ಪುಟಗಳು

ಗುರುವಾರ, ಮೇ 10, 2007

ಬ್ಲಾಗ್ ಪ್ರವೇಶ

ನನಗೆ ಮೊದಲಿಂದ ಬರೆಯುವ, ಬರೆಯುತ್ತಿರುವ ಆಸೆ. ಚಿಕ್ಕ ವಯಸ್ಸಿನಿಂದಲೂ ಪತ್ರಿಕೆಗಳು, ಪುಸ್ತಕಗಳ ಮೇಲೆ ಏನೋ ಪ್ರೀತಿ. ನನಗೆ ಇದುವರೆಗೂ ಅಕ್ಷರಗಳೇ ಒಳ್ಳೆಯ ಮಿತ್ರರು. ಪತ್ರಿಕೆಗಳ ಮೇಲಿನ ಆಕರ್ಷಣೆಯಿಂದ ಮೊದಲು ಪತ್ರಕರ್ತನಾಗಬೇಕೆಂಬ ಆಸೆ ಇಟ್ಟುಕೊಂಡಿದ್ದೆ. ಆದರೆ ಕಾಲಕ್ರಮೇಣ ಅದು ಮಸುಕಾಯಿತು. ಕಾರಣಗಳು ಹಲವಾರು. ಆದರೆ ಬರೆಯುವ ಆಸೆ ಮಾತ್ರ ಮಸುಕಾಗಿಲ್ಲ. ಏನನ್ನು ಕಂಡರೂ ಅದರ ಬಗ್ಗೆ ಬರೆಯಬೇಕು ಅನಿಸುತ್ತದೆ. ಆದರೆ ಒಂದು ವಿಷಯದ ಬಗ್ಗೆ ಬರೆಯಬೇಕೆಂದು ಹೊರಟರೆ ಏನನ್ನು ಹೇಗೆ ಬರೆಯುವುದು ಎಂದು ನಿರ್ಧರಿಸುವುದೇ ಕಷ್ಟವಾಗುತ್ತದೆ. ಬೇರೆಯವರು ಬರೆದಿದ್ದಕ್ಕೆ ಉತ್ತರಗಳನ್ನು, ವಿಮರ್ಶೆಗಳನ್ನು ಚೆನ್ನಾಗಿ ಬರೆಯಬಲ್ಲೆ, ಚರ್ಚೆಗಳನ್ನು ಚೆನ್ನಾಗಿ ಮಾಡಬಲ್ಲೆ. ಹಲವಾರು ವಿಷಯಗಳು ತಲೆಯಲ್ಲಿದ್ದರೂ ಯಾವುದನ್ನೂ ಪೂರ್ತಿಯಾಗಿ ಬರಹರೂಪಕ್ಕೆ ಇಳಿಸಲು ಆಗುತ್ತಿಲ್ಲ. ಬರೆಯಲು ಶುರುಮಾಡಿ ಸ್ವಲ್ಪ ಹೊತ್ತಿಗೇ ಬೇಜಾರು ಬಂದು ಬಿಡುತ್ತದೆ. ಮೊದಲಾದರೆ ಬರದುದ್ದನ್ನೆಲ್ಲಾ ಸುಮ್ಮನೆ ಇಟ್ಟುಕೊಳ್ಳಬೇಕಿತ್ತು ಇಲ್ಲವೇ ಪತ್ರಿಕೆಗಳಿಗೆ ಕಳುಹಿಸಿ ನೀರೀಕ್ಷಿಸಬೇಕಿತ್ತು. ಆದರೆ ಈಗ ಹಾಗಿಲ್ಲ. ಅಂತರ್ಜಾಲವೆಂಬ ಲೋಕದ ಬ್ಲಾಗು ತಾಣಗಳು ಸುಮ್ಮನೆ ಬರೆಯುವವರಿಗೆ ಒಳ್ಳೆಯ ಅವಕಾಶವನ್ನು ಕಲ್ಪಿಸಿವೆ. ಬರೆದುದ್ದಲ್ಲಾ ಇಂಟರ್ನೆಟ್ಟಿನಲ್ಲಿ ಪುಕ್ಕಟೆ ಪ್ರಕಟಣೆ. ಎಲ್ಲಿಂದ ಬೇಕಾದರೂ ಯಾರು ಬೇಕಾದರೂ ಓದುವಂತೆ. ಓದಿ ಸಲಹೆ ನೀಡಲು, ಉತ್ತೇಜಿಸಲು, ಬೈಯಲು, ಜಗಳ ಆಡಲು, ಪ್ರೀತಿ ಮಾಡಲು ಸ್ನೇಹಿತರಿದ್ದಾರೆ, ಹಿತೈಷಿಗಳಿದ್ದಾರೆ ಎಂಬ ಧೈರ್ಯದೊಂದಿಗೆ ಬಿಟ್ಟು ಹೋಗಿದ್ದ ಬರೆಯುವ ಅಭ್ಯಾಸವನ್ನು ಪುನರಾರಂಭಿಸುವ ಪುಟ್ಟ ಪ್ರಯತ್ನ ಮಾಡುತ್ತಿದ್ದೇನೆ. ಆದ್ದರಿಂದ ಇನ್ನು ಮುಂದೆ ಏನನ್ನಾದರೂ ಮನಸಿಗೆ ತೋಚುವ ವಿಷಯಗಳನ್ನು ಬರೆಯುತ್ತಾ ಹೋಗುವುದು ಮತ್ತು ಬೇರೆ ಕೆಲವು ಇಷ್ಟವಾದ ವಿಷಯಗಳನ್ನು ಹಾಕುವುದು ಅಂದುಕೊಂಡಿದ್ದೇನೆ. ಎಷ್ಟು ಕಾರ್ಯಗತವಾಗುವುದೋ ಕಾಣೆ.

5 ಕಾಮೆಂಟ್‌ಗಳು:

Vinayak G M ಹೇಳಿದರು...

|| ಹರೇ ರಾಮ ||

ನೀನು/ನೀವು ಕೂಡ ಈ ತಿಂಗಳಿನಿಂದ ಬ್ಲಾಗ್ ಪ್ರಾರಂಭಿಸಿದೆ ಅಂತ ತಿಳಿದು ಸಂತೋಷವಾಹಿತು... ಬ್ಲಾಗ್ ಯಶಸ್ವಿಯಾಗಲು ಹಾರೈಕೆಗಳು ಹಾಗು ಸಲಹೆಗೆ ಧನ್ಯವಾದಗಳು...

|| ಹರೇ ರಾಮ ||

ಸುಪ್ರೀತ್.ಕೆ.ಎಸ್. ಹೇಳಿದರು...

ಬ್ಲಾಗ್ ಬರಹವೆಂಬುದು ಒಂದು ಮಾಯಾಲೋಕ. ಅಪರಿಚಿತ, ಅಜ್ಞಾತ, ಅಸ್ಪಷ್ಟ ಓದುಗರನ್ನು ನೆನೆದು ಬರೆಯುತ್ತಾ ಹೋದಂತೆ ಬರಹದಲ್ಲಿ ನಮ್ಮನ್ನು ನಾವೇ ಕಂಡುಕೊಳ್ಳುತ್ತಾ ಬರೆದದ್ದು ನಮಗೋಸ್ಕರ ಮಾತ್ರ ಎನಿಸಿಬಿಡುತ್ತದೆ.
ಬೇರೊಬ್ಬರ ಬರಹದ ವಿಮರ್ಶೆ, ವಾದ, ಅಭಿಪ್ರಾಯ ಬಹಳ ಸುಲಭ ಎಂಬ ನಿಮ್ಮ ಗ್ರಹಿಕೆ ನನ್ನನ್ನು ತಟ್ಟಿತು.
ಶುಭ ಹಾರೈಕೆಗಳು...

ವಿಕಾಸ್ ಹೆಗಡೆ ಹೇಳಿದರು...

ನಿಮ್ಮ ಹಾರೈಕೆಗೆ ನನ್ನ ಧನ್ಯವಾದಗಳು. ಓದು, ಅಭಿಪ್ರಾಯ, ಸಲಹೆಗಳಿಂದ ಸದಾ ಜೊತೆಗಿದ್ದು ಪ್ರೋತ್ಸಾಹಿಸಿ.

Alpazna ಹೇಳಿದರು...

cool..
ಅಂತೂ ವಿಕಾಸ...
ವಿಕಾಸವಾದ ಅನ್ನು.. ;)

Vijay ಹೇಳಿದರು...

Hey Vikas.. Nice blog man.

I liked it very much.. I hope you remember me..

Keep posting man.. Best of luck