ಪುಟಗಳು

ಸೋಮವಾರ, ಮೇ 19, 2008

"ಮುಸ್ಸಂಜೆಮಾತು" ಬಗ್ಗೆ ಒಂದಿಷ್ಟು ಮಾತು

"ಜೀವನದಲ್ಲಿ ಬೇರೆಯವ್ರಿಗೆ ಸಜೆಷನ್ಸ್ ಕೊಡೋದು ಸುಲಭ, ಆದ್ರೆ ನಮ್ ಜೀವನದಲ್ಲಿ ಅದನ್ನು ಫಾಲೋ ಮಾಡದು ಬಹಳ ಕಷ್ಟ."

’ಮುಸ್ಸಂಜೆ ಮಾತು’ ಚೆನ್ನಾಗಿದೆ ಅನ್ಸುತ್ತೆ, ಟೈಮ್ಸಾಫಿಂಡಿಯಾದಲ್ಲಿ ನಾಲ್ಕು ಸ್ಟಾರ್ ಕೊಟ್ಟಿದ್ದಾರೆ ಬಾ ಹೋಗೋಣ ಎಂದು ಗೆಳೆಯರು ಕರೆದರು. ಕೆಲದಿನಗಳಿಂದ ಆ ಚಿತ್ರದ ಪೋಸ್ಟರ್ ಗಳನ್ನು ನೋಡಿದ್ದೆ. ಚಿತ್ರ ಚೆನ್ನಾಗಿಯೇ ಇರಬಹುದು ಎನ್ನಿಸಿತ್ತು. ಮಾಮೂಲಿ ಪ್ರೇಮ ಕಥೆಗಳುಳ್ಳ ಚಿತ್ರಗಳನ್ನು ನೋಡದ ನನಗೆ ಇದ್ಯಾಕೋ ಸ್ವಲ್ಪ ಬೇರೆಯೇ ತರನಾದ ಮೆಚ್ಯೂರ್ಡ್ ಲವ್ ಸ್ಟೋರಿ ಇರಬಹುದು ಅನಿಸಿತ್ತು. ಸುದೀಪ ಇದಾನೆ ಅಂದ್ಮೇಲೆ ಸ್ವಲ್ಪ ಲೆವೆಲ್ಲಾಗೇ ಇರ್ಬೋದು ಅಂತ ನಂಬಿಕೆಯೂ ಇತ್ತು. ಎಲ್ಲಾ ಹಾಳಾಗಿ ಹೋಯಿತು. ಎಲ್ಲಿಂದ ಶುರುಮಾಡಿ ಎಲ್ಲಿಗೆ ಮುಗಿಸುವುದೋ ತಿಳಿಯುತ್ತಿಲ್ಲ. ಈಗಿನ ಸಿನೆಮಾ ಟ್ರೆಂಡಿನಂತೆ ನಾಯಕ ರೇಡಿಯೋ ಜಾಕಿ ಎಂಬುದೊಂದನ್ನು ಬಿಟ್ಟರೆ ಮತ್ತದೇ ೮೦ರ ದಶಕದ ಕಥೆ. ಕನ್ನಡದ ನಾಲ್ಕು ಸಿನೆಮಾ ನೋಡಿ ಅಭ್ಯಾಸವಿದ್ದವರು ಪ್ರತಿ ಸನ್ನಿವೇಶವನ್ನು, ಕಥೆಯನ್ನೂ ಸಂಭಾಷಣೆಗಳ ಸಮೇತ ಊಹಿಸಿಕೊಂಡುಬಿಡಬಹುದು !! ಚಿತ್ರ ಶುರುವಾಗಿ ೨೦ನಿಮಿಷದಲ್ಲೇ ನಾಯಕ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕು ಹಾಕಿಕೊಂಡಿದ್ದ ಗರ್ಭಿಣಿ ಹೆಂಗಸೊಬ್ಬಳನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸುತ್ತಾನೆ. ಅಲ್ಲಿ ಮಗು ಆದ ಮೇಲೆ ಆಕೆ "ಅಣ್ಣಾ, ನಿಮ್ಮುಪಕಾರನ್ನ ಯಾವತ್ತೂ ಮರೆಯೋಲ್ಲ, ಈ ಮಗುಗೇ ನಿಮ್ಮದೇ ಹೆಸರಿಡ್ತೀನಿ" ಅಂತಾಳೆ. ಆವಾಗಲೇ ಇಡೀ ಟಾಕೀಸಿಗೆ ಒಳಗೆ ಬಂದು ತಪ್ಪು ಮಾಡಿಬಿಟ್ಟೆವೇನೋ ಎಂಬ ಸುಳಿವು ಸಿಕ್ಕಿಹೋಗುತ್ತದೆ. ಇರಲಿ ನೋಡೋಣ ಎಂದುಕೊಂಡರೆ ಇಡೀ ಚಿತ್ರದಲ್ಲಿ ಎಲ್ಲಾ ಪಾತ್ರಗಳೂ ಕೊರೆಯುವವರೇ! ಒಂದಿಷ್ಟು ಒಳ್ಳೆಯ ಸಂದೇಶಗಳು ಇವೆಯಾದರೂ ಕೂಡ ನಿರೂಪಣೆ ನೀರಸ ನೀರಸ. ಭಾವನೆಗಳನ್ನೆಲ್ಲಾ ತಮಾಷೆಮಾಡಿಕೊಳ್ಳಲು ಅವಕಾಶ ಮಾಡಿಕೊಡುವಂತಾಗಿ ಹೋಗಿದೆ ಎರಡನೇ ಅರ್ಧದಲ್ಲಿ. ಕೊನೆಕೊನೆಗಂತೂ ಗಂಭೀರ ದೃಶ್ಯಗಳು ಬಂದಾಗಲೂ ಕೂಡ ಇಡೀ ಟಾಕೀಸಿಗೆ ಟಾಕೀಸೆ ಯಾವುದೋ ಹಾಸ್ಯ ಚಿತ್ರವೊಂದನ್ನು ನೋಡುತ್ತಿದ್ದಂತೆ ಪೂರ್ತಿ ಕಾಮಿಡಿಯಿಂದ ತುಂಬಿಹೋಗುತ್ತದೆ. ಇಡೀ ಊರತುಂಬಾ ಪೋಸ್ಟರುಗಳಲ್ಲಿ ಕಾಣುತ್ತಿದ್ದ ದೃಶ್ಯಗಳು ಕೇವಲ ಒಂದು ಹಾಡಿನದು. ಅದು ನಾಯಕ ನಾಯಕಿಗೆ ಪ್ರೇಮವಾಗುವ ಹಾಡು ಮತ್ತು ಅದಷ್ಟರಲ್ಲಿ ಮಾತ್ರ ಪ್ರೇಮ ಇರುವುದು.

"ಹುಡ್ಗೀರನ್ನ ರೇಗಿಸಿ ಪರ್ವಾಗಿಲ್ಲ, ಆದ್ರೆ ಅದಕ್ಕೊಂದು ಲಿಮಿಟ್ಟಿರ್ಲಿ", ಆಮೇಲೆ "ಯಾವನಾರೂ ಗಂಡಸು ಸುಮ್ನೆ ಅವನ ಪಾಡಿಗೆ ಅವನು ಇದಾನೆ ಅಂದ ಮಾತ್ರಕ್ಕೆ ಅವನು ಗಂಡಸೇ ಅಲ್ಲ ಅಂತ ಮಾತ್ರ ತಿಳ್ಕಬೇಡಿ" ಅಂತ ಸುದೀಪ ಸುಮ್ಸುಮ್ನೇ ಇರುವ ಫೈಟಿಂಗ್ ಒಂದು ಮುಗಿದ ಮೇಲೆ ಹೊಡೆಸಿಕೊಂಡ ರೌಡಿಗಳಿಗೆ ಉಪದೇಶ ಕೊಡುತ್ತಾನೆ. "ಈ ರೇಡಿಯೋ ಜಾಕಿ ಕೆಲ್ಸ ಬಿಟ್ಟು ಯಾವುದಾದ್ರೂ ಐ.ಟಿ ಕಂಪನಿ ಸೇರ್ಕೋ, ಒಳ್ಳೇ ಸಂಬಳ, ನೆಮ್ಮದಿಯಾಗಿ ಇರ್ಬೋದು" ಅಂತ ನಾಯಕನ ಅಮ್ಮ ಟಿಪಿಕಲ್ ಅಮ್ಮನಂತೆ ಹೇಳುತ್ತಾಳೆ !! ಟಾಕೀಸಿನಲ್ಲಿದ್ದ ಐ.ಟಿ. ಹುಡುಗರು ಹೋ...... ಎಂದು ಕೂಗುತ್ತಾರೆ

ಈ ಚಿತ್ರ ಮಾಡಿದ ನಿರ್ಮಾಪಕ, ನಿರ್ದೇಶಕನಿಗೆ ಬೈಯಬೇಕೋ, ನೋಡಿದ ನಮಗೆ ನಾವೇ ಬೈಕೊಬೇಕೋ ತಿಳೀತಿಲ್ಲ. ಸುದೀಪನ ನಟನೆ, ಮಾತು ಬಗ್ಗೆ ಎರಡು ಮಾತಿಲ್ಲವಾದರೂ ಇಂತದೇ ಚಿತ್ರಗಳನ್ನ ಮಾಡ್ತಾ ಇದ್ರೆ ಆಮೇಲೆ "ಯಾರೋ ಯಾರೋ ಗೀಚಿ ಹೋದ .. ಹಾಳೂ ಹಣೆಯಾ ಬರಹ...." ಅನ್ಬೇಕಾಗತ್ತೆ. ಹಾಸ್ಯ,ಹರಟೆ ಖ್ಯಾತಿಯ ಗಂಗಾವತಿ ಬೀಚಿ ಪ್ರಾಣೇಶ್ ಮತ್ತು ಪ್ರೊ.ಕೃಷ್ಣೆಗೌಡರು ಬಹುಶ: ಮೊದಲ ಬಾರಿಗೆ ಚಿತ್ರವೊಂದರಲ್ಲಿ ನಟಿಸಿದ್ದಾರೆ ಮತ್ತು ನಾಯಕನಿಗಿಂತ ಅವರ ಎಂಟ್ರಿಗೇ ಜಾಸ್ತಿ ಸಿಳ್ಳೆಗಳು ಬೀಳುತ್ತವೆ. ಹಾಗಂತ ಚಿತ್ರದಲ್ಲಿ ತೀರ ನಗು ಬರುವಂತಹ ಹಾಸ್ಯ ಏನೂ ಇಲ್ಲ! ಒಂದು ಕಾಲದಲ್ಲಿ ಇಂತಹುದ್ದನ್ನೆಲ್ಲಾ ನೋಡುಗರು ಗಂಭೀರವಾಗಿ ನೋಡುತ್ತಿದ್ದರು. ಆದರೆ ಈಗಿನ ನೋಡುಗರ ಮನಸ್ಥಿತಿ, ಅಭಿರುಚಿ ಹಾಗಿಲ್ಲ ಎಂಬುದು ನಿರ್ದೇಶಕನಿಗೆ ಅರ್ಥವಾಗಿಲ್ಲ. ಪದೇ ಪದೇ ಪ್ರೇಕ್ಷಕನನ್ನು ಅಳಿಸಲು ಪ್ರಯತ್ನವನ್ನು ಮಾಡಿದಂತಿದೆ. "ಹೇಳಲೊಂಥರಾ ಥರಾ.." ಎಂಬ ಹಾಡನ್ನು ಬಿಟ್ಟರೆ ಬೇರ್ಯಾವುದೂ ಬೇಕೆಂದರೂ ನೆನಪಾಗುವುದಿಲ್ಲ.!! ಇಷ್ಟೆಲ್ಲಾ ಹೇಳಿದ ಮೇಲೂ ಚಿತ್ರದ ಕಥೆ ಏನು ಅಂತ ಹೇಳೋ ಅಗತ್ಯ ಕಾಣ್ತಾ ಇಲ್ಲ, ಹೇಳಲು ತಾಳ್ಮೆನೂ ಇಲ್ಲ.

ಸೆಂಟಿಮೆಂಟ್ ಗಳನ್ನು ಇಷ್ಟ ಪಡೋವ್ರಾದ್ರೆ, ಗಂಭೀರವಾಗಿ ನೋಡೋವ್ರಾದ್ರೆ, ಡೀಸೆಂಟಾದ ಚಿತ್ರವೊಂದನ್ನು ನೋಡಬೇಕಾಗಿದ್ರೆ, ಮಾಡಲು ಬೇರೆ ಏನೂ ಕೆಲಸ ಇಲ್ಲಾಂದ್ರೆ ಇನ್ನು ನಾಲ್ಕು ದಿನದೊಳಗೆ ಚಿತ್ರ ನೋಡಿಕೊಂಡು ಬನ್ನಿ. ಆಮೇಲೆ ಯಾವ ಟಾಕೀಸಿನಲ್ಲೂ ಇರೋಲ್ಲ ಅಂತ ಖಾತ್ರಿ ಇದೆ. ಇಲ್ಲಾಂದ್ರೆ ಸುಮ್ನೆ ನಮ್ಮ ಹಾಗೆ ಒಂದು ಮುಸ್ಸಂಜೆ ಹಾಳು ಮಾಡ್ಕೋಬೇಡಿ. ನನ್ನನ್ನು ಕರೆದುಕೊಂಡು ಹೋಗಿದ್ದ ಗೆಳೆಯರು ಅರ್ಧಗಂಟೆ ಮೊದಲೇ ಎದ್ದುಹೋಗಿ ಬಚಾವಾಗಿ ಬಿಟ್ಟರು !

ಅಂದ ಹಾಗೆ ಮರೆತುಬಿಟ್ಟಿದ್ದೆ , ಈ ಬರಹದ ಮೊದಲಲ್ಲಿ ಹೇಳಿದ ಮಾತಿದೆಯಲ್ಲ ಅದು ನಂದಲ್ಲ, ಅದೂ ಕೂಡ ಸಿನೆಮಾದಲ್ಲಿ ಸುದೀಪ ಹೇಳಿದ್ದು. ಚೆನ್ನಾಗಿದೆ ಅಲ್ವಾ?

ಬೆಂಕಿಬೀಳಲಿ ಆ ಟೈಮ್ಸಾಫಿಂಡಿಯಾಗೆ ಮತ್ತು ಅದರ ರೇಟಿಂಗಿಗೆ.


(ವಿ.ಸೂ: ಮೇಲಿನ ಅಭಿಪ್ರಾಯಗಳು,ವಿಮರ್ಶೆಗಳು ವೈಯಕ್ತಿಕ ಮಾತ್ರ)

ಪೂರಕ ಓದಿಗೆ : ಮುಸ್ಸಂಜೆ ಮಾತು, ಮಧ್ಯರಾತ್ರಿ ಗೋಳು :)

28 ಕಾಮೆಂಟ್‌ಗಳು:

Harish - ಹರೀಶ ಹೇಳಿದರು...

ಸಿನಿಮಾ ಹೇಗಿದೆ ಎಂದು ಕೇಳಿದ್ದಕ್ಕೆ ನನ್ನ ಗೆಳೆಯನಿಗೆ ಆತನ ಗೆಳತಿಯಿಂದ (ಆಕೆ ಸುದೀಪನ ಅಭಿಮಾನಿ) ಸಿಕ್ಕ ಉತ್ತರ: ಹೇಳಲೊಂಥರಾ ಥರ!!

ಅಮರ ಹೇಳಿದರು...

ಅಂತು ಮುಸ್ಸಂಜೆ ನಿನ್ನಮ್ಯಾಲೆ ಮೋಡಿ ಮಾಡ್ಲಿಲ್ಲ ........ ಹೋಗಲಿ ಬಿಡು... ಮತ್ತೊಂದು ಒಳ್ಳೆ ಸಿನಿಮಾ ಬರುತ್ತೆ ನೋಡುವಂತೆ :)

ವಿಕಾಸ್ ಹೇಳಿದರು...

@ಹರೀಶ್,

ಹ್ಹ ಹ್ಹ... ಸರಿಯಾಗಿ ಹೇಳಿದ್ದಾರೆ ಬಿಡು :)

@ಅಮರ
ನಿಂಗೆ ಇಷ್ಟ ಆದಂಗಿದೆ!! :)
ಹ್ಮ್.. ಇರಲಿ.. ಒಳ್ಳೆ ಸಿನೆಮಾಗಳಿಗೆ ಕಾಯೋಣ ಅದ್ಕೇನು.

ಅಂತರ್ವಾಣಿ ಹೇಳಿದರು...

ಚೆನ್ನಾಗಿದೆ ನಿಮ್ಮ ಲೇಖನ....

ಇವತ್ತು ಊಟದ ಸಮಯದಲ್ಲೂ ಸಹೋದ್ಯೋಗಿ ಹೇಳಿದ್ದು ಇದೇ ಮಾತು..... "Times of India rating ನೋಡಿ ಹೋದ್ವಿ... ಸಕ್ಕತ್ ಬೋರಿಂಗ್"...

ಹಷ೯ (Harsha) ಹೇಳಿದರು...

anna ...... uLsibityoooo naakaidu nooru rupayi namma room inda haLagi hogadna.....

hangagi ninna blog ge nanna kadeyinda * * * * (naku star)

ಮೃಗನಯನೀ ಹೇಳಿದರು...

thank God.... ನಾನು ಹೋಗಣ ಅನ್ಕೊಂಡಿದ್ದೆ... ಅರಮನೆ-ಸೆರೆಮನೆ ನೋಡಿ ಮೊದ್ಲೇ ತೆಲೆ ಚಿಟ್ಟು ಹಿಡ್ದು ಹೋಗಿತ್ತು ಸಧ್ಯ ಬಚಾವ್...... ಅಂದಹಾಗೆ ಚೆನಾಗ್ ಬರ್ದಿದೀಯ..;-)

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್,

"ಜೀವನದಲ್ಲಿ ಸಜೆಷನ್ಸ್ ಕೊಡೋದು ಸುಲಭ, ಆದ್ರೆ ನಮ್ ಜೀವನದಲ್ಲಿ ಅದನ್ನು ಫಾಲೋ ಮಾಡದು ಬಹಳ ಕಷ್ಟ."
ಈ ಮಾತನ್ನು ಹೇಳಿಸುವುದರ ಮೂಲಕನೇ ಡೈರೆಕ್ಟರ್ ತಿಳಿಹೇಳಿದ್ದಾನೆ.. ಪ್ರೇಕ್ಷಕರಾದ ನೀವು ಕಾಮೆಂಟ್ ಮಾಡುವುದು ಸುಲಭ ಆದರೆ ಇಂತಹ ಚಿತ್ರ ಮಾಡುವುದು ಬಲು ಕಷ್ಟ ಎಂದು ;-) ಸಿ.ಡಿ. ದುಡ್ಡುಳ್ಸಿ ಉಪಕಾರ ಮಾಡ್ದೆ ತುಂಬಾ ಥ್ಯಾಂಕ್ಸ್.

ವಿಕಾಸ್ ಹೇಳಿದರು...

@ಅಂತರ್ವಾಣಿ,
ನಿಜ್, ಯಾವುದೇ ವಿಷ್ಯದಲ್ಲಾದ್ರೂ ಟೈಮ್ಸಾಫಿಂಡಿಯಾ ನಂಬಿದರೆ ಚಿಪ್ಪೇ ಗತಿ :)

@ಹರ್ಷ,
ಹ್ಹ ಹ್ಹ.. ಅದೇ ಖುಷಿಯಲ್ಲಿ ನಂಗೆ ಪಾರ್ಟಿ ಕೊಡ್ಸಿ ಎಲ್ಲಾರೂ ಸೇರಿ :)

@ಮೃಗೀ
ಥ್ಯಾಂಕ್ಸು. ನೀವು ಅಷ್ಟೇ. ಟ್ರೀಟ್ ಪ್ಲೀಸ್ :)

@ತೇಜಕ್ಕ,
ಈ ಚಿತ್ರ ಮಾತ್ರ ಯಾಕೋ ಮಾಡೋದ್ಕಿಂತ ನೋಡೋದೇ ಕಷ್ಟವೇನೋ ಅನ್ನಿಸಿಬಿಟ್ಟಿತು ನೋಡು :)

ಶ್ರೀ ಹೇಳಿದರು...

ವಿಕಾಸ್,

ನಾನೂ ಕೂಡ release ಆದ ವಾರ ಬಿಟ್ಟು ಮುಂದಿನ ವಾರ ಹೋಗೋಣ ಅಂತಿದ್ದೆ, Timesನ ರೇಟಿಂಗ್ ನೋಡಿ. ನಿಮ್ಮ ಪೋಸ್ಟ್ ನೋಡಿದ್ದು ಒಳ್ಳೇದೇ ಅಯ್ತು. ತುಂಬಾ thanks!! ನಾನೇಗ ನೋಡೋ ಪ್ಲಾನ್‍ನ ಕೈಬಿಡ್ತೀನಿ :)

- ಶ್ರೀ

ಕಟ್ಟೆ ಶಂಕ್ರ ಹೇಳಿದರು...

ಹಾ ಹ್ಹಾ ಹ್ಹಾ

ಕಟ್ಟೆ ಶಂಕ್ರ

ಅಮರ ಹೇಳಿದರು...

ಇಲ್ವೊ ಮಾರಾಯ ಸಿನಿಮಾ ಮಂದಿರದಲ್ಲಿ ಸಿನಿಮಾ ನೋಡಿ ತುಂಬಾ ದಿನಗಳೆ ಆದವು "ಆ ದಿನಗಳು" ಕೊನೆಯದು ..... ವಾರದ ಕೊನೆಯಲ್ಲಿ ಮೈಸೂರು ಕಡೆ ಪಯಣನೋ ಅಥವ ತೇಜಸ್ವಿ ಪುಸ್ತಕನೊ ಹಿಡಿದರೆ .... ಖುಷಿ ಆಗುತ್ತೆ :)

ವಿಕಾಸ್ ಹೆಗಡೆ/Vikas Hegde ಹೇಳಿದರು...

@ಶ್ರೀ
ಇದ್ನ ಬಿಡಿ.ಒಳ್ಳೆ ಕನ್ನಡ ಚಿತ್ರಗಳು ಬಂದಾಗ ತಪ್ಪದೇ ನೋಡಿ ಸಾರ್.

@ಶಂಕ್ರಣ್ಣ,
ಹ್ಹಿ ಹ್ಹಿ :)

@ಅಮರ
’ಆ ದಿನಗಳು’ ಹೋಗಿ ಎಷ್ಟೋ ಕಾಲ ಆಯ್ತು. ನೀ ಇನ್ನು ಆ ದಿನಗಳಲ್ಲೇ ಇದಿಯಲ್ಲಪ್ಪ. ತಿಂಗಳಿಗೊಂದಾದರೂ ಕನ್ನಡ ಸಿನೆಮಾ ನೋಡೋ ಅಭ್ಯಾಸ ಒಳ್ಳೇದು ನೋಡು :). ಆದ್ರೂ ನಿಜ, ಪುಸ್ತಕ ಕೈಲಿ ಹಿಡ್ಕೊಂಡ್ರೆ ಯಾವ ಸಿನೆಮಾನೂ ಬೇಡ

ಸುಧೇಶ್ ಶೆಟ್ಟಿ ಹೇಳಿದರು...

ಚಿತ್ರದ ಬ್ಯಾನರ್ ನೋಡಿ ಚೆನ್ನಾಗಿದೆ ಏನೋ ಅ೦ದುಕೊ೦ಡಿದ್ದೆ. ಆದರೂ ನೋಡಬೇಕು ಎನಿಸಿದೆ.

ಸುಧೇಶ್ ಶೆಟ್ಟಿ ಹೇಳಿದರು...

ayyo...
nimma baraha Odida mElU hOgi nODide mussanje maathu... Thu... enu filmo.. thumbaa bOru... AdarU nanna geLeyanige thumba ishta aaythu...

ವಿಕಾಸ್ ಹೆಗಡೆ/Vikas Hegde ಹೇಳಿದರು...

ಶೆಟ್ಟಿಯವ್ರೇ.. ನಾನೂ ಕೂಡ ಚಿತ್ರದ ಹೆಸರು, ಬ್ಯಾನರ್ ಎಲ್ಲಾ ನೋಡಿ ಚೆನ್ನಾಗಿದೆ ಅನ್ಕೊಂಡೇ ಹೋಗಿದ್ದು ಮತ್ತು ನಿರೀಕ್ಷಿತ ಮಟ್ಟದಲ್ಲಿಲ್ಲದೇ ಬೇಜಾರಾಗಿ ಈ ಬ್ಲಾಗ್ ಬರೆದದ್ದು.

ಆದ್ರೂ ಹೌದು, ಕೆಲವರಿಗೆ ಈ ಚಿತ್ರ ಇಷ್ಟವಾಗಿದೆ. ಬಹಳ ಡೀಸೆಂಟಾಗಿ ಸಾಂಪ್ರದಾಯಿಕವಾಗಿ ಒಂದು ’ಸಿನೆಮಾ’ ಅನ್ನೋದಕ್ಕೆ ಬೇಕಾದ ಎಲ್ಲಾ ಅಂಶಗಳಿವೆ ಅಂತ ಇರ್ಬೋದು.

ಅನಾಮಧೇಯ ಹೇಳಿದರು...

hoon guru, ad hEgo ee blog mEl eDv bidde.....
eshT tegLidroo saalalla ee cinemanna....

naanond review bardideeni...samaya aadre Odi dukha kaDiem maaDko

http://www.rediff.com/movies/2008/may/16ssm.htm - vinay prakash anta

ಸಂತೋಷಕುಮಾರ ಹೇಳಿದರು...

ಮಾರಾಯ ನಾವು ನಿನ್ನ ಥರ ಆ ಚಿತ್ರ ನೋಡಿದ ಸಂತ್ರಸ್ತರೇ. ಇನ್ನು ಈ ಚಿತ್ರವೂ ಯಶಸ್ವಿಯಾದರೇ ರವಿಚಂದ್ರನ್, ಅಂಬರೀಶು, ವಿಷ್ಣು, ಸಾಯಿಕುಮಾರು ಎಲ್ಲರೂ ರೇಡಿಯೋ ಜಾಕಿ ಆಗಿ ನಮ್ಮನ್ನು ಕಾಡುವ ದಿನವೂ ಬರಬಹುದು. ದುಡ್ಡು ಕೊಟ್ಟು ಚಂದನದಲ್ಲಿ ಬರುವ ಸಾಕ್ಕ್ಸ್ಯಚಿತ್ರದ ತರದ ಚಿತ್ರವನ್ನು ನೋಡಲು ಹೋಗಿದ್ದಕ್ಕೆ ಉರಿಯುತ್ತಿದೆ.

ಕವರ್ ಪೇಜ್ ನೋಡಿ ಹೊಸ "ಓ ಮನಸ್ಸೆ" ಯನ್ನು,ಪೊಸ್ಟರ್ ನೋಡಿ ಯಾವುದೇ ಚಿತ್ರಕ್ಕೂ ಹೋಗಬಾರದು ಅಂತ ನಿರ್ಧರಿಸಿದ್ದೇನೆ.ಇಶ್ಟಕ್ಕೂ TOI ದಲ್ಲಿ ಆ ವರದಿ ಬರೆದವನಿಗೆ ಕಿಡ್ನಿ, ಮೆದುಳು ಅದಲು ಬದಲಾಗಿರಬೇಕು ಅಂತಾ ಗುಮಾನಿ.

ವಿಕಾಸ್ ಹೆಗಡೆ ಹೇಳಿದರು...

@ವಿನಯ್ ಪ್ರಕಾಶ್,
ಥ್ಯಾಂಕ್ಸ್ ಗುರುವೇ, ನೀವು ಹೇಳಿದಂಗೆ ನಿಮ್ಮ್ review ಓದಿ ದುಃಖ ಕಡಿಮೆ ಮಾಡಿಕೊಂಡೆ. :(

@ಸಂತೋಷ್ ಕುಮಾರ್,
ಹ್ಹ ಹ್ಹ.. ಟೈಮ್ಸಾಫಿಂಡಿಯಾದವ್ರಿಗೆ ಮೆದುಳೂ ಇಲ್ಲ, ಕಿಡ್ನಿನೂ ಇರಲ್ಲ ಬಿಡು :)

Sahaja ಹೇಳಿದರು...

Registration- Seminar on KSC's 8th year Celebration


Dear All,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends

navilugari ಹೇಳಿದರು...

tumba kashta kaala maaraaya...1 roopaayigu baay baay bidtha iddivi...summane nanna 30 rs na ulisi bitte 30 janma ninage runiyaagirteeni...

Preetish ಹೇಳಿದರು...

Thanks Hegde....

Review chenaagittu..... khandabate kett movie antidru ella... Naanu tumba hopes itkondidde ee film bagge, but nim taraane nan frens nanginta modle hogi nodi duDD ulsidru....

ಸುಧೇಶ್ ಶೆಟ್ಟಿ ಹೇಳಿದರು...

ಸಿಸಿಮಾದ ನಿರ್ದೇಶಕನಿಗೆ ಎಷ್ಟು ಶಪಿಸಿಕೊ೦ಡರೂ ಮನಸ್ಸಿನ ಪರಿತಾಪ ಕಡಿಮೆಯಗುತ್ತಿಲ್ಲ. ಬ್ಲಾಕ್ ನಲ್ಲಿ ೮೦ ರೂ. ಕೊಟ್ಟು ಹೋಗಿದ್ದು. ಈಗ ಸ೦ಕಟವಾಗುತ್ತಿದೆ.

ವಿಕಾಸ್ ಹೆಗಡೆ/Vikas Hegde ಹೇಳಿದರು...

@ನವಿಲುಗರಿ
ರೂಪಾಯಿಗೊಂದು ಜನ್ಮ! ಅಬ್ಬಾ :)


@ಪ್ರೀತಿಶ್,
ಗುಡ್, ಬಚಾವಾಗೋದೆ ನೀನು ! :) thanx


@ಸುಧೇಶ್
ಹ್ಹ ಹ್ಹ್ಹ... ... ಹೇಳಿದ್ ಮಾತು ಕೇಳಲಿಲ್ಲ ಅಂದ್ರೆ ಹಿಂಗೆ ಆಗೋದು. ಕೆಟ್ಟ ಮೇಲೆ ಬುದ್ಧಿ ಬಂತು ಅಲ್ವಾ? :) ಆಶ್ಚರ್ಯ ಅಂದ್ರೆ ಚಿತ್ರ ಕೆಲವು ಟಾಕೀಸಲ್ಲಿ ಇನ್ನೂ ಓಡ್ತಾ ಇರೋದು!!!
ಯಾರು ನೋಡ್ತಿದಾರೋ ಏನೋ.. ಅವರ ಕರ್ಮ . ಅಂದ ಹಾಗೆ.. Black ticket encourage ಮಾಡ್ಬೇಡಿ ಯಾವ ಚಿತ್ರಕ್ಕೂ.

Susheel Sandeep ಹೇಳಿದರು...

ನಮ್‍ಸ್ಕಾರ,
ಲೇಟ್ ಆದ್ರೂ ಲೇಟೆಸ್ಟ್ ಆಗಿ ಒಂದು ಕಮೆಂಟ್ ಗೀಚೋಣಾಂತ ಕಡೆಗೂ ನಿಮ್ಮನೆ ಹುಡುಕ್ಕೊಂಡ್ ಬಂದೇಬಿಟ್ಟೆ!

ನಿಮ್ಮ ಈ ರಿವೀವ್ ಸಲುವಾಗಿ 'ಮುಮಾ ಸಂತ್ರಸ್ತರ ಸಮಿತಿ'ಗೆ ಹೆಚ್ಚು ಜನ ದಾಖಲಾಗದಂತೆ ತಡೆದು ನಿಮ್ಮ ಕೈಲಾದ ಸಹಾಯ ಮಾಡಿದೀರಿ..ಸತ್ಕಾರ್ಯ ಹೀಗೇ ಮುಂದುವರೀಲಿ :)
[ಪೂರಕ ಓದಿಗೆ ನಿಮ್ಮ 'ಕೊಂಡಿ'ನ ನಮ್ಮನೆ ಬಾಗಿಲಿಗೆ ಸಿಕ್ಸಿದೀನಿ!]

Veena Shivanna ಹೇಳಿದರು...

aMtu TOI eshTu janarannu talkies kaLisittu neevu adakkinta hechchu janaranna hogok munchene taDedu bitri bidi..
Review chennagE baredu kaDege hogbedri annotara heLoda? heLaMthara thara antha ondu blog post bariyodu.
Enaagali munde saagunI anno haaDu keLidaaga ee cinemaage hogoNa annistu, kelvru chennagide andru kelvru nimmataraha heLidru... aadre ee cinema innu noDo list nalli ide maatra... !!

Narayan ಹೇಳಿದರು...

ಚಲನಚಿತ್ರ ಚೆನ್ನಾಗಿಲ್ಲ ಎಂದು ಒಬ್ಬರು ಹೇಳಿದರೆ ಇನ್ನೊಬ್ಬರಿಗೂ ಚೆನ್ನಾಗಿರುವುದಿಲ್ಲ ಎಂದು ಊಹಿಸುವುದು ತಪ್ಪು ಎಂಬುದು ನನ್ನ ಅಭಿಪ್ರಾಯ. ಚಲನಚಿತ್ರ ಮತ್ತು ಅದರ ಹಾಡುಗಳು ತಕ್ಕಮಟ್ಟಿಗೆ ಚೆನ್ನಾಗಿದ್ದವು.

Narayan ಹೇಳಿದರು...

ಚಲನಚಿತ್ರ ಚೆನ್ನಾಗಿಲ್ಲ ಎಂದು ಒಬ್ಬರು ಅಭಿಪ್ರಾಯ ಸೂಚಿಸಿದರೆ, ಇನ್ನೊಬ್ಬರೂ ಸಹಮತ ವ್ಯಕ್ತಪಡಿಸುತ್ತಾರೆಂದು ನಿರೀಕ್ಷಿಸುವುದು ತಪ್ಪು ಎಂದು ನನ್ನ ಅಭಿಪ್ರಾಯ.


ಮುಸ್ಸಂಜೆಮಾತು ಚಲನಚಿತ್ರ ಮತ್ತು ಅದರ ಹಾಡುಗಳು ನನಗೆ ಇಷ್ಟವಾದವು.

ವಿ.ರಾ.ಹೆ. ಹೇಳಿದರು...

@ಸುಶೀಲ್, ಥ್ಯಾಂಕ್ಸ್ :)

@ವೀಣಾ, ಏನಾಯ್ತು ಕೊನೆಗೆ? ನೋಡಿದ್ರಾ? ಹೇಗನ್ನಿಸ್ತು?

@ನಾರಾಯಣ್, ಹೌದು, ಅದಕ್ಕೋಸ್ಕರವೇ 'ಅಭಿಪ್ರಾಯಗಳು ವೈಯಕ್ತಿಕ ಮಾತ್ರ' ಅಂತ ಬರೆದಿದ್ದೇನೆ. ಹಾಡುಗಳು ಚೆನ್ನಾಗಿವೆ. ಆದರೆ ಟಾಕೀಸಿನಲ್ಲಿದ್ದಾಗ ಎಷ್ಟು ಬೇಸರವಾಗಿತ್ತು ಅಂದ್ರೆ ಒಳ್ಳೇ ಹಾಡುಗಳೂ ಕೇಳಲಿಲ್ಲ !