ಪುಟಗಳು

ಶುಕ್ರವಾರ, ಮೇ 11, 2007

ನಾಲ್ಕನೇ ಕ್ಲಾಸಿನಲ್ಲಿ Love Propose !!

ಬಹಳಷ್ಟು ಜನರಿಗೆ ತಮ್ಮ ತಮ್ಮ ಬಾಲ್ಯ ಜೀವನದ ನೆನಪುಗಳು, ಶಾಲೆಯ ದಿನಗಳ ನೆನಪುಗಳು ಅಮರ ಮಧುರ. ಆಗ ಇರುತ್ತಿದ್ದ, ಬರುತ್ತಿದ್ದ ಭಾವನೆಗಳು, ನಮ್ಮದೇ ಆದ ಇತಿ ಮಿತಿಯ ಪ್ರಪಂಚದೊಳಗೆ ಮೆರೆಯುತ್ತಿದ್ದುದು ಎಲ್ಲಾ ಈಗ ನೆನಪಿಸಿಕೊಂಡರೆ ಏನೋ ಒಂದು ರೀತಿಯ ಹಿತಾನುಭವ. ಅಂಥದರಲ್ಲಿ ನನಗೆ ನನ್ನ ನಾಲ್ಕನೇ ಕ್ಲಾಸಿನ ಲವ್ ಸ್ಟೋರಿಯೊಂದು ಎಂದಿಗೂ ಮರೆಯಲಾಗದ ಘಟನೆ. ಆಗಿನ್ನೂ ಪ್ರೀತಿ ಪ್ರೇಮದ ಬಗ್ಗೆ ಏನೂ ಗೊತ್ತಿರದಿದ್ದರೂ ಏನೋ ಒಂಥರಾ ಕುತೂಹಲ. ಭಾನುವಾರ ಬರುತ್ತಿದ್ದ ಸಿನೆಮಾ, ಶುಕ್ರವಾರ ಬರುತ್ತಿದ್ದ ಚಿತ್ರಗೀತೆಗಳು, ಮತ್ತು ಕೆಲವು ಧಾರಾವಾಹಿಗಳು ಇವಿಷ್ಟನ್ನೇ ನೋಡುತ್ತಾ ಅದರಲ್ಲೆ ಪ್ರೇಮದ ಕಲ್ಪನೆ ಮಾಡಿಕೊಂಡಿದ್ದ ಕಾಲ. ಅದರಲ್ಲೂ ಹೆಚ್ಚು ಪ್ರಭಾವ ಮಾಡಿದ್ದು ಅಂದರೆ ಪ್ರೇಮವೇ ಮುಖ್ಯವಾಗಿರುವ ರವಿಚಂದ್ರನ್ ಚಿತ್ರಗಳು.

ಪಲ್ಲವಿ(ಹೆಸರು ಬದಲಾಯಿಸಿದೆ) ಎನ್ನುವಳೊಬ್ಬಳು ನಮ್ಮ ಜೊತೆಯಲ್ಲೆ ೧ ನೇ ಕ್ಲಾಸಿನಿಂದ ಓದುತ್ತಿದ್ದ ಒಂದು ಹುಡುಗಿಯಿದ್ದಳು. ಅವಳು ಸ್ವಲ್ಪ ಗೋಧಿ ಬಣ್ಣದಿಂದ ಮುದ್ದು ಮುದ್ದಾಗಿ ಇದ್ದು ಓದಿನಲ್ಲಿ ಮತ್ತಿತರ ಚಟುವಟಿಕೆಗಳಲ್ಲಿ ಮುಂದಿದ್ದುರಿಂದ ನಮ್ಮ ಕ್ಲಾಸಿಗೆ ಅಘೋಷಿತ ಹೀರೋಯಿನ್ ಆಗಿದ್ದಳು. ಮೊದಲಿನಿಂದಲೂ ಅವಳೆಡೆಗೆ ಸ್ವಲ್ಪ ಹೆಚ್ಚೇ ಅನ್ನಿಸುವ ಆಕರ್ಷಣೆಯಿತ್ತು. ಅವಳಿಗೇ ಲೈನ್ ಹಾಕುತ್ತಿದ್ದೆ, ಅವಳೂ ಸ್ವಲ್ಪ ಸ್ವಲ್ಪವಾಗಿ ಲೈನ್ ಕೊಡುತ್ತಿದ್ದಳು (ಅಂತ ನಾನು ಅಂದು ಕೊಂಡಿದ್ದೆನೋ ಏನೋ ಗೊತ್ತಿಲ್ಲ, ಯಾಕಂದ್ರೆ ಹುಡುಗಿಯರು ಸುಮ್ಮನೆ ನಕ್ಕರೆ, ಮಾತಾಡಿಸಿದರೆ ಸಾಕು.. ಬಿದ್ದೇ ಹೋದರು ಅಂದುಕೊಳ್ಳುವುದು ಹುಡುಗರ ಹುಟ್ಟು ಗುಣ).

ಹೀಗೇ ಇದ್ದಾಗ ನನಗೆ ಅವಳಿಗೆ ಪ್ರಪೋಸ್ ಮಾಡಬೇಕು ಅನ್ನುವ ಯೋಚನೆ ಬಂದುಬಿಟ್ಟಿತ್ತು. ಸರಿ.. ಒಂದು ದಿನ ಯಾವುದೋ ಒಂದು ವಿಷಯದ ಟೀಚರ್ ಬಂದಿರಲಿಲ್ಲವಾದ್ದರಿಂದ ಆಟ ಆಡಿಕೊಳ್ಳಲು ಹೊರಗೆ ಮೈದಾನಕ್ಕೆ ಬಿಟ್ಟಿದ್ದರು. ಒಂದು ಕಡೆ ಹುಡುಗಿರ ಗುಂಪು, ಇನ್ನೊಂದು ಕಡೆ ಹುಡುಗರ ಗುಂಪು ಆಡಿಕೊಳ್ಳುತ್ತಿತ್ತು. ಕೆಲವರು ಹರಟೆ ಹೊಡೆಯುತ್ತಾ ಕೂತಿದ್ದರು. ನಮ್ಮ ಪಲ್ಲವಿಯೂ ಕೂಡ ಗೆಳತಿಯರ ಜೊತೆ ಏನೋ ಮಾತಾಡುತ್ತಾ ನಗುತ್ತಾ ನಿಂತಿದ್ದಳು. ನನಗೆ ಇದೇ ಸರಿಯಾದ ಸಮಯ ಎನ್ನಿಸಿ ಸೀದಾ ಅವಳ ಹತ್ತಿರ ನಡೆದೆ. ನನಗೋ ಪೂರ್ತಿ ಕೈಕಾಲುಗಳೆಲ್ಲಾ ನಡುಗಲು ಆರಂಭಿಸಿತ್ತು. ಹೋಗಿ ಪಲ್ಲವಿ ಮುಂದೆ ನಿಂತೆ.. ಏನನ್ನು ಹೇಗೆ ಶುರುಮಾಡಬೇಕೋ ತಿಳಿಯಲಿಲ್ಲ. "ಪಲ್ಲವಿ, ನಾನು ನಿನ್ನನ್ನ ಪ್ರೀತಿ ಮಾಡ್ತಾ ಇದಿನಿ, ನಿನ್ನನ್ನೇ ಮದುವೆ ಮಾಡ್ಕೋತೀನಿ" ಅಂತ ಒಂದೇ ಉಸಿರಿನಲ್ಲಿ ಹೇಳಿಬಿಟ್ಟೆ. ಆವಾಗಿನ ಪಲ್ಲವಿಯ ಮುಖಭಾವ, ಸುತ್ತಲೂ ನಿಂತಿದ್ದ ಹುಡುಗಿರ ಮುಖದಲ್ಲಿ ಮೂಡಿದ ಭಾವನೆಗಳು ಇನ್ನೂ ನನ್ನ ಕಣ್ಣು ಗಳಲ್ಲಿ ಹಾಗೇ ಇದೆ.

ಸರಿ , ಹೀಗೆ ಹೇಳಿ ನಾನು ಏನು ಮಾಡಬೇಕು ಗೊತ್ತಾಗದೇ ವಾಪಸ್ ಬಂದು ಬಿಟ್ಟೆ. ಪಲ್ಲವಿ ಕಣ್ಣಲ್ಲಿ ನೀರು ತುಂಬಿಕೊಂಡು ಮೈದಾನದಿಂದ ಓಡಿದಳು. ನಾನು ಭಯದಿಂದ ಬೆಪ್ಪಾಗಿ ಕುಳಿತಿದ್ದೆ. ನಂತರ ಎಲ್ಲರೂ ಕ್ಲಾಸ್ ರೂಮಿಗೆ ಹೋದೆವು. ಇಡೀ ಕ್ಲಾಸ್ ತುಂಬಾ ಅದೇ ಗುಸು ಗುಸು. ನಾನು ಹೇಳುವುದೇನೋ ಹೇಳಿ ಬಿಟ್ಟಿದ್ದೆ, ಆದರೆ ಈಗ ಅದರ ನಂತರದ ಪರಿಣಾಮಗಳನ್ನು ನೆನಪಿಸಿಕೊಂಡು ಪೂರ್ತಿ ಭಯಗೊಂಡಿದ್ದೆ. ಈ ವಿಷಯ ಟೀಚರ್ ಗಳಿಗೆಲ್ಲಾ ಗೊತ್ತಾಗಿ, ಮನೆಯಲ್ಲಿ ಗೊತ್ತಾದರೆ ನನ್ನ ಮಾನ ಮರ್ಯಾದೆ(!) ಪ್ರಶ್ನೆ ಏನು ಎಂದು ಚಿಂತೆಗೊಳಗಾಗಿದ್ದೆ. ನನ್ನ ಭಯ ಸುಳ್ಳಾಗಲಿಲ್ಲ. ೫ ನಿಮಿಷಕ್ಕೆ ಹೆಡ್ ಮಾಸ್ಟರ್ ರಿಂದ ಬುಲಾವ್ ಬಂತು. ಪಲ್ಲವಿ ಅಳುತ್ತಾ ಸೀದ ಓಡಿದ್ದು ಹೆಡ್ ಮಾಸ್ಟರ್ ಹತ್ತಿರ ಎಂದು ತಿಳಿಯಿತು. ಹಾಗೇ ನಡುಗುತ್ತಾ ಹೊರಟೆ. ನಾನು ನನ್ನ ಬೆಂಚಿನಿಂದ ಹೊರಟು ನೆಡೆದುಕೊಂಡು ಬರುತ್ತಿದ್ದರೆ ಎಲ್ಲರೂ ಕೂಡ ಇವನು ವಾಪಸ್ ಬರುವಾಗ ಯಾವ ಆಕಾರದಲ್ಲಿರುತ್ತಾನೋ ಎಂದು ಕಲ್ಪಿಸಿಕೊಳ್ಳುತ್ತಿದ್ದರು. ಯಾಕೆಂದರೆ ನಮ್ಮ ಹೆಡ್ ಮಾಸ್ಟರ್ರು ಹೊಡೆಯುವುದನ್ನು ನೋಡಿದರೇ ಸಾಕು ಮಕ್ಕಳು ಚಡ್ಡಿ ಒದ್ದೆ ಮಾಡಿಕೊಳ್ಳುತ್ತಿದ್ದರು. ಇನ್ನು ಇಂತಹ 'ಲವ್ ಕೇಸಿ'ನಲ್ಲಿ ಸಿಕ್ಕಿಹಾಕಿಕೊಂಡ ನನ್ನ ಗತಿ ಏನಾಗಬಹುದು ಎಂದು ಎಲ್ಲರಿಗೂ ಭಯಮಿಶ್ರಿತ ಕುತೂಹಲ ಇತ್ತು.

ಅಳುಕುತ್ತಲೇ ಹೆಡ್ ಮಾಸ್ಟರ್ ಕೋಣೆಗೆ ಹೋಗಿ ನಿಂತೆ. ನೋಡಿದರೆ ಹೆಡ್ ಮಾಸ್ಟರ್ ಸೀಟಿನಲ್ಲಿ ನಮ್ಮ ಇನ್ನೊಬ್ಬರು ಹಿರಿಯ ಉಪಾದ್ಯಾಯರು ಕೂತಿದ್ದರು. ಒಳಗೆ ಬಾ ಎಂದು ಕರೆದು ಕುರ್ಚಿಯ ಮೇಲೆ ಕೂರಲು ಹೇಳಿದರು. ಪುಣ್ಯವಶಾತ್ ಅವತ್ತು ನಮ್ಮ ಉಗ್ರಗಾಮಿ ಹೆಡ್ ಮಾಸ್ಟರ್ರು ರಜ ಹೋಗಿದ್ದರಿಂದ ಅವತ್ತಿನ ಮಟ್ಟಿಗೆ ಇನ್ನೊಬ್ಬರು ಆ ಸೀಟಿನಲ್ಲಿದ್ದರು. ಈಗ ಸ್ವಲ್ಪ ನಿರಾಳವೆನಿಸಿತು. ಯಾಕೆಂದರೆ ಆ ಹಿರಿಯ ಉಪಾದ್ಯಾಯರು ೭೦ ವರುಷ ವಯಸ್ಸಿನವರು. ಅವರಿಗೆ ಕೋಪವು ಬರುತ್ತಿದ್ದುದೆ ಕಡಿಮೆ. ಇನ್ನು ನನಗಂತು ಹೊಡೆಯುವುದಿಲ್ಲ, ಹೆಚ್ಚೆಂದರೆ ಬೈದಾರು.. ಬೈಸಿಕೊಂಡರಾಯಿತು. ಆಮೇಲೆ ಸ್ವಲ್ಪ ಅತ್ತಂತೆ ಮಾಡಿ ಮನೆಗೆ ಹೇಳಬೇಡಿ ಸಾರ್ ಎಂದು ಬೇಡಿಕೊಂಡು ಬರುವುದು ಎಂದು ನಿಶ್ಚಯಿಸಿದೆ. ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ. ಅವರು ಒಂದು ಸ್ವಲ್ಪವೂ ಕೋಪವಿಲ್ಲದೆ ಏನಪ್ಪಾ ಪಲ್ಲವಿಗೆ ಮದುವೆ ಆಗ್ತೀನಿ ಅಂದ್ಯಂತೆ ಹೌದಾ ಎಂದರು. ನಾನು ಕಣ್ಣಲ್ಲಿ ನೀರು ತುಂಬಿಕೊಂಡು ಹೌದು ಎಂದೆ. ಅವರು ಆಗ ಶುರು ಮಾಡಿಕೊಂಡರು ... ನೋಡಪ್ಪಾ ನಿಂದಿನ್ನೂ ಚಿಕ್ಕ ವಯಸ್ಸು, ಈಗ ಪ್ರೀತಿ, ಮದುವೆ ಅಂತೆಲ್ಲಾ ತಲೆ ಕೆಡಿಸಿಕೊಳ್ಳಬೇಡ, ಈ ಸಿನಿಮಾ ಅದು ಇದು ಎಲ್ಲಾ ನೋಡಿ ಹಿಂಗೆಲ್ಲಾ ಆಡ್ತೀರಾ... ಮಕ್ಕಳನ್ನ ಈ ಟಿ.ವಿ ಗಳು ಹಾಳು ಮಾಡ್ತಿವೆ.. ಅದೂ ಇದೂ ಅಂತ ಒಂದು ೧೦ ನಿಮಿಷ ಏನೇನೋ ಹೇಳಿದರು. ನಾನು ಪೂರ್ತಿ ಸಪ್ಪೆ ಮೋರೆ ಹಾಕಿಕೊಂಡು ಹೌದು ಹೌದು ಎಂದು ತಲೆ ಹಾಕುತ್ತಿದ್ದೆ. ಎಲ್ಲಾ ಮಾತಾಡಿ ಮುಗಿಯಿತು. ನಿಮ್ಮ ಅಪ್ಪ ಅಮ್ಮಂಗೆ ಹೇಳುವುದಿಲ್ಲ ಹೆದರಬೇಡ ಹೋಗು ಎಂದು ಭರವಸೆ ಕೊಟ್ಟರು. ಸರಿ ಎಂದು ಹೊರಟೆ .. ಆಗ ಅವರು ಇನ್ನೊಂದು ಮಾತು ಹೇಳಿದರು.. ನಿಂಗೆ ಅವಳು ಅಷ್ಟೊಂದು ಇಷ್ಟ ಇದ್ದರೆ ದೊಡ್ಡವನಾದ ಮೇಲೂ ಅವಳ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಅವಳನ್ನೇ ಮದುವೆ ಆಗುವಿಯಂತೆ ಬಿಡು, ನಾನೇ ನಿಮ್ಮ ತಂದೆ ತಾಯಿಗೆ ಹೇಳುತ್ತೇನೆ ಎಂದರು. ಹೊರಡುವಾಗ ನನ್ನ ಕೈಯಲ್ಲಿ ಎರಡು ಚಾಕಲೇಟುಗಳನ್ನಿಟ್ಟು ನನಗೂ ನಿನ್ನ ವಯಸ್ಸಿನ ಮೊಮ್ಮಕ್ಕಳಿದ್ದಾರೆ ಎಂದು ಕೆನ್ನೆ ತಟ್ಟಿದರು. ನಾನು ಹ್ಹೆ ಹ್ಹೆ ಎಂದು ಪೇಲವ ನಗೆ ನಕ್ಕು ಬದುಕಿದೆಯಾ ಬಡ ಜೀವವೇ ಎಂದು ಹೊರಗೆ ಬಂದೆ.

ಆಮೇಲೆ ಬಹಳ ದಿನಗಳ ತನಕ ನಮ್ಮ ಶಾಲೆಯಲ್ಲಿ ಇದು ಭಾರೀ ಪ್ರಸಿದ್ದಿ ಪಡೆದ ಸುದ್ದಿಯಾಗಿತ್ತು. ಈಗಲೂ ಸಹ ನನ್ನ ಶಾಲೆಯ ಗೆಳೆಯರು ಸಿಕ್ಕಿದರೆ "ಎಲ್ಲಿ ನಿನ್ ನಾಲ್ಕನೆ ಕ್ಲಾಸ್ ಡವ್ವು" ಎಂದು ತಮಾಷೆ ಮಾಡುತ್ತಿರುತ್ತಾರೆ. ಆವಾಗೆಲ್ಲ ಪಲ್ಲವಿಯನ್ನು ನೆನೆಸಿಕೊಂಡು ನಗುತ್ತೇನೆ.

22 ಕಾಮೆಂಟ್‌ಗಳು:

ಶ್ರೀನಿಧಿ.ಡಿ.ಎಸ್ ಹೇಳಿದರು...

he he he!
ಮಗಾ ನೀನು ಆ ಕಾಲದಲ್ಲೇ ಇಷ್ಟು ಮುಂದುವರಿದಿದ್ದೆ ಅಂತ ಆಯ್ತು!

ಬ್ಲಾಗ್ ಲೋಕಕ್ಕೆ ಸ್ವಾಗತ, ಹ್ಯಾಪಿ ಬ್ಲಾಗಿಂಗ್!

anusha ಹೇಳಿದರು...

It s very nice to c ur blog....4th standard praposal ಕಥೆ ಕೇಳಿ ಅಶ್ಚರ್ಯನೂ ಆಯಿತು.ಒಂದಿಸ್ಟು ಹೊಟ್ಟೆಕಿಚ್ಚು ಆಯಿತು(ನನಗಿಸ್ಟು ವರ್ಷ ಆದರೂ ಅಸ್ಟೊಂದು ಧೈರ್ಯ ಇಲ್ವಲಾ ಅಂತಾ)....4th standardnalle propose ಮಾಡಿರಬೇಕಾದರೆ ಇಲ್ಲಿವರೇಗೇ ಎಷ್ಟು ಜನಕ್ಕೆ propose ಮಾಡಿರಬಹುದೇನೋ ಅಂತ ಎಣಿಸುತ್ತಾ ಇದೀನಿ...expecting it in d next blogs!!..

ಹಷ೯ ಚರಿತ್ರೆ ಹೇಳಿದರು...

Vikas na preeti 4ne class nalle vikasa aaju helatu :) he he..

good writing.

VENU VINOD ಹೇಳಿದರು...

ಗುರುವೇ ಭಾರಿ ಫಾಸ್ಟ್ ಇದ್ರಿ.ಬಿಡಿ. ನಿಮ್ಮ ಲವ್ವು ಕೇಳಿ, ನಮ್ಮ ಕ್ಲಾಸಿನ ಚಂದ್ರವದನೆಯರ ನೆನಪಾಗಿಸಿ ಬಿಟ್ರಿ. ಒಳ್ಳೆ ಬರಹ.

Ravindra ಹೇಳಿದರು...

Aa Hudugi en madta Iddo Ega...?!!
Eglu adikke Line hoditha Idya..?!

Ravindra..

ಸುಶ್ರುತ ದೊಡ್ಡೇರಿ ಹೇಳಿದರು...

ಬ್ಲಾಗ್ಲೋಕಕ್ಕೆ ಹಾರ್ದಿಕ ಸುಸ್ವಾಗತ. ಎಷ್ಟೋ ಸಲ ನಾನೇ ಹೇಳೋಣ ಅಂತಿದ್ದಿ ನಿಂಗೆ ಬ್ಲಾಗ್ ಓಪನ್ ಮಾಡಕ್ಕೆ.. ನಿಂಗೇ ಸ್ಪೂರ್ತಿ ಬಂದಿದ್ದು ಖುಷಿ ವಿಷ್ಯ.

ವಿಕಾಸ'ವಾದ'!! ವ್ಹಾವ್ ವ್ಹಾವ್! ಎಷ್ಟು ಕರೆಕ್ಟ್ ಹೆಸ್ರು ಸೆಲೆಕ್ಟ್ ಮಾಡಿದ್ದೆ ಮರಾಯ...! ವಿಕಾಸ ಅಂದ್ರೇ ವಾದ..! ಹಹ್ಹ..!

ಆದ್ರೂ ನಿನ್ನ ಈ ಪೋಸ್ಟ್‍ನ ನಂಬೋದಕ್ಕೆ ಕಷ್ಟ ಆಗ್ತಾ ಇದ್ದು.. ತೀರ ನಾಕ್ನೇ ಕ್ಲಾಸಲ್ಲೆಲ್ಲಾ... ಏನ್ ಮಾರಾಯ ನೀನು..! ನಮ್ಗೆಲ್ಲ ಪ್ರೀತಿ ಅಂದ್ರೆ ಎಂತು ಅಂತ್ಲೇ ಗೊತ್ತಿರ್ಲೆ ಆ ವಯಸ್ಸಲ್ಲಿ..

ಗುಡ್ ಮಗಾ.. ಕಂಟಿನ್ಯೂ ಬ್ಲಾಗಿಂಗ್.. ನಿನ್ನ ಬ್ಲಾಗಿಗೆ ಶುಭ ಹಾರೈಸ್ತಿ..

Parisarapremi ಹೇಳಿದರು...

ನಾಕನೇ ಕ್ಲಾಸಿನಲ್ಲಿ... hmmmm.... ನಾನು ಹುಡುಗೀರ ಜೊತೆ ಮಾತೂ ಆಡ್ತಿರ್ಲಿಲ್ಲ ಬಿಡಿ... :-)

subbu ಹೇಳಿದರು...

avaginaste dhayrya iglu iddiddre istottige yenenoo agogtillooo vikasaaaa :)

ಅನಾಮಧೇಯ ಹೇಳಿದರು...

ವಿಕಾಸ್ ಸುಪರ್ ಆಗಿ ಬರದ್ದೆ. ನಂಗೆ ನಿನ್ನ love story ಓದಿ ಹೊಟ್ಟೆಲಿ ಉರುತ್ತು. ಈಗ ಅವಳು ಎಲ್ಲಿ ಇದ್ದಾ. ಆ love story ಇಗ್ಳೂ continue ಆಕ್ತಾ ಇದ್ದಾ. ಆ continue ಆಗಿರೋ part ಮುಂದಿನ blog posting ನಲ್ಲಿ ಹಾಕ್ತ್ಯಾ? ಅವಳ ಬಗ್ಗೆ ತುಂಬಾ ಕುತುಹಲ ಉಳ್ಸಿದ್ದೆ.
ಚಂದ ಬರದ್ದೆ ಹಿಂಗೆ ಬರಿತಾ ಇರು dear.

yajnesh ಹೇಳಿದರು...

ವಿಕಾಸ್, ಚೆನ್ನಾಗಿದ್ದಪ್ಪ ನಿನ್ನ ಲವ್ ಸ್ಟೋರಿ.

"೨೪ ನೇ ವಯಸ್ಸಿನಲ್ಲಿ Love Propose !!" ಯಾವಾಗ ಬರಿತ್ಯಪ್ಪ.
ಅಂದ ಹಂಗೆ ಪಲ್ಲವಿ ಗೆ ಮದುವೆಯಾಗಿ ೩ ಮಕ್ಕಳು ಆಗಿರಕು ಅಲ್ದಾ ????

ಸುಶ್ರುತ, ಗೋಲೋಕ ಅಂಥ ಕೇಳಿದ್ದಿ..ಬ್ಲಾಗ್ಲೋಕ ಅಂಥ ಕೇಳಿರ್ಲೆ ಮಾರಾಯ. ಹಹಹ

Vikas Hegde ಹೇಳಿದರು...

ಪ್ರತಿಕ್ರಯಿಸಿ ಪ್ರೋತ್ಸಾಹಿಸಿದ್ದಕ್ಕಾಗಿ ಶ್ರೀನಿಧಿ, ಅನುಷಾ, ಹರ್ಷ, ವೇಣು, ರವೀಂದ್ರ, ಸುಶ್ರುತ, ಅರುಣ್, ಸುಬ್ಬು, ರಂಜನಾ, ಯಜ್ಞೇಶಣ್ಣ ಎಲ್ಲರಿಗೂ ಬಹಳ ಧನ್ಯವಾದಗಳು.

ಶ್ರೀನಿಧಿ,ಸುಶ್ರುತ ನಿಮ್ಮ ಸ್ವಾಗತಕ್ಕೆ ನನ್ನ ಧನ್ಯವಾದ. ನಂಗೆ ಬರೆಯಲು ಸ್ಪೂರ್ತಿ ಬಂದಿದ್ದೇ ನಿಮ್ಮಿಂದ.

ಸುಶ್ರುತ, ನಂಬಕ್ಕಾಗ್ತಿಲ್ಲೆ ಅಂದ್ರೆ ಹೆಂಗೆ ಮಾರಾಯ ! ಪಿ.ಯು.ಸಿ ನಲ್ಲಿ ಮಾಡಿದ್ದು ಬರೆದರೆ ವಿಶೇಷ ಏನಿಲ್ಲ, ಇದು ೪ ನೇ ಕ್ಲಾಸು, ಅದಕ್ಕೆ ಬರ್ದಿರೋದು. ನಿಜವಾಗ್ಲೂ ನಂಗೂ ಆ ವಿಷ್ಯಗಳೇನೂ ಗೊತ್ತಿರಲಿಲ್ಲ. ಎಲ್ಲಾ ರವಿಚಂದ್ರನ್ ಕೃಪೆ :-)

ಅನುಷಾ, ಅದೇ ಕೊನೆ, ಮತ್ಯಾರಿಗೂ ಮಾಡಿಲ್ಲ , ಮುಂದೆ ಮಾಡ್ಬೋದೇನೋ , ನೋಡಣ :-)

ಹರ್ಷ, ಹೌದು, ಜಾಸ್ತಿ ವಿಕಾಸ ಆಗಿ ಏನೇನೋ ಆಗೋತು.

ರವೀಂದ್ರ, ಇಲ್ಲೆ ಗುರು, ಈಗ ಆ ಹುಡುಗಿ ಸಂಪರ್ಕ ಇಲ್ಲೆ, ಆದ್ರೆ ಮಾಹಿತಿ ಅಂತೂ ಇದ್ದು.

ವೇಣು, ಸ್ವಲ್ಪ್ ಫಾಸ್ಟ್ ಹೌದು ಬಿಡಿ. ಆದ್ರೂ 'ಗತವೈಭವ' ಎಲ್ಲಾ :(

ಅರುಣ್, ನಾವೂ ಮಾತಾಡ್ತಿರ್ಲಿಲ್ಲ. ಆದ್ರೆ ಲೈನ್ ಹಾಕ್ತಿದ್ವಿ. ಪ್ರೀತಿಗೆ ಭಾಷೆ ಇಲ್ವಂತೆ . ಹ್ಹಿ ಹ್ಹಿ.

ಸುಬ್ಬು, ಹೌದು ಮಾರಾಯ. ಒಂದ್ರೀತಿ ಒಳ್ಳೆದಾತು ಬಿಡು ಈಗ ಧೈರ್ಯ ಇಲ್ದೇ ಇರದು.

ರಂಜನಾ, ಆ ಲವ್ ಸ್ಟೋರಿ ಅಲ್ಲಿಗೇ ಮುಗ್ದೋತು :( ಇನ್ನೇನಿದ್ರೂ ಹೊಸಾ ಸ್ಟೋರಿಗಳು ಅಷ್ಟೆ :)

ಯಜ್ಞೇಶಣ್ಣಾ, ಇಲ್ಯೋ, ಇನ್ನೂ ಈ ವರ್ಷ ಮದುವೆ ಆಗ್ತಾ ಇದ್ದು. ೨೪ ವರ್ಷದ್ದು ಪ್ರಪೋಸ್ ಮಾಡಿದ ಕೂಡ್ಲೆ ಬರಿತಿ :-)

kiran ಹೇಳಿದರು...

cool maga

Chandru ಹೇಳಿದರು...

Vicky Chennagi Bardiddiya.. Aadre Ninna manasinalli Innu Aa Pallavi [Original Hesaru Helodu Beda Alva ]Eddale Andre... Hengo. Jeevana Andre Enu Annode Tiliyada aa Vayassinalli Madhuve ya Vichara barabekadare neenu adeshtu Ravichandran Film Nodirbeku.. "Aa kalada Prema guru" Erli Adaru Appa Amma Hata hado aa Time nalli avaligadru hege Tiliyitho Head Master Atra hogabeku antha.. Ellaru Sariyagiddiri.. Adare Head Master Innodu Helida Mathannu Ninage Gnapisabeku anista ede " Neenu Avalanne Madhuve aagabeku annodadre Ninna Kalamele Neenu Ninthu Thorisu aamele nane Munde Ninthu Madhuve Madtini Antha Helidralla" Antaha Mahan Shaaleyalli Odiddakku Sarthaka Vaayithu Jeevana ...

ಗುಹೆ ಹೇಳಿದರು...

ಅಲ್ಲಾ ಗುರುವೇ ನಿನ್ನ ಧೈರ್ಯ ಮೆಚ್ಚಬೇಕಾದ್ದೇ... ನಾನು ಲೈನ್ ಹೊಡೆಯಲು ಶುರು ಮಾಡಿದ್ದೇ ಎಂಟನೇ ಕ್ಲಾಸಿನಲ್ಲಿ...

ನಮ್ಮ ವಿಕಾಸ ಎಲ್ಲರಿಗಿಂತ ಬೇಗ ವಿಕಾಸವಾಗಿದ್ದ ಕಾಣ್ತು, ಅಲ್ವೇನ್ರೋ?

ಚೆನ್ನಾಗಿ ಬರೆದ್ಯೋ............

ವಿಕಾಸ್ ಹೆಗಡೆ/ Vikas Hegde ಹೇಳಿದರು...

ಕಿರಣ್, ಚಂದ್ರು, ಗುರು ಪ್ರತಿಕ್ರಿಯೆಗೆ ಧನ್ಯವಾದಗಳು.

ಚಂದ್ರು, ಹೌದು ಜೀವನ ಸಾರ್ಥಕ.
ಈಗ ನನ್ ಕಾಲ ಮೇಲೆ ನಿಂತಿದ್ದಿನಿ (!). ಈಗ ಹುಡಕ್ಕಂಡು ಹೋಗಕ್ಕಾಗಲ್ಲ ಬಿಡು.

ಗುರು,ನಾನೊಂದು ೪-೫ ವರ್ಷ ಮೊದ್ಲೆ ಮಾಡಿದ್ದೆ ಅಷ್ಟೆ.
ಜಾಸ್ತಿ ವ್ಯತ್ಯಾಸ ಏನಿಲ್ಲ :-)

malnadhudgi... ಹೇಳಿದರು...

oh!!!!!!!!its a real comedy..but tumba naughty iddira ansutte ashtu chikka vayassige propose andre... mhh...but cool....

ವಿಕಾಸ್ ಹೆಗಡೆ/ Vikas Hegde ಹೇಳಿದರು...

ಹ್ಹ ಹ್ಹ.. ಮಲ್ನಾಡ್ ಹುಡ್ಗಿಗೆ ಥ್ಯಾಂಕ್ಸ್

Karthik ಹೇಳಿದರು...

ವಾಹ್! ಸೂಪರ್ ಧೈರ್ಯ ಮರಾಯ.. ಬಹಳ ಕ್ಯೂಟ್ ಆಗಿದೆ.. ಹೀಗೇ ನಿನ್ನ ಹೈ ಸ್ಕೂಲ್ ಲವ್ ಸ್ತ್ಟೋರಿ, ಕಾಲೇಜ್ ಲವ್ ಸ್ಟೋರಿಯೆಲ್ಲ ಬರಲಿ

ವಿಕಾಸ್ ಹೇಳಿದರು...

ಕಾರ್ತಿಕಣ್ಣಾ ಥ್ಯಾಂಕ್ಸ್.. ಅದೇ ಕೊನೆ.. ಇನ್ಯಾವ್ದೂ ಲವ್ ಸ್ಟೋರಿ ಆಗ್ಲಿಲ್ಲ :(

Alpazna ಹೇಳಿದರು...

ಹ್ಮ್... ಪ್ರಪೋಸ್ ಮಾಡಿದ ನಿನ್ನ ಧೈರ್ಯಕ್ಕಿಂತ ಹೆಡ್ ಮಾಸ್ತರತ್ರ ಹೇಳಿದ ಅವಳ ಧೈರ್ಯವೇ ಧೈರ್ಯ!

ಅಥವಾ ಮುಗ್ದತೆಯೋ!??!

ಪೂರ್ಣಿಮಾ ಭಟ್ಟ, ಸಣ್ಣಕೇರಿ ಹೇಳಿದರು...

ಹ ಹ್ಹ ಹ್ಹಾ.. ವಿಕಾಸಾಆಆಆ.. ನಿನ್ ೪ನೇ ಕ್ಲಾಸಿನ್ ಲವ್ ಸ್ಟೋರಿ ಮಸ್ತ್ ಇದ್ದೋ..! ಆದ್ರೂ ಜನಾ ಅಡ್ಡಿಲ್ಲೆ ನೀನು.. :-)

ಅನಾಮಧೇಯ ಹೇಳಿದರು...

kalaavidha bidappo!!
kodsara