ಪುಟಗಳು

ಬುಧವಾರ, ಜೂನ್ 20, 2007

ಪ್ರೇಮಿಗಳ ಸಂಭಾಷಣೆ (ಇದು ಹುಡುಗಿಯರಿಗಲ್ಲ !!)

"Lovers' conversation" ಎಂಬ ಹೆಸರಿನಲ್ಲಿ ಬಂದ e mail ಒಂದು ಬಹಳ ಚೆನ್ನಾಗಿದೆ ಅನ್ನಿಸಿದ್ದರಿಂದ ಅದನ್ನು ಕನ್ನಡದಲ್ಲಿ ಬರೆದು ಹಾಕುತ್ತಿದ್ದೇನೆ. ಇದನ್ನು ರಚಿಸಿದವರು ಯಾರು ಎಂದು ಗೊತ್ತಿಲ್ಲ. "ನದಿ ಮೂಲ ಋಷಿ ಮೂಲ" ಹುಡುಬಾರದು ಅಂತ ಮಾತಿದೆ. ಅದಕ್ಕೆ "ಹೆಣ್ಣಿನ ಮೂಲ"ವೂ ಕೂಡ ಸೇರಿಕೊಂಡಿದೆ. ಅದೇ ರೀತಿ "e mail forwardನ ಮೂಲ"ವನ್ನು ಕೂಡ ನಾವು ಹುಡುಕಲು ಹೋಗಬಾರದು ಎಂಬುದು ಐ.ಟಿ. ಕ್ಷೇತ್ರದ ಅಲಿಖಿತ ನಿಯಮ. ಏನೇ ಆಗಲಿ ಇದರ ಮೂಲ ಲೇಖಕರಿಗೊಂದು ದಿವ್ಯ ಧನ್ಯವಾದ ಹೇಳುತ್ತಿದ್ದೇನೆ.

ಇದಕ್ಕೆ ಪ್ರೇಮಿಗಳ ಸಂಭಾಷಣೆ ಎಂಬ ಹೆಸರಿದ್ದರೂ ನಿಜವಾದ ಪ್ರೇಮಿಗಳ ಸಂಭಾಷಣೆ ಹೀಗಿರುವುದಿಲ್ಲ ಎನ್ನುವುದು ಬಲ್ಲವರ ಅಭಿಪ್ರಾಯ, ಇದು ಬರೀ ಪ್ರೇಮಿಗಳ ನಡುವಣ ಸಂಭಾಷಣೆ ಮಾತ್ರ ಆಗಬೇಕಿಲ್ಲ ಎಂಬುದೂ ಇನ್ನು ಕೆಲವರ ಅಂಬೋಣ. ಪ್ರೀತಿ ಒಂದು ಹಂತಕ್ಕೆ ಬಂದ ಮೇಲೆ ಇಂತಹುದು ಸಹಜ ಮತ್ತು ಸತ್ಯ ಎಂಬುದು ಅನುಭವಿಗಳ ವಾದ. ನನಗಂತೂ ಗೊತ್ತಿಲ್ಲ , ಅನುಭವವಿರದ ಕಡೆಗಳಲ್ಲಿ ಅಭಿಪ್ರಾಯ ಮಂಡಿಸುವುದು ನನಗಿಷ್ಟವಿಲ್ಲ. :-)

ನಿರ್ಧಾರ ಓದುಗರಿಗೆ ಬಿಟ್ಟದ್ದು........


ವಿ.ಸೂ: ೧. ಆವರಣ (bracket)ಗಳಲ್ಲಿರುವುದು ಮನಸಿನ ಮಾತುಗಳು
೨. ಪ್ರೀತಿ ಮಾಡ್ತಾ ಇರೋರು ಬಯ್ಕೊಂಡ್ರೆ ನಾನೇನೂ ಮಾಡಕ್ಕಾಗಲ್ಲ.


-------------------------------------------------------------------

ರಾತ್ರಿ ಹನ್ನೊಂದೂ ವರೆ ಗಂಟೆ....

ಹುಡುಗಿ ಹುಡುಗನಿಗೆ ಮಿಸ್ಡ್ ಕಾಲ್ ಕೊಡ್ತಾಳೆ... ಅವನು ಅವಳಿಗೆ ವಾಪಸ್ ಫೋನ್ ಮಾಡ್ತಾನೆ...


ಹುಡುಗಿ: ಹಲೋ !
ಹುಡುಗ: (ಅಯ್ಯೋ.. ಏನ್ ಕುಯ್ತಾಳೋ ಏನೋ... ) ಹಾಯ್... ಏನ್ ಹೇಳು ..?
ಹುಡುಗಿ: ಏನಿಲ್ಲಾ , ಸುಮ್ನೆ ಕಾಲ್ ಮಾಡಿದೆ.
ಹುಡುಗ: (ಕಾಲ್ ಯಾವಾಗ್ ಮಾಡಿದೆ..ಮಿಸ್ಡ್ ಕಾಲ್ ತಾನೆ ಕೊಟ್ಟೆ...) ಒಹ್... ಒ.ಕೆ .. ಏನ್ ಮಾಡ್ತಾ ಇದ್ದೆ ಚಿನ್ನು?
ಹುಡುಗಿ: ಈಗ್ ತಾನೆ ಊಟ ಆಯ್ತು honey... ನೀನು ಏನ್ ಮಾಡ್ತಿದ್ದೆ?
ಹುಡುಗ: ನಂದೂ ಈಗ ತಾನೆ ಊಟ ಆಯ್ತು... ಈಗ "ಕುಣಿದು ಕುಣಿದು ಬಾರೆ" ಹಾಡು ಕೇಳ್ತಾ ಇದ್ದೆ FMನಲ್ಲಿ.
ಹುಡುಗಿ: nice song

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ..... ಅವಳು ಹಾಡನ್ನು ಗುನುಗುತ್ತಾಳೆ

ಹುಡುಗ: (ಅಲ್ಲೇನು ಇಲಿ ಕಿಚುಗುಡ್ತಾ ಇದಿಯಾ?..) ಹೇಯ್!!! ನೀನ್ ಇಷ್ಟು ಚೆನ್ನಾಗಿ ಹಾಡ್ತಿಯಾ?! ನಂಗೆ ಗೊತ್ತೇ ಇರ್ಲಿಲ್ಲಾ!
ಹುಡುಗಿ: **ಕಿಲಕಿಲ ನಗು**
ಹುಡುಗ: ಹೇಯ್.. ಇನ್ನೊಂದು ಸಲ ಹಾಡು please!
ಹುಡುಗಿ: ಇಲ್ಲಿ ಎಲ್ಲಾ ಮಲ್ಗಿದಾರೆ .. ಅಮೇಲೆ ಎಲ್ಲಾ ಭಯ ಪಡ್ತಾರೆ..
ಹುಡುಗ: (correct.. ಅವ್ರು ಯಾವುದೋ ಮೋಹಿನಿ ಪಿಶಾಚಿ ಅನ್ಕೋತಾರೆ..) Come on! Please!
ಹುಡುಗಿ: ಹೋಗೋ.. ನಾನೇನು ಅಷ್ಟು ಚೆನಾಗಿ ಹಾಡಲ್ಲ.
ಹುಡುಗ: (ಅದು ಊರಿಗೇ ಗೊತ್ತು... :-)) ತುಂಬಾ ಚೆನಾಗಿತ್ತು ಹಾಡಿದ್ದು.. please ಹಾಡು dear
ಹುಡುಗಿ: ನಂಗೇನೋ odd ಆಗಿದೆ ಅನ್ಸ್ತಿದೆ ಚಿನ್ನು.
ಹುಡುಗ: ಅದ್ರಲ್ಲಿ ಏನಿದೆ? ಚೆನ್ನಾಗೇ ಹಾಡ್ತಿಯಲ್ಲಾ

ಹುಡುಗಿ: ನೀನೇ ಹೇಳ್ಬೇಕು ಅಷ್ಟೆ
ಹುಡುಗ: (ನಾನಾ? ನಾನು ಬೇರೆ ದಾರಿ ಇಲ್ದೇ ಹೇಳ್ದೆ...) ಈಗ ಹಾಡ್ತೀಯೋ ಇಲ್ವೋ?
ಹುಡುಗಿ: ಯಾಕೋ ತಲೆ ತಿಂತೀಯಾ?
ಹುಡುಗ: ಹ್ಮ್.... ಸರಿ ಬಿಡು. ಒ.ಕೆ
ಹುಡುಗಿ: ನನ್ voice ಅಷ್ಟೆನೂ ಚೆನಾಗಿಲ್ಲ
ಹುಡುಗ: (ಕತ್ತೆ ಕೂಡ ನಾಚ್ಕಳೋ voice.....) hmmm
ಹುಡುಗಿ: ಸರಿ... ಇಷ್ಟೋಂದು ಕೇಳ್ತಿದಿಯಾ.. ಒಂದೇ ಒಂದು stanza ಹಾಡ್ತಿನಿ ಆಯ್ತಾ??
ಹುಡುಗ: (ಇನ್ನೇನು ಕಾದಿದಿಯೋ...) great!!
ಹುಡುಗಿ: ಯಾವ ಹಾಡು ಹಾಡ್ಲಿ?
ಹುಡುಗ: (ನೀನು ಯಾವ ಹಾಡು ಹಾಡಿದ್ರೇನು.... ನನ್ ನಿದ್ದೆ ಅಂತೂ ಹಾಳಾಗೋಯ್ತು...) ಪ್ರೇಮಲೋಕದ್ದು "ನಿಂಬೆ ಹಣ್ಣಿನಂತ ಹುಡುಗಿ ಬಂತು..."?
ಹುಡುಗಿ: ಒಳ್ಳೆ ಹಾಡು... ಆದ್ರೆ ನಂಗೆ lyrics ಜ್ಞಾಪಕ ಇಲ್ಲಾ
ಹುಡುಗ: (textbook ಬಿಟ್ರೆ ನಿಂಗೇನ್ ಜ್ಞಾಪಕ ಇರತ್ತೆ ಹೇಳು..) "ಸಂತೋಷಕ್ಕೆ ಹಾಡು ಸಂತೋಷಕ್ಕೆ"??
ಹುಡುಗಿ: ಇಲ್ಲಾ ಅದೇ ಹಾಡು ಹಾಡ್ತೀನಿ
ಹುಡುಗ: (ಎಲ್ಲಾ ಒಂದೇ , ಯಾವ ಹಾಡಾದ್ರೂ ಕಿವಿ ಕೆಟ್ಟೆ ಕೆಡುತ್ತೆ...) cool

ಅವಳು ಸಣ್ಣಗೆ ಕೆಮ್ಮಿ ಗಂಟಲು ಸರಿ ಮಾಡ್ಕೊಂಡು, ಒಂದು ಸಾಲು ನಿಧಾನಕ್ಕೆ ಗುನುಗುತ್ತಾಳೆ...


ಹುಡುಗಿ: ಹೇಯ್, ಬೇಡ ಕಣೋ.. ನಾಚಿಕೆ ಆಗತ್ತೆ !
ಹುಡುಗ: ಹಾಡು ಹಾಡು... ನಿನ್ನ ಹಾಡಿನ ಅಲೆಯಲ್ಲಿ ನಾನು ಮುಳುಗಿ ಮುಳುಗಿ ತೇಲಬೇಕು
ಹುಡುಗಿ: ನೋಡು ಜಗಳ ಶುರು ಮಾಡ್ತಿದಿಯಾ..
ಹುಡುಗ: (ಗೊತ್ತಾಯ್ತು ತಾನೆ... ಮತ್ತಿನ್ನೇನು..) ಇಲ್ಲ್ಲಾ ಇಲ್ಲಾ.. ನೀನು ನಾಚಿಕೆ ಅಂದ್ಯಲ್ಲಾ ಅದ್ಕೆ.. Trying to make u cool
ಹುಡುಗಿ: hmm
ಹುಡುಗ: please ಹಾಡೆ

ಹುಡುಗಿ:ನಾಳೆ ಹಾಡ್ಲಾ?
ಹುಡುಗ: (ಅಬ್ಬಾ.. ತಪ್ಸ್ಕೊಂಡೆ...escape) ಸರಿ ಮಾ. ನಿಂಗೆ ಯಾವಾಗ ಹಾಡ್ಬೇಕು ಅನ್ಸತ್ತೋ ಆವಾಗ್ಲೇ ಹಾದು ಆಯ್ತಾ
ಹುಡುಗಿ: hmm
ಹುಡುಗ: Good nightಹುಡುಗಿ: Good night, Sweet Dreams.. Take care...
ಹುಡುಗ: (ಜೀವ ಉಳಿತು..) Sweets dreams to u too...
ಹುಡುಗಿ: hmm


ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಅವಳ ಫೋನು (ಅಂದ್ರೆ ಮಾಮೂಲಿ ಮಿಸ್ಡ್ ಕಾಲ್ ಅಷ್ಟೆ) , ಹುಡುಗ ಫೋನ್ ಮಾಡುತ್ತಾನೆ...

ಹುಡುಗಿ: ಹೇಯ್.. ಮಲಗಿಬಿಟ್ಯಾ
ಹುಡುಗ: (ಇಲ್ಲಾ .. ಕರೆಂಟ್ ಕಂಡು ಹಿಡಿತಾ ಇದಿನಿ...) ಇಲ್ಲಾ ಮಾ. ಹೇಳು
ಹುಡುಗಿ: ಏನ್ ಮಾಡ್ತಿದಿಯಾ?
ಹುಡುಗ: (ನಡು ರಾತ್ರಿಲಿ ಏನ್ ಐಸ್ ಪೈಸ್ ಆಡಕ್ಕಾಗತ್ತಾ?..) match ನೋಡ್ತಾ ಇದ್ದೆ
ಹುಡುಗಿ: ಸರಿ.. ನೀನು match ನೋಡ್ಕೊ
ಹುಡುಗ: ಹೇಯ್.. ಇರ್ಲಿ ಹೇಳು.. ಅದ್ಯಾವ್ದೋ ಹಳೇ match.
ಹುಡುಗಿ: ಅಲ್ಲಾ, ನಾ ಹಾಡಿದ್ದು ಕೆಟ್ಟದಾಗಿತ್ತಾ?


ಇದು ಹುಡುಗಿಯರು ಎಸೆಯೋ tricky ಪ್ರಶ್ನೆ... ಅವನು ಸ್ವಲ್ಪ ಯೋಚಿಸ್ತಾನೆ...

ಹುಡುಗ: (ಅಬ್ಬಾ.. ಇವತ್ತು ನಾನು ಬಚಾವಾದೆ.. ಸದ್ಯ ನೀನು ಹಾಡ್ಲಿಲ್ವಲ್ಲಾ!) ಕೆಟ್ಟದಾಗಿತ್ತು ಅಂತ ನಾನೆಲ್ಲಿ ಹೇಳ್ದೆ.. ನೀನು ನಾಚಿಕೆ ಅಂದ್ಯಲ್ಲಾ ಅದ್ಕೆ ನೀನು comfortable ಆಗು ಮೊದಲು ಅಂತ ಅಷ್ಟೆ. ನಾಳೆ ಹಾಡ್ತಿನಿ ಅಂದ್ಯಲ್ಲ.. ಅದಕ್ಕೆ ಕಾಯ್ತಾ ಇದಿನಿ....(ಇವತ್ತಂತೂ ತಪ್ಪಿಸಿಕೊಂಡೆ ಅನ್ಕಂಡಿದಿನಿ..)

ಹುಡುಗಿ: ಈಗ್ಲೇ ಹೇಳ್ತೀನಿ ಕೇಳು...


ಅವಳು ಒಂದು stanza ಹಾಡು ಹೇಳ್ತಾಳೆ, ಹುಡುಗ ಸುಮ್ಮನೆ ಕೇಳ್ತಾ ಇರ್ತಾನೆ..

ಹುಡುಗ: (ಥೂ......) wow. too good !
ಹುಡುಗಿ: ಸುಳ್ಳು... ನಂಗೊತ್ತು ನನ್ voice ಎಷ್ಟು ಕಚ್ಚಡವಾಗಿದೆ ಅಂತ
ಹುಡುಗ: (ನಿಂಗೂ self realization ಇದೆ ಅಂತಾಯ್ತು..:-)) ಹೇಯ್.. ತುಂಬಾ ಚೆನಾಗಿ ಹಾಡ್ತೀಯಾ ಕಣೆ.
ಹುಡುಗಿ: ಹೋಗೋ, ಸುಮ್ನೆ ಹೇಳ್ಬೇಕಲ್ಲಾ ಅಂತ ಹಿಂಗೆಲ್ಲಾ ಹೇಳ್ತಿಯಾ.
ಹುಡುಗ: (ಛಿ ಕಳ್ಳಿ... ಸರಿಯಾಗೇ ಕಂಡು ಹಿಡಿದುಬಿಟ್ಟೆ..) ಛೆ ಛೆ.. ನಿನ್ voice ಸರಿ ಇರ್ಲಿಲ್ಲಾ ಅಂದ್ರೆ ನಾನು ಇಷ್ಟೊತ್ತು ಕೇಳ್ತಾನೇ ಇರ್ಲಿಲ್ಲಾ..
ಹುಡುಗಿ: hmmmmm
ಹುಡುಗ: ನೀನು ಇಷ್ಟು ಚೆನಾಗಿ ಹಾಡ್ತಿಯಾ ಅಂತ ಗೊತ್ತೇ ಇರ್ಲಿಲ್ಲ! (ಮತ್ತೆ ಗೊತ್ತಾಗೋದೂ ಬೇಡ..)
ಹುಡುಗಿ: Hmmm! ಸರಿ good night.. ನೀನು ಮಲ್ಕೋ..
ಹುಡುಗ: (ನಿನ್ ಹಾಡು ಕೇಳಿದ್ಮೇಲೆ ಇನ್ನೆಲ್ಲಿಂದ ಬರ್ಬೇಕು ನಿದ್ದೆ....) good night
ಹುಡುಗಿ: take care
ಹುಡುಗ: you too


ಹುಡುಗಿ: ಹೇಯ್..
ಹುಡುಗ: (ಅಯ್ಯೋ.... ಇವಳು ಬಿಡಲ್ಲ ಇವತ್ತು...) ಹಾಂ.. ಹೇಳು
ಹುಡುಗಿ: ಚಿನ್ನು... ನಿಜ್ವಾಗ್ಲೂ ನನ್ voice ಚೆನಾಗಿದಿಯಾ?
ಹುಡುಗ: (...ಹಾಳಾಗೋಗು ಎಲ್ಲಾದ್ರೂ.. ನಿನ್ voice record ಮಾಡಿ ಒಂದ್ಸಲ ಕೇಳು ಗೊತಾಗತ್ತೆ..) ನಿಜ್ವಾಗ್ಲೂ ಕಣೆ..
ಹುಡುಗಿ: ಬರೀ ಸುಳ್ಳು
ಹುಡುಗ: (ಇವ್ಳಜ್ಜಿ !! ಇನ್ನು ನಿದ್ದೆ ಮಾಡೋಕ್ಕೆ ಬಿಡ್ಲಿಲ್ಲಾ ಅಂದ್ರೆ...) ಏನಿಲ್ಲಪ.. ಚೆನಾಗೇ ಹಾಡ್ತಿಯ.

........................................................................

.................................................................

............ and the conversation continues ......... ..........
20 ಕಾಮೆಂಟ್‌ಗಳು:

ಅನುಷಾ ಹೇಳಿದರು...

ಬರೆದ ಬಗೆಯೇನೋ ಚೆನ್ನಾಗಿದೆ..ಆದರೆ ಈ ಹುಡುಗಿಯರಿಗಲ್ಲ ಅನ್ನೊ caption ಯಾಕೆ?!ಅದನ್ನ ನೋಡಿ ಓದುವ ಕುತೂಹಲ ಹೆಚ್ಚಾಯಿತು..ಇದು ಬರೀ love s a fashion ಅನ್ನುವವರ ಮನೋಭಾವ ಅನ್ನಿಸುತ್ತೆ..ನೀನು ಬರೆದಿರೋದು ಅನುಭವಿಸಿ ಬರೆದ ಹಾಗಿದೆ.ಹೌದಾ ವಿಕ್ಕಿ...ನೀನು ಹಾಗೆ ಮಾಡೋದಾ?! :)

condumdots ಹೇಳಿದರು...

Hey vikas what do u think of yourself?what is ur qualification?Dont think that u r a big journo....wht the hell is this lovers conversation?this can never happen..it shows ur cheap mentality towards love..what crap is that your blog about IT?..you are working in the software field and blaming the same.what the hell would you do if software was not there..u would have stuck to some agricultural work.India is not improving because of stupids like you..We dont have such non supportive culture here.where were you schooled for the sake of hell..
Dr.D.M.Sagar
Canada

ಅನಾಮಧೇಯ ಹೇಳಿದರು...

ವಿಕಾಸ್,
ನಿಮ್ಮ ಹಾಸ್ಯ ಮನೋಭಾವ ತುಂಬಾ ಅದ್ಭುತವಾಗಿದೆ. ನಿರೂಪಣೆ ಚನ್ನಾಗಿ ಇದೆ. ಹು ಇದು ಹುಡುಗಿಯಾಗಿ ನಾನು ಓದದಿದ್ದರೆ ಚನ್ನಾಗಿ ಇತ್ತೇನೋ. ಹುಡುಗರ ಬುದ್ಧಿ ತಿಳಿಸಿ ಕೊಟ್ಟಿದ್ದಕ್ಕೆ ದನ್ಯವಾದಗಳು. ನಾನಂತು ಇನ್ನು ಹುಶಾರಾಗಿ ಇರ್ತಿನಿ. ನಿಮ್ಮ ಹುಡುಗಿ ಹೀಗೆ ಮಾಡುತ್ತಾಳಾ? ನಿಜವಾದ ಪ್ರೀತಿ ಇದ್ದರೆ ಆ ಹುಡುಗಿಯ ಒಂದು ಫೋನ್ ಗೋಸ್ಕರ ಕಾಯುತ್ತಿರುತ್ತಾರೆ. ನಿಮಗೆ ಪ್ರೀತಿ ಅನ್ನುವುದು ಆಟವಿರಬೇಕು ಅದಕ್ಕೆ ಹೀಗೆ ಅವಳು ಮಾತನಾಡಿದ್ದು ಹೀಗೆ ಅನ್ನಿಸುತ್ತಿದೆ. ಹ್ಮ್ ಇರಲಿ.

ಅನಾಮಧೇಯ ಹೇಳಿದರು...

ನಿಮ್ಮ ಹುಡುಗಿಗೆ ಈ ಫೋಸ್ಟ್ ಬಗ್ಗೆ ಹೇಳಬೇಡಿ ಕೋಪಿಸಿಕೊಂಡಾಳು ಮತ್ತೆ.

Chandru Kengatte ಹೇಳಿದರು...

ವಿಕಾಸ್, ಚೆನಾಗಿದೆ....
ಆದ್ರೆ ಪ್ರೇಮ ಶುರು ಆಗೋದ್ಕಿಂತ ಮುಂಚೆ , ಅಂದ್ರೆ ಇನ್ನೂ ಹೆಚ್ಚು close ಆಗ್ದೇನೆ starting problemನಲ್ಲಿ ಏನು ಮಾತಾಡ್ಬೇಕು ಅಂತಾನೇ ತೋಚದೆ ಮಾತಾಡ್ತಾರಲ್ಲಾ... ಹಾಗಿದೆ.

ಅಲ್ದೆ ಹುಡುಗನಿಗೆ ಇಷ್ಟ ಇಲ್ದೆನೆ ಹುಡುಗಿನೆ ಹಿಂದೆ ಬಿದ್ದು conversation start ಮಾಡಿದ್ರೆ ಹೀಗಾಗುತ್ತೆನೋ... ಇರಲಿ.. heading ಕೊಡುವಾಗ ಸ್ವಲ್ಪ care ತೊಗೊ.
@Sagar
ಹಲೋ ಸಾಗರ್,
ವಿಕಾಸ್ ಏನು ಇಲ್ದೇನೆ ಇರೋದೇನು ಬರೆದಿಲ್ಲ. specific ಆಗಿ software engineer ಅಂದಿದ್ದು ತಪ್ಪಿದ್ರೂ ಕೂಡ software ಬರ್ದೆನೆ ಇದ್ದಿದ್ರೆ India develop ಆಗ್ತಾನೆ ಇರ್ಲಿಲ್ಲ ಅನ್ನೋದು ಎಷ್ತು ಸಮಂಜಸ ?
ಅದಕ್ಕೆ ಇಲ್ಲಿ non supportive culture , stupid ಅಂದಿದ್ದು ಜಾಸ್ತಿ ಆಯ್ತು.
ಇಂತ ಪ್ರಜಾಪ್ರಭುತ್ವ ದೇಶದಲ್ಲಿ ಇಷ್ಟೋಂದು diversityಗಳಿದ್ರೂ ಜನ ಬದುಕಿದಾರೆ ಅಂದ್ರೆ ಅದು ಭಾರತದಲ್ಲಿ ಮಾತ್ರ ಸಾಧ್ಯ.
ನಿಮ್ USನಲ್ಲಿ ಬಂದ Katrina ಹೇಗೆ ಅಲ್ಲಿ ನ ಜನಗಳನ್ನ ಕಂಗಾಲಾಗಿಸ್ತು ಮತ್ತೆ ನಮ್ ದೇಶದಲ್ಲಿ ಸುನಾಮಿ ಬಂದಾಗ ಹೇಗೆ mutual support, cooperation ಸಿಕ್ತು ಅನ್ನೋದು ನೋಡಿದ್ರೆ ಗೊತ್ತಾಗತ್ತೆ.
ಸಾಫ್ಟ್ ವೇರ್ನಿಂದ ದೊಡ್ಡ ದೊಡ್ಡ್ ಬಿಲ್ಡಿಂಗ್ಸ್ ಬಂದಿರ್ಬೋದು, ಲೈಪ್ ಸ್ಟೈಲ್ ಬದಲಾಗಿರ್ಬೋದು, ಜಾಸ್ತಿ ಹಣ ಸಿಕ್ತಾ ಇರ್ಬೋದು.. ಆದ್ರೆ ಅದು ನಮ್ಮ ಭಾರತೀಯ ಸಮಾಜದ ಮೇಲೆ ಎಂತಹ ವಿರುದ್ಧ ಪರಿಣಾಮ ಬೀರಿದೆ ಅನ್ನೋದು ಕೂಡ ಅಷ್ಟೆ ಸತ್ಯ. ಇರಲಿ ಇದು ಮುಗಿಯದ ಕಥೆ.. ಇದು ಬ್ಲಾಗ್ ಕಮೆಂಟ್ ಆದ್ರಿಂದ ಇಷ್ಟಕ್ಕೆ ಬಿಡೋಣ..

Naveen ಹೇಳಿದರು...

hey vikasa,
nanegeko ninna premigala sambhashane ista aglilla, idu 'vikasa vadha' alla! e thara barahagalu ninna blog titlege sarihondhodhilla.

Crazy ಹೇಳಿದರು...

Condumdots... I can understand your views but then being an educated one it seemed to me that the way u have written is too rude... I know what Vikas has written is not correct but then there is a way to tell him ..

I would say whatever Vikas wrote should be taken on the lighter side instead of getting literally into it. u c what im saying ??

Sanath ಹೇಳಿದರು...

ವಿಕಾಸ್,
ಚೆನ್ನಾಗಿದೆ ಬರೆದದ್ದು..

@Dr.D.M.Sagar,
ಸ್ವಾಮಿ ತಾವು ತಮ್ಮ ಅರೆ ಬೆಂದ ideaಗಳು, ತಮ್ಮ ಎಕ ಮುಖ ಅಲೋಚನೆ ಇಂದ ಹೊರಬಂದ್ರೆ ಒಳ್ಳೇದು.
ಈ ಪೊಸ್ಟ್ ನಿಮಗೆ ಇಷ್ಟ ಅಗಿಲ್ಲ ಅಂದ್ರೆ .ಸುಮ್ನೆ ಇಷ್ಟ ಆಗಿಲ್ಲ ಅಂತ comment ಹಾಕಿ,ಮುಂದೆ ಹೋಗಿ.
ಇತರರ qualification,ಯೋಚನೆ ಬಗ್ಗೆ ನೀವು ಮಾತಾಡೋದು ಯಾಕೋ ಸರಿ ಕಾಣ್ತ ಇಲ್ಲ.

"ಇದಕ್ಕೆ ಪ್ರೇಮಿಗಳ ಸಂಭಾಷಣೆ ಎಂಬ ಹೆಸರಿದ್ದರೂ ನಿಜವಾದ ಪ್ರೇಮಿಗಳ ಸಂಭಾಷಣೆ ಹೀಗಿರುವುದಿಲ್ಲ ಎನ್ನುವುದು ಬಲ್ಲವರ ಅಭಿಪ್ರಾಯ, ಇದು ಬರೀ ಪ್ರೇಮಿಗಳ ನಡುವಣ ಸಂಭಾಷಣೆ ಮಾತ್ರ ಆಗಬೇಕಿಲ್ಲ ಎಂಬುದೂ ಇನ್ನು ಕೆಲವರ ಅಂಬೋಣ. ಪ್ರೀತಿ ಒಂದು ಹಂತಕ್ಕೆ ಬಂದ ಮೇಲೆ ಇಂತಹುದು ಸಹಜ ಮತ್ತು ಸತ್ಯ ಎಂಬುದು ಅನುಭವಿಗಳ ವಾದ. ನನಗಂತೂ ಗೊತ್ತಿಲ್ಲ , ಅನುಭವವಿರದ ಕಡೆಗಳಲ್ಲಿ ಅಭಿಪ್ರಾಯ ಮಂಡಿಸುವುದು ನನಗಿಷ್ಟವಿಲ್ಲ." ಅಂತ ಬರೆದಿದ್ದರೂ ನಿಮಗೆ ಅದನ್ನ ಅರ್ಥ ಮಾಡಿಕೊಳ್ಳುವ ವಿವೇಚನೆ ಇಲ್ಲ.
ಬಿಡಿ ನಿಮ್ಮ ಹತ್ರ ವಾದ ಮಾಡೋ ಇಚ್ಚೆನೂ ನಮಗೆ ಇಲ್ಲ.

nirmala ಹೇಳಿದರು...

ಹಾಯ್ ವಿಕಾಸ್,
ನೀನು ಬರೆದಿರುವುದು ಪ್ರೇಮಿಗಳ ಸಂಭಾಷಣೆ ತರಹ ಕಾಣುತ್ತಿಲ್ಲ. ನಂಗನ್ನಿಸುತ್ತೆ ಇದು ನಿಜವಾದ ಪ್ರೀತಿಯಲ್ಲ. ಪ್ರೀತಿಸೋರು ಯಾರು ತಮ್ಮ ಪ್ರೇಮಿಯಬಗ್ಗೆ ಇಷ್ಟು ಹಗುರವಾಗಿ ಆವರಣದಲ್ಲಿ ಹೇಳುವುದಿಲ್ಲ.
ಪ್ರೀತಿಸುವವರಿಗೆ ತಮ್ಮ ಪ್ರೇಯಸಿ ಹೇಳುವುದೆಲ್ಲ something very precious, infact there is no words to express.
ಪ್ರೀತಿ ಬಗ್ಗೆ ಹಿಂಗೆಲ್ಲಾ ಬರೆದಿದ್ದಿರಾ ಅಂದ್ರೆ ನೀವು ಈ ತನಕ ಯಾರನ್ನು ಪ್ರೀತಿಸಿಲ್ಲಾ ಅನ್ನಿಸುತ್ತೆ.

ವಿಕಾಸ್ ಹೆಗಡೆ/ Vikas Hegde ಹೇಳಿದರು...

ಪ್ರತಿಕ್ರಯಿಸಿದ ಎಲ್ಲರಿಗೂ ಧನ್ಯವಾದಗಳು.

ಅನುಷಾ, ಇಲ್ಲಾಮಾ ನಂಗಂತೂ ಅನುಭವ ಇಲ್ಲ... passionnoಅಥವಾ fashionno ಯಾರಿಗ್ಗೊತ್ತು :-)

ಕಾಂಡಂಡಾಟ್ಸು,
ನಿಮಗೆ ಕೆಳಗಡೆ ಉತ್ತರಗಳು ಬಂದಿವೆ ಓದ್ಕಳಿ. ಆದ್ರೂ ತುಂಬಾ ಖುಶಿಯಾಯ್ತು ನಿಮ್ ಕಮೆಂಟು ನೋಡಿ.. ಲವ್ ಯು. :-)

ರಂಜನಾ ಮೇಡಂ, ಅಯ್ಯೋ ನಂಗ್ಯಾಕ್ರಿ ಬೈತೀರಾ. ಆಟನೋ ಪಾಠನೋ ನಂಗೊತ್ತಿಲ್ಲಪ್ಪ. ನಮ್ ಹುಡುಗಿ ಇಂಥದಕ್ಕೆಲ್ಲಾ ಕೋಪಿಸಿಕೊಳ್ಳಲ್ಲ. ಅವ್ಳು ಬರೀ ಸಣ್ಣ ಸಣ್ಣ ವಿಷ್ಯಕ್ಕೆ ಮಾತ್ರ ಕೋಪಿಸಿಕೊಳ್ಳೋದು :-)

ಚಂದ್ರು, ಏನ್ ಸಾರ್, experiencea ನಿಮ್ದು? ಹೆ ಹೆ..

ನವೀನ್, ಹಂಗಂತೀರಾ ಸಾರ್? !! :(
ಇನ್ಮೇಲೆ ಹೆಸ್ರಿಗೆ ತಕ್ಕಹಾಗೆ ಬರೆಯಲು ಪ್ರಯತ್ನಿಸುವೆ. ಅವಾಗಾವಾಗ ಸ್ವಲ್ಪ ಹೆಚ್ಚು ಕಮ್ಮಿ ಆಗತ್ತೆ. ಅಡ್ಜಸ್ಟ್ ಮಾಡ್ಕಳಿ ಪ್ಲೀಜ್ಜ್ಜ್ಜ್ಜ್ಜ್ಜ್...


ಕ್ರೇಜಿ.. ಥ್ಯಾಂಕ್ಸ್ ಕಣ್ರಿ :)


ಸನತ್ , ನನ್ ವಿವೇಚನೆಗೆ ಎಟುಕದಿದ್ದುದಕ್ಕೇ ಆ ಮುನ್ನುಡಿ ಬರೆದು ಹಾಕಿದ್ದು. ಏನೋ ಗೊತ್ತಿದ್ರೆ ತಿಳಿಸಿಕೊಡಿ ಸ್ವಲ್ಪ ನಮಗೂ. :-)

ನಿರ್ಮಲಾ ಮೇಡಂ.. ನನ್ ಕಥೆ ಅಲ್ಲಾ ಮೇಡಂ ಅದು :(


ಈಗ ವಿಕಾಸ ವಾದ ಶುರು ಮಾಡ್ತೀನಿ ಕೇಳಿ..

ನನ್ನ ಪ್ರಕಾರ ಹೇಳೋದಾದ್ರೆ ಈ ಸಂಭಾಷಣೆಯನ್ನು ಕೂಲಂಕುಷವಾಗಿ analyse ಮಾಡಿದ್ರೆ ನಿಜವಾದ ಪ್ರೀತಿ ಇರೋದು ಗೊತ್ತಾಗತ್ತೆ. ಒಂದು ಸಾರೆರಿ brackets ನಲ್ಲಿರೋ ಮಾತುಗಳನ್ನ ಬಿಟ್ಟು ಹಾಗೇ ಓದಿ ನೋಡಿ. ಆಗ ಆ ಹುಡುಗನು ಹುಡುಗಿಯನ್ನು ಪ್ರೀತಿಸ್ತಾ ಇದಾನೆ ಚೆನ್ನಾಗಿ ಅಂತ ಅನ್ನಿಸುತ್ತಲ್ವೆ. ? ಆ ಸಮಯ ನೋಡಿ ಹನ್ನೊಂದೂವರೆ ರಾತ್ರಿ. ಬೆಳಗ್ಗೆಯಿಂದ ಅವರು ಎಷ್ಟೊ ಸಾರ್ತಿ ಫೋನಲ್ಲಿ ಮಾತಾಡಿದಾರೆ , ಸಂಜೆ, ರಾತ್ರೆ ಗಂಟೆಗಟ್ಲೆ ಮಾತಾಡಿದಾರೆ. ಮತ್ತೆ ಮಲಗೋ ಸಮಯ ಬಂದಾಗ ಹುಡುಗಿಯ ಕಾಲ್ ಬಂದಿದ್ದಕ್ಕೆ ಸ್ವಲ್ಪ ಬೇಸರವಾಗಿದೆ. ಆದರೂ ಕೂಡ ಅವನು ಅದನ್ನ ತೋರಿಸಿಕೊಳ್ಳದೇ ಅವಳು ನಿದ್ದೆ ಮಾಡಲೂ ಬಿಡದೇ ಮಾತನಾಡಿಸುತ್ತಿದ್ದರೂ ಸಹ ತನ್ನ ಹುಡುಗಿಗೆ ಬೇಜಾರು ಮಾಡಬಾರದು, ನೋಯಿಸಬಾರದು ಎಂಬ ಉದ್ದೇಶದಿಂದ ಅವಳ ಜೊತೆಗೆ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದಾನೆ. actually ಅವರಿಬ್ಬರೂ ಪ್ರೀತಿಯ ಒಂದು ಹಂತ ದಾಟಿದ್ದಾರೆ ಅನಿಸುತ್ತದೆ. ಅಂದರೆ ಒಬ್ಬರನ್ನೊಬ್ಬರು impress ಮಾಡುವ ಅವಶ್ಯಕತೆ ಇಲ್ಲ. ತಾವಿಬ್ಬರು ಒಬ್ಬರಿಗೊಬ್ಬರು ಎಂಬ ತೀರ್ಮಾನ ಆಗಿಹೋಗಿದೆ.

ಯಾರಿಗೇ ಆದರೂ ಯಾರೇ ಆದರೂ (ಪ್ರೇಯಸಿಯೇ ಆದರೂ) ಏನಾದರೂ ಇಷ್ಟವಿಲ್ಲದುದನ್ನು ಹೇಳಿದಾಗ ಅಥವಾ ಇನ್ನೇನನ್ನೋ ಮಾಡಿದಾಗ ಕೆಲವೊಮ್ಮೆ ಮನಸ್ಸಿಗೆ ಕಿರಿಕಿರಿ ಅನ್ನಿಸಿಯೇ ಅನ್ನಿಸುತ್ತದೆ. ಅದು ಮನುಷ್ಯನ ಸಹಜ ಗುಣ. ಅದಕ್ಕೆ ಪ್ರೀತಿ ಮಾಡುತ್ತಿರುವವರು ಹೊರತೇನಲ್ಲ. ಅದರಲ್ಲಿ ಅವನು ನೀನು ಕೆಟ್ಟದಾಗಿ ಹಾಡುತ್ತೀಯಾ, ನಿದ್ದೆ ಮಾಡಲು ಬಿಡು ನನ್ನನ್ನ ಎಂದು ಮಾತನಾಡಿದ್ದರೆ ಸುಮ್ಮನೇ ಇಬ್ಬರಿಗೂ ಬೇಸವಾಗುತ್ತಿತ್ತಲ್ಲವೇ !! ಅದಕ್ಕೇ ಮನಸ್ಸಿಗೂ ನಾಲಗೆಗೂ ಮಧ್ಯೆ filter ಇಟ್ಟುಕೊಂಡಿದ್ದಾನೆ. ಪ್ರೀತಿಯ ಸಫಲತೆ ಇರುವುದೇ understanding, adjustment, taste matching ಇತ್ಯಾದಿಗಳಲ್ಲಿ ತಾನೆ??

ಈ ಸಂಭಾಷಣೆಯಲ್ಲಿ ಹುಡುಗನಿಗೆ ತನ್ನ ಹುಡುಗಿಯ ಇಚ್ಛೆಯಂತೆ ನಡೆಯುವ, ಹುಡುಗಿಯ ಇಷ್ಟದಂತೆ ಅನುಸರಿಸಿಕೊಂಡು ಹೋಗುವ ಮತ್ತು ಅವಳನ್ನು ನೋಯಿಸಬಾರದು ಎಂಬ ಸದುದ್ದೇಶ ಗೋಚರಿಸುತ್ತದೆ ಮತ್ತು ಆದ್ದರಿಂದಲೇ ಅದು ಅವಳೆಡೆಗೆ ಅವನ ನಿಜವಾದ ಪ್ರೀತಿಯನ್ನು ತೋರಿಸುತ್ತದೆ.

ಹ್ಮ್.. ಇರಲಿ.. ಎಲ್ಲಾ ಅವರವರ ಭಾವಕ್ಕೆ ಅವರವರ ಭಕುತಿಗೆ... thanks

Enigma ಹೇಳಿದರು...

:-) nimma baraha slwpa mattige nija. hudganige kelvomme priorities bere iruthe, matte swlpa hudgatike buddhi idre ee thar yochne madtahre. Swlpa maturity bandre realtionship yenu natha ratah aguteh avga ee thara comment mado asthu shkathi irolla :-P hendthi athwa preyasi heldange agli bidu anthare :-P

Hudgeeru kuda eetahra yochne amdtahre adre adu prrethisdavnilade irbahudu, bari friends irbahudu :-) so hudga sumne phone maadi kata kodbekidre ee thara recation baruthe, bere yavra mansige novu madbardu antah yesthondu bari naanu sumne nan frnds gala ee thara nadvalige tolrate madidene

nan hudganige kelde neneu hinge yochne madthiya antah, avnige dharma sankta papa :-D but bere darine ilwala :-P

ವಿಕಾಸ್ ಹೆಗಡೆ/ Vikas Hegde ಹೇಳಿದರು...

, nan hudganige kelde neneu hinge yochne madthiya antah, avnige dharma sankta papa :-D but bere darine ilwala :-P

ಹ್ಹ ಹ್ಹ.. ಎನಿಗ್ಮಾ ಅವ್ರೆ ನಿಮ್ಮಭಿಪ್ರಾಯಕ್ಕೆ ಧನ್ಯವಾದಗಳು... ಭೇಟಿ ಕೊಡ್ತಾ ಇರಿ ಆಗಾಗ..

condumdots ಹೇಳಿದರು...

Dear Vikas and others
I am surprised to see somebody commented in my name in a rude way!. Without digging deeper, who did that, I just wanna clarify that that comment was not posted by me. Being coming from an agricultural family, I do have respect any profession including agriculture. Just for your information, about 15 years ago I use to work in the fields.
Commenting rude in other's name is not so decent thing to do!.

Regards
D.M.Sagar
Canada

condumdots ಹೇಳಿದರು...

Dear All,
I am even more surprised!, just looked at the timing when that rude false-identity message was posted. That was posted at 3:34 am in india, means, 6 pm in Canada. I am just coming back from holidays, had been to a beautiful village called Tadoussac in Canada. At the time the message was posted I was in the bus from Quebec to Montreal (For those who are skeptical, I can show the ticket reciept, can fax it).

Just wondering!!, what all magics can happen in India!!.
@Vikas, there are couple of decent ways of 'taking revenge'. This is one of the cheapest ones.

Good work!!
Dr.D.M.Sagar

ವಿಕಾಸ್ ಹೆಗಡೆ/ Vikas Hegde ಹೇಳಿದರು...

@Dr.D.M.Sagar,Canada

Thanx for ur Clarifications Mr.Sagar. I too can not trace out the person who commented in ur name. Yardo tarle irbOdu. But it all happens in India:)and no revenge nothing. Dnt mind. Anyhow, since it is my blog it is my duty to apologize.

Regards,
Vikas Hegde

dmsagarphys@gmail.com ಹೇಳಿದರು...

Vikas,
If you understood that the rude-comment is not by me, I don't understand why did you not delete the post and those related to that. Kindly do that.

Thanks
Dr.D.M.Sagar
Montreal

ವಿಕಾಸ್ ಹೆಗಡೆ/ Vikas Hegde ಹೇಳಿದರು...

@Dr.Sagar

If i delete that comment there will b no meaning to the comments of others who have answered to that and if i delete those related comments i hav to lose their opinions about blog with that. So, let it b. If that comment is not written by u then y to worry so much. Just leave it plz. It is already clarified and accepted. Thank you.

-Vikas Hegde

condumdots ಹೇಳಿದರು...

@Vikas
Please delete the comment. Meaning to other's comment doesn't have to come via that fake/false identity comment. If others comments gets no value with regard to the 'fake' comment, that should be fine. I guess others comments donot have to get 'value' through the fake comment. This is in my name, I would appreciate if you delete this. Hope you understand the sensitivity of the situation and respect other's values and names.

If you donot delete it, the motto behind the writing is clear.
1. You yourself wrote it in my name , to take revenge.
2. You wanna keep it to create further damage.Regards and thanks
Dr.D.M.Sagar
CANADA

ಗಣೇಶ್ ಕೆ ಹೇಳಿದರು...

ಅದ್ಯಾಕೆ ನಮ್ಮ ಜನ ಹಿಂಗೆ ಹಳ್ಳೆಣ್ಣೆ ಕುಡಿದಂಗೆ, ಮುಖ ಗಂಟು ಹಾಕಿಕೊಂಡು ಪ್ರತಿ ವಿಷಯಕ್ಕೂ ಉದ್ದೇಶ, ಸಾರ್ಥಕ್ಯ ಹುಡುಕುತ್ತಾ ಹೋಗ್ತಾರೋ..??!! ತುಂಬಾ ವಿಚಿತ್ರ. ನಗೋದಿಲ್ಲ ಅಂತಾ ಶಪಥ ಮಾಡಿದಾರೆ ಅಂತಾ ಕಾಣುತ್ತೆ. ಒಂದು ಹಾಸ್ಯವನ್ನ ಅನುಭವಿಸುವುದಿಲ್ಲ ಅನ್ನೋ ಥರ ಮಾತಾಡ್ತಾರೆ. ಇದು ವಾಸ್ತವನಾ, ಕಾಲ್ಪನಿಕನಾ..? ವೈಜ್ಞಾನಿಕನಾ ಅಂತಾ ಹುಡುಕೋದು ಬಿಟ್ಟು ಒಮ್ಮೆ ಚೆಂದಕೆ ಮುಖದ ಮೇಲೆ ಮಂದಹಾಸ ಹೊಂದಿಸಿಕೊಳ್ಳೋದನ್ನ ಅಭ್ಯಾಸ ಮಾಡಿಕೊಂಡರೆ ಒಳಿತು. ಕಂಡ ಕಂಡದಕ್ಕೆಲ್ಲಾ ಗಂಭೀರ ಚರ್ಚೆ, ಸ್ತ್ರೀವಾದೀ ಚಿಂತನೆ, ಸ್ತ್ರೀ ಶೋಷಣೆ ಅನ್ನೋದನ್ನ ಬಿಟ್ಟು ಜೋಕನ್ನ, ಹಾಸ್ಯವನ್ನ ಹಾಸ್ಯವಾಗಿ ನೋಡೋದನ್ನ ಅಭ್ಯಾಸಮಾಡಿಕೊಳ್ಳಬೇಕು.
ಗಣೇಶ್.ಕೆ ದಾವಣಗೆರೆ,ಬೆಂಗಳೂರು

Pradeep ಹೇಳಿದರು...

ವಿಕಾಸ್ ರವರೆ ನಿಮ್ಮ ಈ ಬರಹವನ್ನೂ ಓದಿ ಓದಿ, ನಗೆಯನ್ನು ತಡೆಯಲಾರದೆ ಇದನ್ನು ಪ್ರಿಂಟ್ ಮಾಡಿ ನನ್ನ ಸಹೋದ್ಯೋಗಿಗಳಿಗೆ ಹಂಚಿದ್ದೇನೆ. ತುಂಭ ಖುಷಿ ಆಯಿತು. ಅವರು ನಕ್ಕಿ ನಕ್ಕಿ ಸಂತೋಷ ಪಟ್ಟರು.