ಪುಟಗಳು

ಮಂಗಳವಾರ, ಡಿಸೆಂಬರ್ 2, 2008

ಶೋಕ-ನಗುಮುಖ

ಎಲ್ಲೆಲ್ಲೂ ಭಯೋತ್ಪಾದನೆಯ ಕರಿ ಮೋಡ ಮುಸುಕಿಕೊಂಡಿರೋ ಈ ಸಂದರ್ಭದಲ್ಲಿ ನಿನ್ನೆ ಆಕಾಶದಲ್ಲಿ ನಗುಮುಖವೊಂದು ಕಂಡಿತ್ತು. ಅದ್ಯಾಕೋ ಅದನ್ನ ಹುಡುಗಿಯ ಹೊಳೆಯುವ ಕಣ್ಣುಗಳಿಗೆ, ಸುಂದರ ನಗುವಿಗೆ ಸುಮ್ಸುಮ್ನೇ ಹೋಲಿಸುವ ಮನಸ್ಸಾಗುತ್ತಿಲ್ಲ. ಶೋಕಸೂಚಕದಂತಿದ್ದ ಕಪ್ಪು ಆಕಾಶದಲ್ಲಿ ಚಂದ್ರ,ಶುಕ್ರ, ಗುರುಗಳ ನೋಟ ನಮ್ಮ ದೇಶಕ್ಕೂ, ಮನಸ್ಸಿಗೂ ಆವರಿಸಿರುವ ಕಪ್ಪುಛಾಯೆಯ ಮಧ್ಯದಲ್ಲೂ ಆಶಾಭಾವನೆಯ ಭಾರತೀಯನ ನಗುಮುಖವನ್ನು ಪ್ರತಿನಿಧಿಸುವಂತೆ ಕಂಡಿತು. ಆದರೆ ಸಂತೃಪ್ತಿಯಿಂದ ಸ್ವಲ್ಪ ಹೊತ್ತು ನೋಡಲು ಮತ್ತದೇ ಕರಿಮೋಡಗಳು ಅಡ್ಡಿಯಾದವು.ಫೋಟೋಕೃಪೆ: ನನ್ ತಂಗಿ

7 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

Harish - ಹರೀಶ ಹೇಳಿದರು...

ಮೋಡ ಅಡ್ಡ ಬಂದು ನಂಗೆ ನೋಡಕ್ಕೆ ಆಗಲ್ಲೆ :-(

ಅನಾಮಧೇಯ ಹೇಳಿದರು...

thanx for supporting

shreedevi kalasad ಹೇಳಿದರು...

nangoo nodakke aaglilla. ninnantha moda adda bandhittu :(

shivu K ಹೇಳಿದರು...

ನನಗೂ ನೋಡಲಿಕ್ಕೆ ಆಗಲಿಲ್ಲ. ನೋಡಿದ್ದರೆ ಖಂಡಿತ ಫೋಟೊ ತೆಗೆಯುತ್ತಿದೆ. ಇಲ್ಲಿ ಸ್ವಲ್ಪ ಮಳೆಯೂ ಬಂತು. ನಂತರ ಮೋಡದ ವಾತಾವರಣವಿತ್ತು. ಅಲ್ಲ್ಲಿ ತಪ್ಪಿಸಿಕೊಂಡ ಅವಕಾಶ ನಿಮ್ಮ ಬ್ಲಾಗಿನಲ್ಲಿ ನೋಡಲಿಕ್ಕೆ ಸಿಕ್ಕಿತಲ್ಲ. thanks.

shreeshum ಹೇಳಿದರು...

ಚಂದ್ರ ಗುರು ಮತ್ತು ಶುಕ್ರರು ನಮ್ಮನ್ನು ನೋಡಿ ನಕ್ಕಂತೆ ಅನ್ನಿಸುವ ಬಾನಂಗಳದ ಚಿತ್ತಾರವನ್ನು ಶಾಶ್ವತವಾಗಿ ದೊರಕಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

ತೇಜಸ್ವಿನಿ ಹೆಗಡೆ- ಹೇಳಿದರು...

:)