ಪುಟಗಳು

ಶುಕ್ರವಾರ, ಜುಲೈ 27, 2007

ಇವಳೇನು ಸೆಕ್ಸಿ ಟೀಚರ್ರಾ ?!!

ಜಾಹೀರಾತಿನ ಈ ಪರಿ !
ಚಿತ್ರವನ್ನು ನೋಡಿ. ಇದು ಬೆಂಗಳೂರಿನ ರಿಚ್ಮಂಡ್ ವೃತ್ತದ ಹತ್ತಿರ ಹಾಕಿರುವ ಜಾಹೀರಾತು ಫಲಕ. ಪಿ.ಯು.ಸಿ, ಸಿ.ಇ.ಟಿ ತರಬೇತಿ ಕೊಡುವ ಖಾಸಗಿ ಸಂಸ್ಥೆಯೊಂದು ಈ ರೀತಿಯ ಜಾಹಿರಾತನ್ನು ಹಾಕಿದೆ. ವಿದ್ಯೆ, ಶಿಕ್ಷಣವನ್ನು ಸಹ ಮಾದಕ ಹೆಣ್ಣಿನ ಫೋಟೋ ಹಾಕಿ ಮಾರುಕಟ್ಟೆಯಲ್ಲಿ ತೆರೆದಿಡಲಾಗಿದೆ. ಇದೇ ರೀತಿ ಕೋರಮಂಗಲದ ಹತ್ತಿರ ಇನ್ನೊಂದು ಕಡೆಯಲ್ಲಿ ಯಾವುದೋ ಶಿಕ್ಷಣ ಸಂಸ್ಥೆಯೊಂದು ಹುಡುಗಿಯೊಬ್ಬಳು ತನ್ನ ಎರಡೂ ಕೈಗಳನ್ನು ಅಗಲಿಸಿ ಕುಳಿತುಕೊಂಡಿರುವ ಚಿತ್ರವನ್ನು ಹಾಕಿ "ಅಡ್ಮಿಷನ್ಸ್ ಓಪನ್" ಎಂದು ಬರೆಯಲಾಗಿದೆ. ಪಿಯುಸಿ, ಸಿಇಟಿ ಅಥವಾ ಇನ್ಯಾವುದೇ ಶಿಕ್ಷಣಕ್ಕೂ ಈ ಹುಡುಗಿಯರ ಚಿತ್ರಕ್ಕೂ ಯಾವ ರೀತಿ ಸಂಬಂಧವೆನ್ನುವುದು ತಿಳಿಯುವುದಿಲ್ಲ. ಉತ್ತಮ ತರಬೇತಿ, ಗುಣಮಟ್ಟದಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಬೇಕಾದ ಕಡೆಯಲ್ಲಿ ಮದ್ಯದ ಜಾಹೀರಾತಿನಂತಹ ಚಿತ್ರವನ್ನು ಹಾಕಿ ತಮ್ಮ ಇರುವಿಕೆಯನ್ನು ತೋರ್ಪಡಿಸಲಾಗಿದೆ.


ಇವತ್ತು ಶಿಕ್ಷಣವೆನ್ನುವುದು ಯಾವ ರೀತಿ ವ್ಯಾಪಾರೀಕರಣಕ್ಕೊಳಪಟ್ಟಿದೆ ಎಂಬುದಕ್ಕೆ ಇದೊಂದು ನಿದರ್ಶನ. ಶಿಕ್ಷಣದಂತಹ ಪವಿತ್ರ ಕ್ಷೇತ್ರಗಳೂ ದುಡ್ಡು ಮಾಡುವ ದಂಧೆಗಳಾದಾಗ ಇಂತಹ ವಿಕೃತಿ, ವಿಚಿತ್ರಗಳು ತಲೆ ಎತ್ತುತ್ತವೆ. ಇವು ನಮ್ಮ ಸಮಾಜದ ನೈತಿಕ ಅಧಃಪತನದ ಧ್ಯೋತಕವೆ ಅಥವಾ ಇಂದಿನ ಸ್ಪರ್ಧಾತ್ಮಕ ಜಗತ್ತಿನ ಅನಿವಾರ್ಯತೆಯೆ ? ಇದು ಹೀಗೆ ಮುಂದುವರೆದರೆ ಸ್ಪರ್ಧೆಯ, ಆಕರ್ಷಣೆಯ , ಅಂತಸ್ತಿನ ಜಿದ್ದಿಗೆ ಬಿದ್ದು ಶಿಕ್ಷಣ ಸಂಸ್ಥೆಗಳು, ಕಾಲೇಜುಗಳು ಅರೆಬೆತ್ತಲೆ ಜಾಹೀರಾತುಗಳನ್ನು ಹಾಕಿ ತಮ್ಮ ಇರುವಿಕೆಯನ್ನು ಪ್ರಚುರಪಡಿಸಿ, ವಿದ್ಯಾರ್ಥಿಗಳನ್ನು ಸೆಳೆಯಲು ಮಾಡೆಲ್ ಗಳನ್ನು ನೇಮಿಸಿಕೊಳ್ಳುವ ಹಂತಕ್ಕೆ ಇಳಿದರೂ ಅಚ್ಚರಿಯೇನಿಲ್ಲ.
******************************************************
(೩೧-೦೭-೨೦೦೭ ರಂದು thatskannada.com ನಲ್ಲಿ ಪ್ರಕಟಗೊಂಡಿದೆ ,

ಇದರ ಬಗ್ಗೆ ವಿಜಯ ಕರ್ನಾಟಕದಲ್ಲಿ ಸಚಿತ್ರ ವರದಿ ಪ್ರಕಟವಾಗಿ ಸಂಬಂಧಪಟ್ಟ ಸಂಸ್ಥೆಗೆ ಹಾಗೂ ಬೆಂಗಳೂರು ಮಹಾನಗರ ಪಾಲಿಕೆಗೆ ಛೀಮಾರಿ ಹಾಕಿದ ಮಾರನೆಯ ದಿನವೇ ಈ ಜಾಹಿರಾತನ್ನು ತೆಗೆದು ಹಾಕಲಾಯಿತು.13 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ವಿಕಾಸ್ ಹೆಗ್ಡೆಯವರೆ,
ಬರಹದ ವಿಷಯ ತುಂಬಾ ಚನ್ನಾಗಿದೆ.
ಇದರ ತಲೆ ಬರಹ ನೋಡಿ ನಾನು ವಿಕಾಸ್ ಹೆಗ್ಡೆ ಮೊಟು ಗೋಡೆ ಆಚೆ ಇಣುಕುತ್ತಾ ಇದಾರೆ ಅನ್ಕೊಂಡೆ.

ಇನ್ನು ಸ್ವಲ್ಪ ಜಾಸ್ತಿ ಬರೆಯಬಹುದಿತ್ತು ಈ ವಿಷಯದ ಮೇಲೆ. ಇನ್ನು ವಿಕಾಸವಾದ ಮಾಡಬಹುದಿತ್ತು. anyway good observation keep it up.

ಶ್ರೀನಿಧಿ.ಡಿ.ಎಸ್ ಹೇಳಿದರು...

ತಲೆ ಬರಹ ಸರಿ ಇಲ್ಲ ಬಾಸ್!

ರಂಜು ಹೇಳಿದ ಹಾಗೆ, ಸ್ವಲ್ಪ ಜಾಸ್ತಿ ಬರೆಯಬಹುದಿತ್ತು ಈ ವಿಷಯದ ಮೇಲೆ, ಬಟ್ , ಓಕೆ....:)

ಸುಪ್ರೀತ್.ಕೆ.ಎಸ್. ಹೇಳಿದರು...

ಹೌದು,
ಅಡ್ವರ್ಟೈಸ್ ಮೆಂಟ್ ಎನ್ನುವುದಕ್ಕೆ ಒಂದು ಸಂಹಿತೆ ಅಥವಾ ರೂಪುರೇಷೆ - ನಿಯಮಗಳು ಇಲ್ಲದಾದಾಗ ಇಂತಹ ಅಪಸವ್ಯಗಳಾಗ್ತವೆ. ಅಸಂಬದ್ಧವಾದ, ಮುಜುಗರಪಡುವಂತಹ ಜಾಹೀರಾತುಗಳು ಪ್ರಕಟವಾಗ್ತವೆ... ಆಕರ್ಷಣೀಯ ಎನ್ನಿಸುವಂತೆ ಮಾಡುವ ಪ್ರಯತ್ನದಲ್ಲಿ ಮೌಲ್ಯ ಕಳೆದ್ಯ್ಹೋಗಬಾರದಲ್ಲ?
ನಿಮ್ಮ ಬರಹದ ಹೆಡ್ಡಿಂಗ್ ನೋಡಿ, ಅಲ್ಲೂ ಜಾಹೀರಾತಿನ ಲೋಕದ ಗಿಮಿಕ್ಕಿನ ಛಾಯೆಯಿರುವುದು ಕಂಡು ಬರುತ್ತದೆ!

ವಿಕಾಸ್ ಹೆಗಡೆ ಹೇಳಿದರು...

ರಂಜು, ಶ್ರೀನಿಧಿ ಧನ್ಯವಾದಗಳು.
ಚಿತ್ರವೇ ಎಲ್ಲಾ ಮಾತಾಡುತ್ತಿದ್ದುದರಿಂದ ನಾನು ಜಾಸ್ತಿ ಮಾತಾಡಕ್ಕೆ ಹೋಗ್ಲಿಲ್ಲ.

ಸುಪ್ರೀತ್, ಸರಿಯಾಗಿ ಹೇಳಿದ್ರಿ.
ಬಹಳ thanx.

dinesh ಹೇಳಿದರು...

ಜಾಹಿರಾತುಗಳ ಮೊದಲ ಉದ್ದೇಶ ಕಣ್ಣುಗಳನ್ನು ಸೆಳೆಯೋದು. ಸೆಳೆತಕ್ಕೆ ಕಣ್ಣು ಸಿಲುಕಿದರೆ ಮುಂದಿನ ಕೆಲಸ ಬುದ್ದಿ ತಂತಾನೆ ಮಾಡುತ್ತೆ..ನೀವು ಸೆಳೆತಕ್ಕೆ ಒಳಗಾದಂತೆ..

gumlal ಹೇಳಿದರು...

ha ha ha ha ah! What a level it has come too! Shame Shame Shame I tell you! This is really arbit! :(
--------------------------------------------------------
If you think you need to type in Kannada, please use quillpad.in/kannada/ It's going to
make your life so easy, you'll think computers were made for Kannada. Try Quillpad. Put up lot
of blog articles and anything else you may want to do...

anusha ಹೇಳಿದರು...

ಪ್ರಚಾರಕ್ಕಾಗಿ ಇಂತ ಕೀಳು ತಂತ್ರಗಳನ್ನು ಉಪಯೋಗಿಸುತ್ತಿರುವುದು ನಿಜಕ್ಕೂ ಖೇದಕರ..ಆದರೆ ನಿಮ್ಮ ತಲೆಬರಹ ಓದಿ ಕುತೂಹಲದಿಂದ ಓದಿದವಳಿಗೆ ಸ್ವಲ್ಪ ನಿರಾಶೆಯಾದದ್ದು ಸುಳ್ಳಲ್ಲ :P.ಲೇಖನ ಯಾಕೋ ಸ್ವಲ್ಪ ದೇಶಭಕ್ತಿಗೀತೆ(ಸಪ್ಪೆ ಸಪ್ಪೆ) ಆಗಿದೆ ಅನ್ನಿಸುತ್ತೆ.... ಇನ್ನೊಂದಿಷ್ಟು ಬರಿಬಹುದಿತ್ತೇನೋ...but gud observation :-)

ವಿಕಾಸ್ ಹೇಳಿದರು...

ದಿನೇಶ್, ಗುಲ್ಮಾಲ್, ಅನುಷಾ ಧನ್ಯವಾದಗಳು.

ದಿನೇಶ್, ಆಕರ್ಷಣೆ ಇರಲಿ, ಆದರೆ ಅದಕ್ಕೊಂದು ನೈತಿಕ,ಸಾಮಾಜಿಕ ಮಿತಿ ಇರಬೇಡವೆ !

Gulmal, ya its a shame, what to do ! :( any how, thaks for quillpad info

ಅನು, ಒಮ್ಮೊಮ್ಮೆ ಹಾಗಾಗತ್ತೆ, ಮೇಲೆ ಇದ್ದಂಗೆ ಒಳಗೆ ಇರಲ್ಲ :). ನನ್ನ ತಲೆಬರಹನೂ ಒಂಥರಾ ಆಕರ್ಷಣಾ ತಂತ್ರವೆ ಅಲ್ವಾ. ಎಲ್ಲಾ ಬರಿ ಪ್ರಣಯಗೀತೆನೆ ಆಗ್ಬಿಟ್ರೆ ದೇಶಭಕ್ತಿ ಕಥೆ ಏನಾಗ್ಬೇಡ ಹೇಳು. ;)

ಶ್ರೀ ಹೇಳಿದರು...

ಹೌದು ವಿಕಸ್. ಚಿತ್ರನೇ ಎಲ್ಲಾಹೇಳುತ್ತೆ.
ಈ idea ಬಂದವರಿಗೆ ಭೇಷ್ ಅನ್ನೋಣ ಗೆಳೆಯರೆ! ’creativity' ಇದೆ. ಯಾಕಂತಿರ? ಅವರ ಉದ್ದೇಶ ಕೇವಲ attract ಮಾಡೋದಷ್ಟೆ. ಅದಕ್ಕೇ ಹೀಗೆ ಜಾಹಿರಾತು ಮಾಡಿದ್ದಾರೆ.

ಆದರೆ ಅದನ್ನು ಇಂಥಾ ಉಚ್ಛಮಟ್ಟದ ವಿದ್ಯೆಗೆ ಉಪಯೊಗಿಸಿರುವುದು ವಿಷಾದಕರ. ಅದನ್ನು ಅವರಿಗೆ ತಲುಪಿಸೋದಾದ್ರೂ ಹೇಗೆ?

Karthik ಹೇಳಿದರು...

ನನ್ ಪ್ರಕಾರ ಇದೇನು ಆಕರ್ಷಣೀಯ ad ಅಲ್ಲ. ಈ ಥರಾ ಜಾಹಿರಾತು ಹಾಕೋರು ಇನ್ನ್ಹೇಗೆ ಪಾಠ ಮಾಡ್ತಾರೆ ಅಂತ ಸ್ವಲ್ಪ common sense ಇರೋರು ಯೋಚನೆ ಮಾಡ್ತಾರೆ. ಇಷ್ಟೂ ಮೀರಿ ಅಲ್ಲೇನಾರ ಹೋಗಿ ಸೇರ್ಕೊಂಡ್ರೆ, ಅವನು ಯಾಕೆ ಸೇರ್ಕೋತಾನೆ ಅಂತ ಗೊತ್ತಲ್ಲ ಬಿಡಿ. CEL, PUC ಪಾಸ್ ಮಾಡಕ್ಕಂತೂ ಅಲ್ಲ. :)

nirmala ಹೇಳಿದರು...

Dear Vikas,

I agree 100% with you on this particular subject. In todays modern life to advertise men's shaving cream, hair get etc, etc girls are modelling. Our Indian Advertising Agency has come to this conculsion that anything and everything can be marketed by using girl models.

Nice topic to discuss keep writing on these type of subject.

ಅನಾಮಧೇಯ ಹೇಳಿದರು...

ನಮಸ್ಕಾರ ವಿಕಾಸ್,

ನೀವು ಬರೆದಿರುಹುದು ಬಹಳ ಚೆನ್ನಾಗಿದೆ. ಈಗೆ ಬರೆಯುತ್ತಿರಿ.

ನಿಮ್ಮವ,
ಪ್ರಸನ್ನ

pinaki ಹೇಳಿದರು...

cholo barithe anna neenu. keep it up