒಂದಿನ ಮುದ್ದೆ ತಿಂದ್ರೆ ಇನ್ನೊಂದಿನ ರೊಟ್ಟಿ, ಮತ್ತೊಂದಿನ ತಂಬ್ಳಿ, ಅಪ್ಪೇಹುಳಿ, ಎಲ್ಲಾದೂ ತಿಂದ್ರಾಯ್ತು ಬಿಡಿ :)
@ಸುನಾಥಕಾಕಾ, ಮನಸ್ಸಿದ್ದಲ್ಲಿ ಮಾರ್ಗ:-)
@ಸುಪ್ರೀತು, ಶಂಕರಾಚಾರ್ಯರ ಕಾಲದವ್ರು ಈಗ ಇರಕ್ಕೆ ಸಾಧ್ಯವೂ ಇಲ್ಲ. ಮನುಷ್ಯನ ಆಯಸ್ಸು ಹೆಚ್ಚೆಂದ್ರೆ ೧೦೦ ವರ್ಷ! :) ಸಂಪೂರ್ಣ ತಿಳುವಳಿಕೆ ಇದ್ದ ಮೇಲೆ ವಿಚಾರ ವಿನಿಮಯದ ಅಗತ್ಯವಿರುವುದಿಲ್ಲ. ಚೈತ್ರ ಯಾತ್ರೆ ಮುಂದುವರೆಸಿ.. al d bestu :)

ಅನಾಮಧೇಯ ಹೇಳಿದರು...

ಸ್ವಾಮೀ ಈ ಲೇಖನವನ್ನು ಯಾವ ಅರ್ಥದಲ್ಲಿ ಬರೆದಿರುವಿರಿ ಎನ್ನುವ ಕಲ್ಪನೆ ನಿಮಗಾದರೂ ಇದೆಯೇ ? I dont see any correlation between the article , comments and your replies.
Raghu

ವಿಕಾಸ್ ಹೆಗಡೆ ಹೇಳಿದರು...

@Raghu
Dont try to unnecessarily correlate b/w article, comments and replies. Moreover it is not an 'article'. It's a 'personal note' as mentioned in the subheading. ಅರ್ಥ, ಕಲ್ಪನೆ ಎಲ್ಲಾ ನನಗಿದೆ. thanQ

shivu ಹೇಳಿದರು...

ವಿಕಾಶ್,

ಯಾಕೆ ನಿಮ್ಮ ಬರವಣಿಗೆಯ ದಾಟಿ ಎಲ್ಲೋ ಹೋದ ಹಾಗಿದೆ.......

ಅನಾಮಧೇಯ ಹೇಳಿದರು...

ಎರಡು ಎಕರೆ ಹೊಲ, ಮದ್ಯ ಬಾವಿ, ಪಂಪ್ ಹಾಕಿಸ್ತೀನಿ, ಇಲ್ಲಾಂದ್ರೆ ಕೈಯಲ್ಲೇ ಹೊಡೀತೀನಿ....ತುಂಬ ಚೆನ್ನಾಗಿ ಬರೆದಿರುವಿರಿ... Keep it up....
-Rajeeva

Prabhuraj Moogi ಹೇಳಿದರು...

ಎನಾದ್ರೂ ಮಾಡಿ, ನಿಮ್ಮ ಪಾಡಿಗೆ ಅಂತಾ ನೀವು ಇರೋಕಾಗಲ್ಲ, ಬರೆಯೋದು ಬಿಡಬೇಡಿ, ಬಿಟ್ರೆ ನಿಮ್ಮ ಹೊಲಕ್ಕೆ ಬಂದು ಧರಣಿ ಕೂರ್ತೀವಿ (ಸುಮ್ನೆ ತಮಾಷೆಗೆ)... ನಾವು ಬರೆಯೊದ್ರಿಂದ ಬದಲಾವಣೆಗಳಾಗುತ್ತೊ ಇಲ್ವೊ ಗೊತ್ತಿಲ್ಲ ಆದ್ರೆ ಎಲ್ಲೊ ಯಾರಿಗೊ ಅದ್ರಿಂದ ಎನೊ ಸಹಾಯ, ಇಲ್ಲ ಏನೊ ಖುಷಿಯಾಗಿರತ್ತೆ ಅಷ್ಟೇ..

ತೇಜಸ್ವಿನಿ ಹೆಗಡೆ- ಹೇಳಿದರು...

ಪುಟ್ಟಿ ಯಾರು? :)

ಅನಾಮಧೇಯ ಹೇಳಿದರು...

Vikas, Yaro swagoshiata buddi jeevigala mathige nivu yake kivi kodtira....nimma barvanige munduvarili.

Ashok Uchangi ಹೇಳಿದರು...

ಪ್ರಿಯ ವಿಕಾಸ್
ಸಣ್ಣಪುಟ್ಟ ವಿಷಯಗಳಿಗೆಲ್ಲಾ ನೀವು ಅಧೀರರಾದರೆ ಹೇಗೆ?
ಬ್ಲಾಗ್ ಎನ್ನುವುದು ಬರಿ ಭಾವನೆಗಳಿಗೆ ಸೀಮಿತವಾಗಬಾರದು.ಕೆಲವೋಂದು ವಿಷಯಕ್ಕೆ ಒಂದಷ್ಟು ಚರ್ಚೆ,ವಾದಗಳಿಂದ ಪರಿಹಾರ ಸಿಗುವಂತಾಗಬೇಕು,ಕನಿಷ್ಟ ಪಕ್ಷ ನಾಲ್ಕು ಜನರನ್ನು ಚಿಂತನೆಗೆ ಹಚ್ಚುವಂತಿರಬೇಕು.ಇದು ನಮ್ಮಿಂದ ಸಾಧ್ಯವಾದರೆ ಅದಕ್ಕೆ ಸಂತೋಷಪಡೋಣ.ಈ ಪ್ರಯತ್ನ ನೀವು ಮಾಡಿದ್ದೀರಿ.ರೈತರಾದರೂ ಸರಿ ಇದೇ ಪ್ರಯತ್ನ ಮುಂದುವರೆಸಿ.
ವಿಶ್ವಾಸವಿರಲಿ
ಅಶೋಕ ಉಚ್ಚಂಗಿ
http://mysoremallige01.blogspot.com/

ಅನಾಮಧೇಯ ಹೇಳಿದರು...

ಇಂತ ಸಾಹಿತ್ಯದಲ್ಲಿ ಶಂಕರಾಚಾರ್ಯ, ಜನಗಣಮನ ಶಬ್ಧಗಳ ಬಳಕೆ ಬೇಕಿತ್ತಾ?, ಇದೆಲ್ಲ ವಿಕಾಸವಾದ ಪ್ರವಾದಕರು, ಅನುಯಾಯಿಗಳಿಗೆ ಎಷ್ಟು ಖುಷಿ ಕೊಡುವದೋ ಆ ದೇವರೇ ಬಲ್ಲ .. ಕನಿಷ್ಟ ಪಕ್ಷ ನಾಲ್ಕು ಜನರನ್ನು ಚಿಂತನೆಗೆ ಹಚ್ಚುವಂತಿದೆ !!!

ವಿಕಾಸ್ ಹೆಗಡೆ ಹೇಳಿದರು...

@shivu, ಹೀಗೆ ಸುಮ್ಮನೇ..

@ರಾಜೀವ್ & anonymous, ಥ್ಯಾಂಕ್ಯು

@ಪ್ರಮೋದ್ & ಅಶೋಕ್, ನೀವು ಹೇಳೋದು ನಿಜ.. ಆದ್ರೂ... ಹ್ಮ್.. ಇರ್ಲಿ. thanx

ಸಂತೋಷಕುಮಾರ ಹೇಳಿದರು...

ಯಾವ ಮರದ ಕೆಳಗೆ ಈ ಜ್ಞಾನೋದಯವಾಯಿತು? ಮತ್ತೆ ಏನು ಎಡವಟ್ಟು ಮಾಡಿದೆ ಮೊದ್ಲು ಹೇಳು? :)

ಶ್ರೀನಿಧಿ.ಡಿ.ಎಸ್ ಹೇಳಿದರು...

Enale, kelsa hotha enta kathe?:)

NiTiN Muttige ಹೇಳಿದರು...

:)

ವಿಕಾಸ್ ಹೆಗಡೆ ಹೇಳಿದರು...

@ಸಂತೋಷ, ಏನ್ ಎಡವಟ್ಟೂ ಆಗಿಲ್ಲೋ ಮಾರಾಯ, ಇಲ್ಲೆ ಕಂಪ್ಯೂಟರ್ ಮುಂದೆಯೇ ಜ್ಞಾನೋದಯ ಆಗಿದ್ದು.

@ನಿಧಿ, ಅದೊಂದು ಬಾಕಿ ನೋಡು !

@ಮುತ್ತಿಗೆ, :-) :-)

ಚಿತ್ರಾ ಕರ್ಕೇರಾ ಹೇಳಿದರು...

ವಿಕ್ಕಿ ಸಾರ್ರು..ರಿಷೆಷನ್ ಟೆನ್ಸ್ಯನಾ?..ಏನ್ರೀ ಎಲ್ಲಾ ಮುಗಿದುಹೋಯುತು ಅಂತಾ ಜನಗಣಮನಾ ಹಾಡ್ತಾ ಇದ್ದೀರಾ..(:)
-ಚಿತ್ರಾ

ಅನಾಮಧೇಯ ಹೇಳಿದರು...

@Raghu, u need to only appreciate blog writers. Critic reviews not allowed.

ಸುಶ್ರುತ ದೊಡ್ಡೇರಿ ಹೇಳಿದರು...

"ನಮ್ ಎಲ್ಡೆಕ್ರೆ ಹೊಲ, ಮಧ್ಯದಲ್ಲೊಂದು ಬಾವಿ. ಕೊಟ್ರೆ ಪಂಪ್ ಹಾಕಿಸ್ತೀನಿ, ಇಲ್ಲಾಂದ್ರೆ ಕೈಯಲ್ಲೇ ಹೊಡೀತೀನಿ. "

-ಛೀ! ಒಂಥರಾ ಮೋಟುಗೋಡೆ ಸೆಂಟೆನ್ಸ್ ಇದ್ದಂಗಿದೆ! :P

ವಿಕಾಸ್ ಹೆಗಡೆ ಹೇಳಿದರು...

@chitra madammu,
ರಿಶೆಷನ್ ಟೆನ್ಷನ್ನು ನಂಗೆ ಸದ್ಯಕ್ಕಿಲ್ಲ. ಇದು ಬೇರೆಯೇ ಟೆನ್ಷನ್ನು.

@Raghu & supporting anonymous
ಆಯ್ತು, ಕ್ಷಮಿಸಿಬಿಡಿ. u r free to criticise.

@sush,
ಹ್ಹ ಹ್ಹ.. ಕಾಮಾಲೆ ಕಣ್ಣಿಗೆ.... :)

Hema Powar ಹೇಳಿದರು...

ವಾದಗಳು ಚರ್ಚೆಗಳನ್ನೆಲ್ಲ ಹೀಗೆ ಜಾಸ್ತಿ ಮಾಡಿದ್ರೆ ತಲೆಕೆಡಿಸಿ ಕೂರಿಸ್ತವೆ. ನಿಮ್ ಪುಟ್ಟಿ ಯಾರೋ ಸರಿಯಾಗೇ ಹೇಳಿದಾರ್ರೀ, ತಲೆಗೆ ಒಂಚೂರು ರೆಸ್ಟ್ ಕೊಡ್ರಿ. ಮೊದಲೇ ರಿಸೆಶನ್ನು ನಮ್ ನಮ್ ಕೆಲಸ ಉಳಿಸ್ಕೊಂಡು ನೆಮ್ಮದಿಯಾಗಿ ಊಟ ಮಾಡ್ಕೊಂಡು ಮಲ್ಗಣ. ಶಂಕ್ರಾಚಾರ್ಯ, ರಾಮಾನುಜಚಾರ್ಯರನ್ನೆಲ್ಲ ಹುಡುಕೋ ಕೆಲಸ ಯಾಕೆ? ಅಲ್ವೇ?

ನವಿಲುಗರಿ ಹೇಳಿದರು...

ವಿಕಾಸಪ್ಪ..ಊರಿಗೆ ಗೇಯಕ್ ಯಾವಗ ಹೋಗೋದು ನೀನು? ಪ್ಲೀಸ್ ಬೇಗ ಹೇಳ್ಬಿಡು ;)

ಬಾಲು ಹೇಳಿದರು...

ಅಯ್ಯಯೊ ಸಾವಿರ ಪಾಲು ಸತ್ಯ!!!
ಈ ರಿಸೆಶನ್ ಟೈಮ್ ನಲ್ಲಿ ನಾವು ದೇಶ ಬಾಷೆ, ಕಮ್ಯೂನಿಸಮ್, ಆ ಇಸಮ್, ಈ ಇಸಮ್ ಅಂತ ಬಯ್ದಾಡಿ, ನೆಮ್ಮದಿ ಕಳೆದು ಕೊಳ್ಳೋ ಬದಲು ಎರಡು ಎಕರೇ ಜಾಮೀನು ಮಾಡೋದು ಒಳ್ಳೇದು!!!

GuruGhantal ಹೇಳಿದರು...

hu swami naa helo hange...raitha, raajakarani,vaidya,shikshka haagu poojararige recession illa...atleast they can all be self sufficient.. aadru nimma lekhanada pratikriyegala bagge ondu vishya...dayavittu ellavannu manassige hachkobedi..jeevanadalli ella sandarbhagaligu lighter, tighter and brighter side irutte...namge hege kansitto adu namma paridhi ashte

Sree ಹೇಳಿದರು...

exactly!! elDekre hola sikkbiTre saak nODi nanagU!:))

ಅನಾಮಧೇಯ ಹೇಳಿದರು...

Thanx Navilugari, Hema, Balu, Guru, Shree

-vikas