ಪುಟಗಳು

ಶುಕ್ರವಾರ, ಮೇ 2, 2008

Online Voting??

ಹೇಗಿದ್ದರೂ ಚುನಾವಣೆ ಹತ್ತಿರದಲ್ಲಿದೆ. ಭಾರತದ ಪ್ರಜ್ಞಾವಂತ, ವಿದ್ಯಾವಂತ ಮತದಾರರಾದ ನಾವು(!) ತಪ್ಪದೇ ಮತ ಚಲಾಯಿಸುವುದು ನಮ್ಮ ಕರ್ತವ್ಯ, ಅದು ನಮ್ಮ ಹಕ್ಕು, ಒಳ್ಳೆಯ ಅಭ್ಯರ್ಥಿಗಳನ್ನು ಆರಿಸಬೇಕು, ದೇಶ ಉದ್ಧಾರ ಮಾಡಬೇಕು.... ಹೀಗೆ ಏನೇನೋ ಅನಿಸುತ್ತದೆ. ಅದು ಇರಲಿ. ನನಸಾಗದ ಕನಸುಗಳು ಇದ್ದದ್ದೆ. ರಾಜಕೀಯದ ಕತೆ ಎಲ್ಲಾರಿಗೂ ಗೊತ್ತು. ಆದರೆ ವಿಷಯ ಏನೆಂದರೆ, ನಾನು ಇರುವ ಊರಿನಲ್ಲಿ ಮತ ಹಾಕುವ ಹಕ್ಕಿಲ್ಲ. ಹಕ್ಕು ಇರುವ ಊರಿನಲ್ಲಿ ನಾನಿಲ್ಲ. ಏನು ಮಾಡೋದು? ಮಾಡುವುದಾದರೆ ಆಫೀಸಿಗೆ ರಜೆ ಹಾಕಿ ಹೋಗುವುದು ಬರುವುದು ಸೇರಿ ೫೦೦+ ಕಿ.ಮಿ ಪ್ರಯಾಣ ಮಾಡಿ ೧೬ ನೇ ತಾರೀಖು ಮತ ಹಾಕಿ ಬರಬೇಕು. ಇಲ್ಲೇ ಕೂತು ಮತಹಾಕುವಂತೆ ಆನ್ ಲೈನ್ ವೋಟಿಂಗ್ ಸೌಲಭ್ಯ ಒದಗಿಸಿಬಿಟ್ಟರೆ ಚೆನ್ನಾಗಿರ್ತಿತ್ತು ಅಲ್ವೆ?! ಆನ್ ಲೈನ್ ನಲ್ಲಿ ಏನೇನೋ ಮಾಡಬಹುದು. ಇದೂ ಏಕೆ ಸಾಧ್ಯವಿಲ್ಲ. ಹೇಗಿದ್ದರೂ ಊರ ತುಂಬಾ ಸಾಫ್ಟ್ ವೇರ್ ತಂತ್ರಜ್ಞರು ತುಂಬಿ ತುಳುಕುತ್ತಿದ್ದಾರೆ. ಅಮೆರಿಕದ, ಯೂರೋಪಿನ ಮಾಲ್ ಗಳಿಗೆ, ಬ್ಯಾಂಕ್ ಗಳಿಗೆ, ಕಂಪನಿಗಳಿಗೆ ಒಳ್ಳೊಳ್ಳೆಯ ಸಾಫ್ಟ್ ವೇರ್ ಗಳನ್ನು ತಯಾರಿಸಿ ಕೊಡುವ ಕಂಪನಿಗಳಿವೆ. ಅಂತಹ ಒಂದು ಕಂಪನಿಗೆ ವಹಿಸಿಕೊಡಬಹುದು. ಎಲ್ಲಾ ಮತಗಟ್ಟೆಗಳಿಗೂ ಕಂಪ್ಯೂಟರ್ ಅಥವಾ ಮತಯಂತ್ರದಂತೆ ಅದಕ್ಕೆಂದೇ ತಯಾರಿಸಿದ ಯಾವುದಾದರೂ ಉಪಕರಣ, ನೆಟ್ ಸಂಪರ್ಕ ಒದಗಿಸಬೇಕಾಗಬಹುದು. ಇನ್ನೂ ಏನೇನೋ ಸಂಪನ್ಮೂಲಗಳು ಬೇಕಾಗುತ್ತವೆ ನಿಜ. ಭಾರತದಂತಹ ದೇಶದ ಮಟ್ಟಿಗೆ ಇದು ಬಹಳ ಕಷ್ಟವಾದ ಕೆಲಸವಾಗಿ ಕಂಡರೂ ಕ್ರಮೇಣ ಅಸಾಧ್ಯವೇನಲ್ಲ!

ಅಂದ ಹಾಗೆ, ಜಗತ್ತಿನ ಯಾವುದಾದರೂ ದೇಶದಲ್ಲಿ ಇಂಟರ್ನೆಟ್ ಮೂಲಕ ಆನ್ ಲೈನ್ ಮತದಾನ ಮಾಡುವ ಸೌಲಭ್ಯವಿದೆಯೆ? ಅಥವಾ ಇದು practically ಸಮಂಜಸವೇ? ....ತಿಳಿಯುತ್ತಿಲ್ಲ.

7 ಕಾಮೆಂಟ್‌ಗಳು:

Chandru Kengatte ಹೇಳಿದರು...

Online Voting maadodikke adaradde aada problem galu ive... alde Yellarigu ondu Unique ID and Password anta kodbeku...adada mele Omme Vote aakidare mattomme yaare login aadru aakde iro aage program neno maadbahudu... aadre Idanne Upyogisi kondu yententa hackers yenaadru maadbahudu.... Nanage annisiddu yenandre Election Commission idara bagge yochane maadi..sariyaada vyavaste maadale beku....

ಕಟ್ಟೆ ಶಂಕ್ರ ಹೇಳಿದರು...

ವಿಕಾಸ, ನಿನ್ನ ಈ ವಾದ ಸರಿ ಇದೆ.
ಚಂದ್ರು ಅವರು ಹೇಳಿದ ಹಾಗೆ ಇದರಲ್ಲಿ ಸಾಕಷ್ಟು ತೊಂದರೆ, ತೊಡಕುಗಳಿವೆ. ನನ್ನ ಹೆಸ್ರು ಮೈಸೂರಲ್ಲಿ ಇತ್ತು, ಈ ಬಾರಿಯ ಪರಿಷ್ಕರಣೆಯಲ್ಲಿ ನನ್ನ ಹೆಸರನ್ನು ಮೈಸೂರಿನ ಮತದಾರರ ಪಟ್ಟಿಯಿಂದ ತೆಗೆದಿದ್ದಾರೆ. ಈಗ ನಾನು ನನ್ನ ಮತದಾನದ ಹಕ್ಕನ್ನು ಹೇಗೆ ಚಲಾಯಿಸಬೇಕೋ ತಿಳಿಯುತ್ತಿಲ್ಲ. ಇದಕ್ಕೆ ಇರುವ ಒಂದೇ ಮಾರ್ಗವೆಂದರೆ aayOgavu ಮತದಾರರ ಪಟ್ಟಿಯನ್ನು ಕೇಂದ್ರೀಕರಿಸಿದರೆ (centralised),ಮತದಾರರು ತಮ್ಮ ಗುರುತಿನ ಚೀಟಿಯನ್ನು ವೋಟಿಂಗ್ ಬೂತಿನಲ್ಲಿ ತೋರಿಸಿ, ತಮ್ಮ ಹಕ್ಕನ್ನು ಚಲಾಯಿಸುವಂತೆ ಮಾಡಬಹುದು.
ಏನಂತೀರಿ ??

ಕಟ್ಟೆ ಶಂಕ್ರ

ಶ್ರೀನಿಧಿ.ಡಿ.ಎಸ್ ಹೇಳಿದರು...

ಈಸ್ಟೋನಿಯಾ ದೇಶದಲ್ಲಿ ಆನ್ಲೈನ್ ಓಟಿಂಗ್ ಇದೆ, ೨೦೦೦ನೇ ಇಸ್ವಿಯಿಂದಲೇ ಅಲ್ಲಿ ಈ ವ್ಯವಸ್ತೆ ಇದೆ.ಇಜಿಪ್ಟ್ ನಲ್ಲಿ ಗಂಡಸರಿಗೆ ಕಡ್ಡಾಯ ಮತದಾನ ಇದೆ.

ವಾಜಪೇಯಿ ಸರಕಾರ ಭಾರತದ ಪ್ರತಿ ಪ್ರಜೆಗೂ ನ್ಯಾಷನಲ್ ಸೆಕ್ಯುರಿಟಿ ಕೋಡ್ ಕೊಡಲು ಹೊರಟಿತ್ತು, ಸರ್ಕಾರ ಬಿತ್ತು, ಯೋಜನೇನೂ ಬಿತ್ತು.ಆ ಯೋಜನ ಬಂದಿದ್ರೆ, ಆನ್ ಲೈನ್ ವೋಟಿಂಗ್ ಕೆಲ್ಸ ಆಗಿರೋದು...

ಯಜ್ಞೇಶ್ (yajnesh) ಹೇಳಿದರು...

ವಿಕಾಸ,

ಉತ್ತಮ ಸಲಹೆ. ಇಂದಲ್ಲ ನಾಳೆ ಇದು ಜಾರಿಗೆ ಬಂದರೆ ವಿದ್ಯಾವಂತರು ಓಟ್ ಮಾಡೋ ಸಾದ್ಯತೆ ಜಾಸ್ತಿ.

ವಿಕಾಸ್ ಹೆಗಡೆ/Vikas Hegde ಹೇಳಿದರು...

ಚಂದ್ರು, ಶಂಕ್ರಣ್ಣ, ಯಜ್ಞೇಶಣ್ಣ , ಶ್ರೀನಿಧಿ ಥ್ಯಾಂಕ್ಸ್.

ಈ ನಿಟ್ಟಿನಲ್ಲಿ ಮಾಹಿತಿ ಹುಡುಕಿದಾಗ ಶ್ರೀನಿಧಿ ತಿಳಿಸಿದಂತೆ ಈಸ್ಟೋನಿಯಾ ದೇಶದಲ್ಲಿ ಈ ವ್ಯವಸ್ಥೆ ಈಗಾಗ್ಲೆ ಚಾಲ್ತಿಯಲ್ಲಿರುವುದು ಗೊತ್ತಾಯಿತು. ಜನಸಂಖ್ಯೆ, ಭೂವಿಸ್ತಾರ ಕಡಿಮೆ ಇರುವ ಈಸ್ಟೋನಿಯಾದಂತ ದೇಶಗಳಲ್ಲಿ ಈ ವ್ಯವಸ್ಥೆ ಮಾಡುವುದು comparitively ಸುಲಭ. ಯೂರೋಪಿನ ಕೆಲವು ದೇಶಗಳೂ ಕೂಡ ಆನ್ಲೈನ್ ವೋಟಿಂಗ್ ಜಾರಿಗೆ ತರಲು ಯತ್ನಿಸುತ್ತಿವೆ. ಕೆಲವು ದೇಶಗಳಲ್ಲಿ ಸಂಸ್ಥೆಗಳ, ಪ್ರಾಂತ್ಯಗಳ ಕೆಲವು ಚುನಾವಣೆಗಳಲ್ಲಿ ಆನೈನ್ ಮತದಾನ ಬಳಸಲ್ಪಡುತ್ತಿದೆ.

ನಾನು ಮೊದಲು ಬ್ಲಾಗಿನಲ್ಲಿ ಹೇಳಿದಂತೆ ಎಲ್ಲ ಮತಗಟ್ಟೆಗಳಿಗೂ ನೆಟ್ ಸಂಪರ್ಕ ಒದಗಿಸುವ ಅಗತ್ಯವೇನೂ ಇಲ್ಲ ಅನಿಸುತ್ತದೆ. ಶಂಕರ್ ಹೇಳಿದಂತೆ ಒಂದು ಕೇಂದ್ರಿಕೃತ ವ್ಯವಸ್ಥೆ ಮಾಡಿ ಕೊನೆಗೆ ಮತ ಎಣಿಕೆ ಮಾಡುವಾಗ ಸಾಂಪ್ರದಾಯಿಕ ಮತದಾನದಿಂದ ಬಂದ ಮತಗಳ ಜೊತೆ ಆಯಾ ಕ್ಷೇತ್ರಕ್ಕನುಗುಣವಾಗಿ ಇಂಟರ್ನೆಟ್ಟಿನಲ್ಲಿ ದಾಖಲಾದ ಮತಗಳನ್ನು ಸೇರಿಸಿದರೆ ಆಗುತ್ತದೆ. ಆದರೆ ಈ ವ್ಯವಸ್ಥೆಗೆ ಉನ್ನತ ಮಟ್ಟದ ಸುರಕ್ಷತೆ, ಭದ್ರತೆ ಅತಿ ಮುಖ್ಯವಾದುದ್ದಾಗಿದೆ. ಮುಂದೊಂದು ದಿನ ಈ ವ್ಯವಸ್ಥೆ ಬರಬಹುದು. ನೋಡೋಣ.

Harish - ಹರೀಶ ಹೇಳಿದರು...

ಎಲ್ಲರಿಗೂ ಒಂದು Social Security Number ಕೊಟ್ಟು Finger-print ಅನ್ನೇ password ಆಗಿ ಉಪಯೋಗಿಸಿದರೆ ಕೇವಲ ಮತದಾನವಷ್ಟೇ ಅಲ್ಲ, ಎಲ್ಲವೂ ಸುಲಭ. ಈಗ ಇರೋ ಹಾಗೆ ಫೋಟೋ ಐಡಿ ತನ್ನಿ, ಡೇಟ್ ಆಫ್ ಬರ್ತ್ ಪ್ರೂಫ್ ತನ್ನಿ, ಅಡ್ರೆಸ್ ಪ್ರೂಫ್ ತನ್ನಿ ಎನ್ನುವ ರಗಳೆ ಇರೋದಿಲ್ಲ. ಅಲ್ಲದೆ ದೇಶದಲ್ಲೆಲ್ಲೇ ಇದ್ದರೂ ತಮಗೆ ಬೇಕಾದ ಕಡೆಯಿಂದ ಮತ ಚಲಾಯಿಸಲು ಸುಲಭವಾಗುತ್ತದೆ.

ಅಂತರ್ವಾಣಿ ಹೇಳಿದರು...

ವಿಕಾಸ್,

ತುಂಬಾ ಚೆನ್ನಾಗಿ ಬರೆದಿದ್ದೀರ. ನಮ್ಮ ಮನೆಯಲ್ಲೂ ಇದೇ ರೀತಿ ಮಾತಾಡುತ್ತಾಯಿದ್ವಿ. Online Voting ಇರಬೇಕಿತ್ತು ಅಂತ.