ಪುಟಗಳು

ಸೋಮವಾರ, ಸೆಪ್ಟೆಂಬರ್ 1, 2008

ಫೋಟೋ ಟೆರರಿಸಂ !


ಮೊನ್ನೆ ಮೊನ್ನೆ ಗೆಳೆಯನೊಬ್ಬನ ಮದುವೆಯಿತ್ತು. ಮಹರಾಯ ಹತ್ತಿರದವನಾದ್ದರಿಂದ ತಾಳಿ ಕಟ್ಟಬೇಕಾದರೆ ನಾವೆಲ್ಲಾ ಹಾಜರಿರಬೇಕಿತ್ತು. ಮೊದಲೇ ತಡವಾಗಿದ್ದರಿಂದ ಎದ್ದೆನೋ ಬಿದ್ದೆನೋ ಅಂತ ೧೫ ಕಿ.ಮಿ. ಬೈಕೋಡಿಸಿಕೊಂಡು ಹೋಗಿದ್ದಾಯಿತು. ಎಲ್ಲರಿಗೂ ಹಲ್ಲು ಕಿರಿದು ಸುಧಾರಿಸಿಕೊಂಡು ಆದಮೇಲೆ ಗಟ್ಟಿ ಮೇಳ ಶುರುವಾಗುತ್ತಿದ್ದಂತೇ ಅದೆಲ್ಲಿದ್ದರೋ ಈ ಫೋಟೋ ಗ್ರಾಫರುಗಳು ೩-೪ ಜನ ಬಂದು ಮಂಟಪದ ಮುಂದೆ ನಿಂತು ಫೋಟೋ ತೆಗೆಯಲು ಶುರುಮಾಡಿಬಿಟ್ಟರು. ಜೊತೆಗೆ ಈಗ ತಮ್ಮ ಡಿಜಿಟಲ್ ಕ್ಯಾಮರಾಗಳು, ಸೆಲ್ ಫೋನುಗಳಲ್ಲಿ ಫೋಟೋ ತೆಗೆದುಕೊಳ್ಳುವ ಪುಕ್ಸಟ್ಟೆ ಫೋಟೋಗ್ರಾಫರುಗಳು, ಚಿಳ್ಳಿಪಿಳ್ಳೆಗಳು ಎಲ್ಲಾ ಸೇರಿಕೊಂಡು ಸುತ್ತಲೂ ಕೋಟೆಕಟ್ಟಿ ತಾಳಿಕಟ್ಟುವುದನ್ನೇ ನೋಡದಂತೆ ಮಾಡಿಬಿಟ್ಟರು. ಇದ್ದುದರಲ್ಲೇ ಅಂದಾಜು ಮಾಡಿ ಅಕ್ಷತೆ ಕಾಳುಗಳನ್ನು ಗುರಿ ಇಟ್ಟು ಎಸೆದು ಸಮಾಧಾನ ಪಟ್ಟಿದ್ದಾಯಿತು.ಹಿಂದಿನ ವಾರದಲ್ಲಿ ಚೇತನಾ ತೀರ್ಥಹಳ್ಳಿಯವರ ಭಾಮಿನಿ ಷಟ್ಪದಿ ಪುಸ್ತಕದ ಬಿಡುಗಡೆಯಿತ್ತು. ಮೊದ ಮೊದಲು ಎಲ್ಲಾ ಚೆನ್ನಾಗಿ ನೆಡೆಯಿತು. ಆದರೆ ಈಗ ಪುಸ್ತಕ ಬಿಡುಗಡೆ ಎಂದು ಘೋಷಿಸಿದ್ದೇ ತಡ ೮-೧೦ ಫೋಟೊಗ್ರಾಫರು ಗಳು ವೇದಿಕೆಯನ್ನು ಯಾವ ಪರಿ ಸುತ್ತುವರೆದು ಬಿಟ್ಟರೆಂದರೆ ಅದ್ಯಾರು ಪುಸ್ತಕ ಬಿಡುಗಡೆ ಮಾಡಿದರೋ, ಅಲ್ಲಿ ಅದೇನು ಆಯಿತೋ ಒಂದೂ ತಿಳಿಯಲಿಲ್ಲ. ಸುಮಾರು ಒಂದೆರಡು ನಿಮಿಷ ನೆಡೆದ ಸತತ ಫೋಟೋ ಫ್ಲಾಷುಗಳಿಗೆ ವೇದಿಕೆಯಲ್ಲಿದ್ದವರೂ ಹಿಂಸೆ ಪಡುತ್ತಿದ್ದುದು ಕಂಡುಬಂತು. ಪುಸ್ತಕ ಬಿಡುಗಡೆ ನೋಡಲು ಖುದ್ಧಾಗಿ ಹೋದವರು ಪುಸ್ತಕ ಬಿಡುಗಡೆ ಆಯಿತು ಎಂದು ಕೆಳಗೆ ಕುಳಿತುಕೊಂಡು ತಿಳಿದುಕೊಳ್ಳಬೇಕಾಯಿತು. ಎಂತದೂ ಕಾಣ್ತನೇ ಇಲ್ಯಲೇ, ಸಾಯ್ಲಿ ಅಂತ ಶ್ರೀನಿಧಿ ಗೊಣಗಿದ. ನಾಳೆ ಫೋಟೋ ಸಿಗ್ತು ಅದ್ರಲ್ಲೇ ನೋಡ್ಕೋ ಅಂತ ನಾನಂದೆ. ಸುಶ್ರುತ ಹೌದು ಅಂತ ತಲೆ ಅಲ್ಲಾಡಿಸಿದ. ನನ್ನ ಪಕ್ಕದಲ್ಲಿ ಕೂತಿದ್ದ ಬಿಳಿಗಡ್ಡದ ವಯಸ್ಸಾದವರೊಬ್ಬರು ಹ್ಹ ಹ್ಹ ಹ್ಹ ಎಂದು ನಕ್ಕರು. ಬಹುಶಃ ಇಂತದ್ದು ಬಹಳ ಅನುಭವ ಆಗಿದೆಯೆನೋ ಅವರಿಗೆ ಅವರ ಸರ್ವೀಸಿನಲ್ಲಿ :)ಮೇ ಫವರ್ ಮೀಡಿಯಾ ಹೌಸ್ ಸಂಸ್ಥೆಯಿಂದ ಫಿಶ್ ಮಾರ್ಕೆಟ್ ಎಂಬ ಒಳ್ಳೆಯ ಕಾರ್ಯಕ್ರಮವೊಂದು ನೆಡೆಯುತ್ತದೆ. ಖ್ಯಾತ ಕವಿ, ಬರಹಗಾರ, ಕಲಾವಿದ ಯಾರಾದರೊಬ್ಬರ ಜೊತೆ ನಮ್ಮ ಒಂದು ಸಂಜೆಯನ್ನು ಸುಂದರವಾಗಿಸುವ ಕಾರ್ಯಕ್ರಮವದು. ಮೊನ್ನೆ ಶನಿವಾರ ಅದಕ್ಕೂ ಹೋಗಿದ್ದೆ. ದುಂಡಿರಾಜ್ ಬಂದಿದ್ದರು. ಅಬ್ಬಾ, ಕಾರ್ಯಕ್ರಮ ಶುರುವಾದಾಗಿಂದ ಮೂರು ಜನ ಹುಡುಗಿಯರು ಅದೆಷ್ಟು ಫೋಟೋಗಳನ್ನು ತೆಗೆದರು ಎಂಬುದಕ್ಕೆ ಲೆಕ್ಕವಿಲ್ಲ. ಹುಡುಗಿಯರೇನೋ ಚೆನ್ನಾಗಿಯೇ ಇದ್ದರು. ಹಾಗಂತ ಎಷ್ಟು ಅಂತ ಫೋಸು ಕೊಡೋದು ನಾವು. ದುಂಡಿರಾಜರ ಹನಿಗವನಗಳನ್ನು ಕೇಳಿ ಕೆಟ್ಟ ಕೆಟ್ಟದಾಗಿ ಬಿದ್ದೂ ಬಿದ್ದೂ ನಗುತ್ತಿದ್ವಿ. ಮೊದ ಮೊದಲು ಫೋಟೋ ತೆಗೆಯುವಾಗ ಕೂತ ಭಂಗಿ ಸರಿಮಾಡಿಕೊಂಡು, ಕೂದಲು ಸರಿಮಾಡಿಕೊಂಡು ಫೋಸು ಕೊಟ್ಟರೂ ನಂತರ ಫೋಟೋ ಹುಡುಗಿಯರ ಓಡಾಟದ ಪರಿ ನೋಡಿ ಭಯಪಟ್ಟು ಹೆಂಗಾದ್ರೂ ತೆಕ್ಕೊಳ್ಲಿ ಅಂತ ಸುಮ್ಮನಿರಬೇಕಾಯಿತು. ದುಂಡೀರಾಜರ ಚುಟುಕಗಳಿಗಿಂತ ಫೋಟೋ ಪ್ಲ್ಯಾಷ್ ಗಳೇ ಇನ್ನೂ ತಲೆಯಲ್ಲಿ, ಕಣ್ಣಲ್ಲಿ....


*******************

ಅಲ್ಲ,ಇದೆಲ್ಲಾ ಮಾಡುವುದು ತಪ್ಪೂ ಅಂತ ಅಲ್ಲ. ನೆನಪು, ಪ್ರಚಾರ, ಮಾರ್ಕೆಟಿಂಗ್ ಕಾರಣಕ್ಕಾಗಿ ಇದೆಲ್ಲಾ ಮಾಡಬೇಕಾಗುತ್ತದೆ ನಿಜ. ಹಾಗಂತ ನಮ್ಮ ತೊಂದರೆ ನಾವು ಹೇಳಿಕೊಳ್ಳದೇ ಇರೋಕಾಗುತ್ತದಾ? :-)

ಫೋಟೋ ಕೃಪೆ: www.illustratedphotography.com

18 ಕಾಮೆಂಟ್‌ಗಳು:

ಚಿತ್ರಾ ಕರ್ಕೇರಾ ದೋಳ್ಪಾಡಿ.. ಹೇಳಿದರು...

ಹಾಯ್ ವಿಕಾಸ್..
ಸೂಪರ್ ಆಗಿದೆ ಬರಹ..ಯಾಕ್ರೀ 'ಪೊಟೋ ಟೆರರಿಸಂ' ಅಂತೀರಾ? ಏನೋಪ್ಪಾ..ವಿಕಾಸವಾದದಲ್ಲಿ ಹೊಸ '..ವಾದ'ಗಳೇ ಹುಟ್ಟಿಕೊಳ್ಳುತ್ತಿವೆಯಲ್ಲಾ..ಗುಡ್ keep it up!
-ಚಿತ್ರಾ..

Parisarapremi ಹೇಳಿದರು...

ಅಲ್ಲಾ, ಈ ಫೋಟೋಗ್ರಾಫರುಗಳು ಮದುವೆ ಮನೆಯಲ್ಲಿ ಮಾಡುವ ಭಯೋತ್ಪಾದನೆಗಿಂತ ಬೇರೆಯವರು 'ಪುಕ್ಸಟ್ಟೆ'ಯಾಗಿ ಫೋಟೋ ತೆಗೆಯುವುದು ವಾಸಿ ರೀ. ಪಾಪ, ವಧುವರರು ಫೋಟೋ ಅಂದರೇನೇ ಭೀತಿ ಪಡಬೇಕು, ಹಾಗೆ ಮಾಡಿಬಿಡುತ್ತಾರೆ!

ಇಲ್ ಕೈ ಇಟ್ಕೊಳಿ, ಅಲ್ ನೋಡಿ, ಆ ಕಡೆ ತಿರುಗಿ, ಈ ಕಡೆ ತಿರುಗಿ ಅಂತ ಅವರ ತಾಳಕ್ಕೆ ಕುಣಿಯುತ್ತಾರೆ ಪಾಪ. ನಿಮಗೆ ಈ ಅನುಭವ ಆಗಿದೆಯೋ, ಅಥವಾ ಅಗಬೇಕೋ ಇನ್ನೂ? ನನಗಂತೂ ಇನ್ನೂ ಆಗಿಲ್ಲ, ಆಗುವ ಮುನ್ನವೇ ಈ ಭಯೋತ್ಪಾದಕರ ಉಚ್ಛಾಟನಾ ಕಾರ್ಯಕ್ರಮ ಹಾಕಿಕೊಂಡಿದ್ದೇನೆ. ;-)

ತೇಜಸ್ವಿನಿ ಹೆಗಡೆ- ಹೇಳಿದರು...

ವಿಕ್ಸ್,

ವಾದಮಾಡದೇ ನನ್ನ ನಮ್ಮ ಉತ್ತರ ಕರ್ನಾಟಕದಲ್ಲೊಂದು ಗಾದೆ ಮಾತಿದ್ದು ನೆನ್ಪಿದ್ದೋ ಇಲ್ಯೊ ನಿಂಗೆ "ಮೂಗಿಗೂ ಬಾಯಿಗೂ ಹೆಚ್ಚು ದೂರಾ ಇಲ್ಲೆ" ಹೇಳಿ. ನಿನ್ನ ಮದ್ವೆಲಿ ಈ ಫೋಟೋ ಸೆಷನ್ ಛೇ ಛೇ!.. ಅಲ್ಲಾ ಟೆರರಿಸಂ ಇರ್ತೋ ಇಲ್ಯೋ ಹೇಳಿ ನೋಡಾ ಕಾಲನೂ ದೂರಾ ಇಲ್ಲೆ ಬಿಡು :) ಒಂದ್ವೇಳೆ ನೀ ಬೇಡಾ ಅಂದ್ರೂ ‘ಅದು’ ಫೋಟೋ ಸೆಷನ್ ಬೇಕು ಅಂದ್ರೆ ನೀ ತೆಪ್ಪಗೆ ಈ ಟೆರರಿಸಂ ನ ಒಪ್ಪಲೇ ಬೇಕಾಗ್ತು :) :)

ಸಂದೀಪ್ ಕಾಮತ್ ಹೇಳಿದರು...

ಹಿಂದೆ ರೀಲ್ ಕ್ಯಾಮರಾ ಇದ್ದಾಗ ತುಂಬಾ ಜಾಗೃತೆಯಿಂದ ತೆಗೀತ ಇದ್ರು ಫೋಟೋ ,ಆದ್ರೆ ಈಗ ಜಿ.ಬಿ ಗಟ್ಟಲೆ ಮೆಮೊರಿ ಇದೆ ,ಆದ್ದರಿಂದ ಫೋಟೋನೂ ಬೇಕಾಬಿಟ್ಟಿಯಾಗಿ ತೆಗೀತಾರೆ!!

ನನ್ನ ಮೂತಿ ಯಾವ ಕ್ಯಾಮರಾದಲ್ಲಿ ತೆಗೆದರೂ ಹರಳೆಣ್ಣೆ ಕುಡಿದಂಗೆ ಇರುತ್ತೆ :( ಏನ್ ಮಾಡೋದು ??

ಸಂತೋಷಕುಮಾರ ಹೇಳಿದರು...

ನಿನ್ನ ಸಮಸ್ಯಗಳೇ ವಿಚಿತ್ರ ಮಾರಾಯಾ! :)

ವಿಕಾಸ್ ಹೆಗಡೆ/Vikas Hegde ಹೇಳಿದರು...

ಥ್ಯಾಂಕ್ಸ್ ಚಿತ್ರಾ :)

ಪರಿಸರ ಪ್ರೇಮಿಗಳೇ, ನಾವಿನ್ನೂ ಅದಕ್ಕೆ ಬಲಿಪಶು ಆಗಿಲ್ಲಾರೀ.

ತೇಜಕ್ಸ್, ಹೌದು ಏನ್ ಮಾಡೋದು :(

ಸಂದೀಪ, ಯಾರೋ ಹೇಳಿದ್ದು ಹಾಗಂತ, ಒಳ್ಳೇ ಪೇಜ್ ೩ ಪೋಸು ಕೋಡ್ತೀಯ ನೀನು :)

ಸಂತೋಷ, ಜೊತೆಗೆ ಅದಕ್ಕೆ ಪರಿಹಾರಗಳೂ ಇರಲ್ಲ ಅಲ್ವಾ? :)

ಮಿಥುನ ಹೇಳಿದರು...

ಫೊಟೋಕ್ಕಾಗಿ ಒದ್ದಾಡುವವರನ್ನು, ಕೆಮರಾದಲ್ಲಿ ನನ್ನ ಮುಖವೂ ಕಾಣಲಿ ಅಂತ ಚಡಪಡಿಸುವವರನ್ನೂ ವೇದಿಕೆಗಳಲ್ಲಿ ಗಮನಿಸಿ. ಮಜಾ ಇರುತ್ತೆ!
ದೀಪ ಹೊತ್ತಿಸುವ ಹೊತ್ತಿಗೆ ವೇದಿಕೆಯಲ್ಲಿದ್ದವರ ಮುಖ ದೀಪದ ಕಡೆಗೆ ಇರುವುದಿಲ್ಲ, ಕೆಮರಾ ಕಡೆ ಇರುತ್ತೆ. ಸಂಮಾನ, ಪುಸ್ತಕ ಬಿಡುಗಡೆ.. ಹೀಗೆ ಯಾವತ್ತೂ...!

shreeshum ಹೇಳಿದರು...

ಹ ಹ ಹ ಸೂಪರ್ ಹೆಸರು ಮತ್ತು ಟಾಪಿಕ್ .

vijayraj ಹೇಳಿದರು...

Nija neevu hELiddu....
photograapher photo tegyoke aagilla anta madveli puaha taaLi katso kaala barbahudu biDi :)

HM ಹೇಳಿದರು...

ಫೋಟೋ ತೊಳಸಿ ನೋಡ್ಜ್ವಾ ಎಂತದನ? ಎಂತ ಬಂತಳ? ಫೋಟೋನೇ ಬಂತ ಅಥವಾ X-Ray ಪ್ಲೇಟ್ ಬಂತ?

ಚೊಲೋ ಮಾಡಿ ತಲೆ (ಬರಹ) ಹಿಡಿತೆ.ಅಂದ್ರೆ ಒಳ್ಳೆ ಹೆಡಿಂಗ್ ಕೊಡ್ತೆ ಹೇಳಿ. ಅಷ್ಟೆ ಮತ್ತೆ.

Sree ಹೇಳಿದರು...

:))

ಕುಕೂಊ.. ಹೇಳಿದರು...

ಹ ಹ ಹ .....

Seema Hegde ಹೇಳಿದರು...

ವಿಕಾಸ,
ಎಂಥ ಚೊಲೋ topic ಬರದ್ಯಲೋ.
100% ನಿಜ. ನೀನು ಅಕ್ಕಿ ಕಾಳು ಗುರಿ ಇಟ್ಟು ಎಸೆದಿದ್ದು ಮಜಾ ಇದ್ದು. ಮದುವೆ ಮನೆಯಲ್ಲಿ ಹೋಮ ಎಲ್ಲ ಮುಗ್ಸಿ ಒಂದು ಸಲ free ಆದಿ ಹೇಳಷ್ಟು ಹೊತ್ತಿಗೆ ಈ 'ಫೋಟೋ ಗ್ರಹಚಾರ' (Phtographer) ಗಳ ಕಾಟ ಶುರು. ಗಂಡ ಹೆಂಡತಿ ಇಬ್ರೂ ಹಿಂಗೆ ನಿಲ್ಲಿ, ಹಂಗೆ ನಿಲ್ಲಿ, ಕುತ್ತಿಗೆ ಎತ್ತು, ಭುಜ ಬಗ್ಗಿಸು, ಥೋ... ಒಂದಲ್ಲ ಎರಡಲ್ಲ...ಕಡಿಗೆ ಎಲ್ಲದರಲ್ಲೂ ಬರದು ಕಣ್ಣು ಮುಚ್ಚಿದ ಫೋಟೋನೆಯ :)

ವಿಕಾಸ್ ಹೆಗಡೆ/Vikas Hegde ಹೇಳಿದರು...

@ಮಿಥುನ
ಹೌದು, ಒಳ್ಳೇ ಮಜಾ ಇರತ್ತೆ .

@ಶ್ರೀ.ಶಂ
;-) thanx

@hm
:-) ವಿಷ್ಯ ಬರೆಯೋದಕ್ಕಿಂತ ಈ ತಲೆ(ಬರಹ) ಹಿಡಿಯ ಕೆಲಸನೇ ಕಷ್ಟ ನೋಡು

@vijayraj
ಅಂದೊಂದು ಬಿಟ್ಟು ಈಗ ಉಳ್ದಿದ್ದೆಲ್ಲಾ ಫೋಟೋಗೋಸ್ಕರ ಮಾಡಿಸೋದು ಶುರುವಾಗಿದೆ ಈಗಾಗ್ಲೇ. ಇನ್ಮುಂದೆ ಅದೂ ಬರಬಹುದು.. ಕಾದು ನೋಡೋಣ :)

@sree
ಇರುವುದೆಲ್ಲವ ಬಿಟ್ಟು ಒಂದು ಸ್ಮೈಲ್ ಕೊಟ್ಟುಬಿಟ್ರಲ್ಲಾ ! :)

@ಕುಕೂಊ..
ಹ್ಹ ಹ್ಹ ಹ್ಹ (ಜಗ್ಗೇಶ್ - ದೊಡ್ಡಣ್ಣ ಸ್ಟೈಲ್ ನೆನಪಿಸಿಕೊಳ್ಳಿ)

@ಸೀಮಕ್ಕ
ಹ್ಹ ಹ್ಹ... ಪಾಪ ಫೋಟೋಗ್ರಾಫರ್ ಗಳ ಕೆಲಸನೇ ಅದಪ್ಪ. ಅವರನ್ನ ಕರ್ಸದೂ ನಾವೆ ಅಲ್ದ :)

ಶಾಂತಲಾ ಭಂಡಿ ಹೇಳಿದರು...

ವಿಕಾಸ...
ಸೂಪರ್ ಲೇಖನ. ಈ ಫೋಟೋದ್ ಕಾಲ್ದಲ್ಲಿ ಮೊನ್ನೆ ಗೌರಿಪೂಜೆ ಎರೆಡೆರಡುಸಲ ಆತು ನೋಡು. :-)
ನಿನ್ ಲೇಖನ ನೆನಪಾಗಿ ಗೌರಿಪೂಜೆ ಶ್ಲೋಕ, ಮಂತ್ರ ಎಲ್ಲ ಮರ್ತು ನಗು ಬಂತು.

ಚೊಲೊ ಬರದ್ದೆ. ಅಂದ ಹಾಗೆ ನಿನ್ನ ಈ ಲೇಖನ ಅವಧಿಯಲ್ಲಿ ನೋಡಿದಿ. ಅಭಿನಂದನೆ.

ವಿಕಾಸ್ ಹೆಗಡೆ/Vikas Hegde ಹೇಳಿದರು...

thanQ ಶಾಂತಲಕ್ಕ.
ಮೊದಲೆಲ್ಲ ಪೂಜೆ ಮಾಡದನ್ನ ಫೋಟೋ ತೆಕ್ಕಂತಿದ್ರು.
ಈಗ ಫೋಟೋ ತೆಕ್ಕಳಕ್ಕೋಸ್ಕರ ಪೂಜೆ ಮಾಡ್ತಾರೆ :)

mruganayanee ಹೇಳಿದರು...

fantastic sense of humour...

shivu K ಹೇಳಿದರು...

ವಿಕಾಸ್ ಸಾರ್,

ನಿಮ್ಮ ಬರಹ ಓದಿ ನಿಮ್ಮ ಅಭಿಪ್ರಾಯ ಗೊತ್ತಾದಮೇಲೆ ನಿಮ್ಮ ಬಗ್ಗೆ ನನಗೆ ಸಹಾನುಭೂತಿ ಉಂಟಾಯಿತು. ಮತ್ತು ನೀವು ಹೇಳಿದಹಾಗೆ ಫೋಟೋ ಟೆರರಿಸಂ ಅನ್ನೋ ಪದ ನೀವು ಅನುಭವಿಸಿದ ತೊಂದರೆಯಿಂದಾಗಿ ಬಂದಿರಬಹುದೆಂದು ನನಗನ್ನಿಸುತ್ತದೆ. ಪಾಪ ಫೋಟೋಗ್ರಾಫರುಗಳು ನಿಮಗೆ ಆಷ್ಟು ತೊಂದರೆಕೊಟ್ಟಿದ್ದಾರೆ ಅನ್ನಿಸುತ್ತೆ. ಏನು ಮಾಡೋದು ಅವರ ಕೈಗೆ ಹೊಸ Technology ಇರುವ ಕ್ಯಾಮೆರಾ ಕೊಟ್ಟರೂ ಹಳೇ ಭಯೋತ್ಪಾದಕರ ಹಾಗೆ ಎಲ್ಲರಿಗೂ ತೊಂದರೆ ಕೊಡುತ್ತಾರೆ ಅವರಿಗೆ ತಮ್ಮ ಕೆಲಸ ಮುಖ್ಯವಾಗಿರಬಹುದು ಮತ್ತು ನಿಮಗೆಲ್ಲಾ ತೊಂದರೆ ಕೊಡುತ್ತಿದ್ದೇವೆ ಅಂತ ಅವರಿಗೆ ಅರಿವಿಲ್ಲದಿರಬಹುದು. ಇಷ್ಟೆಲ್ಲಾ ಯಾಕೆ ಹೇಳಿದೆನೆಂದರೆ ನಾನು ಅವರ ಹಾಗೆ ಫೋಟೊಗ್ರಾಫರ್ ಆಗಿದ್ದೇನೆ. ಅದರೆ ಅವರಂತೆ ನಾನು ಯಾರಿಗೂ ತೊಂದರೆ ಕೊಡೋದಿಲ್ಲ. ಇತ್ತೀಚಿನ ಭಯೋತ್ಪಾದಕರಂತೆ ನಾನು ಫೋಟೋ ತೆಗೆಯುವುದು ಯಾರಿಗೂ ಗೊತ್ತಾಗುವುದಿಲ್ಲ. ಅದಕ್ಕೆ ಉದಾಹರಣೆ ನಾನು ನನ್ನ ಬ್ಲಾಗಿನಲ್ಲಿ "ಮಾಲ್ಗುಡಿ ಮಿಂಚು ಮಲ್ಲೇಶ್ವರಂ ರೈಲ್ವೆ ನಿಲ್ದಾಣ " ಲೇಖನದ ಜೊತೆಗಿರುವ ಪೋಟೊಗಳಲ್ಲಿ ಇರುವ ಜನಗಳಿಗೆ ನಾನು ಫೋಟೊ ತೆಗೆದಿದ್ದೆ ಗೊತ್ತಾಗಿಲ್ಲ. ಅದು ಲೇಖನವಾಗಿ ಪತ್ರಿಕೆಯಲ್ಲಿ ಬಂದಾಗಲೆ ನನ್ನ ಫೋಟೊ ವಾರಪತ್ರಿಕೆಯಲ್ಲಿ ಬಂದಿದೆಯಲ್ಲ ಯಾರು ತೆಗೆದಿದ್ದು ಅಂತ ಅವರಿಗೆ ಅನಿಸಿದೆ. ಇನ್ನು ನಾನು ಮದುವೆ ಫೋಟೊಗಳನ್ನು ತೆಗೆಯುತ್ತೇನೆ ನೀವು ಹೇಳಿದಂತೆ ಯಾರಿಗೂ ತೊಂದರೆ ಕೊಡದೆ. ಇನ್ನು ನಾನು ಫಿಶ್ ಮಾರ್ಕೆಟ್ಟಿನ ಎಲ್ಲಾ ಕಾರ್ಯಕ್ರಮಗಳಿಗೂ ಬಂದಿದ್ದೇನೆ ಹಾಗೂ ಬರುತ್ತಿರುತ್ತೇನೆ. . ಅಲ್ಲಿ ಸಿಗುವ .
ಶಿವು.ಕೆ