ಪುಟಗಳು

ಸೋಮವಾರ, ಆಗಸ್ಟ್ 18, 2008

ರೇವ್ ಪಾರ್ಟಿ, ಸ್ತ್ರೀಸಂವೇದನೆ, ಕನ್ನಡ etc

’ಮೊಗ್ಗಿನ ಮನಸು’ ಚಿತ್ರದ್ದೊಂದು ದೃಶ್ಯ..

ಅದೊಂದು ಮಂಗಳೂರಿನ ಕಾಲೇಜು. ಮೊದಲನೇ ದಿನ ಪಿ.ಯು.ಸಿ ಕ್ಲಾಸಿನಲ್ಲಿ ಅದ್ಯಾಪಕರು ಇಂಗ್ಲೀಷಿನಲ್ಲಿ ಒಂದು ಜೋಕು ಹೇಳುತ್ತಾರೆ. ಅವರು ಹೇಳಿ ಮುಗಿಸಿದಾಕ್ಷಣವೇ ಎಲ್ಲರೂ ನಕ್ಕರೆ ಒಂದು ಹುಡುಗಿ ಮಾತ್ರ ಎದ್ದು ನಿಂತು ಅಳತೊಡಗುತ್ತಾಳೆ. ಯಾಕಮ್ಮಾ ಅಳುತ್ತಿದ್ದೀಯ ಅಂತ ಕೇಳಿದರೆ ನಾನು ಕನ್ನಡ ಮೀಡಿಯಂ ನಲ್ಲಿ ಓದಿದ್ದು ಸಾರ್, ನೀವು ಹೇಳಿದ್ದು ನಂಗೇನೂ ತಿಳೀಲಿಲ್ಲ ಅನ್ನುತ್ತಾಳೆ. ಇಡೀ ಕ್ಲಾಸಿಗೇ ಕ್ಲಾಸೇ ನಗುತ್ತದೆ. ಮೇಸ್ಟ್ರು ಎಲ್ಲರನ್ನೂ ಬೈದು ಸುಮ್ಮನಾಗಿಸುತ್ತಾರೆ.

ಆ ಚಿತ್ರದ ನಿರ್ದೇಶಕ ಪುಣ್ಯಾತ್ಮನಿಗೆ ಅದ್ಯಾರು ಹೇಳಿದರು ಕನ್ನಡ ಮೀಡಿಯಂ ನಲ್ಲಿ ಓದಿದವರಿಗೆ ಇಂಗ್ಲೀಷು ತಿಳಿಯುವುದಿಲ್ಲವೆಂದು? ಅದೂ ಕೂಡ ಅಲ್ಲಿ ಹೇಳಿದ ಒಂದು ಕಾಂಜೀ ಪೀಂಜಿ ಜೋಕು ! ಕನ್ನಡ ಮೀಡಿಯಂನಲ್ಲಿ ಓದಿದ್ದರೂ ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿತಿಯೇ ಇರುತ್ತೇವೆ. ಅದೂ ೧೦ ಕ್ಲಾಸಿನ ವರೆಗೆ ಓದಿದ ಒಬ್ಬರಿಗೆ ೨ ವಾಕ್ಯ ಇಂಗ್ಲೀಷು ಅರ್ಥವಾಗಲಿಲ್ಲವೆಂದರೆ ಅದು ಅವರ ತೊಂದರೆಯೇ ಹೊರತು ಮಾಧ್ಯಮದ್ದಲ್ಲ.

ನಂತರ ಆ ಮೇಸ್ಟ್ರು, ಕನ್ನಡ ಮೀಡಿಯಂ ನಲ್ಲಿ ಓದಿದೋರೆಲ್ಲ ದಡ್ಡರು ಇಂಗ್ಲೀಷ್ ಮೀಡಿಯಂ ನಲ್ಲಿ ಓದಿದೋರೆಲ್ಲ ಬುದ್ಧಿವಂತರು ಅನ್ಕೋಬೇಡಿ. ಭಾಷೆಗಿಂತ ಪ್ರತಿಭೆ ಮುಖ್ಯ. ಫ್ರಾನ್ಸ್, ಜಪಾನು, ರಷ್ಯ ಎಲ್ಲರೂ ಅವರವರ ಭಾಷೆಯಲ್ಲೇ ಎಲ್ಲವನ್ನು ಮಾಡ್ಕೊಂಡಿದಾರೆ, ಮುಂದುವರೆದಿದಾರೆ, ನಾನೂ ಕೂಡ ಕನ್ನಡ ಮೀಡಿಯಂ ನಲ್ಲೇ ಓದಿದ್ದು. anybody dare to challenge me here? ಅಂತ ಅರಚುತ್ತಾರೇನೋ ನಿಜ. ಆದರೆ ಅಷ್ಟರಲ್ಲೇ ಕನ್ನಡ ಮೀಡಿಯಂನಲ್ಲಿ ಓದಿದೋರು ಹೆಡ್ಡರು ಎಂಬ ಭಾವನೆ ನೋಡುಗರಲ್ಲಿ ಬಂದಿರುತ್ತದೆ.

ಇದ್ಯಾಕೆ ಕನ್ನಡ ಮಾಧ್ಯಮ ಕಲಿಕೆಯನ್ನು ತೊಡೆದು ಹಾಕಲು ಚಿತ್ರರಂಗದಿಂದ ಹಿಡಿದು ಹೈಕೋರ್ಟ್ ವರೆಗೆ ಎಲ್ಲರೂ ಟೊಂಕ ಕಟ್ಟಿ ನಿಂತಿದ್ದಾರೋ ನಾಕಾಣೆ!

***************************

ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲ ಕಂಪನಿಗಳೂ ಕಡ್ಡಾಯ ರಜೆ ಕೊಡಲೇಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸುವ ಸ್ಥಿತಿ ಇದೆ ಇವತ್ತು ಭಾರತದಲ್ಲಿ ಅಂತ ಕೊರಗುತ್ತಿರುವಾಗಲೇ ಹೀಗೆಲ್ಲಾ ಸುತ್ತೋಲೆ ಹೊರಡಿಸಿ ಸರ್ಕಾರ ನಮ್ಮ ಸ್ವಾತಂತ್ರ್ಯ ಹರಣ ಮಾಡಿದರೆ ನಾವು ಬೇರೆ ಜಾಗ ನೋಡ್ಕೋತೀವಿ, ಆಮೇಲೆ ನಿಮ್ಮ ಜನರಿಗೇ ಕೆಲಸ ಕೊಡೋರು ಯಾರೂ ಇರೋಲ್ಲ ಎಂದು ಐ.ಟಿ.ಕಂಪನಿಗಳು ಬುಸುಗುಟ್ಟಿದವಂತೆ.

ಆಗಸ್ಟ ೧೫ಕ್ಕೆ ರಜ ಕೊಡಬೇಕೆಂದು ಕೆಲವು ಸಾಫ್ಟ್ ವೇರ್ ಕಂಪನಿಗಳಲ್ಲಿ ೧೪ ರಂದೇ ಸ್ವಾತಂತ್ರ್ಯೋತ್ಸವವನ್ನು ಜೋರಾಗಿ ಆಚರಿಸುತ್ತಿದ್ದುದನ್ನು ಕಂಡು ಇವತ್ತು ಪಾಕಿಸ್ತಾನದ ಸ್ವಾತ್ರಂತ್ರ್ಯೋತ್ಸವವಲ್ವಾ ಎಂದು ತಲೆಕೆರೆದುಕೊಂಡವರು ಹಾಗೆಯೇ ತಲೆಕೆರೆದುಕೊಳ್ಳುತ್ತಾ ಉಳಿದಿರುವಾಗಲೇ ಮೆಜೆಸ್ಟಿಕ್ಕು ರಶ್ಶಾಗಿತ್ತು.

*******************************

ಮೊನ್ನೆ ಮೊನ್ನೆ ಬೆಂಗಳೂರು ಹತ್ತಿರ ರೇವ್ ಪಾರ್ಟಿ ನೆಡೆದು ಅವರು ಸಿಕ್ಕಿಬಿದ್ದು ಟಿ.ವಿ.ಯಲ್ಲೆಲ್ಲಾ ಬಂತು. ಅದರಲ್ಲಿ ಹುಡುಗಿಯರೂ ಇದ್ದರು. ಅವರು ಟಿ.ವಿ.ಕ್ಯಾಮೆರಾದ ಮುಂದೆ ಅಳುತ್ತಿದ್ದರು ಅರಚುತ್ತಿದ್ದರು. ಇದನ್ನು ನೋಡಿ ಕರುಳು ಮಿಡಿದ ಒಬ್ಬ ಪತ್ರಿಕೆಗೆ ಪತ್ರ ಬರೆದಿದ್ದ. ಹೆಣ್ಣು ಮಕ್ಕಳು ಕೈಮುಗಿದು ತಮ್ಮದೇನೂ ತಪ್ಪಿಲ್ಲ(!) ಎಂದು ಅಳುತ್ತಿದ್ದರೂ ಅವರನ್ನು ಹಿಡಿದು ಹಿಡಿದು ತೋರಿಸಿದ ರಕ್ಷಣಾ ವೇದಿಕೆಯ ಜನರದ್ದೇ ತಪ್ಪು. ಇದು ಹೆಣ್ಣಿಗೆ ಮಾಡಿದ ಅವಮಾನ ಎಂಬಂತೆ !. ಜ್ಞಾನಪೀಠದ ಸಪೋರ್ಟು ಸಿಕ್ಕಿ ಅಲ್ಲಿ ಪೇಜ್ 3 ಜನರೆಲ್ಲಾ ಹೊಸ ಹುರುಪಿನಿಂದ ಮೇಲೆದ್ದುದನ್ನು ಕಂಡೇ ದಂಗಾಗಿದ್ದ ಮನೆಮಂದಿ ಈ ಪತ್ರವನ್ನೂ ಓದಿ ಹಾಗಿದ್ದರೆ ರೇವ್ ಪಾರ್ಟಿಯಲ್ಲಿ ಗಾಂಜಾ ಸೇದಿ, ಹೆಂಡ ಕುಡಿದು, ಬೆತ್ತಲೆ ಕುಣಿದರೆ ತಪ್ಪಲ್ವಾ, ಹೆಣ್ಣಿಗೆ ಅವಮಾನವಾದಂತಾಗಲಿಲ್ವಾ ಎಂದು ಪಿಳಿಪಿಳಿ ಕಣ್ಣು ಬಿಟ್ಟರು.

******************************

ಕೆಲವರು ಪದ್ಮಪ್ರಿಯಾ ಬಗ್ಗೆ ಬರೆದರು, ಕೆಲವರು ನೈಪಾಲರ ಹೆಂಡತಿಯ ಬಗ್ಗೆ ಬರೆದರು. ಚಿಯರ್ ಗರ್ಲ್ಸ್ ಬಗ್ಗೆಯೂ ಬರೆಯುತ್ತಾರೆನೋ ಅಂತ ಕಾದೆ. ಬರೆಯಲಿಲ್ಲ. ಅದೇ ಬೇರೆ ಇದೇ ಬೇರೆ ನೀನಿನ್ನೂ ಚಿಕ್ಕವನು ಸುಮ್ಮನಿರು ಅಂದರು. ಹೌದು ಅನ್ನಿಸಿತು. ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ ಬೇಕು ಎಂದರು. ಹೌದು ಅನ್ನಿಸಿತು. ಆವಾಗ ಸ್ತ್ರೀ ಶೋಷಣೆ ನಿಂತಂತೆ ಅಂದರು, ಹೌದು ಅನ್ನಿಸಿತು. ಮೈ ತೋರಿಸಿ, ಬಳಸಿ ಹಣಗಳಿಸುವುದೂ ಆರ್ಥಿಕ ಸ್ವಾತಂತ್ರ್ಯಕ್ಕೆ ಒಂದು ದಾರಿ ಎಂದರು ಕೆಲವರು. ಹೌದಾ! ಅನ್ನಿಸಿತು. ಆಮೇಲೆ ಇದ್ಯಾಕೋ ಈ ಸಂವೇದನೆಗಳೆಲ್ಲಾ ಗಡ್ಡ ಬಿಟ್ಟವರಿಗೇ ಸರಿ ಎನಿಸಿ ಬೆಳಗ್ಗೆಯಷ್ಟೆ ಶೇವ್ ಮಾಡಿದ ನುಣುಪಾದ ಕೆನ್ನೆಯನ್ನು ಸವರಿಕೊಂಡೆ.

*******************************

ಮನೆ ಹತ್ತಿರ ಪಾರ್ಟಿಯೊಂದು ಜೋರಾಗಿ ನೆಡೆಯುತ್ತಿತ್ತು. ಅಭಿನಂದನಾ ಪಾರ್ಟಿಯಂತೆ. ಏರಿಯಾದ ಜನರನ್ನೆಲ್ಲಾ ಕರೆದಿದ್ದಾರಂತೆ. ಯಾಕಂತೆ ಪಾರ್ಟಿ ಅಂತ ಕೇಳಿದರೆ ಅವರ ಮಗನಿಗೆ ಅದೇನೋ ಸಿಕ್ಕಿದೆಯಂತೆ ಅಂದಿತು ಪಕ್ಕದ ಮನೆ ಅಜ್ಜಿ. ಪರಮವೀರಚಕ್ರವೋ, ರಾಷ್ಟಪತಿ ಪದಕವೋ, ಇನ್ನೇನೋ ಪ್ರಶಸ್ತಿಯೋ ಇರಬಹುದಾ, ವಿಶ್ ಮಾಡೋಣ ಅಂತ ಕುತೂಹಲದಿಂದ ನೋಡಿದರೆ ಪಾರ್ಟಿ ಇದ್ದದ್ದು ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಸಾಫ್ಟ್ ವೇರ್ ಕೆಲಸ ಸಿಕ್ಕಿದ್ದಕ್ಕೆ!! ಸ್ಯಾಲರಿ ಪ್ಯಾಕೇಜ್ ಬಗ್ಗೆ ಆಮೇಲೆ ಕೇಳೋಣ ಅಂತ ಸುಮ್ಮನಾದೆ.

*********************************

ಶಶಾಂಕ್ ಅಂಥ riskನ್ನು comfortable ಅಗಿ avoid ಮಾಡಿಕೊಂಡು ಮುನ್ನಡೆಯುತ್ತಾರೆ. ಅಂಥ possessiveness ಹುಡುಗಿಯರನ್ನು ಹೇಗೆ ಹಿಂಸೆ ಮಾಡುತ್ತದೆ ಎಂಬುದನ್ನು ತುಂಬ crisp ಆಗಿ ಶಶಾಂಕ್ ಹೇಳಿ ಮುಗಿಸುತ್ತಾರೆ. ಸಿನೆಮಾದ ಪ್ರತಿ ಪಾತ್ರವೂ ತನ್ನದೇ ಆದ ರೀತಿಯಲ್ಲಿ unfold ಆಗಿ, ಅತ್ಯಂತ Logical ಆಗಿ conclude ಆಗುತ್ತದೆ.

ಈ ಮೇಲಿನ ವಾಕ್ಯಗಳು ಬೆಂಗಳೂರಿನ ಯಾವುದೋ ಕಾನ್ವೆಂಟ್ ಮಕ್ಕಳು ಬರೆದದ್ದೋ ಅಥವಾ ಎಪ್ಫೆಮ್ ರೇಡಿಯೋದಲ್ಲಿ ಬಂದಿದ್ದೋ ಅಲ್ಲ.ಅದು ಕನ್ನಡದ ’ದೈತ್ಯ’ ಬರಹಗಾರರೊಬ್ಬರ ಬರಹದ ಉದಾಹರಣೆಗಳು. ಏನು ಮಾಡೋದು, ಅವರು ಏನು ಬರೆದರೂ ಕನ್ನಡಿಗರು ಒಪ್ಪಿಕೊಳ್ಳಲೇಬೇಕು. ಮತ್ತು ಹೀಗೆ ಬರೆಯುವವರೂ ಕೂಡ ಕನ್ನಡ ಲೇಖಕರು ಎಂದು ಒಪ್ಪಿಕೊಂಡು ಸುಮ್ಮನಿರಬೇಕು.

***********************************

35 ಕಾಮೆಂಟ್‌ಗಳು:

ಸುಪ್ರೀತ್.ಕೆ.ಎಸ್. ಹೇಳಿದರು...

ಸಕತ್ತಾಗಿವೆ etc ಗಳು. ನಾನು ನಾಳೆ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲೇ ಎದ್ದು ಶೇವ್ ಮಾಡಬೇಕು ಅರ್ಜೆಂಟಾಗಿ!

ಹಂಸಾನಂದಿ Hamsanandi ಹೇಳಿದರು...

ಯಾರ್ರೀ ಇದು ದೈತ್ಯ ಬರಹಗಾರು? ನನಗೆ ಸುತ್ತಮುತ್ತಲಿನ ಅರಿವಿಲ್ಲ ಅಂದ್ಕೊಂಡ್ರೂ ಪರವಾಗಿಲ್ಲ ಅಂತ ಕೇಳ್ತಿದೀನಿ :) ಹೇಳ್ರೀ!

ಅನಾಮಧೇಯ ಹೇಳಿದರು...

....ಆಮೇಲೆ ಇದ್ಯಾಕೋ ಈ ಸಂವೇದನೆಗಳೆಲ್ಲಾ ಗಡ್ಡ ಬಿಟ್ಟವರಿಗೇ ಸರಿ ಎನಿಸಿ ಬೆಳಗ್ಗೆಯಷ್ಟೆ ಶೇವ್ ಮಾಡಿದ ನುಣುಪಾದ ಕೆನ್ನೆಯನ್ನು ಸವರಿಕೊಂಡೆ...

ಸ್ತ್ರೀ ಸಂವೇದನೆಗಳ ಬಗ್ಗೆ ಯೋಚನೆ ಮಾಡುವ ಕೆಲಸ ಗಂಡಸರದ್ದು (ಅದೂ ಗಡ್ಡ ಬಿಟ್ಟ ಗಂಡಸರು) ಮಾತ್ರ ಅಂತೀರ ??? :-)

ಸ್ತ್ರೀ ಸಂವೇದನೆಗಳ ಬಗ್ಗೆ ನಿಮ್ಮ ತಿಳುವಳಿಕೆ ( or the lack of it) ನೋಡಿದರೆ, ಇದರ ಬಗ್ಗೆ ನೀವು ಬರೆಯುವುದು ಯಾಕಾಗಿ ಅನ್ನಿಸುತ್ತದೆ. ಜೊತೆಯಲ್ಲೇ, ಸ್ತ್ರೀಯರ ಬಗ್ಗೆ ಇರುವ ನಿಮ್ಮ ಧೋರಣೆ ಬಹಳ ಜನರಲ್ಲಿ ಇರುವುದರಿಂದ, ನಿಮ್ಮ ಮನಸ್ಸಿನಲ್ಲಿ ಸ್ತ್ರೀಯರ ಬಗ್ಗೆ ನಿಮಗಿರುವ ಅಭಿಪ್ರಾಯಗಳೇನು ಹಾಗು ಈ ವಿಚಾರಗಳು ರೂಪುಗೊಂಡಿದ್ದು ಹೇಗೆ ಎಂದು ತಿಳಿದುಕೊಳ್ಳಬೇಕು ಅನ್ನಿಸುತ್ತದೆ. ಈ ವಿಷಯಗಳನ್ನು ನೀವು ವಿವರವಾಗಿ ಬರೆಯಬಾರದೇಕೆ?
- ವನಿತಾ

Gadda Nagraj ಹೇಳಿದರು...
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Gadda Nagraj ಹೇಳಿದರು...

@hamsa nandi

'ದೈತ್ಯ' ಬರಹಗಾರ ರವಿ ಬೆಳಗೆರೆ

http://thatskannada.oneindia.in/column/ravibelagere/2008/0818-kannada-movie-moggina-manasu.html

ಅನಾಮಧೇಯ ಹೇಳಿದರು...

The author is trying a cocktail of words in his writing! Totally unrelated topics bunched together. Let people to live the way they want to live. The people who went for the party knew what they were doing. They don't need to be policed by others who think they're safeguarding this society by not participating in such events. For eras women have been subjected to violence, ill treatment by men and the same men dictate how women should behave!!

ವಿಕಾಸ್ ಹೆಗಡೆ/Vikas Hegde ಹೇಳಿದರು...

@ವನಿತಾ and all

ಅಂತಹ ಸಂವೇದನೆಗಳ ಬಗ್ಗೆ ನನ್ನ ಮನಸಿನ ಗೊಂದಲವನ್ನು ಹೊರಹಾಕಲು ಆ ಸಾಲುಗಳನ್ನು ಬರೆದಿದ್ದಷ್ಟೆ.ಅದು ಸ್ತ್ರೀಯರ ಬಗ್ಗೆಯ ಧೋರಣೆ ಅಲ್ಲ. ಸ್ತ್ರೀ ಬಗ್ಗೆ ಧೋರಣೆಗೂ ಈಗಿನ ಸ್ತ್ರೀಸಂವೇದನೆ ಬಗ್ಗೆ ಧೋರಣೆಗೂ ವ್ಯತ್ಯಾಸ ಇದೆ. ಯಾರೇ ಆದರೂ ಅನ್ಯಥಾ ಭಾವಿಸಬೇಡಿ. ಕ್ಷಮೆ ಇರಲಿ. ಎಲ್ಲಕ್ಕಿಂತ ಹೆಚ್ಚಾಗಿ ತಿಳಿಸಿಹೇಳುವ ಪ್ರೀತಿ ಇರಲಿ. ಆ ವಿಷಯದ ಬಗ್ಗೆ ಗೇಲಿ ಬೇಡ.

ಸಂದೀಪ್ ಕಾಮತ್ ಹೇಳಿದರು...

ಮೊಗ್ಗಿನ ಮನಸ್ಸಿನಿಂದ ಪ್ರಾರಂಭವಾಗಿ ಅಲ್ಲೇ ಮುಗೀತು!! ಅರಳಲೇ ಇಲ್ಲ :D

ಯಾಕೋ ವಿಕ್ಕಿ ಏಳು ವಾರಗಳಿಗಾಗೋ ವಿಷಯಾನಾ ಒಂದರಲ್ಲೇ ಮುಗಿಸಿಬಿಟ್ಟೆ??

ಸಂದೀಪ್ ಕಾಮತ್ ಹೇಳಿದರು...

Anonymous -"For eras women have been subjected to violence, ill treatment by men and the same men dictate how women should behave!!"

ಅದಿಕ್ಕೆ ನಾವೇನ್ರಿ ಮಾಡೋದು ’ಯಾರೋ ’ ಮಾಡಿದ ತಪ್ಪಿಗೆ ಎಲ್ಲಾ ಗಂಡಸರನ್ನೂ ಈ ರೀತಿ ಬಯ್ಯೋದಾ??
ಯಾರೋ ಶುಭ ಅನ್ನೋ ಹುಡುಗಿ ತನ್ನ ಪ್ರಿಯಕರನಿಗೋಸ್ಕರ ಇಂಟೆಲ್ನಲ್ಲಿ ಕೆಲಸ ಮಾಡ್ತಾ ಇದ್ದ ಚಿನ್ನದಂತ ಹುಡುಗ ಗಿರೀಶನನ್ನ ಕೊಲೆ ಮಾಡಿದ್ಲು ಅಂತ ಎಲ್ಲಾ ಹುಡುಗಿಯರೂ ಹಾಗೆ ಅನ್ನೊಕಾಗುತ್ತಾ??
ಯಾರೋ ಒಬ್ಳು ವರದಕ್ಷಿಣೆಗಾಗಿ ಸೊಸೆಯನ್ನ ಕೊಂದ್ಲು ಅಂತ ಎಲ್ಲಾ ಅತ್ತೆಯಂದಿರೂ ಕಚಡಾಗಳು ಅಂತ ಹೇಳಿದ್ರೆ ಸುಮ್ನಿರ್ತೀರ ನೀವು?
ಅಷ್ಟಕ್ಕೂ ಸ್ತ್ರೀ ಸಂವೇದನೆಯ ಬಗ್ಗೆ ಪುಸ್ತಕ ಬರೆದ್ರೆ ಅದಕ್ಕೆ ಮುನ್ನುಡಿ ಬರೆಯೊರು ಗಂಡಸು ,ಬೆನ್ನುಡಿ ಬರೆಯೋನು ಗಂಡಸು,ಪುಟ ವಿನ್ಯಾಸ ಮಾಡೊನು ಗಂಡಸು ,ಬಿಡುಗಡೆ ಮಾಡೋನು ಗಂಡಸು!!!!
ಕಾಲಕ್ಕೂ ಸ್ತ್ರೀ ಶೋಷಣೆಗೂ ಸಂಬಂಧ ಇಲ್ಲ. ’ಆ ಕಾಲ’ದಲ್ಲೇ ರಾಣಿ ಅಬ್ಬಕ್ಕ ,ಚೆನ್ನಮ್ಮ ಅಂತವರು ಹೆಸರು ಮಾಡಿದ್ದು .
ಶೋಷಣೆ ’ಆ ಕಾಲದಲ್ಲೂ’ ಇತ್ತು ’ಈ ಕಾಲದಲ್ಲೂ ’ ಮುಂದೇನೂ ಇರುತ್ತೆ.(ಸ್ತ್ರೀಯರಿಗೂ ಹಾಗೂ ಪುರುಶರಿಗೂ!)

ಅನಾಮಧೇಯ ಹೇಳಿದರು...

What is the problem for you if somebody is celebrating for getting a job? It may be his dream.. Why do you have to make fun of it?

ವಿನಾಯಕ ಕೆ.ಎಸ್ ಹೇಳಿದರು...

ವಿಕಾಸ್
ಹೊಸ ಶೈಲಿಯ ಬರಹ. ತುಂಬಾ ಇಷ್ಟವಾಯಿತು. ಹೇಳಬೇಕಾದ್ದನ್ನು ಸೊಗಸಾಗಿ ಹೇಳಿದ್ದೀರಿ. ಬಾರ್‌ನಲ್ಲಿ ಸಿಕ್ಕವರ ಮುಖವನ್ನು ಚಾನೆಲ್‌ಗಳು ತೋರಿಸುವುದು ಉತ್ತಮ ಸಮಜಕ್ಕಾಗಿ! ಹಾಗಾಗಿ ನಾವು ಅಂತವನ್ನು ನೋಡಿ ಟಿಆರ್‌ಪಿ ಹೆಚ್ಚು ಮಾಡುವುದಕ್ಕಿಂತ ನೋಡದೇ ಸುಮ್ಮನೆ ಉಳಿಯುವುದು ಉತ್ತಮ ಅನ್ನಿಸತ್ತೆ ನನಗೆ.

kalash_siya ಹೇಳಿದರು...

Anonymous: Why are you so angry???...ninu hogidda aa dina Rev party ge???? kannada Vedike kayyalii sariyagi mangalarati madiskond haage ide.... hahhaha.
Enjoy the reading man....dont peep your nose on things which u dont understand :)

Vikas super man....keep on writing...one more tejaswi in making.

Vimala ಹೇಳಿದರು...

enu baredaroo chennagi bariteeri.chintisuvante madutte nimma baraha.tumba english padagalannu serisi kannada anta baredare odoke bejarappa.Thank you.

Vimala ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಅನಾಮಧೇಯ ಹೇಳಿದರು...

ತೇಜಸ್ವಿಯವರಿಗೆ ಹೋಲಿಸುವವರು ಬಹುಶಃ ತೇಜಸ್ವಿಯವರ ಕೃತಿಗಳನ್ನು ಓದಿಲ್ಲ ಅನ್ಸುತ್ತೆ!
ಒಂದೆರಡು ಬ್ಲಾಗ್ ಬರಹಗಳನ್ನು ಬರೆದಾಕ್ಷಣ ತೇಜಸ್ವಿಯವರಿಗೆ ಹೋಲಿಸುವಷ್ಟು ಉತ್ತಮ ಬರಹಗಾರರಾಗಲು ಹೇಗೆ ಸಾಧ್ಯ? ಅವರಿಗೆ ಹೋಲಿಸುತ್ತ ತೇಜಸ್ವಿಯವರ ಘನತೆಗೆ ಯಾಕೆ ಕುಂದು ತರ್ತೀರಾ? ತೇಜಸ್ವಿಯವರನ್ನು ಅನುಕರಿಸುತ್ತಾ ಹೆಸರು ಮಾಡ್ತಾ ಇರುವ bloggers ಈ ನಡುವೆ ಜಾಸ್ತಿ ಆಗಿದ್ದಾರೆ.
"Some people are great because their associates are few!" Similarly blogges here are appreciating and getting appreciated from among their regular faithful visitors and think they've achieved to a great extent and can be compared with great writers like Tejasvi!.

ಅನಾಮಧೇಯ ಹೇಳಿದರು...

MR/Miss Anonymous : valle hotte uri maraya ninge.....

ಅನಾಮಧೇಯ ಹೇಳಿದರು...

...ಅಂತಹ ಸಂವೇದನೆಗಳ ಬಗ್ಗೆ ನನ್ನ ಮನಸಿನ ಗೊಂದಲವನ್ನು ಹೊರಹಾಕಲು ಆ ಸಾಲುಗಳನ್ನು ಬರೆದಿದ್ದಷ್ಟೆ...

ಖಂಡಿತಾ ಗೇಲಿ ಮಾಡುತ್ತಿಲ್ಲ (ಬರೆಯುವ ಭರದಲ್ಲಿ ನೀವು ಸ್ತ್ರೀ ಸಂವೇದನೆಗಳೆಲ್ಲಾ ಕೆಲವೇ ಗಂಡಸರಿಗೆ ಬಿಟ್ಟಿದ್ದು ಅಂದದ್ದಕ್ಕೆ ಬಿಟ್ಟು).

ಪುರುಷ-ಪ್ರಧಾನ ಸಮಾಜದಲ್ಲಿ ಬೆಳೆದಿರುವ ನಿಮಗೆ ಗೊಂದಲಗಳು ಇರುವುದು ಸಹಜವಾದದ್ದೇ. ಹೆಂಗಸರು ತಮ್ಮ ಮನಸ್ಸಿನ ಗೊಂದಲಗಳ ಬಗ್ಗೆ, ಸಮಾಜದಲ್ಲಿ ತಮ್ಮ ಸ್ಥಾನಮಾನಗಳ ಬಗ್ಗೆ, ಸಾಕಷ್ಟಲ್ಲದಿದ್ದರೂ ಆಗಾಗ ಬರೆಯುತ್ತಲೇ ಇರುತ್ತಾರೆ. ಆದರೆ ಗಂಡಸರ ಮನಸ್ಸಿನಲ್ಲಿ ಈ ವಿಚಾರಗಳ ಬಗ್ಗೆ ಪ್ರಜ್ಞೆ ಮೂಡುವುದು ಯಾವಾಗ ಹೇಗೆ ಎಂದು ವಿವರಿಸುವ ಬರಹಗಳು ನನಗೆ ತಿಳಿದ ಮಟ್ಟಿಗೆ ಇಲ್ಲವೇ ಇಲ್ಲ. ಅದಕ್ಕಾಗೆಯೇ ನಿಮಗೆ ಬರೆಯಲು ಹೇಳಿದ್ದು. ಸ್ತ್ರೀಯರ ಕಷ್ಟ-ಸುಖಗಳ ಬಗ್ಗೆ ಬರೆಯಲು ಹೇಳುತ್ತಿಲ್ಲ, ಅವರ ಬಗ್ಗೆ ನಿಮ್ಮ ಪೀಳಿಗೆಯ ಗಂಡಸರ attitude ಏನು ಹಾಗು ಅದು ನಿಮ್ಮ ಮನಸ್ಸಿನಲ್ಲಿ ರೂಪುಗೊಂಡಿದ್ದು ಯಾವಾಗ ಎಂದು ತಿಳಿದುಕೊಳ್ಳುವ ಕುತೂಹಲ ಅಷ್ಟೆ. -ವನಿತಾ

ಚಿತ್ರಗುಪ್ತ ಹೇಳಿದರು...
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಕಟ್ಟೆ ಶಂಕ್ರ ಹೇಳಿದರು...

ಏನಪ್ಪಾ ಅನಾನಿಮಸ್ಸು,
ನಿಮ್ಮ ಅನಿಸಿಕೆ ಅಭಿಪ್ರಾಯ main ಆಗಿ ಈ ಲೇಖನವನ್ನು ಬರೀ ನೆಗೆಟಿವ್ ವಿಮರ್ಶೆ ಮಾಡುವ ದೃಷ್ಟಿಯಿಂದ ನೋಡ್ತಾ ಇದ್ದೀರಾ ಅನ್ಸುತ್ತೆ.
"The author is trying a cocktail of words in his writing..."
Dear Friend, an author always has to blend the words and make it a pleasent cocktail for the readers. ಹಾಗಿದ್ದಲ್ಲಿ ಮಾತ್ರಾ ಅದು ಅರ್ಥಪೂರ್ಣ ಹಾಗು ಓದಬಲ್ (readeable) ಅನ್ನಿಸಿಕೊಳ್ಳೋದು. ಇನ್ನು ರೇವ್ ಪಾರ್ಟಿ ಬಗ್ಗೆ ನಿಮ್ಮ ಅಂಬೋಣದ ಬಗ್ಗೆ ಸಿಕ್ಕಾಪಟ್ಟೆ ಕನ್ಫ್ಯೂಶನ್ ಇದೆ. ನೀವು ಆ ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಹೆಣ್ಮಕ್ಕಳನ್ನು (????) ಕ.ರಾ.ವೆ ಯವರು, ಪೊಲೀಸರು ಹ್ಯಾಂಡಲ್ ಮಾಡಿದ ರೀತಿಯ ಕುರಿತು ಉರಿದು ಬೀಳುತ್ತಿದೀರಾ? ಇನ್ನು ಇದರ ಬಗ್ಗೆ ಚರ್ಚೆ ಮಾಡಲು ನೀವು ತಯಾರಿದ್ದಾರೆ ನಾನು ಕೂಡಾ ಸೈ.

@ ವಿಕಾಸ,
ಚೆನ್ನಾಗಿ ಬಂದಿದೆ ಕಣೋ ಲೇಖನ. ಒಂದೇ ಲೇಖನ, ಒಂದೇ ಟಾಪಿಕ್ ಇದ್ದಲ್ಲಿ, ಕೆಲವೊಮ್ಮೆ Monotonous ಅನ್ನ್ಸುತ್ತೆ. ಆದ್ರೆ ನಿನ್ನ ಈ ಲೇಖನ ಓದಿದ ಮೇಲೆ, ಒಂದು ಒಳ್ಳೆಯ ಸಮಾರಾಧನೆಯ ಊಟ (ಮದ್ವೆ ಆದರೂ ಅನ್ಕೋ, ತಿಥಿನಾದ್ರೂ ಅನ್ಕೋ) ಮಾಡಿದಂತಾಯ್ತು. ರುಚಿಗೆ ಪಲ್ಯ, ಕೋಸಂಬರಿ, ಚಟ್ನಿ, ಅನ್ನಕ್ಕೆ ಮಜ್ಜಿಗೆ ಹುಲಿ, ಸಾರು, ಜೊತೆಗೆ ಸ್ವಲ್ಪ ಖಾರ ಮುಟ್ಟಿಸೋ ಪುಳಿಯೋಗರೆ.. ಕೊನೆಗೆ ತಂಪು ಮಾಡಕ್ಕೆ ಮೊಸರನ್ನ, ಆದ್ರೆ ಅದರ ಸಪ್ಪೆತನ ಹೋಗಲಾಡಿಸಲು ಉಪ್ಪಿನಕಾಯಿ. ಎಲ್ಲಾ ಇತ್ತು. ಭೂರಿ ಭೋಜನಕ್ಕೆ ಥ್ಯಾಂಕ್ಸ್. ಆದ್ರೆ ತಾಂಬೂಲ ಇನ್ನು ಬಂದಿಲ್ಲ.. ಕಾಯ್ತಾ ಇರ್ತೀನಿ.

ನಿಮ್ಮವನು,
ಕಟ್ಟೆ ಶಂಕ್ರ
http://somari-katte.blogspot.com

ವಿಕಾಸ್ ಹೆಗಡೆ/Vikas Hegde ಹೇಳಿದರು...

ಉಗಿದ,ಹೊಗಳಿದ,ಪ್ರತಿಕ್ರಯಿಸಿದ ಎಲ್ರಿಗೂ ಥ್ಯಾಂಕ್ಸ್.

ಸಂದೀಪ್, ಇದ್ಯಾಕೋ ಈ ವಿಷಯಗಳೆಲ್ಲಾ ಎಷ್ಟು ವಾರ ಬರೆದರೂ ಅಷ್ಟೆ ಅನ್ನಿಸ್ತು. ಅದ್ಕೇ ...... :)

ವನಿತಾವ್ರೇ, ನಾನು ಬರೆದಿದ್ದಕ್ಕೆ literal meaning ತಗೊಂಡಿದಿರಾ ಅನ್ನಿಸುತ್ತದೆ. ಇರಲಿ. ಆಯ್ತು. ನೀವು ಹೇಳಿದ್ದರ ಬಗ್ಗೆ ಮುಂದೆ ಬರೆಯುವ ಯೋಚನೆ ಇದೆ.
ಆದರೆ ಸಾಕಷ್ಟು ಗಡ್ಡ ಬಂದಮೇಲೆ ಮಾತ್ರ. ( ತಮಾಷೆ :))

ಅನಾನಿಮಸ್ಸುಗಳೇ ,
ಸ್ವಂತ ಹೆಸರು ಹಾಕಿ ಬರೆಯೋದನ್ನ ಅಭ್ಯಾಸ ಮಾಡಿಕೊಳ್ಳಿ ಮತ್ತು ವಿಷಯದ, ಬರವಣಿಗೆಯ ಬಗ್ಗೆ ವಿಮರ್ಶೆ, ಟೀಕೆ ಮಾಡಿದರೆ ಒಳ್ಳೆಯದು, ವೈಯಕ್ತಿಕವಾಗಿ ಬೇಡ.

ಸುಧೇಶ್ ಶೆಟ್ಟಿ ಹೇಳಿದರು...

ಹೊಗಳಿಕೆ, ತೆಗಳಿಕೆ ಏನೇ ಇರಲಿ. ನನಗ೦ತೂ ನಿಮ್ಮ ಬರಹಗಳು ತು೦ಬಾ ಇಷ್ಟ.

Vijay Joshi ಹೇಳಿದರು...

ನೇರವಂತಿಕೆಯಿರುವ ಬರಹಗಳು ಯಾವಾಗಲೂ ಜನರನ್ನು ಬೇಗ ತಲುಪುತ್ತವೆ, ಹಾಗೆಯೇ ವಿರೋಧವನ್ನೂ ಎದುರಿಸುತ್ತವೆ. ನಿಮ್ಮ ಬರಹಕ್ಕೆ ಯಾರೋ ಒಬ್ಬ ಅನಾಮಿಕ ಬರೆದದ್ದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯೇ ಇಲ್ಲ.
ಅದಿರಲಿ, ಈ ಬರಹದಲ್ಲಿ ಹಲವಾರು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದೀರಿ. ಎಲ್ಲ ತುಣುಕುಗಳ ಬಗ್ಗೆ ಸಹಮತವಿಲ್ಲ, ಆದರೆ ಗೌರವವಿದೆ.

ಸಂತೋಷಕುಮಾರ ಹೇಳಿದರು...

ಗುರು ದೈತ್ಯ ಬರಹಗಾರರು ಇಂಗ್ಲೀಷಲ್ಲಿ ಬರೀತಾರಂತೆ( ಸಾಫ್ಟ್ ಕಾರ್ನರ್, ೬೭೧ ನೇ ಸಂಚಿಕೆ) ಅದ್ಕೆ ಸ್ವಲ್ಪ ಸ್ವಲ್ಪ ಪ್ರಾಕ್ಟಿಸ್ ಮಾಡ್ತಾ ಇದಾರೆ ಬಿಡು :)

ಅವರಿವರ ಒಲೈಕೆಯಲ್ಲಿ ಕಾಲ ಕಳೆಯುವ ಬರಹಗಾರರಿಗಿಂತ ನಿನ್ನ ಅಭಿಪ್ರಾಯಗಳನ್ನು ಯಾವುದೆ ಬಿಡೆಗೆ ಬೀಳದೆ ನೇರವಾಗಿ ಹೇಳಿದ್ದಿಯಾ, ಅದು ಗ್ರೆಟ್.. ಪಾಪ ಅನಾನಿಮಸ್ ಯಾಕೇ ಉರ್ಕೊತಿದ್ದಾನೋ ಗೊತ್ತಿಲ್ಲಾ.

Parisarapremi ಹೇಳಿದರು...

alla, ee tharada cinema maadOru en OdhirtaarO karmakaanda.. oLLe moggina manasu.. naan nOdilla bidi..

svaatantrya dinaacharaNe ge raje kodbeku antha ashtella yOchne maadtaaraa antha!! namge avella illaappaa... ellakkoo raje.. praamshupaalara maganige jwara andruu kooda... ;-)

koneya clip, nange en remind maadtide andre that day, chitrachaapa release dina, Prof.GV. ellaargu ondu example kotralla, adu!! Live example ondanna neev kottideera.. second example ee comment..

ತೇಜಸ್ವಿನಿ ಹೆಗಡೆ- ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ತೇಜಸ್ವಿನಿ ಹೆಗಡೆ- ಹೇಳಿದರು...

ವಿಕಾಸ್,

ಒಳ್ಳೆಯ ಕೋಸಂಬರಿ ತಿಂದಂತಾತು :)

ಮೊಗ್ಗಿನ ಮನಸ್ಸು ಚಿತ್ರ ನಾ ನೋಡಿಲ್ಲ. ಆದರೆ ಅಕಸ್ಮಾತ್ತಾಗಿ ಅದರ ಒಂದು ಗೀತೆ ಕೇಳುವ ಸುಯೋಗ (?!) ಒದಗಿ ಬಂತು. ಅದನ್ನು ಕೇಳಿಯೇ ಅರಳಿದ್ದ ಮನಸ್ಸು ಮೊಗ್ಗಾಯಿತು... ಇನ್ನು ಚಿತ್ರದ ಮಾತೇಕೆ ಬಿಡು. ಅಲ್ಲಾ ಅಂತಹ ಚಿತ್ರ ನೋಡುವ ಸಾಮರ್ಥ್ಯ ನಿನಗಿದೆಯಲ್ಲಾ.. ಅದನ್ನು ಮೆಚ್ಚಲೇಬೇಕು :)

ಇನ್ನು ಸ್ವಾತಂತ್ರ್ಯ ದಿನಾಚಾರಣೆಯ ಕುರಿತು.. ಅದರ ಮಹತ್ವವೇ ಕಳೆದು ಹೋಗಿದೆ ಈಗ. ನನಗೂ ಒಂದು........ ಬಂದಿತ್ತು. ಸ್ವಾತಂತ್ರ್ಯೋತಸವದ ಶುಭಾಶಯಗಳು ಎಂದು ಅದೂ ಅಗಸ್ಟ್ ೧೪ ಕ್ಕೇ :)

ಸ್ತ್ರೀ ಸಂವೇದನಯ ಕುರಿತು ವನಿತ ಅವರ ಅಭಿಪ್ರಾಯದಂತೆ ನಿನ್ನ ಅನಿಸಿಕೆಯನ್ನು ಮುಕ್ತವಾಗಿ ಆದಷ್ಟು ಬೇಗ ನಿನ್ನ ಬ್ಲಾಗ್ ನಲ್ಲಿ ಹಾಕಬೇಕಾಗಿ ವಿನಂತಿ. ನಾನೂ ಕಾಯುತ್ತಿರುವೆ.

ಸಂತೋಷ ಪಡುವುದು.. ಅದನ್ನು ಹಂಚಿಕೊಳ್ಳುವುದು ಪ್ರತಿಯೊಬ್ಬರ ಹಕ್ಕು.. ಆದರೆ ಮೈಕಾಸುರನನ್ನು ಹಾಕಿ ಇತರರಿಗೆ ತೊಂದರೆ ನೀಡದಿದ್ದರೆ ಸಾಕು.

ದೈತ್ಯ ಬರಹಗಾರರ ಪರಿಚಯಮಾಡಿಸಿದ್ದಕ್ಕೆ ಧನ್ಯವಾದಗಳು. :)

ಸಿಂಧು Sindhu ಹೇಳಿದರು...

ವಿಕಾಸ,

ಒಳ್ಳೇ ಬರಹ. ವಿಚಾರಕ್ಕೆ ಹಚ್ಚುವ ದೃಷ್ಟಿಕೋನ.

ಕನ್ನಡಕ್ಕಾಗಿ ಹುಗ್ರ ಓರಾಟ ಮಾಡುವವರ ಖನ್ನಡವೇ ಹೀಗೆ.
ದಿನಾಚರಣೆಗಳು ಲಾಚಾರಾಗಿ ಹೋಗಿ ತುಂಬ ವರ್ಷ ಆದವು. ರೇವ್ ಪಾರ್ಟಿ ಬೇಕೋ ಬೇಡವೋ - ಆದ್ರೂ ಅದನ್ನ ತೀರಾ ಅಭಿವ್ಯಕ್ತಿ ಸ್ವಾತಂತ್ರ್ಯ ಅಂತ ಕರೆಯೋಕ್ಕೆ ಮನಸ್ಸಿಗೆ ಕಷ್ಟವಾಗ್ತ ಇರೋದು ಮಾತ್ರ ನಿಜ.

ಸ್ತ್ರೀ ಸಂವೇದನೆ, ಸ್ತ್ರೀಪರ ಹೋರಾಟ ಗಳು ಅಪರೂಪಕ್ಕೆ ಅಲ್ಲಲ್ಲಿ ನಿಜವಾದ ಅಗತ್ಯಗಳಿಗೆ ತಕ್ಕಂತೆ ನಡೆದು, ಪ್ರಯೋಜನ ಸಿಕ್ಕುತ್ತಿದೆಯಾದರೂ, ಆಟಾಟೋಪವೆ ಜಾಸ್ತಿ. ಒಂದೊಂದ್ಸಲ ಸ್ತ್ರೀವಾಧಿಗಳು ಹುಗ್ರ ಓರಾಟಗಾರರ ನಂತರದ ಸ್ಥಾನದಲ್ಲೆ ಇರುತ್ತಾರೆ ಎಂಬುದು ನನ್ನ ವೈಯಕ್ತಿಕ ಅನಿಸಿಕೆ.

ಹೀಗೇ ಬರೀತಿರು. ಒಂದು ವಾರಕ್ಕಾಗುವಷ್ಟು ವಿಚಾರ ಒಂದೇ ಸಲಕ್ಕೆ ಅಂತ ನಿನ್ನ ಗೆಳೆಯರ್ಯಾರೋ ಬರೆದಿದಾರೆ. ಪರವಾಗಿಲ್ಲ ವಿಷಯಗಳನ್ನ ನೇರವಾಗಿ ಬರೆಯುವುದು ಮುಖ್ಯ. ಸಂಕೀರ್ಣತೆಯಿಲ್ಲದೆ ಇರೋದ್ರಿಂದ ಓದಲೂ ಭಾರವಾಗುವುದಿಲ್ಲ.

ಪ್ರೀತಿಯಿಂದ
ಸಿಂಧು

ಅನಾಮಧೇಯ ಹೇಳಿದರು...

ಸಿಂಧು,

"....ಸ್ತ್ರೀ ಸಂವೇದನೆ, ಸ್ತ್ರೀಪರ ಹೋರಾಟ ಗಳು ಅಪರೂಪಕ್ಕೆ ಅಲ್ಲಲ್ಲಿ ನಿಜವಾದ ಅಗತ್ಯಗಳಿಗೆ ತಕ್ಕಂತೆ ನಡೆದು, ಪ್ರಯೋಜನ ಸಿಕ್ಕುತ್ತಿದೆಯಾದರೂ, ಆಟಾಟೋಪವೆ ಜಾಸ್ತಿ. ಒಂದೊಂದ್ಸಲ ಸ್ತ್ರೀವಾಧಿಗಳು ಹುಗ್ರ ಓರಾಟಗಾರರ ನಂತರದ ಸ್ಥಾನದಲ್ಲೆ ಇರುತ್ತಾರೆ ಎಂಬುದು ನನ್ನ ವೈಯಕ್ತಿಕ ಅನಿಸಿಕೆ..."

ನಿಮಗೆ ಸಂಘಟಿತ ಪ್ರತಿಭಟನೆ ನಡೆಸಿದ/ಪಾಲ್ಗೊಂಡ ಅನುಭವ ಇದೆಯೇ? ಸ್ತ್ರೀಯಾಗಿ ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಥವಾ ಇನ್ಯಾವುದೇ ರೀತಿಯಲ್ಲಿ ನಿಮ್ಮ ಸ್ವಂತ ಜೀವನದಲ್ಲಿ ಅಡಚಣೆ ಬಂದು, ಅದನ್ನು ನಿವಾರಿಸಿಕೊಂಡ ಅನುಭವ ಇದೆಯೇ?

ನಿಮ್ಮ ಅನುಭವದಲ್ಲಿ ಅಗತ್ಯ ಹಾಗು ಅನಗತ್ಯ ಕಾರಣಗಳಿಗಾಗಿ ನಡೆದಿರುವ ಸ್ತ್ರೀಪರ ಹೋರಾಟಗಳು ಯಾವುವು ಎಂದು ದಯವಿಟ್ಟು ವಿವರಿಸಿ ಹೇಳಿ. ಸ್ತ್ರೀಪರ ಹೋರಾಟಗಳಿಂದ ಸಿಕ್ಕಿರುವ, ನಿಮ್ಮ ಮನಸ್ಸಿಗೆ ತಟ್ಟಿದ, ಪ್ರಯೋಜನಗಳ ಉದಾಹರಣೆಗಳಿದ್ದರೆ ತಿಳಿಸಿಕೊಡಿ.

ಸ್ತ್ರೀವಾದದ ಬಗ್ಗೆ ಅನೇಕ prejudices ಹಾಗು ಗೊಂದಲಗಳು ಇವೆ. ಇದಕ್ಕೆ ಕಾರಣಗಳೇನಿರಬಹುದು ಎಂದು ಯೋಚಿಸ್ತಾ ಇದೀನಿ, ಅರ್ಥಮಾಡಿಕೊಳ್ಳಲು ಪ್ರಯತ್ನಿಸ್ತಿದೀನಿ. ಈ ದೃಷ್ಟಿಯಿಂದ ಪ್ರಶ್ನೆಗಳನ್ನು ಕೇಳುತ್ತಿರುವೆ, ವ್ಯಂಗ್ಯ/ಗೇಲಿ ಇಲ್ಲ. -ವನಿತಾ

ಸಿಂಧು Sindhu ಹೇಳಿದರು...

ವನಿತಾ,

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಮತ್ತು ನಿಮ್ಮ ಕಾಳಜಿ ನನಗೆ ಇಷ್ಟವಾಯಿತು.

ನನ್ನ ಅನುಭವಕ್ಕೆ ದಕ್ಕದ, ನನ್ನ ಅಳವಿಗೆ ಮೀರಿದ ವಿಷಯಗಳ ಬಗ್ಗೆ ನಾನು ಪ್ರತಿಕ್ರಿಯಿಸಲು/ಅಭಿವ್ಯಕ್ತಿಸಲು ಹೋಗುವುದಿಲ್ಲ.

ಜನಪರವಾದ,ಜೀವನ್ಮುಖಿಯಾದ ಛಲವಾದಿ ಮಹಿಳಾ ಹೋರಾಟವನ್ನು ನಾನೂ ಹತ್ತಿರದಿಂದ, ಸಂಘಟನೆಯೊಳಗೆ ಒಬ್ಬಳಾಗಿ ನೋಡಿದ್ದೇನೆ. ಪಾಲ್ಗೊಂಡಿದ್ದೇನೆ. ನನ್ನ ಬರಹದ ಉದ್ದೇಶ ಯಾವುದೇ ಸಂಘಟನೆಯ ಪರ ವಿರೋಧ ಅಲ್ಲ. ಇಲ್ಲಿಯವರೆಗಿನ ನನ್ನ ಸೀಮಿತ ತಿಳುವಳಿಕೆಯಲ್ಲಿ ಒಬ್ಬ ವ್ಯಕ್ತಿಯಾಗಿ ಮಹಿಳೆ ಹೋರಾಡುವಾಗ ಇರುವ ನಿಸ್ಪ್ರಹತೆ ಸಂಘಗಳ ಮೂಲಕ ಹೋಗುವಾಗ ನಿಧಾನವಾಗಿ ಕಡಿಮೆಯಾಗುತ್ತದೆ ಅಂತ ನನಗನ್ನಿಸಿದೆ. ಈ ಬಗ್ಗೆ ನಿಮಗೆ ವಿಚಾರ ಮಾಡುವ ಇಷ್ಟವಿದ್ದರೆ, ನನ್ನ ಮೈಲ್ ಐಡಿಗೆ ಬರೆಯಿರಿ. ಪರಸ್ಪರ ಸಿಕ್ಕು ಮಾತನಾಡೋಣ. ಮತ್ತು ಈ ಬಗೆಯ ಬದಲಾವಣೆ ಬರಿಯ ಸ್ತ್ರೀಪರ ಹೋರಾಟಕ್ಕಲ್ಲ, ಎಲ್ಲ ಬಗೆಯ ಸಂಘಟಿತ ಹೋರಾಟಕ್ಕೂ ಅನ್ವಯಿಸುತ್ತದೆ. ಮೊದಲು ಅದನ್ನು ಹುಟ್ಟುಹಾಕಿದವರ ಮನೋಭಾವ,ಸ್ಥೈರ್ಯ,ಬದ್ಧತೆ,ತೊಡಗಿಸಿಕೊಳ್ಳುವಿಕೆ ನಂತರ ಬಂದು ಸೇರುವ ಎಲ್ಲರಲ್ಲೂ ಇರುವುದಿಲ್ಲ. ಕೆಲವು ಬಾರಿ ಇದೂ ಸಂಘಟನೆಯನ್ನ ತೆಳುಗೊಳಿಸಲಿಕ್ಕೆ ಕಾರಣವಾಗುತ್ತದೆ.

ನನ್ನದೇ ಸ್ವಂತ ಬದುಕಿನಲ್ಲಿ ನಡೆದ ತೊಂದರೆ,ನೋವುಗಳನ್ನು ನಾನು ಯಾವ ಸಂಘಟನೆಯ ನೆರವಿಲ್ಲದೆ ಹೋರಾಡಿ ನಿವಾರಿಸಿಕೊಂಡೆ. ನನ್ನ ಮನೆಯವರು,ಮತ್ತು ಸ್ನೇಹಿತರು ಇದರಲ್ಲಿ ನನಗೆ ಬೆನ್ನೆಲುಬಾಗಿ ನಿಂತರು.

ಇದೇ ಮಾತನ್ನು ಎಲ್ಲ (ಬಹುತೇಕ ಪರಾವಲಂಬೀ) ಮಹಿಳೆಯರ ಬಗ್ಗೆ ಹೇಳಲಾಗುವುದಿಲ್ಲ. ನಾವು ಸಾಮರ್ಥ್ಯವಿದ್ದವರು ಸಮಸ್ಯೆಯಿದ್ದವರಿಗೆ ಇಂಬಾಗಿ ನಿಲ್ಲಬೇಕಾಗಿರುವುದು ನಮ್ಮ ಕರ್ತವ್ಯ ಕೂಡ. ನನ್ನ ಮಿತಿಯಲ್ಲಿ ಅದನ್ನು ನಾನು ಮಾಡಿದ್ದೇನೆ. ಮಾಡುತ್ತಿದ್ದೇನೆ.

ನನ್ನ ಒಂದೇ ಒಂದು, ಆದರೆ ಮುಖ್ಯ ಆಕ್ಷೇಪವೇನೆಂದರೆ,ಸ್ತ್ರೀಸಂವೇದನೆ ಮತ್ತು ಹೋರಾಟ ಎನ್ನುವುದು ಕೆಲವರ ಮುಖವಾಡ ಮತ್ತು ಗಳಿಕೆಯ ದಾರಿಯಾಗಿರುವುದರ ಬಗ್ಗೆ. ನಿಜವಾಗಲೂ ಸಂವೇದನೆಯಿರುವವರು ಅದರ ಬಗ್ಗೆ ಮಾತನಾಡಲು ಹೋಗುವುದಿಲ್ಲ ಮಾಡುತ್ತಾರೆ.

ನಮ್ಮ ಸ್ತ್ರೀಚೇತನವನ್ನ ಉದ್ದೀಪಿಸಿದ,ಬೆಳಕಾದ, ಕೈಮರವಾದ ನೂರಾರು ಚೈತನ್ಯಗಳ ಬಗ್ಗೆ ನನಗೆ ಯಾವತ್ತೂ ಗೌರವವಿದೆ. ಇವರಲ್ಲಿ ಎಲ್ಲೋ ಬೆರಳೆಣಿಕೆಯವರು ಸಂಘಟಿತ ಹೋರಾಟದೊಂದಿಗೆ ಗುರುತಿಸಿಕೊಂಡವರು. ಉಳಿದವರು ನಮ್ಮದೇ ಮನೆ, ಹಿತ್ತಲು, ಹಳ್ಳಿ, ಶಾಲೆ, ಆಫೀಸು, ದೊಡ್ಡ ಊರು, ಆಫೀಸಲ್ಲದ ಕೆಲಸ, ಹೀಗೆ ನಮ್ಮ ಸುತ್ತಲಿನ ಪರಿಸರದಲ್ಲೇ ದೀಪವಾಗಿ ಬೆಳಗಿದವರು.

ಅಗತ್ಯ ಮತ್ತು ಅನಗತ್ಯ ಕಾರಣಗಳಿಗಾಗಿ ಎಂಬ ಸಾಲಿನ ಬಗ್ಗೆ..
ಅಗತ್ಯ ಯಾರದ್ದು ಎಂಬುದರ ಮೇಲೆ ಈ ಎರಡು ಬಗೆ ತೋರುತ್ತದೆ. ನಾನು ಇಲ್ಲಿ ನೋಡಿದ ಬಹಳಷ್ಟು ಹೋರಾಟದ ಹೆಸರು ಹೊತ್ತವು, ಮೂಲ ಮರೆತು ಹೊರಟ - ತಮ್ಮದೇ ಬೇಳೆ ರಾಜಕೀಯ ಬೇಯಿಸಿಕೊಳ್ಲಲು ಹೊರಟವರದ್ದು. ಇದರಲ್ಲಿ ತೊಂದರೆಗೆ ಸಿಲುಕಿದ/ಬಲಿಯಾದ ಮಹಿಳೆಯ ಸಹಾಯ ಗೌಣವಾಗಿರುತ್ತವೆ. ಇದನ್ನೇ ನಾನು ಹೇಳಿದ್ದು.

ಸಮಸ್ಯೆಯ ಮೂಲವನ್ನ ಅರ್ಥ ಮಾಡಿಕೊಳ್ಳುತ್ತಾ, ನಮ್ಮ ಸುತ್ತಲಿನ ಸಮಾಜವನ್ನ ನಮ್ಮದೇ ನಡವಳಿಕೆಗಳಿಂದ ಸೆನ್ಸಿಟೈಝ್ ಮಾಡುತ್ತ ಹೋಗುವುದು ನಮ್ಮ ಮುಂದಿರುವ ದಾರಿ. ಇಡೀ ಊರನ್ನ ಗುಡಿಸುವುದರ ಬದಲು, ನಮ್ಮದೇ ಗೆಳೆಯ ಗೆಳತಿಯರು,ಮಕ್ಕಳು, ಅಣ್ಣ,ತಮ್ಮ,ಮನೆಯಲ್ಲಿ ಬದಲಾವಣೆ ತರಬೇಕು ಎಂಬುದು ನನ್ನ ಆಶಯ.

ಉದ್ವೇಗವಿಲ್ಲದ ಒಳನೋಟಗಳು ನಮ್ಮನ್ನು ಬೆಳೆಯಲು ಸಹಾಯ ಮಾಡುತ್ತವೆ.

ವಿಕಾಸ,
ಈ ಉದ್ದವಾದ ಪ್ರತಿಕ್ರಿಯಿಗೆ ಕ್ಷಮೆಯಿರಲಿ.

ವನಿತಾ ಈ ಬಗ್ಗೆ ಹೆಚ್ಚು ವಿಚಾರ ಹಂಚಿಕೊಳ್ಳುವುದಿದ್ದರೆ ನನಗೆ ಮೈಲ್ ಮಾಡಿ. sindhusagar@gmail.com

ಪ್ರೀತಿಯಿಂದ
ಸಿಂಧು

ಅಧಿಕಪ್ರಸಂಗಿ ಹೇಳಿದರು...

ನನಗ್ಯಾಕೋ ಮೊನ್ನೆ ಮೊನ್ನೆ ನಡೆದ ಗ್ರಹಣಗಳ ದುಷ್ಪರಿಣಾಮ ನೇರವಾಗಿ ನಮ್ಮ ಓರ್ವ ಜ್ಞಾನಪೀಠಿಯ ಮೇಲಾಗಿದೆ ಎಂಬ ಅನುಮಾನ ಇದೆ. ಅವರ ಹಿಂದ ವರ್ತನೆ ಕೂಡ ಸಹಿಸಲು ಸಾಧ್ಯವಾಗಿರಲಿಲ್ಲ. ಈಗ ರೇವ್ ಪಾರ್ಟಿಯನ್ನು ಬೆಂಬಲಿಸಿ ತನ್ನ ತಲೆಯ ಒಳಗಿನ ಪ್ರಾಪರ್ಟಿಯನ್ನು ಕಳೆದುಕೊಂಡಿದ್ದಾರೆ ಎಂದು ಮನದಟ್ಟಾಗಿದೆ. ಕೆಲವು ಮಹಿಳಾಪರ ಹೋರಾಟಗಾರರು ಶ್ರೀಮತಿ ಪದ್ಮಪ್ರಿಯರ ಸಾವಿನ ಹಿಂದಿನ ರಹಸ್ಯ ಭೇದಿಸಲು ತೋರಿಸುತ್ತಿರುವ ಆಸಕ್ತಿಯನ್ನು ತಮ್ಮ ಸುತ್ತ ಮುತ್ತ ನಡೆಯುತ್ತಿರುವ ಗಾರ್ಮೆಂಟ್ ಉದ್ಯೋಗಿ ಮಹಿಳೆಯರ, ಇಲ್ಲವೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆದ ಕೆಲವು ಬಡ ಬಿಡಿ ಕಟ್ಟುವ ಮತ್ತು ಕಾಲೇಜು ಹುಡುಗಿಯರ ನಾಪತ್ತೆ, ಕೊಲೆ ಪ್ರಕರಣಗಳ ಬಗ್ಗೆ ಯಾಕೆ ತೋರಿಸುತ್ತಿಲ್ಲ? ಆಲ್ವಾ? ಚಿತ್ರೋದ್ಯಮಿಗಳ ಕನ್ನಡ ಪ್ರೇಮ, ಬೆಳಗೆರೆಯವರ ಇಂಗ್ಲಿಷ್ ಪ್ರೇಮ, ಆಗೊಸ್ತ್ ೧೪'ರ ಸ್ವಾತಂತ್ಯ್ರ ಪ್ರೇಮ, ಕೆಲಸ ಸಿಕ್ಕಿದ್ದಕ್ಕೆ ಪಾರ್ಟಿ ಪ್ರೇಮ..ಎಲ್ಲವು ಚೆನ್ನಾಗಿ ಬರೆದಿದ್ದೀರಿ :) ಹಾಗೆ ಉಗ್ರವಿರಲಿ, ಹುಗ್ರವಿರಲಿ ಹೋರಾಟಕ್ಕಾಗಿ ಎದೆಯೊಡ್ಡುವ ಕನ್ನಡದ ಕಲಿಗಳ ಬಗ್ಗೆ ಕನ್ನಡಿಗರಾದವರಿಗೆ ಗೌರವವಿರಲಿ.

shreedevi kalasad ಹೇಳಿದರು...

ವಿಕ್ಸ್‌,

ಒಂದೇ ಉಸಿರಿಗೆ ಬಡ ಬಡ ಅಂತ ಅದ್ಹೇಗೆ ಬರೆದುಬಿಡ್ತೀಯೋ. . .

ನಾನ್ ಕೂಡ ಬಡ ಬಡಾ ಅಂತ ಓದ್ತಾ ಇದ್ದೆ. ಒಮ್ಮೆಲೆ ಬ್ರೇಕ್ ಹಾಕ್ಬಿಟ್ಟು visualise ಮಾಡ್ಕೊಳ್ಳೋಕೆ ಶುರು ಮಾಡಿದೆ....

”ಇದ್ಯಾಕೋ ಈ ಸಂವೇದನೆಗಳೆಲ್ಲಾ ಗಡ್ಡ ಬಿಟ್ಟವರಿಗೇ ಸರಿ ಎನಿಸಿ ಬೆಳಗ್ಗೆಯಷ್ಟೆ ಶೇವ್ ಮಾಡಿದ ನುಣುಪಾದ ಕೆನ್ನೆಯನ್ನು ಸವರಿಕೊಂಡೆ.”

ಈ ಸಾಲುಗಳನ್ನ ಓದಿದ್‌ಮೇಲೆ. . . ಯಾರ್‍ಯಾರು ಈ ಸಾಲಿಗೆ ಸೇರ್‍ತಾರೆ ಅಂತ. ನೀನು ಒಮ್ಮೆ ಗಡ್ಡ ಬಿಟ್ಟು ನೋಡು. ನಿನಗೂ ಒಂಚೂರು ಸಂವೇದನೆಗಳ ಪರ್ಸೆಂಟ್ ಜಾಸ್ತಿಯಾಗಬಹುದು. ?
ಕೋಪಾನಾ ಹೀಗೆ ಹೇಳಿದ್ದಕ್ಕೆ?

Gadda Nagraj ಹೇಳಿದರು...

ಗಡ್ಡ ಬಿಟ್ಟ ಬುದ್ಧಿಜೀವಿಗಳಿಗೆ ಡಿಮಾನ್ದಪ್ಪೋ ಡಿಮಾಂಡು
ಓದ ಬೇಕಾದ ಓದುಗರಿಗೆ ರಿಮಾನ್ದಪ್ಪೋ ರಿಮಾಂಡು

ವಿಕಾಸ್ ಹೆಗಡೆ/Vikas Hegde ಹೇಳಿದರು...

@sudhEsh
;-) ಸುಮ್ನಿರಿ , ಆಮೇಲೆ ಅನಾನಿಮಸ್ ಗಳು ಬೈತಾರೆ.

@vijay joshi
ಯಾವ ವಿಷಯದ ಬಗ್ಗೆ ಸಹಮತ ಇಲ್ಲ ಅಂತಾದ್ರೂ ಹೇಳಬಹುದಿತ್ತು.

@parisaraprEmi
ನಿಮ್ದೆ ಪುಣ್ಯ ಬಿಡ್ರಿ. ;-)
ಪ್ರೊ.ಜಿ.ವಿ.ಹೇಳಿದ್ದಕ್ಕೆ ಸ್ವಲ್ಪ ತಿದ್ಕೊಂಡಿರದೂ ಕಂಡುಬಂತು ಅನಂತರದ ಕಾರ್ಯಕ್ರಮದಲ್ಲಿ :)

@ತೇಜಕ್ಸ್
ಅದೆಲ್ಲಾ ಬರೆಯೋಕೆ ಯಾಕೋ ತಳಮಳ. ಆದ್ರೂ ನೋಡೋಣ.

@sidhu
thanQ. ನಿಮ್ಮ ಕಮೆಂಟು ಉದ್ದವಾಗಿದ್ದಷ್ಟೂ ಜಾಸ್ತಿ ವಿಷಯಗಳನ್ನ ತಿಳಿದುಕೊಳ್ಳಬಹುದು .

@ಅಧಿಕ ಪ್ರಸಂಗಿ
ಉಗ್ರವಿರಲಿ, ಹುಗ್ರವಿರಲಿ ಹೋರಾಟಕ್ಕಾಗಿ ಎದೆಯೊಡ್ಡುವ ಕನ್ನಡದ ಕಲಿಗಳ ಬಗ್ಗೆ ಕನ್ನಡಿಗರಾದವರಿಗೆ ಗೌರವವಿರಲಿ ಎಂಬ ಮಾತು ನಿಜ. thanQ

@ಶ್ರೀದೇವಿ ಕಳಸದ
ಹೌದು. ಕೋಪ ಸಿಕ್ಕಾಪಟ್ಟೆ ಬಂದಿದೆ. :)
ಯಾರು ಯಾರು ಆ ಸಾಲಿಗೆ ಸೇರೋರು ಅಂತ ಹಾಗೇ visualize ಮಾಡಿದ್ರೆ ಗೊತ್ತಾಗೋಗತ್ತೆ ಅಲ್ವಾ? :)

@ಸಂತೋಷಕುಮಾರ್ ಪಾಟೀಲ
ಓಹ್ , ಹಿಂಗೋ ವಿಷ್ಯ! ಅಂತ ದೈತ್ಯರಿಗೂ ಈತರ ಕೀಳರಿಮೆ, ವ್ಯಾಮೋಹ ಇದ್ದಮೇಲೆ ಜನಸಾಮಾನ್ಯರ ಕತೆ ಅಷ್ಟೇ ಬಿಡು.

@gedda nagraj
;-)

Ganesh ಹೇಳಿದರು...

Vikas, you have analysed Moggina manasu very clearly. Ravi belagere has exaggerated the things to a larger extent.

Madesha film critic in Hi bengaloor also has no truth. There is no meaning in appraising owns works.

I have also written critic about the Moggina manasu in my blog http://www.pratispandana.wordpress.com

Please review. I think you also have this view.

Ganesh

KV ಹೇಳಿದರು...

super aagi bardidya..